ಆಪರೇಷನ್ ಫಾಸ್ಟ್ ಟ್ರ್ಯಾಕ್‍ನಲ್ಲಿ ಮಹಿಳಾ ಪೊಲೀಸರ ನಿಗಾ
ಮೈಸೂರು

ಆಪರೇಷನ್ ಫಾಸ್ಟ್ ಟ್ರ್ಯಾಕ್‍ನಲ್ಲಿ ಮಹಿಳಾ ಪೊಲೀಸರ ನಿಗಾ

May 15, 2019

ಮೈಸೂರು: ಸರಗಳ್ಳರನ್ನು ಪತ್ತೆ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮೈಸೂರು ನಗರದಲ್ಲಿ ಆರಂಭಿಸಿರುವ `ಆಪರೇಷನ್ ಫಾಸ್ಟ್ ಟ್ರ್ಯಾಕ್’ನಲ್ಲಿ ಮಹಿಳಾ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.

ಮಹಿಳೆಯರೊಂದಿಗೆ ಮಾತನಾಡಿ ಅರಿವು ಮೂಡಿಸಲು ಮಹಿಳಾ ಪೊಲೀಸರಿಗೆ ಸುಲಭವಾಗುತ್ತದೆ ಎಂಬ ಕಾರಣಕ್ಕೆ ಅವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ತಿಳಿಸಿದ್ದಾರೆ.

ಠಾಣೆಯ ದಿನ ನಿತ್ಯದ ಕೆಲಸಗಳ ಜೊತೆಗೆ ಬೆಳಿಗ್ಗೆ ಮತ್ತು ಸಂಜೆ ವೇಳೆ ಆಪರೇಷನ್ ಫಾಸ್ಟ್ ಟ್ರ್ಯಾಕ್ ಕಾರ್ಯಾ ಚರಣೆಯಲ್ಲೂ ಪುರುಷ ಸಿಬ್ಬಂದಿ ತೊಡಗಿಸಿಕೊಂಡರೆ ತನಿಖೆ ಹಾಗೂ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಲು ತೊಂದರೆ ಯಾಗುತ್ತದೆ ಎಂಬ ಕಾರಣಕ್ಕೂ ಮಹಿಳಾ ಸಿಬ್ಬಂದಿಗಳನ್ನು ಹೆಚ್ಚಾಗಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಪಾರ್ಕುಗಳು, ರಸ್ತೆಗಳಲ್ಲಿ ವಾಯು ವಿಹಾರ ಮಾಡುವ ಮಹಿಳೆಯರೊಂದಿಗೆ ಮಾತನಾಡಿ, ಚಿನ್ನದ ಸರ ಸಂರಕ್ಷಣೆ ಬಗ್ಗೆ ಅನುಸರಿಸಬೇಕಾದ ಕ್ರಮದ ಬಗ್ಗೆ ಅರಿವು ಮೂಡಿಸಲು ಮಹಿಳಾ ಪೊಲೀಸರು ಸಮರ್ಥರಾಗಿದ್ದು, ಪರಿಣಾಮಕಾರಿ ಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತ `ಮೈಸೂರು ಮಿತ್ರ’ನಿಗೆ ತಿಳಿಸಿದರು.

Leave a Reply

Your email address will not be published. Required fields are marked *