ಸಚಿವರಾದ ಬಳಿಕ ಇದೇ ಮೊದಲ ಬಾರಿ  ಮೈಸೂರಿಗೆ ಆಗಮಿಸಿದ ಎನ್. ಮಹೇಶ್
ಮೈಸೂರು

ಸಚಿವರಾದ ಬಳಿಕ ಇದೇ ಮೊದಲ ಬಾರಿ  ಮೈಸೂರಿಗೆ ಆಗಮಿಸಿದ ಎನ್. ಮಹೇಶ್

June 14, 2018
  •  ಬಿಎಸ್‍ಪಿ ಮುಖಂಡರಿಂದ ಸ್ವಾಗತ
  • ಮಹನೀಯರ ಪ್ರತಿಮೆಗೆ ಮಾಲಾರ್ಪಣೆ

ಮೈಸೂರು:  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್, ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಮೈಸೂರಿಗೆ ಬುಧವಾರ ಭೇಟಿ ನೀಡಿ ಡಾ.ಅಂಬೇಡ್ಕರ್ ಪ್ರತಿಮೆ ಸೇರಿದಂತೆ ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.

ಮೈಸೂರಿನ ಗಾಂಧಿನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಬಿಎಸ್‍ಪಿ ವತಿಯಿಂದ ಸಚಿವ ಎನ್.ಮಹೇಶ್ ಅವರನ್ನು ಬರಮಾಡಿಕೊಳ್ಳಲಾಯಿತು. ಇದೇ ವೇಳೆ ವೃತ್ತದಲ್ಲಿನ ಡಾ.ಅಂಬೇಡ್ಕರ್ ಪ್ರತಿಮೆಗೆ ಸಚಿವರು ಮಾಲಾರ್ಪಣೆ ಮಾಡಿದರು.

ಬಳಿಕ ಪುರಭವನದ ಆವರಣದಲ್ಲಿರುವ ಡಾ.ಅಂಬೇಡ್ಕರ್ ನೂತನ ಪ್ರತಿಮೆಗೂ ಪುಷ್ಪ ನಮನ ಸಲ್ಲಿಸಿದರು. ಅದೇ ರೀತಿ ಕೆಆರ್ ವೃತ್ತಕ್ಕೆ ತೆರಳಿ ಆಧುನಿಕ ಮೈಸೂರು ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಗನ್‍ಹೌಸ್ ಎದುರಿನ ಕುವೆಂಪು ಉದ್ಯಾನವನದಲ್ಲಿ ರಾಷ್ಟ್ರಕವಿ ಕುವೆಂಪು ಪತ್ರಿಮೆಗೆ ಹಾರ ಹಾಕಿ ಗೌರವ ಸಲ್ಲಿಸಿದರು. ಅನಂತರ ಬಸವೇಶ್ವರರ ಪ್ರತಿಮೆಗೂ ಮಾಲಾರ್ಪಣೆ ಮಾಡಿದರು.

ಈ ವೇಳೆ ಬಿಎಸ್‍ಪಿ ಜಿಲ್ಲಾಧ್ಯಕ್ಷ ಬೀಮನಹಳ್ಳಿ ಸೋಮೇಶ್, ಪ್ರಧಾನ ಕಾರ್ಯದರ್ಶಿ ಪ್ರಭುಸ್ವಾಮಿ, ನಗರಾಧ್ಯಕ್ಷ ಪ್ರತಾಪ್, ನಗರ ಸಂಚಾಲಕ ದಿನಾಕರ್, ಬಿಎಸ್‍ಪಿ ಯುವ ಘಟಕದ ಜಿಲ್ಲಾಧ್ಯಕ್ಷ ಸೋಸಲೆ ಸಿದ್ದರಾಜು, ಕಾರ್ಯಕರ್ತರಾದ ಶ್ರೀನಿವಾಸ್, ಶಿವಣ್ಣ, ಗಣೇಶ್‍ಮೂರ್ತಿ, ಅನಂತ ಮತ್ತಿತರರು ಹಾಜರಿದ್ದರು.

Translate »