ರೈಲ್ವೆ ನಿಲ್ದಾಣದ ಪಾರಂಪರಿಕತೆಗೆ ಧಕ್ಕೆಯಾಗದಂತೆ ಪ್ರಯಾಣಿಕರಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ
ಮೈಸೂರು

ರೈಲ್ವೆ ನಿಲ್ದಾಣದ ಪಾರಂಪರಿಕತೆಗೆ ಧಕ್ಕೆಯಾಗದಂತೆ ಪ್ರಯಾಣಿಕರಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ

May 15, 2019

ಮೈಸೂರು:ರೈಲ್ವೆ ನಿಲ್ದಾಣದ ಪಾರಂಪರಿಕತೆಗೆ ಯಾವುದೇ ರೀತಿಯ ಧಕ್ಕೆಯಾಗದಂತೆ, ಪ್ರಯಾಣಿಕರ ಹಿತದೃಷ್ಟಿಯಿಂದ ಅಭಿವೃದ್ಧಿ ಕಾಮಗಾರಿ ಕೈಗೊಂಡು ಮೂಲಸೌಕರ್ಯ ಒದಗಿಸ ಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಸ್ಪಷ್ಟಪಡಿಸಿದ್ದಾರೆ.

ಮೈಸೂರು ಪಾರಂಪರಿಕ ಪ್ರದೇಶ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿಯು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿ ಕಾಮಗಾರಿ ಹೆಸರಿ ನಲ್ಲಿ ರೈಲು ನಿಲ್ದಾಣದ ಪಾರಂಪಕರಿಕತೆಗೆ ಹಾನಿ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ವಿಭಾ ಗೀಯ ರೈಲ್ವೆ ಪ್ರಬಂಧಕರ ಕಚೇರಿ ಸಭಾಂ ಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಗಾಲ ಆರಂಭವಾಗುವುದರೊಳಗೆ ಅಂದರೆ, ಜೂ.30ರೊಳಗೆ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸ ಲಾಗುವುದು ಎಂದು ಹೇಳಿದರು.

ಮೈಸೂರು ರೈಲ್ವೆ ನಿಲ್ದಾಣವನ್ನು 1940ರಲ್ಲಿ ನಿರ್ಮಿಸಲಾಗಿದ್ದು, ಕಾಲ ಕಾಲಕ್ಕೆ ಅಭಿವೃದ್ಧಿಪಡಿಸಲಾಗುತ್ತಿದೆ. ನಿಲ್ದಾ ಣದ ಪಾರಂಪರಿಕ ಕಟ್ಟಡದ ಮೇಲ್ಚಾವಣಿ ಮಳೆಗೆ ಸೋರುತ್ತಿದ್ದು, ದುರಸ್ತಿಪಡಿಸಿ-ಸಂರಕ್ಷಿಸಬೇಕಿದೆ. ಅಲ್ಲದೆ, ಪಾರ್ಸೆಲ್ ಕಚೇರಿ ಸ್ಥಳಾಂತರ, ಮುಂಗಡ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಹವಾ ನಿಯಂತ್ರಿತ ಲಾಂಜ್ ನಿರ್ಮಾಣ, ಪ್ರಯಾ ಣಿಕರ ನಿರೀP್ಷÀಣಾಲಯ, ಕೊಠಡಿ ಅಭಿವೃದ್ಧಿ, ವಿದ್ಯುತ್ ದೀಪಗಳ ಮೇಲ್ದರ್ಜೆ ಗೇರಿಸುವುದು ಸೇರಿದಂತೆ 15 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದನ್ನು ಹೊರತು ಪಡಿಸಿ ರೈಲ್ವೆ ನಿಲ್ದಾಣದ ಪಾರಂಪರಿಕ ಸೌಂದರ್ಯಕ್ಕೆ ಯಾವುದೇ ರೀತಿಯ ಧಕ್ಕೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

1980ರಂದು ನಿಲ್ದಾಣದಲ್ಲಿ 4 ಪ್ಲಾಟ್ ಫಾರಂಗಳಿದ್ದವು. ಆದರೆ, ಇಂದು 6 ಪ್ಲಾಟ್ ಫಾರಂಗಳಿದೆ. 1980ರಲ್ಲಿ 24 ರೈಲುಗಳು ಮಾತ್ರ ಸಂಚರಿಸುತ್ತಿದ್ದವು. ಇಂದು 96 ರೈಲುಗಳು ಸಂಚಾರ ನಡೆಸುತ್ತಿವೆ. ಪ್ರತಿ ನಿತ್ಯ ಸುಮಾರು 60 ಸಾವಿರ ಪ್ರಯಾ ಣಿಕರು ರೈಲನ್ನು ಆವಲಂಬಿಸಿದ್ದು, 2014 -15ನೇ ಸಾಲಿಗೆ ಹೋಲಿಸಿದರೆ ಶೇ.20 ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಅದಲ್ಲದೇ, ಸುಮಾರು 10 ವರ್ಷದಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ನಿಲುಗಡೆ ಸಂಖ್ಯೆಯೂ ಹೆಚ್ಚಳವಾಗಿದೆ ಎಂದು ಹೇಳಿದರು.

ರೈಲ್ವೆ ಕೇಂದ್ರ ಸರ್ಕಾರದ ಇಲಾಖೆಯಾ ಗಿದ್ದು, ಸ್ಥಳೀಯ ಆಡಳಿತದ ಗಮನಕ್ಕೆ ತರಬೇಕಾದ ಅಗತ್ಯವಿಲ್ಲ. 2018ರ ಆಗಸ್ಟ್ ನಲ್ಲಿ ನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆಯಲಾಗಿತ್ತು. ಜತೆಗೆ ಡಿಸೆಂಬರ್‍ನಲ್ಲಿ ಪಾರಂಪರಿಕ ಸಮಿತಿಯ ಗಮನಕ್ಕೂ ತಂದು ಕಾಮಗಾರಿ ಆರಂಭಿಸಲಾಗಿದೆ. ಆದರೆ, ಇಂದಿನ ಆಕ್ಷೇಪಕ್ಕೆ ಕಾರಣ ತಿಳಿಯುತ್ತಿಲ್ಲ ಎಂದರು.

ರೈಲ್ವೆ ಮಂತ್ರಾಲಯವು ನಿಲ್ದಾಣದ ಅಭಿವೃದ್ಧಿಗೆ ಅನುದಾನ ನೀಡಿರುವುದರಿಂದ ಇಲ್ಲಿನ ಪ್ರಗತಿ ಪರಿಶೀಲಿಸಲಾಗುತ್ತಿದೆ. ರೈಲ್ವೆಗೆ ನಾನು ಉತ್ತರದಾಯಿ ಆಗಿರುವುದ ರಿಂದ ಕಾಮಗಾರಿ ಕೈಗೆತ್ತಿಕೊಂಡು ನಿಗದಿತ ವೇಳೆಗೆ ಪೂರ್ಣಗೊಳಿಸಬೇಕಿದೆ. ಈ ಕುರಿತು ಜಿಲ್ಲಾಧಿಕಾರಿ ಅವರಿಗೂ ವಿವರಿಸಿz್ದÉೀವೆ. ಜತೆಗೆ ಪ್ರವಾಸೋದ್ಯಮ ಸಚಿವರ ಗಮನಕ್ಕೂ ತಂದಿದ್ದೇನೆ. ಮೇ25ರಂದು ಸ್ಥಳ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಹಾಗಾಗಿ ಸಾಧ್ಯವಾದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕಿದೆ ಎಂದು ಹೇಳಿದರು.

ಮೈಸೂರು ವಲಯದ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಡಾ.ಯತೀಶ್ ಸೇರಿದಂತೆ ರೈಲ್ವೆಯ ಹಿರಿಯ ಅಧಿಕಾರಿ ಗಳು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »