ತನ್ನನ್ನು ತಾನು ಮಾರಿಕೊಂಡವರಿಗೆ ನನ್ನ, ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ
ಮೈಸೂರು

ತನ್ನನ್ನು ತಾನು ಮಾರಿಕೊಂಡವರಿಗೆ ನನ್ನ, ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ

September 16, 2019

ಮೈಸೂರು, ಸೆ.15(ಎಂಟಿವೈ)-ಆಪರೇಷನ್ ಕಮಲಕ್ಕೆ ಒಳಗಾಗಿ ತನ್ನನ್ನು ತಾನು ಮಾರಿ ಕೊಂಡವರಿಗೆ ಜೆಡಿಎಸ್ ಹಾಗೂ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಅನರ್ಹ ಶಾಸಕ ಎ.ಹೆಚ್.ವಿಶ್ವ ನಾಥ್‍ಗೆ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಭಾನುವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಹಾಗೂ ನನ್ನ ಬಗ್ಗೆ ವಿಶ್ವನಾಥ್ ಅವರು ಇನ್ನೂ ಮಾತನಾಡುತ್ತಿದ್ದಾರೆ. ಅವರಿಗೆ ಅತ್ಮಸಾಕ್ಷಿ ಅನ್ನುವುದೇ ಇಲ್ಲ. ಮೊದಲು ಅವರು ಆತ್ಮಾವಲೋಕನ ಮಾಡಿ ಕೊಳ್ಳಲಿ. ಯಾರು ಹೀರೋ, ಯಾರು ಗೋಮುಖ ವ್ಯಾಘ್ರ ಎನ್ನುವುದು ಜನರಿಗೆ ಈಗಾಗಲೇ ಗೊತ್ತಾಗಿದೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಸಮ್ಮಿಶ್ರ ಸರ್ಕಾರವನ್ನು ಯಾರು ಉರುಳಿಸಿದರು ಎನ್ನುವುದು ಜಗಜ್ಜಾಹೀರಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಹಾವು- ಚೇಳುಗಳು ಇವೆ. ಕೆಲವು ಹಾವುಗಳು ಕಡಿದರೆ ಮಾತ್ರ ವಿಷ ದೇಹಕ್ಕೇರುತ್ತದೆ. ಆದರೆ ವಿಶ್ವನಾಥ್ ಅವರಂ ತಹ ಹಾವುಗಳು ಮೂಸಿದರೂ ವಿಷ ದೇಹಕ್ಕೆ ಹೊಕ್ಕುತ್ತದೆ ಎಂದು ಕಿಡಿಕಾರಿದರು. ರಾಜಕಾರ ಣದ ಮೌಲ್ಯ ತಿಳಿದಿಲ್ಲದ ಇಂತಹ ವ್ಯಕ್ತಿ ಮಾತನಾಡುತ್ತಿರುವುದು ಬೇಸರದ ಸಂಗತಿ. 2004 ಮತ್ತು 2008ರಲ್ಲಿ ಮುಖ್ಯಮಂತ್ರಿಯಾಗಬೇಕೆಂಬ ಕನಸು ಕಂಡಿದ್ದ ವಿಶ್ವನಾಥ್ ಅವರನ್ನು ನಾನು ಸೋಲಿಸಿದೆ. ಅದಕ್ಕಾಗಿ ಅವರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು. ಜಿಟಿಡಿ ನಮ್ಮ ನಾಯಕರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಇಂದಿಗೂ ನಮ್ಮ ನಾಯಕರೇ. ನಾವು ತಪ್ಪು ಮಾಡಿದಾಗ ಬೈಯ್ಯುವ ಮತ್ತು ತಿದ್ದುವ ಅಧಿಕಾರ ಅವರಿಗಿದೆ. ಆ ಹಿನ್ನೆಲೆಯಲ್ಲೇ ಅವರು ನಮಗೆ ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಅದನ್ನು ನಾನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ ಎಂದರು. ಕೆ.ಆರ್.ಪೇಟೆ ಕ್ಷೇತ್ರದ ಅನರ್ಹ ಶಾಸಕ ನಾರಾಯಣಗೌಡ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಈ ಕುರಿತು ನಾನು ನಾರಾಯಣಗೌಡ ಅವರೊಂದಿಗೆ ಮಾತನಾಡಿದ್ದೇನೆ. ಇನ್ನು ಮುಂದೆ ಇಂತಹ ಹಗುರವಾದ ಹೇಳಿಕೆಗಳನ್ನು ನೀಡುವುದಿಲ್ಲ. ಎಮೋಷನಲ್ ಆಗಿ ಹಾಗೆ ಮಾತನಾಡಿದ್ದೇನೆ ಎಂದು ತಿಳಿಸಿದರು ಎಂದು ಶಾಸಕ ಸಾ.ರಾ.ಮಹೇಶ್ ಸ್ಪಷ್ಟಪಡಿಸಿದರು.

Translate »