ಮೈಸೂರಲ್ಲಿ ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ ಶೇ.25ರವರೆಗೆ ಹೆಚ್ಚಳ
ಮೈಸೂರು

ಮೈಸೂರಲ್ಲಿ ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ ಶೇ.25ರವರೆಗೆ ಹೆಚ್ಚಳ

December 23, 2018

ಮೈಸೂರು: ನಿವೇ ಶನ, ಮನೆ, ಜಮೀನಿನಂತಹ ಸ್ಥಿರಾಸ್ತಿ ಖರೀದಿಸುವವರಿಗೆ ಇದು ಕಹಿ ಸುದ್ದಿ. ಸರ್ಕಾರವು ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಶೇ.5ರಿಂದ 25ರವರೆಗೆ ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ (ಮಾರ್ಗ ಸೂಚಿ ದರ) ಹೆಚ್ಚಿಸಲು ಮುಂದಾಗಿದೆ.ರಾಜ್ಯಾದ್ಯಂತ ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ ಹೆಚ್ಚಿಸಲು ನಿರ್ಧರಿಸಿರುವ ಸರ್ಕಾರ ಈ ಬಗ್ಗೆ 2019ರ ಜನವರಿ ಮಾಹೆಯಲ್ಲಿ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ಮೈಸೂರಿನ ಉಪ ನೋಂದ ಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

ಮೈಸೂರು ಮತ್ತು ಮಂಗಳೂರು ನಗ ರದ ಆಸ್ತಿಗಳ ಮೌಲ್ಯವನ್ನು ಅತೀ ಹೆಚ್ಚು ಅಂದರೆ, ಶೇ.15ರಿಂದ 25ರವರೆಗೆ ಹೆಚ್ಚಿಸ ಲಾಗುತ್ತಿದೆ ಎನ್ನಲಾಗಿದ್ದು, ಅದರಿಂದ ಆಸ್ತಿಗಳ ಮಾರಾಟ ಮಾಡಿದರೆ ಖರೀ ದಿಸುವವರು ಸಬ್‍ರಿಜಿಸ್ಟ್ರಾರ್ ಕಚೇರಿ ಯಲ್ಲಿ ನೋಂದಣಿ ಹಾಗೂ ಮುದ್ರಾಂಕ ಶುಲ್ಕವನ್ನು ಪರಿಷ್ಕøತ ದರದಂತೆಯೇ ಪಾವ ತಿಸಬೇಕಾಗುತ್ತದೆ. ಈವರೆಗೆ ವರ್ಷ ಕ್ಕೊಮ್ಮೆ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಹೆಚ್ಚಿಸುತ್ತಿದ್ದ ಸರ್ಕಾರ ಈಗ 2 ವರ್ಷಗಳ ನಂತರ ಪರಿಷ್ಕರಿಸುತ್ತಿದ್ದು, ಇದರಿಂದ 1000 ಕೋಟಿಗೂ ಹೆಚ್ಚು ಆದಾಯ ಕ್ರೂಢೀಕರಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಪ್ರಾಪರ್ಟಿ ಗೈಡೆನ್ಸ್ ವ್ಯಾಲ್ಯೂ ಹೆಚ್ಚಳವಾದಲ್ಲಿ ನೊಂದಣಿ ಹಾಗೂ ಮುದ್ರಾಂಕ ಶುಲ್ಕವೂ ಸಹಜವಾಗಿ ಏರಿಕೆಯಾಗುವುದರಿಂದ ಖರೀದಿದಾರರಿಗೆ ಹೆಚ್ಚಿನ ಹೊರೆಯಾಗಿ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ರೇರಾ ಜಾರಿಯಲ್ಲಿರುವುದರಿಂದ ಬಿಲ್ಡರ್‍ಗಳು, ಡೆವಲಪರ್ ಗಳು ಹಾಗೂ ರಿಯಲ್ ಎಸ್ಟೇಟ್ ನಡೆಸುವವರು ಕಂಗಾಲಾಗಿರುವಾಗ ರಾಜ್ಯ ಸರ್ಕಾರ ಈಗ ಪ್ರಾಪರ್ಟಿ ಗೈಡೆನ್ಸ್ ವ್ಯಾಲ್ಯೂ ಏರಿಕೆಗೆ ಮುಂದಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗುವುದಲ್ಲದೆ, ಬಡವರು ಹಾಗೂ ಶ್ರೀಸಾಮಾನ್ಯರ ಮೇಲೆ ಅಧಿಕ ಹೊರೆ ಬೀಳಲಿದೆ. ಗೈಡೆನ್ಸ್ ವ್ಯಾಲ್ಯೂ ಪರಿಷ್ಕರಣೆ ಬಗ್ಗೆ ನಮಗೆ ಯಾವುದೇ ಅಧಿಕೃತ ಸುತ್ತೋಲೆ ಬಂದಿಲ್ಲ. ಗೆಜೆಟ್ ನೋಟಿಫಿಕೇಷನ್ ಸಹ ಪ್ರಕಟವಾಗಿಲ್ಲ ಎಂದು ಮೈಸೂರಿನ ಜಿಲ್ಲಾ ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

Translate »