Tag: Mysuru

ದೇವರಾಜ ಮಾರುಕಟ್ಟೆ ಅಂಗಡಿಗೆ ಬೆಂಕಿ: ಗೃಹ ಬಳಕೆ ವಸ್ತುಗಳ ನಾಶ
ಮೈಸೂರು

ದೇವರಾಜ ಮಾರುಕಟ್ಟೆ ಅಂಗಡಿಗೆ ಬೆಂಕಿ: ಗೃಹ ಬಳಕೆ ವಸ್ತುಗಳ ನಾಶ

February 28, 2019

ಮೈಸೂರು: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಅಂಗಡಿ ಮಳಿಗೆ ಯೊಂದು ಸುಟ್ಟುಹೋದ ಘಟನೆ ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಸಾದಿಕ್ ಎಂಬುವರಿಗೆ ಸೇರಿದ ಗೃಹಬಳಕೆ ವಸ್ತುಗಳ ಅಂಗಡಿಗೆ ಬೆಂಕಿ ತಗುಲಿದ್ದು, ಇಂದು ಮುಂಜಾನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವ ಮೂಲಕ ಇತರ ಅಂಗಡಿಗಳಿಗೆ ಅಪಾಯ ಸಂಭವಿಸುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಸಾದಿಕ್ ಅವರು ಮಂಗಳವಾರ ರಾತ್ರಿ ವ್ಯಾಪಾರ ಮುಗಿಸಿ ಬಾಗಿಲು ಹಾಕಿಕೊಂಡು ಹೋಗಿದ್ದರು. ಬೆಳಿಗ್ಗೆ ಸುಮಾರು 6…

ಗಿಡ ನೆಡುವ ಮೂಲಕ ಬಿಎಸ್‍ವೈ ಹುಟ್ಟುಹಬ್ಬ ಆಚರಣೆ
ಮೈಸೂರು

ಗಿಡ ನೆಡುವ ಮೂಲಕ ಬಿಎಸ್‍ವೈ ಹುಟ್ಟುಹಬ್ಬ ಆಚರಣೆ

February 28, 2019

ಮೈಸೂರು: ಮೈಸೂರಿನ ನರ ಸಿಂಹರಾಜ ಕ್ಷೇತ್ರದಲ್ಲಿ ಬಿಜೆಪಿ ವತಿಯಿಂದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನವರ 76ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ‘ಕಾಡು ಉಳಿಸಿ ನಾಡು ಬೆಳೆಸಿ’ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಾಜಕುಮಾರ್ ರಸ್ತೆಯಲ್ಲಿನ ತ್ರಿವೇಣಿ ಉದ್ಯಾನವನದಲ್ಲಿ 50ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು. ನಂತರ ಮಾತನಾಡಿದ ನಗರ ಪಾಲಿಕೆ ಸದಸ್ಯರಾದ ಸಾತ್ವಿಕ್, ಕರ್ನಾಟಕ ರಾಜ್ಯದ ಅಭಿವೃದ್ಧಿಯ ದಿನಗಳು ಎಂದರೆ ಅದು ಯಡಿಯೂರಪ್ಪನವರ ಸರ್ಕಾರದ ದಿನ ಗಳು….

ಬೈಕ್‍ಗಳ ಮುಖಾಮುಖಿ ಡಿಕ್ಕಿ: ಹೂವಿನ ವ್ಯಾಪಾರಿ ಸಾವು
ಮೈಸೂರು

ಬೈಕ್‍ಗಳ ಮುಖಾಮುಖಿ ಡಿಕ್ಕಿ: ಹೂವಿನ ವ್ಯಾಪಾರಿ ಸಾವು

February 28, 2019

ಮೈಸೂರು: ಮಂಗಳವಾರ ಮಧ್ಯರಾತ್ರಿ ಸಂಭವಿಸಿದ ರಸ್ತೆ ಅಪ ಘಾತದಲ್ಲಿ ಹೂವಿನ ವ್ಯಾಪಾರಿ ಸಾವನ್ನಪ್ಪಿದ್ದಾರೆ. ಶ್ರೀರಂಗಪಟ್ಟಣ ತಾಲೂಕು, ಪಾಲಹಳ್ಳಿ ಗ್ರಾಮದ ಸಿದ್ದಪ್ಪ ಅವರ ಮಗ ರಘು(22) ಸಾವನ್ನಪ್ಪಿದವರು. ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ರಘು, ವ್ಯಾಪಾರ ಮುಗಿಸಿ ಕೊಂಡು ಮೈಸೂರಿನಿಂದ ಪಾಲಹಳ್ಳಿಗೆ ಬಜಾಜ್ ಪಲ್ಸರ್‍ಬೈಕ್ (ಕೆಎ 11, ಇಕೆ 0769)ನಲ್ಲಿ ಹೋಗುತ್ತಿದ್ದಾಗ ಬೆಂಗಳೂರು-ಮೈಸೂರು ಹೆದ್ದಾರಿಯ ಚೆಕ್‍ಪೋಸ್ಟ್ ಬಳಿ ತಿರುವಿನಲ್ಲಿ ಎದುರಿ ನಿಂದ ಬಂದ ಮತ್ತೊಂದು ದ್ವಿಚಕ್ರ ವಾಹನ ಮಂಗಳವಾರ ಮಧ್ಯರಾತ್ರಿ ಸುಮಾರು 12.10ಗಂಟೆ ವೇಳೆಗೆ ಡಿಕ್ಕಿ…

ಉದ್ಬೂರಲ್ಲಿ ಮಹಿಳೆ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳ ಆರೋಪ
ಮೈಸೂರು

ಉದ್ಬೂರಲ್ಲಿ ಮಹಿಳೆ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳ ಆರೋಪ

February 28, 2019

ಮೈಸೂರು: ಮಹಿಳೆಯೊಬ್ಬರು ಬೆಂಕಿಗಾಹುತಿ ಯಾಗಿರುವ ದುರಂತ ಮೈಸೂರು ತಾಲೂಕು ಉದ್ಬೂರಲ್ಲಿ ಮಂಗಳ ವಾರ ರಾತ್ರಿ ಸಂಭವಿಸಿದೆ. ಉದ್ಬೂರು ಗ್ರಾಮದ ಸುರೇಶ ಅವರ ಪತ್ನಿ ಶ್ರೀಮತಿ ಭಾಗ್ಯ(26) ತೀವ್ರ ಸುಟ್ಟು ಗಾಯಗಳಾಗಿ ಸಾವನ್ನಪ್ಪಿ ದವರು. ಅದೇ ಗ್ರಾಮದವರಾದ ಭಾಗ್ಯರನ್ನು 5 ವರ್ಷಗಳ ಹಿಂದೆ ಸುರೇಶ್‍ಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಪುತ್ರ ಮತ್ತು ಪುತ್ರಿಯನ್ನು ಹೊಂದಿದ್ದ ದಂಪತಿ ನಡುವೆ ಸಾಮರಸ್ಯವಿರಲಿಲ್ಲ ಎಂದಿರುವ ಭಾಗ್ಯ ಪೋಷಕರು, ಆಕೆಯ ಪತಿ ಸುರೇಶ ಹಾಗೂ ಅತ್ತೆ ಮರಿಚಿಕ್ಕಮ್ಮ ಬೆಂಕಿ ಹಚ್ಚಿ ಹತ್ಯೆಗೈದಿದ್ದು, ವರದಕ್ಷಿಣೆಗಾಗಿ ಈ…

ಮಾ.1, 2ರಂದು ಸುತ್ತೂರಿನಲ್ಲಿ ಪತ್ರಕರ್ತರ 34ನೇ ರಾಜ್ಯ ಸಮ್ಮೇಳನ
ಮೈಸೂರು

ಮಾ.1, 2ರಂದು ಸುತ್ತೂರಿನಲ್ಲಿ ಪತ್ರಕರ್ತರ 34ನೇ ರಾಜ್ಯ ಸಮ್ಮೇಳನ

February 27, 2019

ಮೈಸೂರು: ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಮಾ.1 ಮತ್ತು 2ರಂದು ಆಯೋಜಿಸಲಾಗಿರುವ ಪತ್ರಕರ್ತರ ರಾಜ್ಯಮಟ್ಟದ 34ನೇ ಸಮ್ಮೇ ಳನದ ಪೂರ್ವ ಸಿದ್ಧತೆಗಳ ಕುರಿತು ಸಮ್ಮೇ ಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರೂ ಆಗಿರುವ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಇಂದಿಲ್ಲಿ ತಿಳಿಸಿದರು. ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ವಿವರ ಗಳನ್ನು ನೀಡಿದ ಅವರು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸಮ್ಮೇಳನದ ಆತಿಥ್ಯ ವಹಿಸಿಕೊಂಡಿದೆ. ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ಮಾಧ್ಯಮ ವಸ್ತು ಪ್ರದರ್ಶನ ಏರ್ಪಡಿಸಿದ್ದು, ಹಿರಿಯ…

ಮಾ.9, ರಾಷ್ಟ್ರೀಯ ಲೋಕ ಅದಾಲತ್
ಮೈಸೂರು

ಮಾ.9, ರಾಷ್ಟ್ರೀಯ ಲೋಕ ಅದಾಲತ್

February 27, 2019

ಮೈಸೂರು: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮಾ.9ರಂದು ಮೈಸೂರು ಮತ್ತು ತಾಲೂ ಕಿನ ನ್ಯಾಯಾಲಯಗಳಲ್ಲಿ `ರಾಷ್ಟ್ರೀಯ ಲೋಕ ಅದಾಲತ್’ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ವಂಟಿಗೋಡಿ ಇಂದಿಲ್ಲಿ ತಿಳಿಸಿದರು. ಮೈಸೂರಿನ ನ್ಯಾಯಾಲಯದ ಆವ ರಣದಲ್ಲಿರುವ ವೀಡಿಯೋ ಕಾನ್ಫರೆನ್ಸ್ ಹಾಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ರಾಜೀ ಯಾಗಬಲ್ಲ ಎಲ್ಲಾ ಕ್ರಿಮಿನಲ್ ಮತ್ತು ಸಿವಿಲ್…

ಮೃಗಾಲಯ-ಕಾರಂಜಿ ಕೆರೆ ನಡುವಿನ ರಸ್ತೆ ಬದಿ ದಿಢೀರ್ ಬೇಲಿ ನಿರ್ಮಾಣ
ಮೈಸೂರು

ಮೃಗಾಲಯ-ಕಾರಂಜಿ ಕೆರೆ ನಡುವಿನ ರಸ್ತೆ ಬದಿ ದಿಢೀರ್ ಬೇಲಿ ನಿರ್ಮಾಣ

February 27, 2019

ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿ ಕೆರೆ ನಡುವಿನ ರಸ್ತೆ ಬದಿಯಲ್ಲಿ ದಿಢೀರ್ ಪೆನ್ಸಿಂಗ್ ಅಳವಡಿಸಲಾಗುತ್ತಿದ್ದು, ಈ ಬಗ್ಗೆ ಯಾವ ಅಧಿಕಾರಿಗಳಿಗೂ ಸ್ಪಷ್ಟ ಮಾಹಿತಿ ಇಲ್ಲ. ನಜರ್‍ಬಾದ್‍ನಿಂದ ಲಲಿತ ಮಹಲ್ ರಸ್ತೆ ಸಂಪರ್ಕಿಸುವ ಈ ರಸ್ತೆಯಲ್ಲಿ ಕಾರಂಜಿ ಕೆರೆ ಭಾಗದಲ್ಲಿ ಈಗಾಗಲೇ ಪೆನ್ಸಿಂಗ್ ಇದೆ. ಇದೀಗ ಮೃಗಾಲಯ ಭಾಗಕ್ಕೆ ಪೆನ್ಸಿಂಗ್ ಅಳವಡಿಸಲು ಕಂಬಗಳನ್ನು ನೆಡಲಾಗಿದೆ. ಈ ಬಗ್ಗೆ ನಗರಪಾಲಿಕೆ ಅಧಿಕಾರಿಗಳಿಗಾಗಲೀ, ಮೃಗಾಲಯ, ಮುಡಾ ಅಧಿಕಾರಿಗಳಿಗಾಗಲೀ ಮಾಹಿತಿ ಇಲ್ಲ. ಯಾರು ಪೆನ್ಸಿಂಗ್ ಅಳವಡಿಸುತ್ತಿದ್ದಾರೆ ಎಂದು ಕೇಳಿದರೆ ಯಾರಿಂದಲೂ…

ಬಂಡೀಪುರದಲ್ಲಿ ಮುಂದುವರೆದ ಅಗ್ನಿ ರುದ್ರ ನರ್ತನ
ಮೈಸೂರು

ಬಂಡೀಪುರದಲ್ಲಿ ಮುಂದುವರೆದ ಅಗ್ನಿ ರುದ್ರ ನರ್ತನ

February 26, 2019

ವಾಯುಪಡೆ ಹೆಲಿಕಾಪ್ಟರ್‍ಗಳ ನೆರವು ಸಾವಿರಾರು ಸ್ವಯಂ ಸೇವಕರ ನೆರವಿನೊಂದಿಗೆ ಅರಣ್ಯ ಸಿಬ್ಬಂದಿ ಸೆಣಸಾಟ ಬಂಡೀಪುರ: ಬಂಡೀಪುರ ಅಭಯಾರಣ್ಯದಲ್ಲಿ ಕಳೆದ ಐದು ದಿನಗಳಿಂದ ಸಾವಿರಾರು ಎಕರೆ ಕಾಡನ್ನು ಸರ್ವನಾಶ ಮಾಡಿದ ಅಗ್ನಿಯ ರುದ್ರನರ್ತನ ಇಂದು ಕೂಡ ಮುಂದು ವರೆದಿದೆ. ಅರಣ್ಯ ಸಿಬ್ಬಂದಿಯೊಂದಿಗೆ ಸಾವಿರಾರು ಸ್ವಯಂ ಸೇವಾ ಕಾರ್ಯಕರ್ತರು ಬೆಂಕಿ ನಂದಿಸಲು ಸೆಣಸಾಡುತ್ತಿದ್ದು, ವಾಯುಪಡೆಯ ಎರಡು ಹೆಲಿಕಾಪ್ಟರ್‍ಗಳು ಸಹ ನೆರವಿಗೆ ಧಾವಿಸಿವೆ. ಹೆಲಿಕಾಪ್ಟರ್‍ಗಳ ಮೂಲಕ ನಡೆಸಿದ ರಕ್ಷಣಾ ಕಾರ್ಯಾಚರಣೆಯಿಂದ ಸ್ವಲ್ಪ ಮಟ್ಟಿಗೆ ಬೆಂಕಿ ನಂದಿಸಲು ಸಾಧ್ಯವಾಯಿ ತಾದರೂ, ಪೂರ್ಣ ಪ್ರಮಾಣದಲ್ಲಿ…

ಮೈಸೂರು ಜಲದರ್ಶಿನಿ ಆವರಣದಲ್ಲಿ 13 ಕೋಟಿ ವೆಚ್ಚದ ಅಭಿವೃದ್ಧಿ
ಮೈಸೂರು

ಮೈಸೂರು ಜಲದರ್ಶಿನಿ ಆವರಣದಲ್ಲಿ 13 ಕೋಟಿ ವೆಚ್ಚದ ಅಭಿವೃದ್ಧಿ

February 26, 2019

ಬೆಂಗಳೂರು: ಮೈಸೂರಿನ ಜಲದರ್ಶಿನಿ ಸರ್ಕಾರಿ ಅತಿಥಿ ಗೃಹವನ್ನು 13 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಅತಿಥಿ ಗೃಹಕ್ಕೆ ಹೊಂದಿಕೊಂಡಂತೆ ಹತ್ತು ಕೋಟಿ ರೂ. ವೆಚ್ಚದಲ್ಲಿ 500 ಆಸನವುಳ್ಳ ಅತ್ಯಾಧುನಿಕ ಸಭಾಂಗಣ ನಿರ್ಮಾಣಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತ ಜಿ.ಟಿ. ದೇವೇಗೌಡ, ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಜೊತೆ ಇಂದು ಮಾತುಕತೆ ನಡೆಸಿದ ನಂತರ ಜಲದರ್ಶಿನಿಗೆ ಮೂಲ ಸೌಕರ್ಯ ಕಲ್ಪಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನವೆ ಸಭಾಂಗಣಕ್ಕೆ ಮುಖ್ಯಮಂತ್ರಿ ಹೆಚ್.ಡಿ….

ಚಾಮುಂಡಿಬೆಟ್ಟದಲ್ಲೂ ಅಗ್ನಿ ಹಾವಳಿ: ತಪ್ಪಿದ ಭಾರೀ ಹಾನಿ
ಮೈಸೂರು

ಚಾಮುಂಡಿಬೆಟ್ಟದಲ್ಲೂ ಅಗ್ನಿ ಹಾವಳಿ: ತಪ್ಪಿದ ಭಾರೀ ಹಾನಿ

February 26, 2019

ಮೈಸೂರು: ಕಿಡಿಗೇಡಿಗಳು ಹಚ್ಚಿದ ಕಿಚ್ಚಿಗೆ ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯದಲ್ಲಿ ಭಾರೀ ಪ್ರಮಾಣದ ವನ್ಯ ಸಂಪತ್ತು ಅಗ್ನಿಗಾಹುತಿ ಯಾಗುತ್ತಿರುವ ಸಂದರ್ಭದಲ್ಲಿಯೇ ಮೈಸೂರಿನಲ್ಲಿಯೂ ಕಿಡಿಗೇಡಿಗಳ ದುಷ್ಕೃತ್ಯದಿಂದಾಗಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಬೆಂಕಿ ಕಾಣಿಸಿಕೊಂಡು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮೈಸೂರು-ನಂಜನಗೂಡು ಮುಖ್ಯ ರಸ್ತೆಯಲ್ಲಿರುವ ಬಿಜಿಎಸ್ ಸಂಸ್ಥೆ ಖಾಲಿ ಜಾಗದಲ್ಲಿ ಕಿಡಿಗೇಡಿ ಗಳು ಬೆಂಕಿ ಹಾಕಿ ಪರಾರಿಯಾಗಿದ್ದರು. ಮಧ್ಯಾಹ್ನ 12.30ರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ಬಿಸಿಲಿನ ಬೇಗೆಗೆ ತೀವ್ರ ಸ್ವರೂಪ ಪಡೆಯಿತು. ಗಾಳಿ ರಭಸ ವಾಗಿ ಬೀಸಲಾರಂಭಿಸಿದ ಪರಿಣಾಮ ಬೆಂಕಿ…

1 74 75 76 77 78 194
Translate »