ಮೈಸೂರು, ಆ.12(ಎಂಕೆ)- ಎಲ್ಲಾ ಬಗೆಯ ಸಾಂಸ್ಕøತಿಕ ಸಂಸ್ಥೆಗಳು ಸರ್ಕಾರದ ಸಹಕಾರವನ್ನು ಪಡೆದುಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ ಹೇಳಿದರು.
ಕಲಾಮಂದಿರದ ಕಿರುರಂಗಮಂದಿರದಲ್ಲಿ ಇನೋವೇಟಿವ್ ಸಂಸ್ಥೆಯು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿ ರುವ `ಯಕ್ಷ ಸಂಭ್ರಮ-2019′ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಥಿಕ ಸಮಸ್ಯೆಯಿಂದ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಿ ಕೈ ಸುಟ್ಟುಕೊಳ್ಳಬೇಡಿ. ಸಾಂಸ್ಕøತಿಕ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಲ್ಲ. ನಿರಂತರವಾಗಿರಬೇಕು. ಹೀಗಾಗಿ ಸರಕಾರದ ನೆರವು ಕೇಳುವುದು ತಪ್ಪಿಲ್ಲ ಎಂದರು.
ಮಂಗಳೂರು ಮತ್ತು ಕರಾವಳಿ ಭಾಗದ ಯಕ್ಷಗಾನ ಕಲೆಯನ್ನು ಕಳೆದ 15 ವರ್ಷ ಗಳಿಂದ ಮೈಸೂರಿನಲ್ಲಿ ಬೆಳೆಸುತ್ತಿರುವ ಇನೋವೇಟಿವ್ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ. ಇದೇ ರೀತಿ ಕಲೆ ಮತ್ತು ಸಾಹಿತ್ಯದ ವಿನಿಮಯ ನಿರಂತರವಾಗಿ ಆಗಬೇಕು ಎಂದರು. ಯಕ್ಷ ಸಂಭ್ರಮವನ್ನು ಉದ್ಘಾಟಿಸಿದ ಉದ್ಯಮಿ ಜಿ.ಎಂ.ಹೆಗಡೆ ಮಾತನಾಡಿ, ಮೈಸೂರಿನಲ್ಲಿ ಇನೋವೇಟಿವ್ ಸಂಸ್ಥೆಯು ಕಳೆದ 15 ವರ್ಷಗಳಿಂದ ಯಕ್ಷ ಸಂಭ್ರಮ ಆಚರಿಸುತ್ತಿರುವುದು ಶ್ಲಾಘನೀಯ. ಮೈಸೂರಿನ ರಾಜವಂಶಸ್ಥರು ಸೇರಿದಂತೆ ಹಲ ವಾರು ಮಹನೀಯರು ಮೈಸೂರಿನಲ್ಲಿ ಯಕ್ಷಗಾನಕ್ಕೆ ಪೆÇ್ರೀತ್ಸಾಹ ನೀಡುತ್ತಿದ್ದಾರೆ. ಈ ಪೆÇ್ರೀತ್ಸಾಹ ಹೀಗೆ ಮುಂದುವರೆಯಬೇಕು. ಕಲಾಭಿಮಾನಿಗಳು ಯಕ್ಷಗಾನ ಪ್ರಸಂಗ ವನ್ನು ಹೆಚ್ಚು ಹೆಚ್ಚು ನೋಡುವ ಮೂಲಕ ಪೆÇ್ರೀತ್ಸಾಹಿಸಬೇಕೆಂದು ಮನವಿ ಮಾಡಿದರು.
ಬಳಿಕ ಶ್ರಿ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ಕೆರೆಮನೆ ಶಿವಾನಂದ ಹೆಗಡೆ ನಿರ್ದೇಶನದಲ್ಲಿ ‘ಹಿಡಿಂಬಾ ವಿವಾಹ’ ಯಕ್ಷಗಾನ ಪ್ರದರ್ಶನ ನೀಡಲಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿ, ಚಂಡೆ ಕೃಷ್ಣಯಾಜಿ, ಮದ್ದಳೆಯಲ್ಲಿ ನರಸಿಂಹ ಹೆಗಡೆ ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ಇನೋವೇಟಿವ್ ಸಂಸ್ಥೆಯ ಜಿ.ಎಸ್.ಭಟ್ಟ, ಕಾರ್ಯದರ್ಶಿ ಹೇರಂಬ ಆರ್.ಭಟ್ಟ, ಡಾ.ಎಸ್.ಎನ್.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.