ತಾಂತ್ರಿಕ ದುರಸ್ತಿ ಹಿನ್ನೆಲೆ ಕೆಲ ರೈಲು ರದ್ದು, ಮಾರ್ಗ ಬದಲಾವಣೆ
ಮೈಸೂರು

ತಾಂತ್ರಿಕ ದುರಸ್ತಿ ಹಿನ್ನೆಲೆ ಕೆಲ ರೈಲು ರದ್ದು, ಮಾರ್ಗ ಬದಲಾವಣೆ

December 11, 2019

ಮೈಸೂರು,ಡಿ.10(ಆರ್‍ಕೆಬಿ)-ನೈರುತ್ಯ ರೈಲ್ವೆ ಮೈಸೂರು ವಿಭಾಗದ ಅರಸೀಕೆರೆ-ತುಮಕೂರು ವಿಭಾಗದಲ್ಲಿ ಜೋಡಿ ಹಳಿ ಹಾಕುವ ಸಲುವಾಗಿ ಬಾಣಸಂದ್ರ ರೈಲ್ವೆ ನಿಲ್ದಾ ಣದ ಅಂಗಳದಲ್ಲಿ 2019ರ ಡಿ.10ರಿಂದ 13ರವರೆಗೆ ತಾಂತ್ರಿಕ ದುರಸ್ತಿ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಓಡಾಡುವ ಮೂರು ರೈಲುಗಳನ್ನು ರದ್ದು/ತಿರುವು/ನಿರ್ಬಂಧಕ್ಕೆ ಒಳಪಡಿಸ ಲಾಗಿದೆ ಎಂದು ಸೀನಿಯರ್ ಡಿವಿಜನಲ್ ಆಪರೇಷನ್ಸ್ ಮ್ಯಾನೇ ಜರ್ ಮತ್ತು ಪಿಆರ್‍ಓ ಸತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈಲು ರದ್ದು: ರೈಲು ಸಂಖ್ಯೆ 56917/56918 ಕೆಎಸ್‍ಆರ್ ಬೆಂಗಳೂರು-ಶಿವಮೊಗ್ಗ ಟೌನ್-ಕೆಎಸ್‍ಆರ್ ಬೆಂಗಳೂರು 11.12.2019 ಮತ್ತು 13.12.2019ರವರೆಗೆ ಪ್ರಯಾಣಿಕರ ಪ್ರಯಾಣವನ್ನು ರದ್ದುಪಡಿಸಲಾಗಿದೆ

ರೈಲಿನ ತಿರುವು: 11.12.2019 ಮತ್ತು 13.12. 2019ರಿಂದ ರೈಲು ಸಂಖ್ಯೆ 17325 ಬೆಳಗಾವಿಯಿಂದ ಅಶೋಕಪುರಂ ವಿಶ್ವಮಾನವ ಎಕ್ಸ್‍ಪ್ರೆಸ್ ಪ್ರಯಾಣವನ್ನು ಅರಸೀಕೆರೆ, ಹಾಸನ ಮತ್ತು ಕೃಷ್ಣರಾಜನಗರ ಸ್ಕಿಪ್ಪಿಂಗ್ ಸ್ಟೇಷನ್‍ಗಳ ಮೂಲಕ ಅರಸೀಕೆರೆ-ಕೆಎಸ್‍ಆರ್ ಬೆಂಗಳೂರು ಮತ್ತು ಕೆಎಸ್‍ಆರ್ ಬೆಂಗಳೂರು-ಮೈಸೂರು ವಿಭಾಗದ ನಡುವೆ ಓಡಿಸಲಾಗುವುದು.

ರೈಲುಗಳ ನಿಯಂತ್ರಣ: ರೈಲು ಸಂಖ್ಯೆ 12725 ಕೆಎಸ್‍ಆರ್ ಬೆಂಗಳೂರಿನಿಂದ ಧಾರವಾಡ ಇಂಟರ್ ಸಿಟಿ ಎಕ್ಸ್‍ಪ್ರೆಸ್ ಪ್ರಯಾಣವನ್ನು 13.12.2019ರಂದು ಮಧ್ಯೆ ಬರುವ ನಿಲ್ದಾಣಗಳಲ್ಲಿ 75 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು ಎಂದು ತಿಳಿಸಿದ್ದಾರೆ.

Translate »