ಬಿಲ್ಡರ್ಸ್ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ
ಮೈಸೂರು

ಬಿಲ್ಡರ್ಸ್ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ

August 24, 2019

ಮೈಸೂರು, ಆ.23(ಆರ್‍ಕೆಬಿ)- ಕಟ್ಟಡ ನಿರ್ಮಾತೃಗಳ ಹಾಗೂ ರಿಯಲ್ ಎಸ್ಟೇಟ್ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಹಣಕಾಸು ಸಚಿವರ ಗಮನ ಸೆಳೆಯ ಲಾಗಿದೆ ಎಂದು ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿ ಯಾದ ರಾಷ್ಟ್ರೀಯ ಉಪಾಧ್ಯಕ್ಷ ಶ್ರೀರಾಂ ತಿಳಿಸಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ಬಿಲ್ಡರ್ಸ್ ಚಾರಿಟೆಬಲ್ ಟ್ರಸ್ಟ್ ನೆರವಿನಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕ, ಕ್ರೆಡೈ ಮೈಸೂರು ಜಂಟಿಯಾಗಿ ಆಯೋಜಿಸಿದ್ದ ಮೂರು ದಿನಗಳ `ಮೈ ರಿಯಾಲ್ಟಿ-2019’ ಮನೆ ಮತ್ತು ನಿವೇಶನಗಳ ಮಾರಾಟ ಮತ್ತು ಪ್ರದರ್ಶನದಲ್ಲಿ ಅವರು ಮಾತನಾಡಿದರು.

ನಮ್ಮ ಸಮಸ್ಯೆಗಳ ಬಗ್ಗೆ ಹಣಕಾಸು ಸಚಿವರಿಂದಲೂ ಉತ್ತಮ ಭರವಸೆ ದೊರೆತಿದೆ. ದೇಶದ ಹಲವೆಡೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕುಸಿತವಿದ್ದರೂ ಮೈಸೂರಿನಲ್ಲಿ ರಿಯಲ್ ಎಸ್ಟೇಲ್ ಉದ್ಯಮದಲ್ಲಿ ಸ್ವಲ್ಪ ಚೇತರಿಕೆ ಇದೆ ಎಂದರು.

ಮೈ ರಿಯಾಲ್ಟಿ ಪ್ರಾಪರ್ಟಿ ಶೋಗೆ ಚಾಲನೆ ನೀಡಿ ಮಾತ ನಾಡಿದ ಎಫ್‍ಕೆಸಿಸಿಐ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಮೈ ರಿಯಾಲ್ಟಿ ಪ್ರಾಪರ್ಟಿ ಶೋ ಮೂಲಕ ಮನೆ ಮತ್ತು ನಿವೇಶನ ಖರೀದಿ ಮಾಡ ಬಯಸುವ ಮೈಸೂರು ಜನರಿಗೆ ಒಂದೇ ಸೂರಿನಡಿ ಎಲ್ಲಾ ಬಿಲ್ಡರ್ಸ್‍ಗಳೊಂದಿಗೆ ಮಾತನಾಡಲು ಅವಕಾಶ ಸಿಕ್ಕಿದಂತಾಗಿದೆ ಎಂದರು.

ರಿಯಲ್ ಎಸ್ಟೇಲ್ ನಿಯಂತ್ರಣ ಪ್ರಾಧಿಕಾರ (ಖಇಖಂ), ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿಯಿಂದ ಹಣ ಚಲಾವಣೆ ಇಳಿದ ನಂತರ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಭಾರೀ ದುಷ್ಪರಿಣಾಮವಾಗಿದೆ. ಒಟ್ಟು ದೇಶೀಯ ಉತ್ಪನ್ನದಲ್ಲಿ (ಉಆP) ರಾಷ್ಟ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಮ್ಮದೇ ಆಗಿದೆ. ಈ ವಿಚಾರಗಳೆಲ್ಲವನ್ನೂ ಸರ್ಕಾ ರದ ಗಮನಕ್ಕೆ ತಂದಿದ್ದೇವೆ. ಉದ್ಯಮವು ಮತ್ತೆ ಬೆಳೆ ಯಲು ಪೂರಕವಾಗುವಂತಹ ನಿಯಮಗಳ ಕಾರ್ಯ ವಿಧಾನವನ್ನು ಸರಳೀಕರಣಗೊಳಿಸಬೇಕು ಎಂದರು.

ಮೈಸೂರಿನ ಬೆಳವಣಿಗೆಯಲ್ಲಿ ಹೆಚ್ಚಿನ ಪಾತ್ರ ವಹಿಸಿ ರುವ ಎಲ್ಲಾ ಬಿಲ್ಡರ್‍ಗಳು ಸಂಘಟಿತರಾಗಿ ಒಂದೇ ವೇದಿಕೆ ಯಲ್ಲಿದ್ದರೆ ಸರ್ಕಾರವೂ ನಮ್ಮ ಮಾತಿಗೆ, ಬೇಡಿಕೆಗಳಿಗೆ ಮನ್ನಣೆ ನೀಡುವಂತಾಗುತ್ತದೆ. ಈ ನಿಟ್ಟಿನಲ್ಲಿ ಎಫ್‍ಕೆಸಿ ಸಿಐ ಸಹ ನಿಮ್ಮೊಂದಿಗಿರುತ್ತದೆ ಎಂದು ಭರವಸೆ ನೀಡಿದರು.

ಮೈ ರಿಯಾಲ್ಟಿ ಅಧ್ಯಕ್ಷ ಎಸ್.ಶಶಿರಾಜ್, ಕಾರ್ಯ ದರ್ಶಿ ಚಂದ್ರಶೇಖÀರ್ ಭಾರದ್ವಾಜ್, ಬಿಎಐ ಮೈಸೂರು ಅಧ್ಯಕ್ಷ ಬಿ.ಎಸ್.ದಿನೇಶ್, ಕಾರ್ಯದರ್ಶಿ ಆರ್.ರಘು ನಾಥ್, ಕ್ರೆಡೈ ಮೈಸೂರು ಅಧ್ಯಕ್ಷ ಹೆಚ್.ಎಸ್.ಸುಬ್ರಹ್ಮಣ್ಯಂ, ಕಾರ್ಯದರ್ಶಿ ಡಿ.ಶ್ರೀಹರಿ, ಸ್ಫೂರ್ತಿ ಮಹಿಳಾ ಸಂಘದ ಅಧ್ಯಕ್ಷೆ ಅನಿತಾ ಶ್ರೀಧರ್, ಕಾರ್ಯದರ್ಶಿ ವಾಣಿ ಸುಬ್ರಹ್ಮಣ್ಯ ಇನ್ನಿತರರು ಉಪಸ್ಥಿತರಿದ್ದರು.

Translate »