ರೈತರ ಕೃಷಿ ಸಾಲ ಮನ್ನಾಕ್ಕೆ ಅಗತ್ಯವಿರುವ ಹಣ ಕೇವಲ 19ರಿಂದ 21 ಸಾವಿರ ಕೋಟಿ
ಮೈಸೂರು

ರೈತರ ಕೃಷಿ ಸಾಲ ಮನ್ನಾಕ್ಕೆ ಅಗತ್ಯವಿರುವ ಹಣ ಕೇವಲ 19ರಿಂದ 21 ಸಾವಿರ ಕೋಟಿ

June 14, 2019

ಬೆಂಗಳೂರು: ಸಹ ಕಾರಿ ಹಾಗೂ ವಾಣಿಜ್ಯ ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲಮನ್ನಾಕ್ಕೆ 43,000 ಕೋಟಿ ರೂ. ಅಗತ್ಯವಿಲ್ಲ, ಕೇವಲ 19ರಿಂದ 21,000 ಕೋಟಿ ರೂ. ಸಾಕು. ರೈತರ ಎರಡು ಲಕ್ಷ ರೂ. ವರೆಗಿನ ಕೃಷಿ ಸಾಲ ಮನ್ನಾ ಮಾಡುವುದಾಗಿ ವಾಗ್ದಾನ ಮಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಇದಕ್ಕಾಗಿ 43,000 ಕೋಟಿ ರೂ. ಅಗತ್ಯವಿದೆ ಎಂದಿದ್ದರು.

ವಾಣಿಜ್ಯ ಬ್ಯಾಂಕ್‍ಗಳು ನೀಡಿದ್ದ ಮಾಹಿತಿ ಆಧರಿಸಿ, ದೊಡ್ಡ ಪ್ರಮಾಣದಲ್ಲಿ ರೈತರ ಸಾಲ ಮನ್ನಾ ಮಾಡುತ್ತಿದ್ದೇವೆ ಎಂದು ಪ್ರಕಟಿಸಿದರು. ನಂತರದ ದಿನ ಗಳಲ್ಲಿ ಸಾಲ ಮನ್ನಾಕ್ಕೆ ಕಟ್ಟುನಿಟ್ಟಿನ ನಿಯಮ ಅಳವಡಿಸಿ, ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ಪ್ರತ್ಯೇಕವಾಗಿ ಐಎಎಸ್ ಅಧಿಕಾರಿಗಳ ತಂಡ ರಚಿಸಿದ್ದರು. ಈ ತಂಡ ಕಳೆದ ತಿಂಗಳಷ್ಟೇ ಸರ್ಕಾರಕ್ಕೆ ವಾಸ್ತವ ವರದಿ ನೀಡಿ, ವಾಣಿಜ್ಯ ಬ್ಯಾಂಕ್‍ಗಳು ರೈತರಿಗೆ ಹೇಗೆ ದೋಖಾ ಮಾಡುತ್ತಿವೆ ಎಂದು ತಿಳಿಸಿದ್ದರು.

ಅಧಿಕಾರಿಗಳ ವರದಿಯಲ್ಲಿನ ಮಾಹಿತಿ ಯಿಂದ ದೊಡ್ಡ ಪ್ರಮಾಣದ ಹೊರೆ ತಪ್ಪಿ ತೆಂದು, ಪ್ರಸ್ತುತ ಅಗತ್ಯವಿರುವ 18,000 ಕೋಟಿ ರೂ.ಗಳನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿ ಆದೇಶ ಹೊರಡಿಸಿದರು.

ಇದು 18,000 ಕೋಟಿ ರೂ.ನಲ್ಲೇ ಕೃಷಿ ಸಾಲದ ಬಡ್ಡಿಯೂ ಸೇರಿದೆ, ಇನ್ನು ಅಳಿ ದುಳಿದ ಸಾಲಕ್ಕೆ 1000ರಿಂದ 2000 ಕೋಟಿ ರೂ. ಬೇಕಾಗಬಹುದು. ಕೃಷಿ ಸಾಲ ಮನ್ನಾ ಪ್ರಕಟಣೆಗೂ ಮುನ್ನ ವಾಣಿಜ್ಯ ಬ್ಯಾಂಕ್ ಗಳು, ರೈತರು ಪಡೆದ ಕೃಷಿ ಸಾಲವನ್ನು ಒಂದೇ ಬಾರಿಗೆ ಪಾವತಿಸಿದರೆ, ಬಡ್ಡಿ ಮತ್ತು ಚಕ್ರಬಡ್ಡಿಯಿಂದ ವಿನಾಯಿತಿ ನೀಡಲಾಗು ವುದು ಎಂದು ಕೃಷಿಕರಿಗೆ ತಿಳಿಸಿದ್ದರು.

ಮಹಾರಾಷ್ಟ್ರದಲ್ಲಿ ಬಡ್ಡಿ ಮನ್ನಾ ಜೊತೆಗೆ ಅಸಲಿನಲ್ಲೂ ಶೇ.25ರಷ್ಟು ವಿನಾಯಿತಿ ನೀಡಿದ್ದರು, ಇದರ ಲಾಭ ನಮಗೂ ದೊರೆಯಬಹುದೆಂದು ಕುಮಾರಸ್ವಾಮಿ ಅವರು ಕೃಷಿ ಸಾಲ ಮನ್ನಾ ಪ್ರಕಟಿಸಿದರು.

ಸರ್ಕಾರದ ಪ್ರಕಟಣೆ ಹೊರ ಬರುತ್ತಿ ದ್ದಂತೆ ವಾಣಿಜ್ಯ ಬ್ಯಾಂಕ್‍ಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿದು, ಸಾಲ ತೀರಿಸುವುದಾದರೆ ಬಡ್ಡಿಯನ್ನೂ ಪಾವತಿ ಸಬೇಕು ಎಂದು ಪಟ್ಟು ಹಿಡಿದವು.

ಸರ್ಕಾರ ಎಷ್ಟೇ ಮನವಿ ಮಾಡಿದರೂ ಈ ಬ್ಯಾಂಕ್‍ಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಒಂದು ಬಾರಿಗೆ ಅನ್ವಯವಾಗುವಂತೆ ತನ್ನ ಪಾಲಿನ ಹಣವನ್ನು ಪಾವತಿಸಿ ರೈತರ ಋಣ ತೀರಿಸಿದೆ. ಸರ್ಕಾರ ರೈತರನ್ನು ಸಾಲ ಬಾಧೆಯಿಂದ ಋಣಮುಕ್ತಗೊಳಿಸಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಬ್ಯಾಂಕ್ ಗಳು ಋಣಮುಕ್ತ ಪತ್ರವನ್ನು ರೈತರ ಮನೆ ಬಾಗಿಲಿಗೆ ತಲುಪಿಸಬೇಕೆಂದು ಸೂಚಿಸಿವೆ.

ಈ ಸಂಬಂಧ ವಾಣಿಜ್ಯ ಬ್ಯಾಂಕ್‍ಗಳ ಆಡಳಿತ ಸಿಬ್ಬಂದಿಗೆ ಸೂಚನೆಗಳನ್ನು ನೀಡುವ ಉದ್ದೇಶದಿಂದ ನಾಳೆ ಮಧ್ಯಾಹ್ನ ಬ್ಯಾಂಕ್ ಅಧಿಕಾರಿಗಳ ಸಭೆ ಕರೆಯ ಲಾಗಿದೆ. ಸಭೆಯಲ್ಲಿ ಋಣಮುಕ್ತ ಪತ್ರ ನೀಡುವ ಕುರಿತು ಸೂಚಿಸುವುದಲ್ಲದೆ, ನೀವು ಹಿಂದೆ ತೆಗೆದುಕೊಂಡ ನಿರ್ಧಾರದಂತೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ, ಅದನ್ನು ಸರ್ಕಾರಕ್ಕೆ ಹಿಂತಿರುಗಿಸಿ, ಮಹಾರಾಷ್ಟ್ರ ಮಾದರಿಯನ್ನು ಕರ್ನಾಟಕಕ್ಕೂ ತನ್ನಿ ಎಂದು ಸಿಎಂ ಮನವಿ ಮಾಡಲಿದ್ದಾರೆ.

Translate »