ಸಾರಿಗೆ ಬಸ್ ಸಂಚಾರ ಪುನಾರಂಭ
ಮೈಸೂರು

ಸಾರಿಗೆ ಬಸ್ ಸಂಚಾರ ಪುನಾರಂಭ

August 13, 2019

ಮೈಸೂರು, ಆ.12(ಆರ್‍ಕೆ)- ಮಹಾ ಮಳೆಯಿಂದ ನದಿಗಳು ಉಕ್ಕಿ ಹರಿದು ಸೇತುವೆಗಳು ಮುಳುಗಡೆಯಾಗಿದ್ದ ಕಾರಣ ಸ್ಥಗಿತಗೊಂಡಿದ್ದ ಕೆಲಮಾರ್ಗ ಗಳ ಬಸ್ ಸಂಚಾರ ಇಂದಿನಿಂದ ಪುನಾ ರಂಭಗೊಂಡಿದೆ. ಮೈಸೂರಿನಿಂದ ಊಟಿ, ಹೆಚ್.ಡಿ.ಕೋಟೆ, ನಂಜನಗೂಡು, ಕೊಡಗು ಹಾಗೂ ಕೇರಳಗಳಿಗೆ ಕೆಎಸ್‍ಆರ್‍ಟಿಸಿ ಬಸ್ ಸಂಚಾರವನ್ನು 4 ದಿನಗಳಿಂದ ರದ್ದು ಗೊಳಿಸಲಾಗಿತ್ತು. ನದಿಗಳಲ್ಲಿ ನೀರಿನ ಪ್ರಮಾಣ ತಗ್ಗಿರುವ ಹಿನ್ನೆಲೆಯಲ್ಲಿ ಇಂದಿ ನಿಂದ ಬಸ್ ಸಂಚಾರ ಆರಂಭಗೊಂಡಿದೆ.

Translate »