ನಾಳೆ ರಾಷ್ಟ್ರೀಯ ಡೆಂಗ್ಯೂ ಜಾಗೃತಿ ಜಾಥಾ
ಮೈಸೂರು

ನಾಳೆ ರಾಷ್ಟ್ರೀಯ ಡೆಂಗ್ಯೂ ಜಾಗೃತಿ ಜಾಥಾ

May 15, 2019

ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂ ತ್ರಾಣಾಧಿಕಾರಿ ಕಚೇರಿಯು ಸಾರ್ವಜನಿ ಕರಲ್ಲಿ ಡೆಂಗ್ಯೂ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಮೇ16ರಂದು ಬೆಳಿಗ್ಗೆ 10 ಗಂಟೆಗೆ ಹಳೇ ಅಗ್ರಹಾರದ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ರಾಷ್ಟ್ರೀಯ ಡೆಂಗ್ಯು ದಿನ ಪ್ರಯುಕ್ತ ಜಾಥಾವನ್ನು ಆಯೋಜಿಸಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಜಾಥಾವನ್ನು ಉದ್ಘಾಟಿಸಲಿದ್ದಾರೆ. ಜಾಥಾವು ಹಳೇ ಅಗ್ರಹಾರ ಆಸ್ಪತ್ರೆ ಆವರಣದಿಂದ ಹೊರಟು ಗಾಯತ್ರಿ ಚಿತ್ರಮಂದಿರ 100 ಅಡಿ ರಸ್ತೆ- ದಳವಾಯಿ ಹೈಸ್ಕೂಲ್ ರಸ್ತೆ-ವಾಣಿವಿಲಾಸ ರಸ್ತೆ-ನಾರಾಯಣ ಶಾಸ್ತ್ರಿ ರಸ್ತೆ-ಶಾಂತಲ ಚಿತ್ರಮಂದಿರ ರಸ್ತೆ ಮೂಲಕ 100 ಅಡಿ ರಸ್ತೆ ಮಾರ್ಗವಾಗಿ ಸಂಚರಿಸಿ ಹಳೇ ಅಗ್ರಹಾರ ಆಸ್ಪತ್ರೆಗೆ ವಾಪಸ್ ಆಗಲಿದೆ.

ಡೆಂಗ್ಯೂ ಮತ್ತು ಚಿಕುನ್‍ಗುನ್ಯ ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ತೆಗೆದುಕೊಂಡು ಮುಂಜಾಗೃತಾ ಕ್ರಮಗಳು: ಅಧಿಕಾರಿಗಳ ತಂಡ ಮನೆ-ಮನೆಗೆ ಭೇಟಿ ನೀಡಿ ಈಡಿಸ್ ಲಾರ್ವ ಸಮೀಕ್ಷೆ ಮಾಡ ಲಾಗುತ್ತಿದ್ದು, ಭೇಟಿ ವೇಳೆ ಮನೆಯ ಒಳಗೆ ಹಾಗೂ ಹೊರಗಿನ ನೀರಿನ ತೊಟ್ಟಿಗಳನ್ನು ಪರೀಕ್ಷಿಸಿ ಲಾರ್ವ ಕಂಡು ಬಂದಲ್ಲಿ ಆ ನೀರಿನ ತೊಟ್ಟಿಯನ್ನು ಖಾಲಿ ಮಾಡಿಸಿ, ಸ್ವಚ್ಛ ಗೊಳಿಸಿ, ಒಣಗಿಸಿ ಪುನಃ ಉಪಯೋಗಿ ಸಲು ತಿಳಿಸುವ ಜತೆಗೆ ದಿನಬಿಟ್ಟು ದಿನ ತೊಟ್ಟಿಯನ್ನು ಸ್ವಚ್ಛವಾಗಿರುವಂತೆ ಸೂಚಿಸ ಲಾಗುತ್ತಿದೆ. ಜತೆಗೆ ಮನೆಯ ಹೊರಗಿನ ಗೋಡೆಗೆ ಸ್ಟಿಕ್ಕರ್ ಅಂಟಿಸಿ ಕೈಗೊಂಡ ಕ್ರಮದ ಬಗ್ಗೆ ದಾಖಲಿಸಲಾಗುತ್ತಿದೆ.

ಸಂಶಯಾಸ್ಪದ ಡೆಂಗ್ಯೂ/ಚಿಕುನ್‍ಗುನ್ಯಾ ಜ್ವರ ಪ್ರಕರಣಗಳಿಂದ ರಕ್ತ ಮಾದರಿ ಪರೀಕ್ಷೆ ಯನ್ನು ಸೆಂಟಿನಲ್ ಸರ್ವೆಲೆನ್ಸ್ ಪ್ರಯೋ ಗಾಲಯದಲ್ಲಿ ಉಚಿತವಾಗಿ ಪರೀಕ್ಷಿಸಲಾ ಗುತ್ತಿದೆ. ಸಾರ್ವಜನಿಕರಿಗೆ ಕರಪತ್ರ ವಿತರಣೆ ಪೋಸ್ಟರ್ ಮೂಲಕ, ಗುಂಪು ಸಭೆ, ಸಂವಾದ ಮೂಲಕ ಆರೋಗ್ಯದ ಬಗ್ಗೆ ಅರಿವು, ಸ್ವಯಂ ರಕ್ಷಣಾ ವಿಧಾನ ಇತರೆ ವಿಷಯಗಳ ಬಗ್ಗೆ ತಿಳಿವಳಿಕೆ. ಒಣ ದಿನ ಆಚರಿಸಲು ಪ್ರೋತ್ಸಾಹ. ಇತರೆ ಇಲಾಖೆಯೊಂದಿಗೆ(ಶಿಕ್ಷಣ) ಐಇಸಿ ಕಾರ್ಯಕ್ರಮಗಳು ಆಯೋಜನೆ. ಸರ್ಕಾರಿ ಆಸ್ಪತ್ರೆಗಳ ಕಿಟಕಿಗಳಿಗೆ ಸೊಳ್ಳೆ ಪ್ರವೇಶ ನಿರೋಧಕ ಸ್ಕ್ರೀನ್‍ಗಳ ಅಳವಡಿಕೆ ಹಾಗೂ ರೋಗಿಗಳಿಗೆ ಸೊಳ್ಳೆ ಪರದೆ ವಿತರಣೆ. ಜತೆಗೆ ಪ್ರತಿವರ್ಷ ಜುಲೈಯನ್ನು ಡೆಂಗ್ಯೂ ವಿರೋಧಿ ಮಾಸವಾಗಿ ಆಚರಿಸಿ ಸಾರ್ವ ಜನಿಕರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಮಲೇರಿಯಾ ನಿಯಂತ್ರಣ ಕ್ರಮಗಳು: ಸಮಗ್ರ ರೋಗವಾಹಕಗಳ ನಿಯಂತ್ರಣ. ರೋಗದ ಶೀಘ್ರಪತ್ತೆ ಹಾಗೂ ಸಂಪೂರ್ಣ ಚಿಕಿತ್ಸೆ. ಸಕ್ರಿಯ ಜ್ವರ ಸಮೀಕ್ಷೆ. ಮಲೇ ರಿಯಾ ಚಿಕಿತ್ಸಾಲಯ. ಸೂಕ್ಷ್ಮದರ್ಶಕ ವ್ಯವಸ್ಥೆ ಇರುವ ಕಡೆ ರಕ್ತಲೇಪನ ಸಂಗ್ರಹ-ಪರೀಕ್ಷೆ-ರೋಗ ಖಚಿತ-ಆ ದಿನವೇ ತೀವ್ರ ಚಿಕಿತ್ಸೆ ನೀಡಲಾಗುತ್ತಿದೆ. ಸಂಪರ್ಕ ರಕ್ತಲೇಪನ ಸಮೀಕ್ಷೆ. ಆರ್‍ಡಿಟಿ ಕಿಟ್ ಬಳಸಿ/ ರಕ್ತಲೇಪನ ಸಂಗ್ರಹಿಸಿ ರೋಗ ಪತ್ತೆ. ಸೊಳ್ಳೆಗಳ ನಿಯಂತ್ರಣ ಬಗ್ಗೆ ಸಾರ್ವ ಜನಿಕರಿಗೆ ಆರೋಗ್ಯ ಶಿಕ್ಷಣ ಹಾಗೂ ಪ್ರತಿ ವರ್ಷ ಜೂನ್ ತಿಂಗಳನ್ನು ಮಲೇರಿಯಾ ವಿರೋಧಿ ದಿನವನ್ನಾಗಿ ಆಚರಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.

ಹಾಗಾಗಿ 2020ರ ವೇಳೆಗೆ ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು, ಸಮಾಜ ಸೇವಕರು, ನಾಗರಿಕರು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಸಂಘ-ಸಂಸ್ಥೆಗಳು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸ ಬೇಕಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಎಸ್.ಚಿದಂಬರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »