ತೆರಿಗೆ ಬಾಕಿ: ಪೊಲೀಸ್ ಭವನಕ್ಕೆ ಪಾಲಿಕೆ ಮತ್ತೆ ನೋಟಿಸ್ ಜಾರಿ
ಮೈಸೂರು

ತೆರಿಗೆ ಬಾಕಿ: ಪೊಲೀಸ್ ಭವನಕ್ಕೆ ಪಾಲಿಕೆ ಮತ್ತೆ ನೋಟಿಸ್ ಜಾರಿ

June 14, 2019

ಮೈಸೂರು: ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮೈಸೂರಿನ ಸುಂದರ ಕಲ್ಯಾಣ ಮಂಟಪಗಳಲ್ಲಿ ಒಂದಾಗಿರುವ ಪೊಲೀಸ್ ಭವನವನ್ನು ಜಪ್ತಿ ಮಾಡುವುದಾಗಿ ನಗರ ಪಾಲಿಕೆಯು ಪೊಲೀಸ್ ಕಮಾಂಡೆಂಟ್‍ಗೆ ನೊಟಿಸ್ ಜಾರಿ ಮಾಡಿದೆ. ಮೈಸೂರಿನ ಜಾಕಿ ಕ್ವಾರ್ಟಸ್ ನಲ್ಲಿರುವ ಪೊಲೀಸ್ ಭವನದ ತೆರಿಗೆಯನ್ನು ಪಾವತಿಸದೆ ಇರುವುದರಿಂದ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಿ ರುವ ಪಾಲಿಕೆ 15 ದಿನದಲ್ಲಿ ಬಾಕಿಯಿರುವ 1.65 ಕೋಟಿ ರೂ. ತೆರಿಗೆಯನ್ನು ಪಾವತಿಸದೇ ಇದ್ದರೆ, ಪೊಲೀಸ್ ಭವನ ವನ್ನು ಜಪ್ತಿ ಮಾಡಿ ಹರಾಜು ಪ್ರಕ್ರಿಯೆ ನಡೆಸುವ ಅಧಿ ಕಾರವೂ ಪಾಲಿಕೆಗೆ ಪ್ರಾಪ್ತವಾಗಲಿದೆ. ಇಲ್ಲದಿದ್ದರೆ ಪೊಲೀಸ್ ಇಲಾಖೆ ಸ್ವಲ್ವ ಪ್ರಮಾಣದ ತೆರಿಗೆ

ಪಾವತಿಸಿ, ಉಳಿಕೆ ಮೊತ್ತವನ್ನು ಪಾವತಿ ಸಲು ಕಾಲಾವಕಾಶ ನೀಡುವಂತೆ ಪಾಲಿಕೆ ಆಯುಕ್ತ ರೊಂದಿಗೆ ಪತ್ರ ವ್ಯವಹಾರ ನಡೆಸಬಹುದಾಗಿದೆ. ಬಾಕಿ ಇರುವ ತೆರಿಗೆ ಪಾವತಿಸು ವಂತೆ ನಗರ ಪಾಲಿಕೆ ಏಪ್ರಿಲ್ 2ರಂದು ಪೊಲೀಸ್ ಕಮಾಂಡೆಂಟ್ ಅವರಿಗೆ ನೊಟೀಸ್ ನೀಡಿ 30 ದಿನಗಳೊಳಗೆ ತೆರಿಗೆ ಪಾವತಿಸುವಂತೆ ಸೂಚನೆ ನೀಡಿತ್ತು. ಆದರೂ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಜೂ.11ರಂದು ಮತ್ತೊಂದು ನೊಟೀಸ್ ನೀಡಿ, 15 ದಿನದೊಳಗೆ 1.65 ಕೋಟಿ ರೂ. ತೆರಿಗೆ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆ ಒಡೆತನದಲ್ಲಿ ರುವ ಈ ಕಟ್ಟಡ, ಪೊಲೀಸ್ ಕಮಾಂಡೆಂಟ್ ಸುಪರ್ಧಿಯಲ್ಲಿದೆ.

ನಿಯಮ ಉಲ್ಲಂಘಿಸಿದ್ದೇ ದಂಡದ ಪ್ರಮಾಣ ಹೆಚ್ಚಾಗಲು ಕಾರಣ: ನಗರ ಪಾಲಿಕೆ ಯಿಂದ ಸಿಆರ್ ಪಡೆಯದೇ ಪೊಲೀಸ್ ಭವನ ನಿರ್ಮಿಸಿರುವುದೇ ಇದೀಗ ದಂಡದ ರೂಪ ದುಪ್ಪಟ್ಟು ಹಣ ಪಾವತಿಸ ಬೇಕಾದ ಅನಿವಾರ್ಯತೆ ಎದುರಾಗಿದೆ. ಪೊಲೀಸ್ ಇಲಾಖೆ 2002 ರಿಂದ 42,600 ಚದರ ಅಡಿ ವಿಸ್ತೀರ್ಣ ಆಸ್ತಿಗೆ ಪಾವತಿಸಬೇಕಾದ ಮೊತ್ತವನ್ನು ವಾರ್ಷಿಕ 23 ಸಾವಿರ ರೂ. ಕಂದಾಯ ರೂಪ ದಲ್ಲಿ ಪಾವತಿಸುತ್ತಿತ್ತು. ಆದರೆ ಪಾಲಿಕೆ ಸಿಬ್ಬಂದಿ ಅಳತೆ ಮಾಡಿದಾಗ ಪೊಲೀಸ್ ಭವನದ ಜಾಗ 64,218 ಚ.ಅಡಿ ವಿಸ್ತೀರ್ಣವಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ 2003-04ರಿಂದ 2018-19ನೇ ಸಾಲಿನವರೆಗೆ 16 ವರ್ಷಕ್ಕೆ 1,65,80,818 ರೂ. ಪಾವತಿಸುವಂತೆ ನೊಟೀಸ್ ನೀಡಿತ್ತು. ಸಿಆರ್ ತೆಗೆದುಕೊಳ್ಳದೇ ಇರುವುದರಿಂದ ಪಾವತಿಸಿಬೇಕಾದ ಮೊತ್ತದೊಂದಿಗೆ 2 ಪಟ್ಟು(ಒಟ್ಟು ಮೂರು ಪಟ್ಟು) ತೆರಿಗೆ ಪಾವತಿಸಬೇಕಾದ ನಿಯಮವಿರುವುದರಿಂದ ಪೊಲೀಸ್ ಭವನದ ತೆರಿಗೆ ಒಂದೂವರೆ ಕೋಟಿ ರೂ.ಗಿಂತಲೂ ಹೆಚ್ಚು ಪಾವತಿಸಬೇಕಾಗಿದೆ.