ಮೈಸೂರು: ಖೋಟಾ ನೋಟು ತಯಾರಿಕೆ ಹಾಗೂ ಚಲಾವಣೆ ದಂಧೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರನ್ನು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಜೆಪಿ ನಗರ ನಿವಾಸಿ ಗೌರಮ್ಮ (40) ಬಂಧಿತ ಆರೋಪಿ. ವಿದ್ಯಾರಣ್ಯಪುರಂ ವ್ಯಾಪ್ತಿಯ ಗ್ರಂಥಾಲಯ ಬಳಿ ರಸ್ತೆಬದಿ ವ್ಯಾಪಾರಿಗಳಿಂದ ಬಟ್ಟೆ ಖರೀದಿಸಿದ ಗೌರಮ್ಮ ಜೆರಾಕ್ಸ್ ನೋಟುಗಳನ್ನು ನೀಡಿದ್ದರಿಂದ ಸಂಶಯಗೊಂಡ ವ್ಯಾಪಾರಿ ಸ್ವೀಕರಿಸಲು ನಿರಾಕರಿಸಿದ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದ ಸಂದರ್ಭ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ವಿದ್ಯಾರಣ್ಯ ಪುರಂ ಠಾಣೆ ಇನ್ಸ್‍ಪೆಕ್ಟರ್ ಓಂಕಾರಪ್ಪ…
ಪ್ರವಾಹದಿಂದ ಮೈಸೂರು ಜಿಲ್ಲೆಯಲ್ಲಿ 1800 ಎಕರೆ ಬೆಳೆ ನಷ್ಟ
August 27, 2018ಮೈಸೂರು: ಅತಿವೃಷ್ಟಿಯಿಂದುಂಟಾದ ಪ್ರವಾಹದಿಂದಾಗಿ ಮೈಸೂರು ಜಿಲ್ಲೆಯಲ್ಲಿ ಸುಮಾರು 1,800 ಎಕರೆ ಪ್ರದೇಶದ ಬೆಳೆ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ತಿಳಿಸಿದ್ದಾರೆ. ಪ್ರಕೃತಿ ವಿಕೋಪ ನಿರ್ವಹಣೆ ಸಂಬಂಧ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನೆರೆ ಹಾವಳಿಯಿಂದ ಉಂಟಾಗಿರುವ ನಷ್ಟ ಭರಿಸುವುದು, ನಿರಾಶ್ರಿತರಿಗೆ ಪುನರ್ವಸತಿ, ಹಾನಿಯಾಗಿರುವ ರಸ್ತೆ ಸೇತುವೆ, ಸರ್ಕಾರಿ ಮತ್ತು ಖಾಸಗಿ ಕಟ್ಟಡ, ವಿದ್ಯುತ್ ಕಂಬ ಸೇರಿದಂತೆ ಇನ್ನಿತರ…
10 ರಾಯಲ್ ಎನ್‍ಫೀಲ್ಡ್ ಸೇರಿ 15 ಲಕ್ಷ ರೂ. ಮೌಲ್ಯದ 17 ವಾಹನ ವಶ
August 26, 2018ಮೈಸೂರು: ಕುಖ್ಯಾತ ಬುಲೆಟ್ ಬೈಕ್ ಖದೀಮರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 10 ರಾಯಲ್ ಎನ್‍ಫೀಲ್ಡ್ ಸೇರಿ 15 ಲಕ್ಷ ರೂ. ಮೌಲ್ಯದ ಒಟ್ಟು 17 ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್.ಡಿ.ಕೋಟೆ ತಾಲೂಕು ಬಿ.ಮಟಗೆರೆ ಎಸ್‍ಸಿ ಕಾಲೋನಿ, 1ನೇ ಕ್ರಾಸ್ ನಿವಾಸಿ ರಾಮಚಂದ್ರನ ಮಗ ಆರ್.ದಿನೇಶ್ ಕುಮಾರ್ ಅಲಿಯಾಸ್ ದಿನೇಶ್ ಅಲಿಯಾಸ್ ದಿನಿ(20) ಮತ್ತು ಮಂಡ್ಯ ಜಿಲ್ಲೆ, ಕೆ.ಗೌಡಗೆರೆ ನಿವಾಸಿ ಟಿ.ರಾಮೇಗೌಡನ ಮಗ ಜಿ.ಆರ್.ಶರತ್ ಅಲಿಯಾಸ್ ಚಿನ್ನು(20) ಬಂಧಿತ ಆರೋಪಿಗಳು. ಅವರಿಂದ ದುಬಾರಿ ಬೆಲೆಯ 10 ರಾಯಲ್ ಎನ್‍ಫೀಲ್ಡ್…
ರಾಷ್ಟ್ರೀಕೃತ ಬ್ಯಾಂಕ್‍ಗಳ ರೈತರ ಸಾಲ ಮನ್ನಾ
August 25, 2018ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ 2 ಲಕ್ಷ ರೂ.ವರೆಗಿನ ಬೆಳೆ ಹಾಗೂ ಚಾಲ್ತಿ ಸಾಲವನ್ನು ಮನ್ನಾ ಮಾಡಲು ತೀರ್ಮಾನಿಸಲಾಗಿದೆ ಎಂದರು. ಇದರಿಂದಾಗಿ 30,163 ಕೋಟಿ ರೂ. ಸರ್ಕಾರಕ್ಕೆ ಹೊರೆಯಾಗಲಿದ್ದು, 22 ಲಕ್ಷ ರೈತರು ಈ ಸಾಲ ಮನ್ನಾ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದರು. 2018-19ನೇ…
ಮೈಸೂರಲ್ಲಿ ಭಕ್ತಿ ಭಾವದ ಬಕ್ರೀದ್ ಆಚರಣೆ
August 23, 2018ಮೈಸೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಈದ್-ಉಲ್-ಅeóÁ (ಬಕ್ರೀದ್) ಹಬ್ಬವನ್ನು ಮೈಸೂರಿನಲ್ಲಿ ಬುಧವಾರ ಮುಸ್ಲಿಂ ಬಾಂಧವರು ಭಕ್ತಿ ಭಾವದಿಂದ ಆಚರಿಸಿದರು. ಮೈಸೂರಿನ ತಿಲಕ್‍ನಗರ, ರಾಜೀವ್‍ನಗರ, ಗೌಸಿಯಾನಗರದ ಈದ್ಗಾ ಮೈದಾನ ಹಾಗೂ ವಿವಿಧ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಆಲಂಗಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು. ತಿಲಕ್‍ನಗರದ ಹಳೇ ಈದ್ಗಾ ಮೈದಾನದಲ್ಲಿ ಸಹಸ್ರಾರು ಮುಸಿಂ್ಲ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮೈಸೂರಿನ ಸರ್ಖಾಜಿ ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್ ಮಾತನಾಡಿ, ತ್ಯಾಗ ಮತ್ತು ಬಲಿದಾನದ…
ಹಣ ಹೂಡುವ ಬಗ್ಗೆ ಇಂದು ಅರಿವು ಕಾರ್ಯಕ್ರಮ
August 23, 2018ಮೈಸೂರು: ಎಸ್‍ಡಿಎಂ-ಐಎಂಡಿ, ಎನ್‍ಎಸ್‍ಇ ಮತ್ತು ಎನ್‍ಎಸ್‍ಡಿಎಲ್ ಸಂಯುಕ್ತಾಶ್ರಯದಲ್ಲಿ ಬಂಡವಾಳ ಮಾರುಕಟ್ಟೆಯಲ್ಲಿ ಹಣ ಹೂಡುವ ಬಗ್ಗೆ ಅರಿವು ಕಾರ್ಯಕ್ರಮವನ್ನು ಆ.23ರಂದು ಆಯೋಜಿಸಲಾಗಿದೆ ಎಂದು ಎಸ್‍ಡಿಎಂ-ಐಎಂಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಶ್ರೀರಾಮ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ಎಸ್‍ಡಿಎಂ-ಐಎಂಡಿ ಸಂಸ್ಥೆ ಅಂದು ಸಂಜೆ 6ಕ್ಕೆ ಕಾರ್ಯಕ್ರಮ ನಡೆಯಲಿದೆ. ಬಂಡವಾಳ ಹೂಡಿಕೆಯ ವಿವಿಧ ಆಯಾಮಗಳ ಕುರಿತು ಚರ್ಚೆ, ಸಂವಾದ ನಡೆಯಲಿದ್ದು, ಇಂಟಿಗ್ರೇಟೆಡ್ ಎಂಟರ್‍ಪ್ರೈಸಸ್ ಲಿಮಿಟೆಡ್‍ನ ಎಜಿಎಂ ಚೇತನ್ ಆನಂದ್ ಹಾಗೂ ಎನ್‍ಎಸ್‍ಐ,…
ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ-70 ಅಭಿನಂದನಾ ಸಮಾರಂಭ: ಪ್ರಕಾಶನ ವೀರ ಡಿ.ಎನ್.ಲೋಕಪ್ಪ
August 20, 2018ವಿಮರ್ಶಕ ಡಾ.ಎನ್.ಎಸ್.ತಾರಾನಾಥ್ ಬಣ್ಣನೆ ಮೈಸೂರು: ಕಳೆದ ಮೂರೂವರೆ ದಶಕಗಳಿಂದ ಕನ್ನಡದ ಹಿರಿಯ ಲೇಖಕರಿಂದ ಇತ್ತೀಚಿನ ಯುವ ಲೇಖಕರವರೆಗೆ 1100ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ಮೈಸೂರಿನ ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ ಅವರು 70ನೇ ವಸಂತಕ್ಕೆ ತಲುಪಿದ ಹಿನ್ನೆಲೆಯಲ್ಲಿ ಡಿ.ಎನ್.ಲೋಕಪ್ಪ ಅಭಿನಂದನಾ ಸಮಿತಿ ಆಶ್ರಯದಲ್ಲಿ ಅವರ ಗೆಳೆಯರು, ಅಭಿಮಾನಿಗಳು ಭಾನುವಾರ ಮೈಸೂರಿನಲ್ಲಿ ಆತ್ಮೀಯವಾಗಿ ಅಭಿನಂದಿಸಿದರು. ಮೈಸೂರಿನ ಸರಸ್ವತಿಪುರಂ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಿರಿಗೆರೆ ತರಳಬಾಳು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸುತ್ತ್ತೂರು ಶ್ರೀ ಶಿವರಾತ್ರಿ…
ಹಕ್ಕಿಗಾಗಿ ಮಹಿಳೆಯರು ಚಳವಳಿಯನ್ನು ಅಸ್ತ್ರವಾಗಿ ಬಳಸಿಕೊಳ್ಳಬೇಕಿದೆ : ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್
August 20, 2018ಮೈಸೂರು: ಭಾರತದ ಸಂವಿಧಾನ ಮಹಿಳಾ ಸಮುದಾಯದ ಹಕ್ಕುಗಳನ್ನು ಎತ್ತಿಹಿಡಿದಿದ್ದು, ರಾಜಕೀಯ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಚಳವಳಿಗಳನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕಿದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಹೇಳಿದರು. ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ `ಮಹಿಳೆ-ರಾಜಕಾರಣ-ಹೊಸದಿಕ್ಕು, ಚುನಾವಣೆ : ಒಳ ಹೊರಗೆ’ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನು ಕಂಜರ ಭಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಶಿಕ್ಷಿತರಾಗಿ ಪ್ರಶ್ನಿಸುವ ಮನೋಭಾವ…
ಜೈನ ಮುನಿ ರಾಷ್ಟ್ರಸಂತ್ ಪ್ರವರ್ತಕ್ ಶ್ರೀ ರೂಪ್‍ಮುನೀಜಿ ಮಹಾರಾಜ್ ನಿಧನ
August 19, 2018ಮೈಸೂರು: ಜೈನ ಮುನಿ, ರಾಷ್ಟ್ರಸಂತ ಹಾಗೂ ಸ್ಥಾನಕವಾಸಿ ಜೈನ ಶ್ರಮನ್ ಸಂಘದ ಪ್ರವರ್ತಕರಾದ ಶ್ರೀ ರೂಪ್‍ಮುನೀಜಿ ಮಹಾರಾಜ್ `ರಜತ್’ ಅವರು ನಿನ್ನೆ ಮಧ್ಯರಾತ್ರಿ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಿಧನರಾದರು. ಅವರು ಹಲವರು ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದರು. ರೂಪ್‍ಮುನೀಜಿ ಅವರಿಗೆ 94 ವರ್ಷ ವಯಸ್ಸಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ದೀಕ್ಷೆ ಪಡೆದುಕೊಂಡ ಇವರು ಸುದೀರ್ಘವಾಗಿ ಆಧ್ಯಾತ್ಮಿಕ ಚಟುವಟಿಕೆಯಲ್ಲಿ ತೊಡಗಿದ್ದರು. ಯುವಾಚಾರ್ಯ ಮರುಧರ್ ಕೇಸರಿ ಶ್ರೀ ಮಿಶ್ರಿಮಾಲಜೀ ಮಹಾರಾಜ್ ಅವರ ಶಿಷ್ಯರಾದ ಇವರು ಶ್ರಮಣ್ ಸಂಘದ ಕೋರ್ ಕಮಿಟಿಯ ಸದಸ್ಯರಲ್ಲಿ ಒಬ್ಬರಾಗಿದ್ದರು. ರಾಜಸ್ಥಾನದ ಪಾಲಿ…
ವಿಶ್ವಪ್ರಜ್ಞ ಕಾಲೇಜಿನಲ್ಲಿ ‘ವಸುಂಧರೆ’ ಇಕೋ ಕ್ಲಬ್ ಉದ್ಘಾಟನೆ
August 19, 2018ಮೈಸೂರು: ನಗರದ ದಟ್ಟಗಳ್ಳಿಯಲ್ಲಿರುವ ಎಸ್‍ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ‘ವಸುಂಧರೆ’ ಇಕೋ ಕ್ಲಬ್-2018ರ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ಜಿ.ಆರ್.ನಾಗರಾಜರವರು ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡುತ್ತಾ, ನಮ್ಮ ದೇಶದಲ್ಲಿ ಪರಿಸರ ನಾಶದಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ಇಂದು ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಪರಿಸರ ಮಾಲಿನ್ಯ ತಡೆಗಟ್ಟುವುದರೊಂದಿಗೆ ಪರಿಸರ ಶುಚಿತ್ವವು ನಮ್ಮಿಂದಾಗಬೇಕು ಎಂದು ಅವರು ಸಲಹೆ ನೀಡಿದರು. ಮನುಷ್ಯ ಇಂದು ಸ್ವಾರ್ಥ,…