ಮೈಸೂರಿನಲ್ಲಿ ಕೆಪಿಎಸ್ಸಿ ಪರೀಕ್ಷೆ ಬರೆದ ಸಾವಿರಾರು ಅಭ್ಯರ್ಥಿಗಳು
ಮೈಸೂರು

ಮೈಸೂರಿನಲ್ಲಿ ಕೆಪಿಎಸ್ಸಿ ಪರೀಕ್ಷೆ ಬರೆದ ಸಾವಿರಾರು ಅಭ್ಯರ್ಥಿಗಳು

June 17, 2019

ಮೈಸೂರು,ಜೂ.16(ಎಂಟಿವೈ)- ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಮೈಸೂರಿನ 52 ಕೇಂದ್ರಗಳಲ್ಲಿ ನಡೆಸಿದ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ 17,294 ಹಾಗೂ ಕಡ್ಡಾಯ ಕನ್ನಡ ಮತ್ತು ಇಂಗ್ಲೀಷ್ ವಿಷಯ ಪರೀಕ್ಷೆಗೆ 17,197 ಅಭ್ಯರ್ಥಿಗಳು ಹಾಜರಾದರು.

ಮೈಸೂರಿನ ಪಡುವಾರಹಳ್ಳಿ ಬಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವ ಹಣಾ ಕಾಲೇಜು, ಮೈಸೂರು ವಿವಿ ಸಂಜೆ ಕಾಲೇಜು, ಮಹಾಜನ ಕಾಲೇಜು ಹಾಗೂ ಶ್ರೀ ಸತ್ಯಸಾಯಿ ಬಾಬಾ ಕಾಲೇಜು, ಮಹಾರಾಣಿ ವಿಜ್ಞಾನ ಕಾಲೇಜು, ಮಹಾ ರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು, ಬೇಡನ್ ಪೊವೆಲ್ ಶಾಲೆ, ಬನುಮಯ್ಯ ಕಾಲೇಜು, ನಟರಾಜ ಕಾಲೇಜು, ಎಂಎಂಕೆ ಮತ್ತು ಎಸ್‍ಡಿಎಂ ಕಾಲೇಜು, ಟೆರಿಷಿ ಯನ್ ಕಾಲೇಜು ಸೇರಿದಂತೆ ಹಲವು ಕಾಲೇಜುಗಳಲ್ಲಿ ದ್ವಿತೀಯ ದರ್ಜೆ ಸಹಾ ಯಕರ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ 26,070 ಅಭ್ಯರ್ಥಿಗಳು ನೋಂದಣಿ ಮಾಡಿ ಕೊಂಡಿದ್ದರು. ಬೆಳಿಗ್ಗೆ 10ರಿಂದ 11.30ರ ವರೆಗೆ ನಡೆದ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ 17,294 ವಿದ್ಯಾರ್ಥಿಗಳು ಹಾಜರಾದರೆ, 8776 ವಿದ್ಯಾರ್ಥಿಗಳು ಗೈರು ಹಾಜರಾದರು.

ಎರಡನೇ ಅವಧಿಯಲ್ಲಿ ಮಧ್ಯಾಹ್ನ 2ರಿಂದ 3.30ರವರೆಗೆ ನಡೆದ ಸಾಮಾನ್ಯ ಕನ್ನಡ/ಇಂಗ್ಲೀಷ್ ಪರೀಕ್ಷೆಯಲ್ಲಿ 26,070 ಅಭ್ಯರ್ಥಿಗಳಲ್ಲಿ 17,197 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೆ, 8873 ಅಭ್ಯರ್ಥಿಗಳು ಗೈರಾದರು. ಎರಡು ಪರೀಕ್ಷೆ ಯಾವುದೇ ಗೊಂದಲವಿಲ್ಲದೆ ಶಾಂತಿ ಯುತವಾಗಿ ನಡೆದವು.

ಪರೀಕ್ಷಾ ಅಕ್ರಮ ನಡೆಯದಂತೆ ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ನೇತೃತ್ವದಲ್ಲಿ ಡಿಡಿಪಿಐ ಪಾಂಡುರಂಗ ಹಾಗೂ ಕೆಪಿಎಸ್ಸಿ ಮೈಸೂರು ವಿಭಾಗದ ಸಹಾಯಕ ಕಾರ್ಯ ದರ್ಶಿ ಎಂ.ಲಕ್ಷ್ಮೀದೇವಿ ನೇತೃತ್ವದಲ್ಲಿ ಪರಿ ಶೀಲನೆ ನಡೆಸಲಾಯಿತು. ಪೊಲೀಸ್ ಇಲಾಖೆ ವತಿಯಿಂದ 52 ಪರೀಕ್ಷಾ ಕೇಂದ್ರದ ಸುತ್ತಲೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Translate »