ಮೈಸೂರು ಮೃಗಾಲಯಕ್ಕೆ ಶೀಘ್ರವೇ 5 ಸಿಂಹಗಳ ಆಗಮನ
ಮೈಸೂರು

ಮೈಸೂರು ಮೃಗಾಲಯಕ್ಕೆ ಶೀಘ್ರವೇ 5 ಸಿಂಹಗಳ ಆಗಮನ

June 18, 2019

ಮೈಸೂರು: ವಿಶ್ವದ ಮುಂಚೂಣಿ ಮೃಗಾಲಯಗಳಲ್ಲಿ ಒಂದಾಗಿರುವ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಶೀಘ್ರವೇ ಗುಜರಾತ್‍ನ ಸಕ್ಕರ್ ಬರ್ಗ್ ಮೃಗಾಲಯದಿಂದ ಎರಡು ಸಿಂಹ (ಗಂಡು), ಮೂರು ಸಿಂಹಿಣಿ(ಹೆಣ್ಣು) ಆಗಮಿಸ ಲಿದ್ದು, ಪ್ರವಾಸಿಗರಿಗೆ ಮುದ ನೀಡಲಿವೆ.

ಪ್ರಾಣಿ ವಿನಿಮಯ ಯೋಜನೆಯಡಿ ಸಕ್ಕರ್ ಬರ್ಗ್ ಮೃಗಾಲಯದೊಂದಿಗೆ ಕಳೆದ ಮೂರು ತಿಂಗಳಿಂದ ಮಾತುಕತೆ ನಡೆದಿದ್ದು, ಇದೀಗ ಸಿಂಹ ನೀಡಲು ಗುಜರಾತ್ ಸರ್ಕಾರ ಒಪ್ಪಿಗೆ ಸೂಚಿಸಿದೆ. ಮೈಸೂರು ಮೃಗಾಲಯದಲ್ಲಿ ಪ್ರಸ್ತುತ ನಾಲ್ಕು ಸಿಂಹಗಳಿದ್ದು, ಅವುಗಳಲ್ಲಿ ಒಂದು ಸಿಂಹಿಣಿಯ ಆರೋಗ್ಯದಲ್ಲಿ ಏರುಪೇರಾ ಗಿದೆ. ಏಷ್ಯಾಟಿಕ್ ಸಿಂಹಗಳು ಸೂಕ್ಷ್ಮ ಸ್ವಭಾವದವಾಗಿದ್ದು, ಸಣ್ಣ ಪುಟ್ಟ ವ್ಯತ್ಯಾಸ ಗಳಾದರೂ ಆರೋಗ್ಯ ಸಮಸ್ಯೆಗೆ ತುತ್ತಾಗು ತ್ತವೆ. ಈ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ಮತ್ತಷ್ಟು ಮನರಂಜನೆ ನೀಡುವ ನಿಟ್ಟಿನಲ್ಲಿ ಹೊಸದಾಗಿ ಐದು ಸಿಂಹಗಳನ್ನು ತರಲಾಗು ತ್ತಿದೆ. ಹೊಸದಾಗಿ ತರಲಾಗುತ್ತಿರುವ 5 ಸಿಂಹಗಳಲ್ಲಿ ಮೂರು ಹೆಣ್ಣು(ಸಿಂಹಿಣಿ) ಹಾಗೂ ಎರಡು ಗಂಡು ಸಿಂಹಗಳಾ ಗಿದ್ದು, ಮುಂದಿನ ದಿನಗಳಲ್ಲಿ ಸಂತಾನೋ ತ್ಪತ್ತಿ ಪ್ರಕ್ರಿಯೆ ನಡೆಸಿ, ಸಿಂಹಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಸಿಂಹಗಳ ಬದಲಿಗೆ ಮೈಸೂರು ಮೃಗಾಲಯದಿಂದ ಒಂದು ಗಂಡು ಹಾಗೂ ಎರಡು ಹೆಣ್ಣು ಸೇರಿದಂತೆ 3 ಕಾಡೆಮ್ಮೆ, ಒಂದು ಹೆಣ್ಣು, ಒಂದು ಗಂಡು ನೀರು ಕುದುರೆ ಸಕ್ಕರ್ ಬರ್ಗ್ ಮೃಗಾ ಲಯಕ್ಕೆ ನೀಡಲಾಗುತ್ತಿದೆ. ಮೈಸೂರು ಮೃಗಾ ಲಯದಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಕಾಡೆಮ್ಮೆಗಳಿವೆ. 11 ನೀರು ಕುದುರೆಗಳಿವೆ.

ಎರಡೂ ಮೃಗಾಲಯಗಳ ನಡುವೆ ಪ್ರಾಣಿಗಳ ವಿನಿಮಯ ಮಾಡಿಕೊಳ್ಳಲು ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡು, ಸರ್ಕಾ ರವೂ ಅನುಮತಿ ನೀಡಿದೆ. ಇದರಿಂದ ಎರಡೂ ಮೃಗಾಲಯಗಳ ಹಿರಿಯ ಅಧಿಕಾರಿಗಳು ದಾಖಲೆಗೆ ಸಹಿ ಹಾಕಿದ್ದಾರೆ. ಗುಜರಾತ್ ನಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವ ಹಿನ್ನೆಲೆ ಯಲ್ಲಿ ಪ್ರಾಣಿಗಳನ್ನು ಸಾಗಿಸಲು ಅಡಚಣೆ ಯಾಗಿದೆ. ಬಿಸಿಲಿನ ತಾಪಮಾನ ಕಡಿಮೆ ಯಾದ ನಂತರವಷ್ಟೇ ಸಿಂಹಗಳು ಮೈಸೂರು ಮೃಗಾಲಯ ಪ್ರವೇಶಿಸಲಿವೆ. ಅಲ್ಲದೆ ಅಲ್ಲಿನ ಮೃಗಾಲಯದ ಸಿಬ್ಬಂದಿಗಳು ನೀರು ಕುದುರೆ ಹಾಗೂ ಕಾಡೆಮ್ಮೆ ತೆಗೆದು ಕೊಂಡು ಹೋಗಲು ಬೋನ್‍ನೊಂದಿಗೆ ಆಗಮಿಸಲಿದ್ದಾರೆ. ಕಾಡೆಮ್ಮೆ ಹಾಗೂ ನೀರು ಕುದುರೆಗಳ ಮುಂದೆ ಕೆಲ ದಿನಗಳ ಕಾಲ ಬೋನ್ ಇಟ್ಟು ಪಳಗಿಸಲಾಗುತ್ತದೆ. ಆ ನಂತರವಷ್ಟೇ ಮೈಸೂರಿನಿಂದ ಗುಜ ರಾತ್‍ಗೆ ಕೊಂಡೊಯ್ಯಲಾಗುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ತಿಳಿಸಿದ್ದಾರೆ.

Translate »