ಮೈಸೂರಿನ ಕೋಟ್ಯಾಧಿಪತಿ ವೈದ್ಯನ ಮನೆಯಲ್ಲಿ ಕಳವು
ಮೈಸೂರು

ಮೈಸೂರಿನ ಕೋಟ್ಯಾಧಿಪತಿ ವೈದ್ಯನ ಮನೆಯಲ್ಲಿ ಕಳವು

April 13, 2019

ಮೈಸೂರು: ಮೈಸೂ ರಿನ ವೈದ್ಯರೊಬ್ಬರ ಮನೆಯಲ್ಲಿ ಕೋಟ್ಯಾಂ ತರ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಬೆಲೆಬಾಳುವ ಕೈಗಡಿಯಾರಗಳನ್ನು ಕಳವು ಮಾಡಲಾಗಿದೆ. 5 ಕೆಜಿ ಚಿನ್ನಾಭರಣ, 11 ಲಕ್ಷ ರೂ. ನಗದು ಹಾಗೂ 30 ವಿದೇಶಿ ವಾಚ್ ಗಳು ಸೇರಿ ಒಟ್ಟು ಸುಮಾರು 2 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಖದೀಮರು ಲೂಟಿ ಮಾಡಿದ್ದಾರೆಂಬುದು ಮಹಜರು ಮಾಡಿದಾಗ ಪೊಲೀಸರಿಗೆ ತಿಳಿದು ಬಂದಿದೆ.

ಅಚ್ಚರಿ ಎಂದರೆ ಚಿನ್ನವಿದ್ದ ಸ್ಟ್ರಾಂಗ್ ರೂಂನಲ್ಲೇ 10 ಕೆಜಿಯಷ್ಟು ಬೆಳ್ಳಿ ಆಭರಣ ಗಳಿದ್ದರೂ ಖದೀಮರು ಅವುಗಳನ್ನು ಮುಟ್ಟಿಲ್ಲ ಹಾಗೂ ಮನೆಯಿಂದ ಹೊರಡುವಾಗ ವೈದ್ಯರ ಕುಟುಂಬದವರು ಮನೆಯ ಎಲ್ಲಾ ಸಿಸಿ ಟಿವಿ ಕ್ಯಾಮರಾಗಳನ್ನು ಆಫ್ ಮಾಡಿದ್ದಾರೆ ಎಂದು ಮಹಜರು ನಡೆಸಿದ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಿ.ಜಿ. ಕುಮಾರ್ ತಿಳಿಸಿದ್ದಾರೆ.

ಮೈಸೂರಿನ ವಿಜಯನಗರ 4ನೇ ಹಂತ, 1ನೇ ಘಟ್ಟದಲ್ಲಿರುವ ಕೀಮೋ ಥೆರಪಿಸ್ಟರ್ ಡಾ. ರಾಜೀವ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಅಮೇರಿಕಾದಿಂದ ಬರು ತ್ತಿದ್ದ ತಂದೆ-ತಾಯಿಯನ್ನು ಬರಮಾಡಿ ಕೊಳ್ಳಲೆಂದು ಡಾ. ರಾಜೀವ್ ಅವರು ಏಪ್ರಿಲ್ 9ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿ ಕುಟುಂಬದವರೊಂದಿಗೆ ಬೆಂಗಳೂರಿಗೆ ಹೋಗಿದ್ದರು.

ಏರ್‍ಪೋರ್ಟ್‍ನಲ್ಲಿ ತಂದೆ-ತಾಯಿ ಯನ್ನು ಬರಮಾಡಿಕೊಂಡು ಅಂದು ರಾತ್ರಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ ಡಾ. ರಾಜೀವ್ ಅವರಿಗೆ ನಿನ್ನೆ (ಏ.11) ಬೆಳಿಗ್ಗೆ 10 ಗಂಟೆ ವೇಳೆಗೆ ನೆರೆಮನೆಯವರು ಮೊಬೈಲ್ ಕರೆ ಮಾಡಿ ನಿಮ್ಮ ಮನೆಯ ಹಿಂದಿನ ಬಾಗಿಲು ತೆರೆದಂತೆ ಕಾಣುತ್ತಿದೆ ಎಂದು ತಿಳಿಸಿದರು.

ಗಾಬರಿಗೊಂಡ ಡಾ. ರಾಜೀವ್ ಅವರು ತಕ್ಷಣ ಹೊರಟು ಮಧ್ಯಾಹ್ನ 12.45ಕ್ಕೆ ಮೈಸೂರು ತಲುಪಿದರು. ಅಷ್ಟರಲ್ಲಿ ಮಾಹಿತಿ ತಿಳಿದ ವಿಜಯನಗರ ಠಾಣೆ ಪೊಲೀಸರೂ ಸ್ಥಳಕ್ಕೆ ಧಾವಿಸಿದ್ದರು. ಮುಂದಿನ ಬಾಗಿಲಿನ ಪಕ್ಕದ ಕನ್ಸರ್ವೇ ಷನ್‍ಗೆ ಅಳವಡಿಸಿರುವ ಕಬ್ಬಿಣದ ಬಾಗಿ ಲನ್ನು ಒಡೆದು ಹಿಂಬದಿಯ ಅಡುಗೆ ಮನೆಯ ಬಾಗಿಲು ಮುರಿದು ಖದೀ ಮರು ಮನೆಯೊಳಗೆ ನುಗ್ಗಿದ್ದಾರೆ.

ಮನೆಯೊಳಗಿಂದಲೇ ಮೊದಲ ಮಹಡಿಗೆ ಹೋಗಿ ಮಾಸ್ಟರ್ ಬೆಡ್ ರೂಂನ ಕಬೋರ್ಡ್ ಬೀಗ ಮುರಿದು ಅದರಲ್ಲಿದ್ದ 11 ಲಕ್ಷ ರೂ. ನಗದು ದೋಚಿದ ಬಳಿಕ ಮತ್ತೊಂದು ಮಾಸ್ಟರ್ ಬೆಡ್ ರೂಂನ ಮಂಚದ ಕೆಳಗೆ ನೆಲದಲ್ಲಿ ಅಳವಡಿಸಿದ್ದ ಮರದ ಬಾಕ್ಸ್ ಒಳಗಿದ್ದ ಗಾದ್ರೆಜ್ ಲಾಕರ್ ಒಡೆದು 1.5 ಕೋಟಿ ರೂ. ಮೌಲ್ಯದ 5 ಕೆಜಿ ಚಿನ್ನಾಭರಣ ಹಾಗೂ ಬೆಲೆ ಬಾಳುವ 30 ವಿದೇಶಿ ವಾಚುಗಳನ್ನೂ ಖದೀಮರು ಲೂಟಿ ಮಾಡಿದ್ದಾರೆ. ಆದರೆ ಅದೇ ಲಾಕರ್ ನಲ್ಲಿದ್ದ 10 ಕೆಜಿ ಬೆಳ್ಳಿ ಆಭರಣಗಳನ್ನು ಮಾತ್ರ ಮುಟ್ಟದೆ ಕಳ್ಳರು ಬಿಟ್ಟು ಹೋಗಿ ದ್ದಾರೆ ಎಂಬುದು ಮಹಜರು ನಡೆಸಿದಾಗ ಕಂಡು ಬಂದಿದೆ. ಮೈಸೂರು ನಗರ ಬೆರ ಳಚ್ಚು ಮುದ್ರೆ ಘಟಕ, ಶ್ವಾನದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಮತ್ತೊಂದು ಅಚ್ಚರಿ ಎಂದರೆ ಡಾ. ರಾಜೀವ್ ಮನೆಯವರು ಬೆಂಗಳೂರಿಗೆ ಹೊರಡುವಾಗ ಮನೆಯ ಎಲ್ಲಾ ಸಿಸಿ ಟಿವಿ ಕ್ಯಾಮರಾಗಳನ್ನೂ ಸ್ವಿಚ್ ಆಫ್ ಮಾಡಿದ್ದಾರೆ. ಜೊತೆಗೆ 50×80 ಅಡಿ ನಿವೇಶನದಲ್ಲಿ ನಿರ್ಮಿಸಿರುವ ಇವರ ಮನೆ ಸುತ್ತಮುತ್ತ ಹೊಂದಿಕೊಂಡಂತೆ ಬೇರೆ ಮನೆಗಳೂ ಇಲ್ಲ. ಸಿಸಿ ಕ್ಯಾಮರಾಗಳೂ ಇಲ್ಲದಿರುವುದು ಖದೀಮರ ಪತ್ತೆಗೆ ಪೊಲೀಸರು ಈಗ ಹರಸಾಹಸಪಡುವಂತಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್, ತಂಡಗಳನ್ನು ರಚಿಸಿಕೊಂಡು ಪ್ರಕರಣ ಭೇದಿಸಲು ಶೋಧ ನಡೆಸುತ್ತಿದ್ದಾರೆ. ಡಿಸಿಪಿ ಎಂ.ಮುತ್ತುರಾಜ್, ಎನ್.ಆರ್. ಉಪವಿಭಾಗದ ಎಸಿಪಿ ಧರ ಣೇಶ್, ಸಿಸಿಬಿ ಎಸಿಪಿ ಬಿ.ಆರ್. ನಿಂಗಪ್ಪ, ಸಿ.ಕಿರಣ್‍ಕುಮಾರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

Translate »