ವೈಕುಂಠ ಏಕಾದಶಿ: ಜಿಲ್ಲೆಯ ವಿವಿಧೆಡೆ ವಿಶೇಷ ಪೂಜೆ
ಮಂಡ್ಯ

ವೈಕುಂಠ ಏಕಾದಶಿ: ಜಿಲ್ಲೆಯ ವಿವಿಧೆಡೆ ವಿಶೇಷ ಪೂಜೆ

January 7, 2020

ಮಂಡ್ಯ, ಜ.6(ನಾಗಯ್ಯ)- ವೈಕುಂಠ ಏಕಾದಶಿ ಪ್ರಯುಕ್ತ ಜಿಲ್ಲಾದ್ಯಂತ ವೆಂಕಟೇಶ್ವರ, ಶ್ರೀನಿವಾಸ ಹಾಗೂ ಆಂಜನೇಯ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನಗಳÀಲ್ಲಿ ಸೋಮ ವಾರ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.

ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗ ಪಟ್ಟಣ, ಪಾಂಡವಪುರ, ನಾಗಮಂಗಲ, ಕೆ.ಆರ್. ಪೇಟೆ ಸೇರಿದಂತೆ ವಿವಿಧೆಡೆ ವೈಕುಂಠ ಏಕಾದಶಿ ಅಂಗವಾಗಿ ದೇವಾಲಯಗಳಲ್ಲಿ ನಿರ್ಮಿಸಲಾಗಿದ್ದ ವಿಶೇಷ ದ್ವಾರದ ಮೂಲಕ ತೆರಳಿ ಸ್ವಾಮಿ ದರ್ಶನ ಪಡೆದ ಬಗ್ಗೆ ವರದಿಯಾಗಿದೆ.

ಮಂಡ್ಯ: ಮಂಡ್ಯದ ಹೊಸಹಳ್ಳಿಯ ಶ್ರೀವೆಂಕಟೇಶ್ವರ ದೇವಾಲಯ, ಗಾಂಧಿನಗರದ ರಾಮಮಂದಿರ, ಭೋವಿ ಕಾಲೋನಿಯ ಶ್ರೀನಿ ವಾಸ ದೇವಾಲಯ, ವೆಂಕಟರಮಣಸ್ವಾಮಿ ದೇವಾ ಲಯಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಎಲ್ಲಾ ದೇವಾಲಯಗಳಲ್ಲೂ ದಿನಪೂರ್ತಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಮುಂಜಾನೆ 3 ಗಂಟೆಯಿಂದಲೇ ದೇವಾಲಯ ಗಳಲ್ಲಿ ಸುಪ್ರಭಾತ ಸೇವೆ, ವಿಷ್ಣು ಸಹಸ್ರನಾಮಾ ರ್ಚನೆ, ಅಭಿಷೇಕ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನೇರವೇರಿದವು. ವೈಂಕುಂಠ ಏಕಾದಶಿ ದಿನ ದಂದು ವಿಷ್ಣುವಿನ ನಾನಾ ರೂಪಗಳ ದೇವಸ್ಥಾನ ದಲ್ಲಿ ದರ್ಶನ ಪಡೆದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಬೆಳಿಗ್ಗೆಯಿಂದಲೇ ಜನರು ದೇವಸ್ಥಾನಗಳಿಗೆ ಆಗಮಿಸಿ ವಿಷ್ಣ್ಣುವಿನ ಕೃಪೆಗೆ ಪಾತ್ರರಾಗುತ್ತಿದ್ದುದು ಕಂಡು ಬಂತು. ವೈಕುಂಠ ಏಕಾದಶಿ ಅಂಗವಾಗಿ ದೇವಾಲಯ ದಲ್ಲಿ ನಿರ್ಮಿಸಲಾಗಿದ್ದ ವಿಶೇಷ ದ್ವಾರದ ಮೂಲಕ ಭಕ್ತರು ಸರದಿ ಸಾಲಿನಲ್ಲಿ ತೆರಳಿ ಸ್ವಾಮಿಯ ದರ್ಶನ ಪಡೆದರು. ಸ್ವಾಮಿಯ ದರ್ಶನದ ಬಳಿಕ ಉತ್ತರ ದ್ವಾರದ ಮೂಲಕ ಹೊರ ಬಂದ ಭಕ್ತರಿಗೆ ಲಡ್ಡು, ಸಿಹಿ, ಪಂಚಾಮೃತ ಪ್ರಸಾದ ವಿತರಿಸುತ್ತಿದ್ದುದು ಕಂಡು ಬಂತು.

ಮದ್ದೂರು: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಸೋಮವಾರ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀಉಗ್ರನರಸಿಂಹಸ್ವಾಮಿ ದೇಗುಲ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಉಗ್ರ ನರಸಿಂಹಸ್ವಾಮಿ ದೇಗುಲದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ಬಾದಾಮಿ ಹಾಲು, ಲಾಡು ಗಳನ್ನು ವಿತರಿಸಲಾಯಿತು.

ಆಬಲವಾಡಿ: ಗ್ರಾಮದ ಇತಿಹಾಸ ಪ್ರಸಿದ್ಧ ಆಬಲವಾಡಿ ತೋಪಿನ ತಿಮ್ಮಪ್ಪನ ದೇಗುಲದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ದೇವರಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಭಕ್ತರಿಗೆ ದೇಗುಲದಲ್ಲಿ ವೈಕುಂಠ ದ್ವಾರ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ತೀರ್ಥ, ಪ್ರಸಾದ ವಿತರಿಸಲಾಯಿತು.

ಕೆ.ಆರ್.ಪೇಟೆ: ವೈಕುಂಠ ಏಕಾದಶಿ ಅಂಗ ವಾಗಿ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.

ಹೇಮಗಿರಿ: ತಾಲೂಕಿನ ಹೇಮಗಿರಿ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ರಂಗನಾಥಸ್ವಾಮಿಗೆ ಆದಿಚುಂಚನಗಿರಿ ಹೇಮಗಿರಿ ಶಾಖಾ ಮಠದ ಡಾ.ಜೆ.ಎನ್.ರಾಮಕೃಷ್ಣೇಗೌಡರ ನೇತೃತ್ವದಲ್ಲಿ ವಿಶೇಷ ಪೂಜೆಗಳು ನಡೆಯಿತು. ಈ ವೇಳೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಜಿಪಂ ಸದಸ್ಯ ರಾಮದಾಸ್ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಅಗ್ರಹಾರಬಾಚಹಳ್ಳಿ: ಗ್ರಾಮದ ಶ್ರೀ ಚನ್ನ ಕೇಶವಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾ ದಶಿ ಅಂಗವಾಗಿ ಮುಂಜಾನೆಯಿಂದಲೇ ವಿಶೇಷ ಪೂಜೆ ನಡೆಯಿತು. ಗ್ರಾಮದ ಮುಖಂಡರು ಹಾಗೂ ಯುವಕರು, ಮಹಿಳೆಯರು ದೇವರ ದರ್ಶನ ಪಡೆದು ಪುನೀತರಾದರು.

ಭೂವರಹನಾಥ ಕ್ಷೇತ್ರ: ತಾಲೂಕಿನ ವರಹ ನಾಥ ಕಲ್ಲಹಳ್ಳಿಯಲ್ಲಿ ಭೂದೇವಿ ಸಮೇತ ನೆಲೆಸಿ ರುವ ಭೂ ವರಹಾನಾಥಸ್ವಾಮಿಗೆ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಪುರಸ್ಕಾರ ನಡೆಯಿತು. ಸಾವಿರಾರು ಭಕ್ತರು ವೈಕುಂಠ ದ್ವಾರದ ಮೂಲಕ ಭೂವರಹಾನಾಥಸ್ವಾಮಿ ದರ್ಶನ ಪಡೆದು ಕೃತಾರ್ಥರಾದರು. ಭಕ್ತಾದಿಗಳಿಗೂ ಉಚಿತ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸರಾಘವನ್ ಪೂಜಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.

ಮಳವಳ್ಳಿ: ವೈಕುಂಠ ಏಕಾದಶಿ ಅಂಗವಾಗಿ ಭಕ್ತರು ತಾಲೂಕಿನ ವಿವಿಧ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದು ಭಕ್ತಿಬಾವ ಮೆರೆದರು.

ಪಟ್ಟಣದ ಶ್ರೀಆಂಜನೇಯಸ್ವಾಮಿ, ಮಾರೇಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ, ಸುಣ್ಣದದೊಡ್ಡಿ ಶ್ರೀಲಕ್ಷ್ಮೀ ನಾರಾಯಣ, ಮುತ್ತತ್ತಿ ಮತ್ತು ಚಿಕ್ಕಮುತ್ತತ್ತಿ ಮುತ್ತುರಾಯಸ್ವಾಮಿ ಸೇರಿದಂತೆ ವಿವಿಧ ದೇವಾಲಯಗಳಿಗೆ ಸಾವಿರಾರು ಭಕ್ತರು ತೆರಳಿ ದೇವರ ದರ್ಶನ ಪಡೆದರು.

ಭಾರತೀನಗರ: ಇಲ್ಲಿನ ಅಣ್ಣೂರು ಗ್ರಾಮದ ತಿಮ್ಮಪ್ಪನ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸ್ವರ್ಗದ ಬಾಗಿಲು (ವೈಕುಂಠ ದ್ವಾರ) ತೆರೆದು ಪೂಜೆ ಮಾಡಲಾಯಿತು.

ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇವಾಲಯ ವನ್ನು ಶುಚಿಗೊಳಿಸಿ ದೇವರನ್ನು ವಿಶೇಷ ಹೂ ಗಳಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸ ಲಾಯಿತು. ಅಲ್ಲದೇ ಬ್ರಾಹ್ಮಿ ಮೂಹೂರ್ತದಲ್ಲಿ ಸ್ವರ್ಗದ ಬಾಗಿಲು (ವೈಕುಂಠ ದ್ವಾರ) ತೆರೆದು ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡ ಲಾಯಿತು. ಬೆಳ್ಳಿ ಕವಚ ಮತ್ತು ಹೂವಿನ ಅಲಂ ಕಾರದೊಂದಿಗೆ ಕಂಗೊಳಿಸುತ್ತಿದ್ದ ತಿಮ್ಮಪ್ಪನನ್ನು ಸುತ್ತಮುತ್ತಲ ಸಾವಿರಾರು ಭಕ್ತರು ಕಣ್ತುಂಬಿಕೊಂ ಡರು. ಭಕ್ತರಿಗೆ ಲಾಡು, ಅವಲಕ್ಕಿ, ಬುಗುರಿಕಾಳು, ರಸಯನ, ಪುಳಿಯೊಗರೆ ಪ್ರಸಾದ ವಿತರಿಸಲಾಯಿತು.

ನಾಗಮಂಗಲ: ಇಲ್ಲಿನ ಪುರಾಣ ಪ್ರಸಿದ್ಧ ಸೌಮ್ಯಕೇಶವಸ್ವಾಮಿ ಹಾಗೂ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಮುಂಜಾನೆಯೇ ದೇವರಿಗೆ ಅಭಿಷೇಕ ಮಾಡಿ ಬಗೆ ಬಗೆಯ ಹೂಗಳಿಂದ ಅಲಂಕಾರ ಮಾಡಲಾ ಗಿತ್ತು. ಬಳಿಕ ವಿಶೇಷ ಪೂಜೆ ಸಲ್ಲಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.

ಕರಿಘಟ್ಟ ಲಕ್ಷ್ಮೀವೆಂಕಟೇಶ್ವರ ಸನ್ನಿಧಿಯಲ್ಲಿ ವೈಕುಂಠ ಏಕಾದಶಿ
ಶ್ರೀರಂಗಪಟ್ಟಣ, ಜ.6(ವಿನಯ್ ಕಾರೇಕುರ)- ತಾಲೂಕಿನ ಕರಿಘಟ್ಟದ ಶ್ರೀಲಕ್ಷ್ಮಿವೆಂಕಟೇಶ್ವರ ದೇವ ಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ವೈಕುಂಠ ದ್ವಾರ ಪ್ರವೇಶಿಸಿ ದೇವರ ಕೃಪೆಗೆ ಪಾತ್ರರಾದರು.

ಮುಂಜಾನೆ 4 ಗಂಟೆಗೆ ಸ್ವಾಮಿಗೆ ಏಕಾಂತ ಸೇವೆ, ಫಲ ಪಂಚಾಮೃತ, ಅಭಿಷೇಕ, ನಿತ್ಯ ಅರ್ಚನೆ ಸೇವೆ, ಸಹಸ್ರನಾಮ, ವಿಶೇಷ ಪೂಜೆ, ಸ್ವಾಮಿಗೆ ನೈವೈದ್ಯ ಸಮರ್ಪಣೆ ಮಾಡಲಾಯಿತು. ಬಳಿಕ ದೇವಾಲಯಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.

ಅರ್ಚಕ ಶ್ರೀನಿವಾಸ್ ಮಾತನಾಡಿ, ವೈಕುಂಠ ಏಕಾದಶಿ ದಿನ ವೈಕುಂಠದ (ಸ್ವರ್ಗದ ಅಥವಾ ವಿಷ್ಣು ಲೋಕದ)ಬಾಗಿಲು ತೆರೆದಿರುತ್ತದೆ. ಈ ದಿನ ವೆಂಕಟೇ ಶ್ವರ, ಶ್ರೀನಿವಾಸ, ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆ ಇದೆ. ಅದರಲ್ಲೂ ಚಿಕ್ಕ ತಿರುಪತಿ ಎಂದೇ ಹೆಸರಾಗಿರುವ ಕರಿಘಟ್ಟದ ಶ್ರೀಲಕ್ಷ್ಮಿವೆಂಕಟೇಶ್ವರ ದೇವಸ್ಥಾನ ದಲ್ಲಿ ವೈಕುಂಠ ಏಕಾದಶಿಯಂದು ಸ್ವಾಮಿ ದರ್ಶನ ಪಡೆದರೆ ಮೋಕ್ಷ ಸಿಗಲಿದೆ ಎಂದರು.

Translate »