`ಇನ್‍ಸ್ಪೈರ್ ಅವಾರ್ಡ್’ ರಾಜ್ಯ ಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
ಮೈಸೂರು

`ಇನ್‍ಸ್ಪೈರ್ ಅವಾರ್ಡ್’ ರಾಜ್ಯ ಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

December 29, 2018

ಮೈಸೂರು: ವಿದ್ಯಾರ್ಥಿ ಗಳ ಬೌದ್ಧಿಕ ಕಣಜದಲ್ಲಿ ಅಡಗಿರುವ ಅನ್ವೇಷಣಾ ಮನೋಭಾವಕ್ಕೆ ಉತ್ತೇಜನ ನೀಡಿ ದೇಶದ ಜನ ಸಾಮಾನ್ಯರಿಗೆ ಉಪ ಯೋಗವಾಗುವಂತಹ ಸಂಶೋಧನೆ ಗಳನ್ನು ಯಶಸ್ವಿಗೊಳಿಸುವ ಕೇಂದ್ರ ಸರ್ಕಾ ರದ ಮಹತ್ವಾಕಾಂಕ್ಷೆಯ `ಇನ್‍ಸ್ಪೈರ್ ಅವಾರ್ಡ್’ನ ರಾಜ್ಯ ಮಟ್ಟದ ವಸ್ತು ಪ್ರದರ್ಶ ನಕ್ಕೆ ಮೈಸೂರಿನ ಜಾಕಿ ಕ್ವಾರ್ಟಸ್‍ನಲ್ಲಿ ರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಶುಕ್ರವಾರ ಚಾಲನೆ ದೊರೆಯಿತು.

ಕೃಷಿ, ಕೈಗಾರಿಕೆ, ಸಾರಿಗೆ, ಕಸ ನಿರ್ವ ಹಣೆ ಸೇರಿದಂತೆ ನಾನಾ ವಲಯಕ್ಕೆ ಸಂಬಂಧಿಸಿದಂತೆ ಸುಧಾರಣಾ ಕ್ರಮ ಗಳನ್ನು ಅಳವಡಿಸಿರುವಂತಹ ಹಲವು ಮಾದರಿಗಳು ವಿದ್ಯಾರ್ಥಿಗಳ ವೈಜ್ಞಾನಿಕ ಚಿಂತನೆಗಳಿಂದ ವಸ್ತು ಪ್ರದರ್ಶನದಲ್ಲಿ ಮೂಡಿ ಬಂದಿವೆ. ಸೌರಶಕ್ತಿ ಸಮರ್ಪಕ ಬಳಕೆ, ವಿದ್ಯುಚ್ಛಕ್ತಿ ಸದ್ಬಳಕೆ, ತ್ಯಾಜ್ಯ ನೀರಿನ ಮರುಬಳಕೆ, ಸುಧಾರಿತ ಕೃಷಿ ಸಲಕರಣೆ ಗಳು ಸೇರಿದಂತೆ ಬಗೆಬಗೆಯ ಸಂಶೋ ಧನಾ ಮಾದರಿಗಳು ಪ್ರದರ್ಶನಗೊಂಡಿವೆ.

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋ ಧನೆ ಮತ್ತು ತರಬೇತಿ ನಿರ್ದೇಶನಾಲಯ, ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಮೈಸೂರು ಮತ್ತು ಬೆಂಗಳೂರು ವಿಭಾಗಗಳ ಹಿರಿಯ ಪ್ರಾಥ ಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ `ಇನ್‍ಸ್ಪೈರ್ ಅವಾರ್ಡ್’ ರಾಜ್ಯ ಮಟ್ಟದ ವಸ್ತು ಪ್ರದರ್ಶನ ಇದಾಗಿದೆ.

ಪ್ರದರ್ಶನಕ್ಕೆ ಚಾಲನೆ ನೀಡಿದ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮ ದಾಸ್ ಮಾತನಾಡಿ, ಪ್ರಸ್ತುತ ಪೋಷಕರು ತಮ್ಮ ಮಕ್ಕಳು ವೈದ್ಯರು ಹಾಗೂ ಇಂಜಿ ನಿಯರ್‍ಗಳು ಆಗಬೇಕೆಂದು ಆಸೆ ಪಡು ವುದೇ ಹೆಚ್ಚು. ಆದರೆ ವಿಜ್ಞಾನ ಕ್ಷೇತ್ರದಲ್ಲಿ ಮಕ್ಕಳು ಸಾಧನೆ ಮಾಡಲಿ ಎಂಬ ಅಭಿ ಲಾಷೆ ಹೊಂದಿರುವ ಪೋಷಕರು ತೀರಾ ವಿರಳ ಎಂದು ವಿಷಾದಿಸಿದರು.

ಪ್ರಾಚೀನ ಭಾರತದ ವೈಜ್ಞಾನಿಕ ಸಾಧನೆ ಗಳನ್ನು ಅವಲೋಕಿಸಿದರೆ ಮಹತ್ವದ ಅಂಶಗಳು ತೆರೆದುಕೊಳ್ಳಲಿವೆ. ಇಡೀ ಪ್ರಪಂಚದಲ್ಲೇ ಮೊಟ್ಟ ಮೊದಲ ಖಗೋಳ ಶಾಸ್ತ್ರಜ್ಞ ಭಾರತದ ಆರ್ಯಭಟ. ಅದೇ ರೀತಿ ವಿಶ್ವದ ಮೊಟ್ಟ ಮೊದಲ ವೈದ್ಯನಾದ ಸುಶ್ರುತ ಮಹರ್ಷಿ ಭಾರತದವನೇ. ಹೀಗೆ ಸಾಕಷ್ಟು ಕೊಡುಗೆಗಳನ್ನು ಭಾರತ ವಿಶ್ವಕ್ಕೆ ನೀಡಿದೆ. ಬ್ರಿಟಿಷರ ಕಾಲದಲ್ಲಿ ದೇಶದ ಸಂಪತ್ತಿನೊಂದಿಗೆ ಬೌದ್ಧಿಕ ಸಂಪನ್ಮೂಲ ಗಳನ್ನು ಲೂಟಿ ಮಾಡಲಾಯಿತು. ಒಂದು ಕಾಲದಲ್ಲಿ ಭಾರತದ 7 ಲಕ್ಷ ಓಲೆಗರಿ ಗಳನ್ನು ಜರ್ಮನಿಯರು ಕದ್ದೊಯ್ದರು. ಪ್ರಾಚೀನ ಭಾರತ ವೈಜ್ಞಾನಿಕ ಸಾಧನೆಯ ತವರಾಗಿದ್ದು, ವೇದ ವಿಜ್ಞಾನ ತನ್ನ ಕೊಡುಗೆ ಮೂಲಕ ದಾಖಲೆಯನ್ನೇ ನಿರ್ಮಾಣ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ವಿಶ್ವಸಂಸ್ಥೆಯ ಸಮೀಕ್ಷೆ ಪ್ರಕಾರ ಭಾರತದ ಮಕ್ಕಳ ಬುದ್ಧಿಮತ್ತೆಯು ಇನ್ನಿತರೆ ದೇಶ ಗಳ ಮಕ್ಕಳಿಗಿಂತ ಹೆಚ್ಚಿನ ಪ್ರಮಾಣ ದಲ್ಲಿದೆ. ಆದರೆ ಅದನ್ನು ಧನಾತ್ಮಕ ಅಲೋಚನೆಗಳ ಮೂಲಕ ಕೊಂಡೊ ಯ್ಯುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಭಾರತದ ಆಸ್ತಿಯಾಗಿದ್ದು, ಅವರು ಇನ್‍ಸ್ಪೈರ್‍ನಂತಹ ಕಾರ್ಯಕ್ರಮಗಳ ಮೂಲಕ ದೇಶದ ವಿದ್ಯಾರ್ಥಿಗಳು ಹಾಗೂ ಯುವ ಶಕ್ತಿಯನ್ನು ಜಾಗೃತಗೊಳಿಸುತ್ತಿ ದ್ದಾರೆ ಎಂದರು. ಯುವ ಸಮುದಾಯ ವನ್ನು ಅನ್ವೇಷಣೆಗೆ ಸಜ್ಜುಗೊಳಿಸಿ ಅವರ ಪ್ರತಿಭೆ ಅನಾವರಣಗೊಳಿಸುವ ಮೂಲಕ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವ ಉದಾತ್ತ ಚಿಂತನೆ ನರೇಂದ್ರ ಮೋದಿ ಹೊಂದಿದ್ದಾರೆ. 2025ರೊಳಗೆ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಭಾರತ ಗುರುತಿಸಿಕೊಳ್ಳಬೇಕೆಂಬ ಮಹತ್ವದ ಚಿಂತನೆ ಅವರಲ್ಲಿದ್ದು, ಹೀಗಾಗಿ ದೇಶ ವನ್ನು ಮುನ್ನಡೆಸಲು ಪ್ರತಿಯೊಬ್ಬರು ಕೈಜೋಡಿಸಬೇಕಿದೆ ಎಂದು ನುಡಿದರು.

ರಾಮದಾಸ್‍ರಿಂದ ನಗದು ಬಹುಮಾನ: ಉದ್ಘಾಟನಾ ಭಾಷಣ ವೇಳೆ ಶಾಸಕ ಎಸ್.ಎ.ರಾಮದಾಸ್, ಮಕ್ಕಳು ಸಭಾ ಕಾರ್ಯಕ್ರಮದಲ್ಲಿ ಇಲ್ಲದೇ ವಸ್ತು ಪ್ರದರ್ಶನ ಸ್ಥಳದಲ್ಲೇ ಹೆಚ್ಚಾಗಿ ಇರುವುದನ್ನು ಗುರು ತಿಸಿದರಲ್ಲದೆ, ಸ್ಥಳಕ್ಕೆ ಮಕ್ಕಳನ್ನು ಕರೆತರು ವಂತೆ ಸೂಚನೆ ನೀಡಿದರು. ಮಕ್ಕಳು ಆಗ ಮಿಸಿದ ಬಳಿಕ ಭಾಷಣ ಮುಂದುವರೆ ಸಿದ ಅವರು, ಪ್ರಾಚೀನ ಭಾರತದಲ್ಲಿನ ವೈಜ್ಞಾನಿಕ ಸಾಧನೆಗಳ ಕುರಿತಂತೆ ಮಕ್ಕಳನ್ನು ಪ್ರಶ್ನಿಸಿ ಮಕ್ಕಳಲ್ಲಿ ಸ್ಫೂರ್ತಿ ತುಂಬಿದರು. ಪ್ರಶ್ನೆಗಳಿಗೆ ಮುಂಚೂಣಿಯಲ್ಲಿ ಉತ್ತರ ನೀಡಿದ ನಾಲ್ವರು ಮಕ್ಕಳನ್ನು ವೇದಿಕೆಗೆ ಕರೆಸಿಕೊಂಡ ಅವರು, ವೈಯಕ್ತಿಕವಾಗಿ ತಲಾ ಒಂದು ಸಾವಿರ ರೂ. ನಗದು ಬಹುಮಾನ ನೀಡುವ ಮೂಲಕ ಅವರ ಪ್ರತಿಭೆಗೆ ಉತ್ತೇಜನ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಯಟ್ ಪ್ರಾಂಶುಪಾಲ ಹಾಗೂ ಉಪನಿರ್ದೇಶಕ ಕೆ.ಮಹದೇವಪ್ಪ, ಈ ಕಾರ್ಯಕ್ರಮದಡಿ ಪ್ರಸಕ್ತ ಸಾಲಿನಲ್ಲಿ ರಾಜ್ಯದಿಂದ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಇಂದಿನ ರಾಜ್ಯ ಹಂತದ ವಸ್ತು ಪ್ರದರ್ಶನದಲ್ಲಿ ಮೈಸೂರು ಹಾಗೂ ಬೆಂಗಳೂರು ವಿಭಾಗಗಳಿಂದ ಒಟ್ಟು 358 ಮಂದಿ ವಿದ್ಯಾರ್ಥಿಗಳು ತಮ್ಮ ಮಾದರಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಕಳೆದ ವರ್ಷ ರಾಜ್ಯದಿಂದ 24 ಮಂದಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಗೊಂಡಿದ್ದರು ಎಂದು ಹೇಳಿದರು.

ವ್ಯವಸ್ಥಿತ ಆಯೋಜನೆ ಕಾಣಲಿಲ್ಲ: ಉದ್ಘಾಟನಾ ಸಮಾರಂಭದ ವೇಳೆಯಲ್ಲಿ ವಸ್ತು ಪ್ರದರ್ಶನ ಸ್ಥಳದಲ್ಲಿ ವ್ಯವಸ್ಥಿತ ಕಾರ್ಯಕ್ರಮ ಆಯೋಜನೆ ಕಂಡು ಬರಲಿಲ್ಲ. ಸಾಲಿನಲ್ಲಿ ಸಾಗಿ ಮಾದರಿ ಗಳನ್ನು ವೀಕ್ಷಿಸುವಂತಹ ವ್ಯವಸ್ಥಿತ ಕ್ರಮಗಳನ್ನು ಕೈಗೊಂಡಂತೆ ಕಾಣಲಿಲ್ಲ. ಜೊತೆಗೆ ಶಾಲೆಯ ಎದುರು ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಓಡಾಟ ದಿಂದ ಧೂಳು ಏಳುತ್ತಿದ್ದು, ಅದರ ನಡುವೆಯೇ ವಿದ್ಯಾರ್ಥಿಗಳು ಭೋಜನ ಸ್ವೀಕರಿಸುತ್ತಿದ್ದರು. ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮದ್, ಉಪ ಮೇಯರ್ ಷಫೀ ಅಹಮ್ಮದ್, ಪಾಲಿಕೆ ಸದಸ್ಯ ಛಾಯಾದೇವಿ, ನವದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಪ್ರದರ್ಶನದ ವೀಕ್ಷಕರಾಗಿ ಆಗಮಿಸಿರುವ ತುಷಾರ್‍ಘರ್, ರೀವೇಶ್ ತಿವಾರಿ, ಸಂಯುಕ್ತ ಶ್ರೀವತ್ಸ ಮತ್ತಿತರರು ಹಾಜರಿದ್ದರು.

Translate »