ಮೈಸೂರಲ್ಲಿ ಹಲವು ರೈಲು ಸಂಚಾರದಲ್ಲಿ ವ್ಯತ್ಯಯ: ಹೆಚ್ಚುವರಿ ಬಸ್ ವ್ಯವಸ್ಥೆ
ಮೈಸೂರು

ಮೈಸೂರಲ್ಲಿ ಹಲವು ರೈಲು ಸಂಚಾರದಲ್ಲಿ ವ್ಯತ್ಯಯ: ಹೆಚ್ಚುವರಿ ಬಸ್ ವ್ಯವಸ್ಥೆ

June 17, 2019

ಮೈಸೂರು: ನಾನ್ ಇಂಟರ್ ಲಾಕಿಂಗ್ ವ್ಯವಸ್ಥೆಯೂ ಸೇರಿದಂತೆ ವಿವಿಧ ಆಧು ನೀಕರಣ ಕಾಮಗಾರಿ ನಗರದ ಕೇಂದ್ರ ರೈಲ್ವೆ ನಿಲ್ದಾಣ ದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿ ನಿಂದ ಬೆಂಗಳೂರು, ಶಿವಮೊಗ್ಗ, ಹಾಸನ ಹಾಗೂ ಚಾಮರಾಜನಗರಕ್ಕೆ ತೆರಳುತ್ತಿದ್ದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣ ಹಾಗೂ ಹಳಿಗಳಲ್ಲಿ ನಾನ್ ಇಂಟರ್ ಲಾಕಿಂಗ್ ಆಧುನಿಕ ವ್ಯವಸ್ಥೆ ಅಳವಡಿಸುತ್ತಿರುವುದ ರಿಂದ ಇಂದಿನಿಂದ (ಜೂ.16) ಜೂ.23ರವರೆಗೆ ಮೈಸೂರಿ ನಿಂದ ವಿವಿಧೆಡೆಗೆ ಪ್ರಯಾಣಿಸುತ್ತಿದ್ದ 30 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ರೈಲುಗಳನ್ನೇ ಅವಲಂಬಿಸಿದ್ದ ಪ್ರಯಾಣಿಕರು ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ. ಇಂದು ಬೆಳಿಗ್ಗೆ ಯಿಂದಲೇ ನೂರಾರು ಪ್ರಯಾಣಿಕರು ಬಸ್ ನಿಲ್ದಾಣದತ್ತ ಮುಖ ಮಾಡಿದರು. ಇಂದಿನಿಂದ ಜೂ.23ರವರೆಗೆ ಪ್ರತಿದಿನ ಬೆಳಿಗ್ಗೆ 6.10ಕ್ಕೆ, 7.45ಕ್ಕೆ, 8.25 (ಮಾಲ್ಗುಡಿ ಎಕ್ಸ್‍ಪ್ರೆಸ್), 9ಕ್ಕೆ, ಮಧ್ಯಾಹ್ನ 2.30 (ರಾಜ್ಯರಾಣಿ ಎಕ್ಸ್‍ಪ್ರೆಸ್) ಹಾಗೂ 3ಕ್ಕೆ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲುಗಳ ಸಂಚಾರ ಸ್ಥಗಿತಗೊಳಿಸ ಲಾಗಿದೆ. ಮೈಸೂರಿನಿಂದ ಚಾಮರಾಜನಗರಕ್ಕೆ ಪ್ರತಿದಿನ ತೆರಳುತ್ತಿದ್ದ 5 ರೈಲು, ಮೈಸೂರು-ತಾಳಗುಪ್ಪ ಎಕ್ಸ್‍ಪ್ರೆಸ್ (ಮಧ್ಯಾಹ್ನ-2ಕ್ಕೆ), ಹಾಸನ ಮಾರ್ಗವಾಗಿ ಸಂಚರಿಸು ತ್ತಿದ್ದ ಶ್ರವಣಬೆಳಗೊಳ ಎಕ್ಸ್‍ಪ್ರೆಸ್(ಬೆಳಿಗ್ಗೆ 7.45) ಸಂಚಾರ ವನ್ನೂ ರದ್ದುಗೊಳಿಸಲಾಗಿದೆ. ಅಲ್ಲದೇ ಬೆಂಗಳೂರಿನಿಂದ ಮೈಸೂರಿಗೆ ಬರುವ 3 ರೈಲುಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಉಳಿದಂತೆ ಶತಾಬ್ದಿ, ಚಾಮುಂಡಿ, ಟಿಪ್ಪು, ಕಾವೇರಿ ಎಕ್ಸ್‍ಪ್ರೆಸ್ ಸೇರಿದಂತೆ ಕೆಲವು ರೈಲುಗಳ ಸಂಚಾರ ಎಂದಿನಂತೆ ಇರುತ್ತದೆ.

ಬಿಕೋ ಎಂದ ರೈಲು ನಿಲ್ದಾಣ: ಸದಾ ಗಿಜಿಗುಡುತ್ತಿದ್ದ ಮೈಸೂರಿನ ಕೇಂದ್ರ ರೈಲು ನಿಲ್ದಾಣ ಇಂದು ಬಿಕೋ ಎನ್ನುತ್ತಿತ್ತು. ರೈಲು ಸಂಚಾರ ವ್ಯತ್ಯಯ ವಿಚಾರ ತಿಳಿಯದೇ ರೈಲು ನಿಲ್ದಾಣಕ್ಕೆ ಬಂದು ಪ್ರಯಾಣಿಕರು, ಬಳಿಕ ರೈಲು ಸಂಚಾರ ರದ್ದಾಗಿರುವ ಮಾಹಿತಿ ಪಡೆದು ನಿಲ್ದಾಣ ದಿಂದ ವಾಪ ಸ್ಸಾಗುತ್ತಿದ್ದ ದೃಶ್ಯ ಕಂಡು ಬಂದಿತು. ಪ್ರಯಾಣಿಕರ ಗಮನಕ್ಕಾಗಿ ರೈಲ್ವೆ ಇಲಾಖೆ ನಿಲ್ದಾಣದ ಆರೇಳು ಸ್ಥಳಗಳಲ್ಲಿ ರದ್ದು ಗೊಂಡಿರುವ ರೈಲುಗಳ ಮಾಹಿತಿಯನ್ನು ಪ್ರದರ್ಶಿಸಿದೆ.

ಬಡವರಿಗೆ ಹೊರೆಯಾಯ್ತು: ರೈಲುಗಳ ಸಂಚಾರ ರದ್ದಾಗಿದ್ದರಿಂದ ಪ್ರಯಾಣಕ್ಕೆ ಪರ್ಯಾಯವಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದ್ದರಿಂದ ಯಾವುದೇ ಸಮಸ್ಯೆ ಉಂಟಾ ಗಲಿಲ್ಲ. ಆದರೆ ರೈಲಿಗಿಂತ ಬಸ್ ಪ್ರಯಾಣ ದರ ಹೆಚ್ಚಾಗಿದ್ದರಿಂದ ಬಡ ಹಾಗೂ ಮಧÀ್ಯಮ ವರ್ಗದ ಪ್ರಯಾಣಿ ಕರಿಗೆ ಹೊರೆಯಾಗಿ ಪರಿಣಮಿಸಿತು. ಅಲ್ಲದೆ ದವಸ-ಧಾನ್ಯ ಸೇರಿದಂತೆ ಬಹ ಳಷ್ಟು ಲಗೇಜ್ ತೆಗೆದುಕೊಂಡು ಬಂದಿದ್ದ ಪ್ರಯಾಣಿಕರು ಬಸ್‍ನಲ್ಲಿ ತೆರಳಲು ಹಿಂದೇಟು ಹಾಕಿದರು. ಬಸ್‍ನಲ್ಲಿ ಲಗ್ಗೆಜ್‍ಗೂ ಹಣ ಪಾವತಿಸಬೇಕಿರುವುದರಿಂದ ಹೊರೆ ಯಾಗುತ್ತದೆ ಎಂದು ಕೆಲವರು ಖಾಸಗಿ ವಾಹನಗಳ ಮೊರೆ ಹೋದರು.

ಹೆಚ್ಚುವರಿ ಬಸ್: ಮೈಸೂರು-ಬೆಂಗಳೂರು ನಡುವೆ ನಿತ್ಯ 500ಕ್ಕೂ ಹೆಚ್ಚು ಬಸ್ ಸಂಚರಿಸುತ್ತವೆ. ಈಗ ರೈಲು ಸಂಚಾರ ವ್ಯತ್ಯಯ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 45 ಬಸ್ ಸಂಚಾರ ಆರಂಭಿಸಿದೆ. ಇದರೊಂದಿಗೆ ಚಾಮರಾಜ ನಗರ, ಶಿವಮೊಗ್ಗ, ಹಾಸನ, ಅರಸೀಕೆರೆ, ಕೆ.ಆರ್.ನಗರಕ್ಕೂ ಹೆಚ್ಚುವರಿ ಬಸ್ ಸಂಚಾರ ಆರಂಭಿಸಲಾಗಿದೆ. ಬೇಡಿಕೆ ನೋಡಿಕೊಂಡು ಬಸ್ ಸಂಚಾರ ಹೆಚ್ಚಿಸುವುದಕ್ಕೆ ಸಾರಿಗೆ ಸಂಸ್ಥೆ ನಿರ್ಧರಿಸಿದೆ.

ಜೂ.18-19ರಂದು ಟಿಪ್ಪು ಎಕ್ಸ್‍ಪ್ರೆಸ್ ಮಂಡ್ಯದಿಂದ ಪ್ರಯಾಣ: ಪ್ರತಿದಿನ ಬೆಳಿಗ್ಗೆ 11.30ಕ್ಕೆ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಟಿಪ್ಪು ಎಕ್ಸ್‍ಪ್ರೆಸ್ ರೈಲು ಜೂ.18 ಮತ್ತು 19ರಂದು ಮಂಡ್ಯ ನಿಲ್ದಾಣದಿಂದ ಬೆಂಗಳೂರಿಗೆ ತೆರಳಲಿದೆ. ಈ 2 ದಿನ ಮೈಸೂ ರಿನಿಂದ ಮಂಡ್ಯವರೆಗೆ ಟಿಪ್ಪು ಎಕ್ಸ್‍ಪ್ರೆಸ್ ಸಂಚಾರ ರದ್ದುಗೊಳಿಸಲಾಗಿದೆ.

Translate »