ನೆರೆ ಸಂತ್ರಸ್ತರಿಗೆ ಸಹಾಯಹಸ್ತ ನೀಡುವಂತೆ ಧರ್ಮಗುರುಗಳ ಸಲಹೆ ಮೈಸೂರು, ಆ. 12 (ಆರ್‍ಕೆ)- ಬಕ್ರೀದ್ ಅಂಗವಾಗಿ ಮೈಸೂರಿನ ತಿಲಕ್‍ನಗರದಲ್ಲಿ ರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಇಂದು ಭಕ್ತಿಭಾವದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೈಸೂರಿನ ಸರ್‍ಖಾಜಿ ಹಜರತ್ ಮೌಲಾನ ಮೊಹಮದ್ ಉಸ್ಮಾನ್ ಷರೀಫ್ ಅವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ನಾಡಿನ ಜನತೆಗೆ ಶುಭ ಸಂದೇಶ ನೀಡಿದರು. ದೇವರ ಅನು ಗ್ರಹದಂತೆ ಪ್ರೊಪೆಟ್ ಇಬ್ರಾಹಿಂ ಖಲೀಲ್ ಉಲ್ಲಾ ಅವರು ತಮ್ಮ ಪ್ರೀತಿಯ ಮಗ ಪ್ರೊಪೆಟ್ ಇಸ್ಮಾಯಿಲ್ ಜಬ್ಬಿ ಉಲ್ಲಾ…
ಸುತ್ತಮುತ್ತ ಪ್ರವಾಹವಿದ್ದರೂ ಕಾರಂಜಿ ಕೆರೆಗೆ ದಕ್ಕದ ಜಲಭಾಗ್ಯ
August 13, 2019ಮೈಸೂರು,ಆ.12(ಎಂಟಿವೈ)- ಕೇರಳ ಹಾಗೂ ಕಾವೇರಿ ಕಣಿವೆಯಲ್ಲಿ ಭಾರಿ ಮಳೆ ಸುರಿದು ಮೈಸೂರು, ಕೊಡಗು, ಮಂಡ್ಯ ಚಾಮರಾಜನಗರ ಜಿಲ್ಲೆಗಳ ಹಲವು ತಾಲೂಕುಗಳಲ್ಲಿ ನೆರೆ ಹಾವಳಿ ಮಿತಿ ಮೀರಿ ಜನಜೀವನ ಅಸ್ತವ್ಯಸ್ತಗೊಂಡಿದ್ದರೂ ಮೈಸೂ ರಿನ ಕಾರಂಜಿ ಕೆರೆ ಹಾಗೂ ಲಿಂಗಾಂಬುದಿ ಕೆರೆ ನೀರಿಲ್ಲದೆ ಬಣಗುಡುತ್ತಿವೆ. ಕಾರಂಜಿ ಕೆರೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿರುವ ಮೃಗಾಲಯ ಇದೀಗ ಕೆರೆಗೆ ನೀರು ತುಂಬಿಸುವ ಬಗ್ಗೆ ಚಿಂತನೆ ನಡೆಸಿದೆ. ಈಗಾಗಲೇ ಕಳೆದ ಒಂದು ವಾರ ದಿಂದ ಸುರಿದ ಅಲ್ಪ ಪ್ರಮಾಣದ ಮಳೆಯಿಂ ದಾಗಿ ಕಾರಂಜಿಕೆರೆಗೆ ಸ್ವಲ್ಪ ಪ್ರಮಾಣದ…
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಿಂದ ನೆರೆ ಸಂತ್ರಸ್ತರಿಗೆ 25 ಲಕ್ಷ ರೂ.ನೆರವು
August 13, 2019ಮೈಸೂರು,ಆ.12(ಎಂಕೆ)-ನೆರೆ ಹಾವಳಿಗೆ ಸಿಲುಕಿ ಕಂಗಾಲಾಗಿರುವ ಸಂತ್ರಸ್ತರ ನೆರವಿಗಾಗಿ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಲಾಯಿತು. ಸೋಮವಾರ ರಾತ್ರಿ ಆಶ್ರಮಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರಿಗೆ ಶ್ರೀ ಗಣಪತಿ ಸಚ್ಚಿದಾ ನಂದ ಸ್ವಾಮೀಜಿಯವರು 25 ಲಕ್ಷ ರೂ. ಮೊತ್ತದ ಚೆಕ್‍ನ್ನು ಹಸ್ತಾಂತರಿಸಿದರು. ಇದೇ ವೇಳೆ ಮುಖ್ಯಮಂತ್ರಿಗಳಾದ ಬಳಿಕ ಮೊದಲ ಬಾರಿಗೆ ಆಶ್ರಮಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ ಅವ ರನ್ನು ಸನ್ಮಾನಿಸಿ, ಅಭಿನಂದಿಸಿದರು. ಸಂಸದ…
ನೆರೆ ಸಂತ್ರಸ್ತರಿಗೆ ‘ಕಿಟ್’ ವ್ಯವಸ್ಥೆ ಮೂಲಕ ಅಗತ್ಯ ಸಾಮಗ್ರಿ ಪೂರೈಸಲು ಚಿಂತನೆ
August 13, 2019ಮೈಸೂರು,ಆ.12(ಪಿಎಂ)-ನೆರೆ ಸಂತ್ರ ಸ್ತರು ತಮ್ಮ ಮನೆಗೆ ಹಿಂತಿರುಗುವಾಗ ಅವರಿಗೆ ತಕ್ಷಣಕ್ಕೆ ಕಿಟ್ ವ್ಯವಸ್ಥೆ ಮೂಲಕ ಅಗತ್ಯ ವಸ್ತುಗಳ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ. ಇದಕ್ಕಾಗಿ ನಾಲ್ಕು ವಿಧದ ಕಿಟ್‍ಗಳನ್ನು `ವೆಲ್‍ಕಮ್ ಹೋಮ್ ಕಿಟ್’ ಶೀರ್ಷಿಕೆ ಯಡಿ ಸಿದ್ಧಪಡಿಸಲು ಉದ್ದೇಶಿಸಿದ್ದು, ಆಸಕ್ತ ದಾನಿಗಳೂ ಕಿಟ್ ಮಾದರಿಯಲ್ಲಿ ಸಾಮಗ್ರಿಗಳನ್ನು ನೀಡಬಹುದು. ಆದರೆ ಹೀಗೆಯೇ ಕೊಡಬೇಕೆಂದು ಕಡ್ಡಾಯ ವೇನಿಲ್ಲ. ತಮಗೆ ಅನುಕೂಲವಾದಂತಹ ಸಾಮಗ್ರಿಗಳನ್ನು ನೀಡಬಹುದು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಕುಟುಂಬವೊಂದಕ್ಕೆ ಆಹಾರ ಪದಾರ್ಥ ಮತ್ತು ಇತರೆ ಸಾಮಗ್ರಿಗಳು ಒಳಗೊಂಡ ಕಿಟ್, ಓರ್ವ ಪುರುಷ…
ಸ್ವಚ್ಛತೆಗೆ ಕೊಡಗಿಗೆ ತೆರಳಿದ ಪೌರಕಾರ್ಮಿಕರ ತಂಡ
August 13, 2019ಮೈಸೂರು,ಆ.12(ಎಸ್‍ಬಿಡಿ)- ಮೈಸೂರು ನಗರ ಪಾಲಿಕೆ ಪೌರಕಾರ್ಮಿ ಕರ ತಂಡ ಸೋಮವಾರ ನೆರೆ ಪೀಡಿತ ಕೊಡಗು ಜಿಲ್ಲೆಗೆ ತೆರಳಿತು. ಕೊಡಗು ಜಿಲ್ಲಾಡಳಿತದ ಕೋರಿಕೆ ಮೇರೆಗೆ 20 ಮಂದಿ ಯುವ ಪೌರ ಕಾರ್ಮಿಕರನ್ನು ನಿಯೋಜಿಸಲಾಗಿದ್ದು, ಸ್ವಚ್ಛತಾ ಕಾರ್ಯಕ್ಕೆ ಅಗತ್ಯವಾದ ಬ್ಲೀಚಿಂಗ್ ಪೌಡರ್, ಹ್ಯಾಂಡ್ ಗ್ಲೋಸ್, ಶೂ, ಮಾಸ್ಕ್ ಇನ್ನಿತರ ಪರಿಕರಗ ಳೊಂದಿಗೆ ಇಂದು ಮಧ್ಯಾಹ್ನ ಮುಡಾ ವಾಹನದಲ್ಲಿ ಕೊಡಗಿಗೆ ತೆರಳಿದರು. ಇದಕ್ಕೂ ಮುನ್ನ ಪುರಭವನದ ಬಳಿ ಪಾಲಿಕೆ ಆರೋಗ್ಯಾಧಿಕಾರಿ ಡಾ.ಎಂ. ಎಸ್.ಜಯರಾಂ ಅವರು, ಪೌರಕಾರ್ಮಿ ಕರಿಗೆ ಕೆಲ ಸಲಹೆ ಸೂಚನೆ…
ವಿದ್ಯುತ್ ಸಮಸ್ಯೆಗಳ ಪರಿಹರಿಸಲು ಮುಂಜಾಗ್ರತಾ ತಂಡ ರಚನೆ
August 13, 2019ಮೈಸೂರು,ಆ.12-ಮೈಸೂರಲ್ಲಿ ಮಳೆಯಿಂದ ಉಂಟಾಗಬಹು ದಾದ ವಿದ್ಯುತ್ ಸಮಸ್ಯೆಗಳ ಪರಿಹರಿಸಲು ಜಿಲ್ಲಾಧಿಕಾರಿ ಗಳು ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರು ವಿದ್ಯುತ್ ಮುಂಜಾ ಗ್ರತಾ ತಂಡವನ್ನು ರಚಿಸಿ ಆದೇಶ ಹೊರಡಿಸಿದ್ದಾರೆ. ಮೈಸೂರು ನಗರಕ್ಕೆ ಎನ್‍ಆರ್ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಮೊ-9448994 740 ಹಾಗೂ ವಿವಿ ಮೊಹಲ್ಲಾ ವಿಭಾಗದ ಕಾರ್ಯ ನಿರ್ವಾ ಹಕ ಇಂಜಿನಿಯರ್ ಮೊ-9449598644 ಸಂಪರ್ಕಿಸಿ. ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ವಿವಿ ಮೊಹಲ್ಲಾ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೊ-94489 94744 ಹಾಗೂ…
ವರುಣಾ ಕ್ಷೇತ್ರದ ಬೊಕ್ಕಹಳ್ಳಿ ಗಂಜಿಕೇಂದ್ರದಲ್ಲಿ ಶಾಸಕ ಡಾ.ಯತೀಂದ್ರರಿಂದ ಅಗತ್ಯ ವಸ್ತುಗಳ ವಿತರಣೆ
August 13, 2019ಮೈಸೂರು,ಆ. 12- ವರುಣಾ ಕ್ಷೇತ್ರದಲ್ಲಿ ನದಿ ನೀರಿನಿಂದ ಮುಳುಗಡೆಯಾಗಿ ಮನೆ ಹಾನಿಗೊಳ ಗಾದವರಿಗೆ ಬೇರೆ ಜಾಗ ಖರೀದಿಸಿ ಹೊಸ ಮನೆ ಗಳನ್ನು ಕಟ್ಟಿಸಿಕೊಡುವ ಮುಖಾಂತರ ಜನರನ್ನು ಸ್ಥಳಾಂತರಿಸಿ ಹೆಚ್ಚಿನ ಪರಿಹಾರ ಕೊಡಿಸಲು ಪ್ರಯ ತ್ನಿಸುವುದಾಗಿ ಡಾ.ಯತೀಂದ್ರ ತಿಳಿಸಿದರು. ವರುಣಾ ಕ್ಷೇತ್ರದ ಬೊಕ್ಕಹಳ್ಳಿ ನಿರಾಶ್ರಿತರ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದವರಿಗೆ ವೈಯಕ್ತಿಕವಾಗಿ ಚಾಪೆ, ಕಂಬಳಿ, ಪಂಚೆ, ಬಿಸ್ಕತ್, ಸೀರೆ, ಟೂತ್ ಪೇಸ್ಟ್, ಬ್ರಷ್ ವಿತರಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ 3 ಗಂಜಿಕೇಂದ್ರಗಳನ್ನು ತೆರೆದಿದ್ದು, ಸುಮಾರು 1100 ಜನ ನಿರಾಶ್ರಿತರಾಗಿದ್ದಾರೆ….
ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಊಟ ನೀಡುವ ಮೂಲಕ: ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನ ವಿಶಿಷ್ಟ ರೀತಿ ಆಚರಣೆ
August 13, 2019ಮೈಸೂರು, ಆ.12 (ಆರ್‍ಕೆಬಿ)- ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ 72ನೇ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳು, ಬೆಂಬಲಿಗರು ಸೋಮವಾರ ಮೈಸೂರಿನ ತಿಲಕ್‍ನಗರದ ಸರ್ಕಾರಿ ಅಂಧ ಮತ್ತು ಕಿವುಡ ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಭೋಜನ ವ್ಯವಸ್ಥೆ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯ ದರ್ಶಿ ಎಂ.ಶಿವಣ್ಣ, ಮೈಲ್ಯಾಕ್ ಮಾಜಿ ಅಧ್ಯಕ್ಷ ಅನಂತು ಇನ್ನಿತರರ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯ ಕರ್ತರು ತಿಲಕ್‍ನಗರದ ಸಯ್ಯಾಜಿರಾವ್…
ಪ್ರವಾಹ ಸಂತ್ರಸ್ತರಿಗೆ ಸಂಘ-ಸಂಸ್ಥೆಗಳಿಂದ ನೆರವು
August 13, 2019ಮೈಸೂರು,ಆ.12(ಪಿಎಂ)-ನೆರೆ ಸಂತ್ರಸ್ತರ ನೆರವಿಗೆ ವಿವಿಧ ಬಗೆಯ ಅಗತ್ಯ ಸಾಮಗ್ರಿ ಗಳನ್ನು ಸಂಗ್ರಹಿಸಿ ತಲುಪಿಸುವುದು ಮತ್ತು ವೈಯಕ್ತಿಕವಾಗಿ ಕೊಡುಗೆ ನೀಡುವ ಕಾರ್ಯಕ್ಕೆ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಮುಂದಾಗಿರುವುದು ಸೋಮವಾರವೂ ಕಂಡುಬಂತು. ಮೈಸೂರಿನ ಪುರಭವನದಲ್ಲಿ ಜಿಲ್ಲಾಡ ಳಿತ ತೆರೆದಿರುವ ಸಾಮಗ್ರಿ ಸಂಗ್ರಹ ಕೇಂದ್ರಕ್ಕೆ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ನಾನಾ ಬಗೆಯ ಅಗತ್ಯ ಸಾಮಗ್ರಿಗಳನ್ನು ತಲುಪಿಸಿದರು. ಬೆಡ್ ಶೀಟ್, ಕಂಬಳಿ, ಬಟ್ಟೆ, ಟವಲ್, ಟೂತ್ ಪೇಸ್ಟ್, ಟೂತ್ ಬ್ರಷ್, ಸಾಬೂನು, ಚಪ್ಪಲಿ, ಸೊಳ್ಳೆ ಬತ್ತಿ, ಬಿಸ್ಕತ್, ಜ್ಯೂಸ್, ಹಾಲು, ಹಣ್ಣ, ದವಸ-ಧಾನ್ಯ…
ಬಿಜೆಪಿಯಿಂದ ಸಂತ್ರಸ್ತರ ನೆರವಿಗೆನಿಧಿ, ಸಾಮಗ್ರಿಗಳ ಸಂಗ್ರಹ
August 13, 2019ಮೈಸೂರು,ಆ.12(ಪಿಎಂ)-ನೆರೆ ಹಾವಳಿಯಿಂದ ತತ್ತರಿಸಿರುವ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ಬಿಜೆಪಿ ಮೈಸೂರು ನಗರ ಘಟಕದ ವತಿಯಿಂದ ಪರಿಹಾರ ನಿಧಿ ಹಾಗೂ ಅಗತ್ಯ ಸಾಮಗ್ರಿಗಳನ್ನು ಸೋಮವಾರ ಸಂಗ್ರಹಿಸಲಾಯಿತು. ಮೈಸೂರಿನ ಚಿಕ್ಕಗಡಿಯಾರದ ಬಳಿ, ಡಿ.ದೇವರಾಜ ಅರಸು ರಸ್ತೆ, ಶಿವರಾಂಪೇಟೆ, ಅಶೋಕ ರಸ್ತೆ ಸೇರಿದಂತೆ ನಗರದ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿ ವರ್ತಕರು ಹಾಗೂ ಸಾರ್ವಜನಿಕರಿಂದ ಹಣ ಹಾಗೂ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಲಾಯಿತು. ಇದೇ ವೇಳೆ ಮಾತನಾಡಿದ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್, ಪ್ರವಾಹಕ್ಕೆ ಕೇವಲ ಉತ್ತರ ಕರ್ನಾಟಕ ಮಾತ್ರ ತತ್ತರಿಸಿಲ್ಲ. ಜೊತೆಗೆ…










