Tag: Mysuru

ನಾಳೆಯಿಂದ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ  10 ದಿನಗಳ ಕಲಾವೈಭವ; ಸಿಲ್ಕ್ ಉತ್ಸವ
ಮೈಸೂರು

ನಾಳೆಯಿಂದ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ 10 ದಿನಗಳ ಕಲಾವೈಭವ; ಸಿಲ್ಕ್ ಉತ್ಸವ

March 21, 2019

ಮೈಸೂರು: ಯುಗಾದಿ ಹಬ್ಬದ ಪ್ರಯುಕ್ತ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಿಂಗ್‍ರಸ್ತೆ ಯಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಮಾ.22ರಿಂದ 31 ರವರೆಗೆ `ಕಲಾ ವೈಭವ’ ಕರ ಕುಶಲ ಮತ್ತು ಕೈಮಗ್ಗ ವಸ್ತುಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಹಾಗೂ `ಸಿಲ್ಕ್ ಉತ್ಸವ’ ಏರ್ಪಡಿಸಲಾಗಿದೆ ಎಂದು ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಬಿ.ಆರ್.ಉಮಾಕಾಂತ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಜೆಎಸ್‍ಎಸ್…

ಎಟಿಎಂಇ ಕಾಲೇಜಿನಲ್ಲಿ ಇಂದಿನಿಂದ `ಊರ್ಜಾ-2019’ ತಾಂತ್ರಿಕ ಹಬ್ಬ
ಮೈಸೂರು

ಎಟಿಎಂಇ ಕಾಲೇಜಿನಲ್ಲಿ ಇಂದಿನಿಂದ `ಊರ್ಜಾ-2019’ ತಾಂತ್ರಿಕ ಹಬ್ಬ

March 21, 2019

ಮೈಸೂರು: ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯ ರಿಂಗ್ ವಿಭಾಗದ ವತಿಯಿಂದ ಮಾ.21 ಮತ್ತು 22ರಂದು `ಊರ್ಜಾ-2019’ ರಾಷ್ಟ್ರಮಟ್ಟದ ತಾಂತ್ರಿಕ ಹಬ್ಬ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ.ಎಲ್.ಬಸವರಾಜ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ರಾಜ್ಯಗಳ ಇಂಜಿನಿಯರಿಂಗ್ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಕೆಲವು ತಾಂತ್ರಿಕ ಸಮಸ್ಯೆಗಳನ್ನು ನೀಡಿ ಅವರು ಪರಿಹರಿಸುವ ಬಗ್ಗೆ, ರೋಬೋಟ್ ಇನ್ನಿತರ ಮಾದರಿ ಪ್ರಾತ್ಯಕ್ಷಿಕೆ,…

ಮಾ.26ಕ್ಕೆ ಶ್ರೀನಿವಾಸಪ್ರಸಾದ್ ನಾಮಪತ್ರ ಸಲ್ಲಿಕೆ
ಮೈಸೂರು

ಮಾ.26ಕ್ಕೆ ಶ್ರೀನಿವಾಸಪ್ರಸಾದ್ ನಾಮಪತ್ರ ಸಲ್ಲಿಕೆ

March 20, 2019

ಮೈಸೂರು: ಚಾಮರಾಜನಗರ (ಮೀಸಲು) ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾ. 26ರಂದು ನಾಮಪತ್ರ ಸಲ್ಲಿಸಲು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ನಿರ್ಧರಿಸಿ ದ್ದಾರೆ. ಜಯಲಕ್ಷ್ಮಿಪುರಂನ ತಮ್ಮ ನಿವಾಸ ದಲ್ಲಿ ಮಂಗಳವಾರ ಪಕ್ಷದ ಪ್ರಮುಖ ರೊಂದಿಗೆ ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಂಡರು. ನಂತರ ಅವರು ಬೆಂಗಳೂ ರಿಗೆ ತೆರಳಿದರು. ಮಾ.21ರಿಂದ ಚಾಮರಾಜ ನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯ ಕರ್ತರ ಸಮಾವೇಶ ನಡೆಸಲಿದ್ದಾರೆ. ಬೆಳಿಗ್ಗೆ ಮತ್ತು ಮಧ್ಯಾಹ್ನ ದಿನಕ್ಕೆ ಎರಡು…

ಜೆಡಿಎಸ್ ಅಭ್ಯರ್ಥಿಗಳ ಸೋಲಿಸಲು ಬಿಜೆಪಿಗೆ ಕಾಂಗ್ರೆಸ್ ಮುಖಂಡರ ಸಾಥ್
ಮೈಸೂರು

ಜೆಡಿಎಸ್ ಅಭ್ಯರ್ಥಿಗಳ ಸೋಲಿಸಲು ಬಿಜೆಪಿಗೆ ಕಾಂಗ್ರೆಸ್ ಮುಖಂಡರ ಸಾಥ್

March 20, 2019

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಸೋಲಿಸಲು ಕಾಂಗ್ರೆಸ್‍ನ ಸ್ಥಳೀಯ ನಾಯಕರೇ ಬಿಜೆಪಿ ಜತೆ ಕೈಜೋಡಿಸುತ್ತಿದ್ದು ಇದರ ಪರಿ ಣಾಮವಾಗಿ ಮೈತ್ರಿ ಸರ್ಕಾರ ಜೂನ್ ತಿಂಗಳಲ್ಲಿ ಪತನವಾಗಬಹುದು ಎಂದು ಮಾಜಿ ಪ್ರಧಾನಿ ದೇವೇಗೌಡ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಪಕ್ಷದ ರಾಜ್ಯ ಘಟಕದವರಿಗೆ ಕರ್ನಾಟಕ ದಲ್ಲಿ ಮೈತ್ರಿ ಸರ್ಕಾರವೂ ಬೇಕಾಗಿಲ್ಲ. ರಾಷ್ಟ್ರಮಟ್ಟದಲ್ಲಿ ಯುಪಿಎ ಸರ್ಕಾರ ಗದ್ದಿಗೆ ಹಿಡಿಯುವುದು ಅವರಿಗೆ ಇಷ್ಟವಿದ್ದಂತಿಲ್ಲ. ಈ ಹಿನ್ನೆಲೆಯಲ್ಲೇ ನಾವು ಎಲ್ಲಿ ಬಲಿಷ್ಠವಿದ್ದೇವೆಯೋ ಅಂತಹ ಕಡೆ ರಾಜ್ಯದ ನಾಯಕರು…

ರಸ್ತೆ ಅಪಘಾತದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಸಾವು
ಕೊಡಗು, ಮೈಸೂರು

ರಸ್ತೆ ಅಪಘಾತದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಸಾವು

March 20, 2019

ಮಡಿಕೇರಿ: ಲಾರಿ ಹಾಗೂ ಮಾರುತಿ ಓಮ್ನಿ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿ, ವ್ಯಾನ್‍ನಲ್ಲಿದ್ದ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಪಾ ಜೆಯ ಬಾಲಚಂದ್ರ ಕಳಗಿ(42) ದುರ್ಮರಣ ಕ್ಕೀಡಾಗಿದ್ದಾರೆ. ಈ ದುರಂತ ಇಂದು ಸಂಜೆ ಮಡಿಕೇರಿಯ ತಾಳತ್ತಮನೆ ಬಳಿ ನಡೆದಿದೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿ ದ್ದಾರೆ. ಬಾಲಚಂದ್ರ ಕಳಗಿ ಅವರು ತಮ್ಮ ಮಾರುತಿ ವ್ಯಾನ್‍ನಲ್ಲಿ ಮೂರ್ನಾಡುವಿ ನಿಂದ ತಾಳತ್ತಮನೆ ಬೈಪಾಸ್…

ಲಕ್ಷಾಂತರ ಭಕ್ತಾದಿಗಳ ಜಯ ಘೋಷದೊಂದಿಗೆ ವೈಭವದ ನಂಜನಗೂಡು ರಥೋತ್ಸವ
ಮೈಸೂರು

ಲಕ್ಷಾಂತರ ಭಕ್ತಾದಿಗಳ ಜಯ ಘೋಷದೊಂದಿಗೆ ವೈಭವದ ನಂಜನಗೂಡು ರಥೋತ್ಸವ

March 20, 2019

ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನಲ್ಲಿ ಮಂಗಳವಾರ ಜರುಗಿದ ಶ್ರೀಕಂಠೇಶ್ವರಸ್ವಾಮಿಯ ಗೌತಮ ಪಂಚಮಹಾರಥೋತ್ಸವ ಅದ್ಧೂರಿಯಾಗಿ ನಡೆಯಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳು ರಥೋತ್ಸ ವದಲ್ಲಿ ಪಾಲ್ಗೊಂಡು, ತಮ್ಮ ಭಕ್ತಿಭಾವ ಮೆರೆದರು. ರಥದ ಹಗ್ಗ ಕಿತ್ತು ಕೆಲಕಾಲ ರಥೋತ್ಸವಕ್ಕೆ ಅಡಚಣೆಯಾದರೂ ಯಾವುದೇ ಅಹಿತಕರ ಘಟನೆ ಸಂಭವಿಸ ಲಿಲ್ಲ. ರಥ ಚಲನೆಯಲ್ಲಿ ವಿಳಂಬ ವಾದರೂ ಭಕ್ತರ ಹರ್ಷೋದ್ಘಾರ ದೊಂದಿಗೆ ಗೌತಮ ರಥ ಸೇರಿ ದಂತೆ ಪಂಚ ರಥಗಳು 11.35 ಗಂಟೆ ಸುಮಾರಿಗೆ ಸ್ವಸ್ಥಾನ ತಲುಪಿದವು. ಬೆಳಿಗ್ಗೆ 6.40 ರಿಂದ 7 ಗಂಟೆಯೊಳಗೆ…

ಬಿಜೆಪಿ ವತಿಯಿಂದ ಪ್ರಬುದ್ಧರ ಗೋಷ್ಠಿ
ಕೊಡಗು

ಬಿಜೆಪಿ ವತಿಯಿಂದ ಪ್ರಬುದ್ಧರ ಗೋಷ್ಠಿ

March 20, 2019

ಪ್ರಧಾನಿ ಮೋದಿಯಿಂದ ಭ್ರಷ್ಟಾಚಾರ ರಹಿತ ದಿಟ್ಟ ಆಡಳಿತ ಕುಶಾಲನಗರ: ಕಳೆದ ಐದು ವರ್ಷ ಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಆಡಳಿತ ವರ್ಗ ದಲ್ಲಿ ಪ್ರಧಾನಿ ಸಹಿತ ಯಾವೊಬ್ಬ ಸಚಿವರು ಭ್ರಷ್ಟಾ ಚಾರ ರಹಿತವಾಗಿ ದಿಟ್ಟ ಆಡಳಿತ ನಡೆಸಿದ ಹೆಮ್ಮೆ ಯಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಕುಶಾಲನಗರದ ಖಾಸಗಿ ಹೋಟೆಲ್ ಪ್ರೆಸಿ ಡೆಂಟ್ ಹೋಟೆಲ್ ಸಭಾಂಗಣದಲ್ಲಿ ಮಂಗಳ ವಾರ ಹಮ್ಮಿಕೊಂಡಿದ್ದ ಪ್ರಬುದ್ಧರ ಗೋಷ್ಠಿ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು,…

ಮಂಡ್ಯದಿಂದ ಸುಮಲತಾ ಸ್ವತಂತ್ರ ಸ್ಪರ್ಧೆ
ಮೈಸೂರು

ಮಂಡ್ಯದಿಂದ ಸುಮಲತಾ ಸ್ವತಂತ್ರ ಸ್ಪರ್ಧೆ

March 19, 2019

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಷ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಮಾರ್ಚ್ 20ರ ಬುಧವಾರದಂದು ಬೆಳಿಗ್ಗೆ 10 ಗಂಟೆಗೆ ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಇದರೊಂದಿಗೆ ಸುಮ ಲತಾ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿದ್ದ ಗೊಂದಲಗಳಿಗೆ ಇಂದು ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದ ಕಿಕ್ಕಿ ರಿದ ಪತ್ರಿಕಾಗೋಷ್ಠಿಯಲ್ಲಿ ಅವರು ತೆರೆ ಎಳೆದರು. ಮಂಡ್ಯದ ಮತದಾರರ ಹಾಗೂ ಅಂಬರೀಷ್ ಅಭಿಮಾನಿಗಳ ಒತ್ತಾಸೆಗೆ ಕಟ್ಟುಬಿದ್ದು ನಾನು ಈ ನಿರ್ಧಾರಕ್ಕೆ ಬಂದಿರುವುದಾಗಿ…

ಚಾಮರಾಜನಗರದಿಂದ ಸ್ಪರ್ಧೆ: ಶ್ರೀನಿವಾಸಪ್ರಸಾದ್  ಅಧಿಕೃತ ಘೋಷಣೆ
ಮೈಸೂರು

ಚಾಮರಾಜನಗರದಿಂದ ಸ್ಪರ್ಧೆ: ಶ್ರೀನಿವಾಸಪ್ರಸಾದ್ ಅಧಿಕೃತ ಘೋಷಣೆ

March 19, 2019

ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎನ್ನುವ ಮೂಲಕ ತಮ್ಮ ಸ್ಪರ್ಧೆಯ ಬಗ್ಗೆ ಇದ್ದ ಅನುಮಾನಗಳಿಗೆ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಇಂದು ತೆರೆ ಎಳೆದಿ ದ್ದಾರೆ. ಬೆಂಗಳೂರಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ವರಿಷ್ಠ ರೊಂದಿಗೆ ಚರ್ಚೆ ನಡೆಸಿದ ಬಳಿಕ ಸೋಮ ವಾರ ಬೆಳಿಗ್ಗೆ ಮೈಸೂರು-ಚೆನ್ನೈ ಶತಾಬ್ಧಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಮೈಸೂರಿಗೆ ಬಂದಿ ಳಿದ ವಿ.ಶ್ರೀನಿವಾಸಪ್ರಸಾದ್ ರೈಲ್ವೆ ನಿಲ್ದಾಣ ದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಗಳೊಂದಿಗೆ ತಮ್ಮ ಸ್ಪರ್ಧೆಯನ್ನು ಅಧಿಕೃತ ವಾಗಿ ಘೋಷಣೆ…

ಇಂದಿನಿಂದ ಮೈಸೂರು-ಕೊಡಗು, ಹಾಸನ, ಚಾ.ನಗರ, ಮಂಡ್ಯದಲ್ಲಿ ನಾಮಪತ್ರ ಸಲ್ಲಿಕೆ
ಮೈಸೂರು

ಇಂದಿನಿಂದ ಮೈಸೂರು-ಕೊಡಗು, ಹಾಸನ, ಚಾ.ನಗರ, ಮಂಡ್ಯದಲ್ಲಿ ನಾಮಪತ್ರ ಸಲ್ಲಿಕೆ

March 19, 2019

ಮೈಸೂರು: ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿನ ಮೊದಲ ಹಂತದ ಚುನಾ ವಣೆಗೆ ನಾಳೆ (ಮಾ.19) ಅಧಿಕೃತ ಅಧಿಸೂಚನೆ ಹೊರ ಬೀಳಲಿದೆ. ಮೈಸೂರು ಜಿಲ್ಲಾಧಿಕಾರಿಗಳೂ ಆದ ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಮಂಗಳವಾರ ಅಧಿಸೂಚನೆ ಹೊರಡಿಸಲಿದ್ದು, ಇದರೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿಯ ಮೊದಲ ಮಹಡಿಯ ಕೋರ್ಟ್ ಹಾಲ್ (ನ್ಯಾಯಾ ಲಯ ಸಭಾಂಗಣ)ನಲ್ಲಿ ಚುನಾವಣಾಧಿಕಾರಿ ಕಚೇರಿಯಲ್ಲಿ ಸಿದ್ಧತೆ ಮಾಡಲಾಗಿದ್ದು, ಅಲ್ಲಿಯೇ ನಾಮಪತ್ರಗಳನ್ನು…

1 51 52 53 54 55 194
Translate »