ಸಂಸ್ಕಾರಯುತ ಜೀವನ ಶಾಂತಿ, ನೆಮ್ಮದಿಗೆ ನಾಂದಿ
ಮಂಡ್ಯ

ಸಂಸ್ಕಾರಯುತ ಜೀವನ ಶಾಂತಿ, ನೆಮ್ಮದಿಗೆ ನಾಂದಿ

December 17, 2019

ಮಳವಳ್ಳಿ, ಡಿ.16- ಸಂಸ್ಕಾರಯುತ ಜೀವನ ಶಾಂತಿ, ನೆಮ್ಮದಿಗೆ ನಾಂದಿಯಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಿನಯ್ ಕುಮಾರ್ ಸುವರ್ಣ ತಿಳಿಸಿದರು.

ತಾಲೂಕಿನ ಹಿಟ್ಟನಹಳ್ಳಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯ ಸಾನಿಧ್ಯ ವಹಿಸಿದ್ದ ಶ್ರೀರಾಮರೂಢ ಮಠಾಧ್ಯಕ್ಷ ಶ್ರೀಬಸವಾನಂದಸ್ವಾಮಿ ಮಾತನಾಡಿ, ಜನರು ಮೂಡನಂಭಿಕೆ, ಜಾತೀಯತೆ, ಅನಾಚಾರಗಳನ್ನು ಬಿಟ್ಟಾಗ ಮಾತ್ರ ನಿಜವಾದ ದೇವರು ಕಾಣಲು ಸಾಧ್ಯ. ಆದ್ದರಿಂದ ಸಮುದಾಯ ನಿಜವಾದ ದೇವರನ್ನು ಕಾಣುವತ್ತ ಚಿಂತಿಸಬೇಕು. ಕುಟುಂಬದಲ್ಲಿ ಪ್ರೀತಿ, ನಂಬಿಕೆ, ವಿಶ್ವಾಸವಿದ್ದಾಗ ಮಾತ್ರ ಸ್ವಚ್ಛಂದ ದೇವರನ್ನು ಕಾಣಬಹುದು. ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯವಾಗಲಿದೆ. ಈ ದಿಸೆÉಯಲ್ಲಿ ಜನರು ಮುನ್ನಡೆಯಬೇಕು. ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಫÀಲ ಸರ್ವರಿಗೂ ಲಭಿಸಲಿ ಎಂದು ಹಾರೈಸಿದರು.

ಜಿಲ್ಲಾ ಜನಜಾಗೃತಿ ವೇದಿಕೆ ನಿರ್ದೇಶಕ ಹಾಗೂ ವಕೀಲ ಎಂ.ಎಸ್.ಶ್ರೀಕಂಠ ಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೆಚ್.ಎಂ.ಮಂಜೇಗೌಡರು, ವಕೀಲ ಎಂ.ಎಸ್.ಶ್ರೀಕಂಠಸ್ವಾಮಿ, ಗ್ರಾಪಂ ಅಧ್ಯಕ್ಷೆ ಹೆಚ್.ಎಸ್.ರೇಖಾ, ಎಂ.ಶಿವಕುಮಾರ್, ರಮೇಶ್, ಪ್ರಕಾಶ್ ಮತ್ತೀತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಡೆದ ಸಾಮೂಹಿಕ ಶ್ರೀಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ ಗ್ರಾಮದ 40ಕ್ಕೂ ದಂಪತಿ ಭಾಗವಹಿಸಿದ್ದರು.

Translate »