ನಕಲಿ ಉತ್ಪನ್ನ, ಕಳ್ಳಸಾಗಣೆ, ಪೈರಸಿ ನಿರ್ಮೂಲನೆ ಕುರಿತು ಪೊಲೀಸ್ ಅಧಿಕಾರಿಗಳಿಗೆ ತರಬೇತಿ
ಮೈಸೂರು

ನಕಲಿ ಉತ್ಪನ್ನ, ಕಳ್ಳಸಾಗಣೆ, ಪೈರಸಿ ನಿರ್ಮೂಲನೆ ಕುರಿತು ಪೊಲೀಸ್ ಅಧಿಕಾರಿಗಳಿಗೆ ತರಬೇತಿ

June 18, 2019

ಮೈಸೂರು: ಎಫ್‍ಐಸಿಸಿಐನ ಕ್ಯಾಸ್ಕೇಡ್ (ಕಮಿಟಿ ಎಗೆನೆಸ್ಟ್ ಸ್ಮಗ್ಲಿಂಗ್ ಅಂಡ್ ಕೌಂಟರ್‍ಫೈಲಿಂಗ್ ಆ್ಯಕ್ಟಿವಿಟೀಸ್ ಡೆಸ್ಟ್ರಾಯಿಂಗ್ ದಿ ಎಕಾನಮಿ-ಆರ್ಥಿಕತೆ ಯನ್ನು ನಾಶ ಮಾಡುವಂತಹ ಕಳ್ಳಸಾಗಣೆ ಮತ್ತು ನಕಲಿ ತಯಾರಿಕೆ ಚಟುವಟಿಕೆಗಳ ನಿಗ್ರಹ ಸಮಿತಿ) ತನ್ನ ಸಾಮಥ್ರ್ಯ ನಿರ್ಮಾಣ ಕಾರ್ಯಕ್ರಮಗಳಡಿ ಜಾರಿ ಅಧಿಕಾರಿಗಳಿಗೆ ಜಾಗೃತಿ ಮೂಡಿಸುವುದು ಮತ್ತು ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ಪೊಲೀಸ್ ಅಕಾಡೆಮಿಯ ನಕಲಿ, ಕಳ್ಳಸಾಗಣೆ ಮತ್ತು ಪೈರಸಿ ತಡೆಗಟ್ಟುವ ಪೊಲೀಸ್ ಅಧಿಕಾರಿ ಗಳಿಗೆ ಹಮ್ಮಿಕೊಳ್ಳಲಾಗಿತ್ತು.

ಮೈಸೂರು ಪೊಲೀಸ್ ಅಕಾಡೆಮಿಯ ನಿರ್ದೇಶಕ ವಿಪುಲ್‍ಕುಮಾರ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೊಲೀಸ್ ಇಲಾಖೆಯು ಕಾನೂನನ್ನು ಜಾರಿಗೊಳಿಸುವ ಪ್ರಾಥಮಿಕ ಸಂಸ್ಥೆಯಾ ಗಿದೆ. ಕಳ್ಳಸಾಗಣೆ ಮತ್ತು ನಕಲಿ ಉತ್ಪನ್ನ ಗಳನ್ನು ತಡೆಗಟ್ಟುವಲ್ಲಿ ಈ ಇಲಾಖೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಇಂತಹ ಅಪರಾಧಗಳನ್ನು ತಡೆಗಟ್ಟಲು ಕರ್ನಾಟಕ ಪೊಲೀಸ್ ಅಕಾಡೆಮಿ ದೀರ್ಘಾ ವಧಿಯವರೆಗೆ ಬದ್ಧತೆ ಹೊಂದಿದೆ ಮತ್ತು ಈ ನಿಟ್ಟಿನಲ್ಲಿ ಅದರ ಅಧಿಕಾರಿಗಳಿಗೆ ತರ ಬೇತಿ ನೀಡುತ್ತಿದೆ. ಕಳ್ಳಸಾಗಣೆ ಮತ್ತು ನಕಲಿ ಉತ್ಪನ್ನಗಳಂತಹ ಅಪರಾಧಗಳ ಪರಿಣಾಮ ಗಳು ಗಂಭೀರ ಸ್ವರೂಪದ್ದಾಗಿವೆ. ಈ ಅಪ ರಾಧಗಳು ಬೆಳೆಯದಂತೆ ಆರಂಭಿಕ ಹಂತ ದಲ್ಲಿಯೇ ನಿರ್ಮೂಲನೆ ಮಾಡಲು ಕಠಿಣ ವಾದ ಕ್ರಮಗಳನ್ನು ಜರುಗಿಸುವ ಅಗತ್ಯ ವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಎಫ್‍ಐಸಿಸಿಐ ಕ್ಯಾಸ್ಕೇಡ್‍ನ ಸಲಹೆಗಾರ ರಾದ ದೀಪ್‍ಚಂದ್ ಮಾತನಾಡಿ, ಭಾರತ ಸರ್ಕಾರ ಕೇವಲ 7 ಉತ್ಪಾದನಾ ವಲಯ ಗಳ ಕಳ್ಳ ಮಾರುಕಟ್ಟೆಯ ಚಟುವಟಿಕೆಗಳಿಂ ದಾಗಿ ವಾರ್ಷಿಕ 39,239 ಕೋಟಿ ರೂ.ಗಳ ನಷ್ಟ ಅನುಭವಿಸುತ್ತಿದೆ ಎಂದು ಎಫ್‍ಐಸಿ ಸಿಐ ಕ್ಯಾಸ್ಕೇಡ್ ಅಂದಾಜು ಮಾಡಿದೆ. ಇದಲ್ಲದೇ, ಉದ್ಯಮಕ್ಕೆ ಇದರಿಂದ 1,05,381 ಕೋಟಿ ರೂಪಾಯಿಗಳ ನಷ್ಟ ವಾಗಿದ್ದು, ಇದರ ಪ್ರಮಾಣ ಎರಡು ವರ್ಷದಲ್ಲಿ ಶೇ.44.4ರಷ್ಟಾಗಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಜೆಎಸ್‍ಎಸ್ ಕಾನೂನು ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಪ್ರೊ.ಜಗದೀಶ್ ಎಟಿ, ವಾಷಿಂಗ್ಟನ್‍ನ ಯುಎಸ್ ಪೇಟೆಂಟ್ಸ್ ಅಂಡ್ ಟ್ರೇಡ್‍ಮಾಕ್ರ್ಸ್ ಆಫೀಸ್‍ನ ಅಟಾರ್ನಿ -ಅಡ್ವೈಸರ್ ಟಿಮೊಥಿ ಕೆ.ಬ್ರೌನಿಂಗ್, ಶಿವ ದಾಸ್ ಅಂಡ್ ಶಿವದಾಸ್ ಲಾ ಛೇಂಬರ್‍ನ ವಕೀಲರಾದ ಪ್ರಶಾಂತ್ ಎಸ್.ಶಿವದಾಸ್ ಮತ್ತಿತರರು ಹಾಜರಿದ್ದರು.

Translate »