ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ
ಮೈಸೂರು

ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ

August 13, 2019

ಮೈಸೂರು,ಆ.12(ಎಂಕೆ)- ಡಾ.ಬಿ. ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿದ ಮೀಸಲಾತಿಯು ನಮ್ಮೆಲ್ಲರ ಅಭಿ ವೃದ್ಧಿಗೆ ಕಾರಣವಾಗಿದ್ದು, ಪ್ರತಿಯೊಬ್ಬರೂ ಅವರನ್ನು ಸ್ಮರಿಸಬೇಕು ಎಂದು ರಾಜನ ಹಳ್ಳಿ ವಾಲ್ಮೀಕಿ ಗುರುಪೀಠದ ಧರ್ಮ ದರ್ಶಿ ಎಂ.ಅಪ್ಪಣ್ಣ ಹೇಳಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಅಖಿಲ ಭಾರತ ಪರಿಶಿಷ್ಟ ಜಾತಿ, ವರ್ಗ, ಹಿಂದು ಳಿದ ಮತ್ತು ಅಲ್ಪಸಂಖ್ಯಾತ ಕಾರ್ಮಿಕ ಕಲ್ಯಾಣ ಸಂಘಗಳ ಒಕ್ಕೂಟದ ವತಿ ಯಿಂದ ನಡೆದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರು ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಆಸ್ತಿ ಮಕ್ಕಳಾಗಿದ್ದು, ಪ್ರತಿಭಾ ವಂತ ಮಕ್ಕಳನ್ನು ಗುರುತಿಸಿ, ಪ್ರೋತ್ಸಾಹಿ ಸುವ ಮೂಲಕ ದೇಶಕ್ಕೆ ಕೊಡುಗೆ ನೀಡು ವಂತೆ ಜಾಗೃತಗೊಳಿಸಬೇಕು. ಎಸ್‍ಎಸ್ ಎಲ್‍ಸಿ, ಪಿಯುಸಿಯಲ್ಲಿ ಒಳ್ಳೆಯ ಫಲಿ ತಾಂಶ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದು ನನ್ನ ಸೌಭಾಗ್ಯ ಎಂದರು.

ನಮ್ಮ ಕಾಲದಲ್ಲಿ ಮೂಲಭೂತ ಸೌಕರ್ಯ ಇರಲಿಲ್ಲ. 35 ಅಂಕ ತೆಗೆದರೆ ಸಾಧನೆಯಾಗುತ್ತಿತ್ತು. ಆಗಿನ 35 ಅಂಕ ಈಗಿನ 98 ಅಂಕಕ್ಕೆ ಸಮಾನ. ಈಗ ನಿಮಗೆ ಎಲ್ಲಾ ರೀತಿಯ ಸೌಲಭ್ಯಗಳೂ ಇವೆ. ಅದನ್ನು ಬಳಸಿಕೊಂಡು ಚೆನ್ನಾಗಿ ಓದಿ. ಧಾರಾವಾಹಿ, ಸಿನಿಮಾ, ವಾಟ್ಸಾಪ್ ನೋಡುವ ಬದಲು ಸುದ್ದಿ ನೋಡಿ, ಪುಸ್ತಕ ಓದಿ. ಅನ್ನ ಹಾಗೂ ವಿದ್ಯೆಯ ಬೆಲೆ ವಯಸ್ಸಾದ ಮೇಲೆ ತಿಳಿಯುತ್ತದೆ ಎಂದು ಹೇಳಿದರು.

ಇದೇ ವೇಳೆ ವಿವಿಧ ಇಲಾಖೆಯ ನಿವೃತ್ತ ನೌಕರರಾದ ಅಡಿವೆಪ್ಪರ್ ವೀರಪ್ಪ, ಹೆಚ್.ಎಸ್.ಮಂಜುನಾಥ್, ಮಹದೇವ ನಾಯಕ, ದಿವಾಕರ್, ಸರ್ದಾರ್ ಅಹ ಮ್ಮದ್, ಎನ್.ರಾಧಾ, ರೂಪ, ಹೊಣ ಕಾರನಾಯಕ ಹಾಗೂ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ 30ಕ್ಕೂ ಹೆಚ್ಚು ವಿದ್ಯಾರ್ಥಿ ಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ರೈಲ್ವೆ ಅಧಿಕಾರಿ ಎಸ್.ಸಿದ್ದಯ್ಯ, ಅಣ್ಣಸ್ವಾಮಿ, ದೇವರಾಜ್ ಕಾಟೂರು, ರಾಮು, ಲಕ್ಷ್ಮಣ ನಾಯಕ್, ಚಂದ್ರನಾಯಕ್, ಶಿವಪ್ಪ, ಸಂಸ್ಥೆಯ ಪದಾಧಿಕಾರಿಗಳಾದ ಪಿ.ದೇವ ರಾಜು, ದ್ಯಾವಪ್ಪ ನಾಯಕ, ಎನ್. ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

 

Translate »