ಮೈಸೂರು: ಕೆ.ಆರ್. ನಗರ ತಾಲೂಕು ಚುಂಚನಕಟ್ಟೆಯಲ್ಲಿರುವ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಯನ್ನು ಗುತ್ತಿಗೆ ಆಧಾರದಲ್ಲಿ ಖಾಸಗಿಯವ ರಿಗೆ ವಹಿಸುವ ನಿಟ್ಟಿನಲ್ಲಿ ಇನ್ನೊಂದು ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ರೇಷ್ಮೆ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭ ಸಂಬಂಧ ಶನಿವಾರ ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಿಂದ ನಿರ್ವಹಿಸು ತ್ತಿರುವ ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿವೆ. ಹಾಗಾಗಿ ಈ ಹಿಂದೆಯೇ ಶ್ರೀರಾಮ ಸಹ…
ಮೈಸೂರಿನಲ್ಲಿ `ಚೋಟಾ ಭೀಮ್’ ಜನನ!
December 9, 2018ಮೈಸೂರು: ಮೈಸೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯೊಬ್ಬರಿಗೆ 5 ಕೆಜಿ ತೂಕದ ಗಂಡು ಮಗುವಿನ ಜನನವಾಗಿದ್ದು, ಇದು ಅಚ್ಚರಿಗೆ ಕಾರಣವಾಗಿದೆ. ಮೈಸೂರಿನ ತಿಲಕನಗರದ ನಿವಾಸಿ, ಹೂವಿನ ವ್ಯಾಪಾರಿ ಸಿದ್ದರಾಜು ಅವರ ಪತ್ನಿ ರಾಜೇಶ್ವರಿ, ಭೀಮ ಬಲ ಪುತ್ರನ ಜನನಕ್ಕೆ ಸಂಭ್ರಮಿಸುತ್ತಿದ್ದಾರೆ. ಆಪರೇಷನ್ ಮೂಲಕ ಮಗುವನ್ನು ಹೊರಗೆ ತೆಗೆದಾಗ 5 ಕೆಜಿ, 100 ಗ್ರಾಂ ತೂಕ ವಿತ್ತು. ಭಾರತೀಯ ನವಜಾತ ಶಿಶುಗಳ ತೂಕ ಸರಾಸರಿ 2.5ರಿಂದ 4 ಕೆಜಿವರೆ ಗಷ್ಟೇ ಇರುತ್ತದೆ. ಆದರೆ 5.1 ಕೆಜಿ ತೂಕದ ಮಗುವಿನ…
ಮೂಲೆಗುಂಪಾಗುವ ಭೀತಿಯಿಂದ ಸಿಎಂ ಆಗಲು ಯಡಿಯೂರಪ್ಪ ತರಾತುರಿ
December 9, 2018ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ ಒಳಗೆ ಮುಖ್ಯಮಂತ್ರಿ ಹುದ್ದೆಗೇರದಿದ್ದರೆ ರಾಜ ಕೀಯವಾಗಿ ಮೂಲೆಗುಂಪು ಆಗುತ್ತೇನೆಂಬ ಕಾರಣದಿಂದ ಅನ್ಯ ಪಕ್ಷಗಳ ಶಾಸಕರನ್ನು ಖರೀದಿಸಿ ಅಧಿಕಾರ ಹಿಡಿಯಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊರಟಿದ್ದು, ಇದರಲ್ಲಿ ಅವರು ಸಫಲರಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ಮಂತ್ರಿ ಆಗದಿದ್ದರೆ, ಪಕ್ಷ ನನ್ನನ್ನು ನಗಣ್ಯ ಮಾಡುತ್ತದೆ ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಆಗಲು ಹರ ಸಾಹಸ ಮಾಡುತ್ತಿದ್ದಾರೆ ಎಂದರು. ವಯಸ್ಸಾಯಿತು, ಚುನಾವಣೆ ಮುಗಿದರೆ ನನ್ನನ್ನು ಯಾರೂ ರಾಜಕೀಯವಾಗಿ…
ಸರ್ಕಾರದ ಎಲ್ಲಾ ಅಂಗಗಳಿಗಿಂತ ಸಂವಿಧಾನವೇ ಶ್ರೇಷ್ಠ
December 9, 2018ಮೈಸೂರು: ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಕ್ಕಿಂತಲೂ ಅತ್ಯುನ್ನತವಾದುದು ದೇಶದ ಸಂವಿಧಾನ ಎಂದು ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ತಿಳಿಸಿದರು. ಮೈಸೂರಿನ ಶಾರದಾ ವಿಲಾಸ ವಿದ್ಯಾ ಸಂಸ್ಥೆಗಳು, ಶಾರದಾ ವಿಲಾಸ ಕಾನೂನು ಕಾಲೇಜು ವತಿಯಿಂದ ಸಂಸ್ಥೆಯ ಶತ ಮಾನೋತ್ಸವ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಈ ಮೂರು ಅಂಗಗಳು ಸಂವಿಧಾನ ಆಶೋತ್ತರದ ಹಿನ್ನೆಲೆಯಲ್ಲಿ ಪ್ರಾಪ್ತವಾಗಿ ರುವ ಇತಿಮಿತಿಯಡಿ ದೇಶದ ಪ್ರತಿ ಪ್ರಜೆಯ ಹಿತಕ್ಕಾಗಿ ಕಾರ್ಯ ನಿರ್ವಹಿಸಬೇಕು. ಶಾಸ ಕಾಂಗ ಮತ್ತು…
7 ಹಿಂದೂ ಕಾರ್ಯಕರ್ತರ ಹತ್ಯೆ ಆರೋಪಿ ಅಬೀದ್ ಪಾಷಾ ಬಂಧನಕ್ಕೆ ಶಿಂಧೆ ಆಗ್ರಹ
December 9, 2018ಮೈಸೂರು: ರಾಜ್ಯದ ವಿವಿಧೆಡೆ ನಡೆದ ಹಿಂದುತ್ವವಾದಿ 7 ಕಾರ್ಯಕರ್ತರ ಹತ್ಯೆ ಪ್ರಕರಣದ ಆರೋಪಿ ಅಬೀದ್ ಪಾಷಾನನ್ನು ಕೂಡಲೇ ಬಂಧಿಸಿ, ಕೋಕಾ ಕಾಯ್ದೆಯಡಿ ಕ್ರಮ ಕೈಗೊಳ್ಳು ವಂತೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂಧೆ ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಿಂದುತ್ವವಾದಿಗಳ ಹತ್ಯೆ ಮಾಡಿ ರುವ ಆರೋಪಿಗಳ ರಕ್ಷಣೆಗೆ ನಿಂತಿರುವಂತೆ ವರ್ತಿಸುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್‍ಐಟಿ ರಚಿಸಿ, 16 ಹಿಂದೂ…
ಪುಕ್ಕಟೆ ಪ್ರಚಾರ ಸಲ್ಲ: ಶಾಸಕರಿಗೆ ಮಾಜಿ ಮೇಯರ್ ಅಣಕ
December 9, 2018ಮೈಸೂರು: ಮೈಸೂರಿನ ಜೆ.ಪಿ.ನಗರದ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲದಲ್ಲಿ ಬಿಡುಗಡೆಯಾದ ಅನುದಾನವನ್ನು ತಾನು ತಂದಿರುವುದಾಗಿ ಶಾಸಕ ಎಸ್.ಎ.ರಾಮದಾಸ್ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಟೀಕಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಜೆ.ಪಿ.ನಗರದ ವಿವಿಧ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಇತ್ತೀಚೆಗೆ ಶಾಸಕ ಎಸ್.ಎ.ರಾಮದಾಸ್ ಅವರು ಚಾಲನೆ ನೀಡಿ, ಬಡಾ ವಣೆಯ ಅಭಿವೃದ್ಧಿಗೆ ತನ್ನ ಶ್ರಮದಿಂದ ಅನುಧಾನ ತಂದಿರುವು ದಾಗಿ ಹೇಳಿ ಕೊಂಡಿದ್ದಾರೆ. ಜೆ.ಪಿ.ನಗರ ಬಡಾವಣೆಯ ಸಮಗ್ರ…
ಸುತ್ತೂರು ಜೆಎಸ್‍ಎಸ್‍ಗೆ ಸಮಗ್ರ ಕ್ರೀಡಾ ಪ್ರಶಸ್ತಿ
December 9, 2018ಮೈಸೂರು: ಸುತ್ತೂರು ಶ್ರೀಕ್ಷೇತ್ರದಲ್ಲಿ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಸಂಸ್ಮರಣೆಯ ಅಂಗವಾಗಿ ಇತ್ತೀಚೆಗೆ ನಡೆದ 3 ದಿನಗಳ ಜೆಎಸ್‍ಎಸ್ ಅಂತರ-ಸಂಸ್ಥೆಗಳ ಕ್ರೀಡಾಕೂಟದಲ್ಲಿ ಅತೀ ಹೆಚ್ಚು ಬಹುಮಾನಗಳನ್ನು ಗಳಿಸುವ ಮೂಲಕ ಸುತ್ತೂರು ಜೆಎಸ್‍ಎಸ್ ಪ್ರೌಢಶಾಲೆಯು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ ಕರೆಪ್ಪ 400 ಮೀ. ಓಟದಲ್ಲಿ ಪ್ರಥಮ, 200 ಮೀ. ಓಟದಲ್ಲಿ ದ್ವಿತೀಯ, ಅನುಜ್ ಕುಮಾರ್ 200 ಮೀ., 100 ಮೀ. ಓಟದಲ್ಲಿ ತೃತೀಯ, ಜನ್‍ಮನ್‍ಜಯ್ 400 ಮೀ. ಓಟದಲ್ಲಿ ದ್ವಿತೀಯ, ರವೀಶ್ 1500…
ಜ. 5-6ರಂದು ಬಸವ ಮಾಚಿದೇವ ಸ್ವಾಮೀಜಿ ಪಟ್ಟಾಭಿಷೇಕ
December 9, 2018ಮೈಸೂರು: ಬಸವ ಮಾಚಿದೇವ ಸ್ವಾಮೀಜಿಗಳ ಪಟ್ಟಾಭಿಷೇಕ ಕಾರ್ಯಕ್ರಮ ಹಾಗೂ ಕರ್ನಾಟಕ ರಾಜ್ಯ ಮಡಿವಾಳರ ಬೃಹತ್ ಜನಜಾಗೃತಿ ಸಮಾವೇಶ 2019ರ ಜ.5 ಮತ್ತು 6ರಂದು ಚಿತ್ರ ದುರ್ಗದ ಮಡಿವಾಳ ಮಾಚಿ ದೇವರ ಗುರುಪೀಠ ಮಠದ ಆವರಣದಲ್ಲಿ ನಡೆಯಲಿದೆ ಎಂದು ಚಿತ್ರದುರ್ಗದ ಮಡಿವಾಳ ಮಾಚಿದೇವರ ಗುರುಪೀಠದ ಬಸವ ಮಾಚಿ ಸ್ವಾಮೀಜಿ ಹೇಳಿದರು. ಮೈಸೂರು ಪತ್ರಕರ್ತರ ಭವನದಲ್ಲಿ ತಾಲ್ಲೂಕು ವೀರ ಮಡಿವಾಳರ ಸಂಘ ಪ್ರಕಟಿಸಿರುವ 2019ನೇ ಸಾಲಿನ ಕ್ಯಾಲೆಂಡರ್ ಶನಿವಾರ ಬಿಡುಗಡೆ ಮಾಡಿದ ಅವರು, ಅಂದು ನಡೆಯಲಿರುವ ಪಟ್ಟಾಭಿಷೇಕ ಹಾಗೂ ಮಡಿವಾಳರ…
ಪೊಲೀಸ್ ಕ್ರೀಡಾಕೂಟ: ಮೈಸೂರು ನಗರ ಸಶಸ್ತ್ರ ಮೀಸಲು ಪಡೆಗೆ `ಟೀಂ ಚಾಂಪಿಯನ್ ಶಿಪ್’
December 9, 2018ಮೈಸೂರು: ಸೂರಿನ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸ್ ಕವಾಯತು ಮೈದಾನದಲ್ಲಿ ಕಳೆದ 3 ದಿನಗಳಿಂದ ನಡೆದ ಕ್ರೀಡಾ ಕೂಟದಲ್ಲಿ ನಗರ ಸಶಸ್ತ್ರ ಮೀಸಲುಪಡೆ(ಸಿಎಆರ್) ತಂಡವು ಟೀಂ ಚಾಂಪಿಯನ್‍ಶಿಪ್ ಪಡೆದುಕೊಂಡಿತು. ಮೈಸೂರು ನಗರ ಪೊಲೀಸ್ ಇಲಾಖೆ ಆಯೋ ಜಿಸಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಸಿಎಆರ್ ಪೇದೆ ಮೈಲಾರಿ ಹಾಗೂ ಮಹಿಳಾ ವಿಭಾಗದಲ್ಲಿ ನರಸಿಂಹರಾಜ ಉಪ ವಿಭಾಗದ ಪೇದೆ ಕೆ.ಪಿ.ಉಷಾ ಅವರು `ಸರ್ವೋತ್ತಮ ಪ್ರಶಸ್ತಿ’ಗೆ ಭಾಜನರಾದರು. ವಿಜೇತರ ಪಟ್ಟಿ ಇಂತಿದೆ: ಪುರುಷರ…
ವಾಯುಸೇನೆ ನೇಮಕಾತಿ ರ್ಯಾಲಿಯಲ್ಲಿ 1150 ಯುವಕರು ಹಾಜರು
December 8, 2018ಮೈಸೂರು: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 2ನೇ ದಿನದ ಭಾರತೀಯ ವಾಯು ಸೇನೆಯ ನೇಮಕಾತಿ ರ್ಯಾಲಿಯಲ್ಲಿ ಮೈಸೂರು, ಬೆಂಗಳೂರು ಒಳಗೊಂಡಂತೆ 20 ಜಿಲ್ಲೆಗಳ ಸಾವಿರಕ್ಕೂ ಹೆಚ್ಚು ಯುವಕರು ಸಂದರ್ಶನದಲ್ಲಿ ಪಾಲ್ಗೊಂಡು ವಿವಿಧ ಪರೀಕ್ಷೆಗಳನ್ನು ಎದುರಿಸಿದರು. ಬೆಂಗಳೂರಿನಲ್ಲಿರುವ 7ನೇ ಏರ್‍ಮನ್ ಸೆಲೆಕ್ಷನ್ ಸೆಂಟರ್ ವತಿಯಿಂದ ಮುಂಜಾನೆ 5.30ರಿಂದಲೇ ಭಾರತೀಯ ವಾಯುಸೇನೆಯ ಗ್ರೂಪ್ `ವೈ’ ಟ್ರೇಡ್ ನಲ್ಲಿ ಖಾಲಿಯಿರುವ `ಏರ್‍ಮನ್’ ಹುದ್ದೆಗಳಿಗೆ ನೇಮಕಾತಿ ಮಾಡಲು ಅಭ್ಯರ್ಥಿಗಳ ಸಂದರ್ಶನ ಆರಂಭಿಸಲಾ ಯಿತು. ಬೆಳಿಗ್ಗೆ 9ಗಂಟೆಯವರೆಗೆ ಸಂದರ್ಶನದಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳಿಗೆ…