ಮೈಸೂರು: ಸುಂದರ ಸಂಜೆಯ ಅಲಂಕೃತ ವೇದಿಕೆಯಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಜನಪ್ರಿಯ ಸುಮಧುರ ಕನ್ನಡ ಚಿತ್ರಗೀತೆಗಳ ಝೇಂಕಾರ ಕಲಾರಸಿಕರ ಮನಗೆದ್ದಿತು.
ಜೆ.ಕೆ.ಮೈದಾನದ ಅಮೃತ ಮಹೋತ್ಸವ ಸಭಾಂಗಣದಲ್ಲಿ ನಿನಾದ್ ಮ್ಯೂಸಿಕಲ್ ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ `ನನ್ನ ಹಾಡು ನನ್ನದು’ ಸುಮಧುರ ಕನ್ನಡ ಚಲನ ಚಿತ್ರಗೀತೆಗಳ ರಸಸಂಜೆ ಕಾರ್ಯಕ್ರಮದಲ್ಲಿ ಗಾಯಕರಾದ ನೀತು ನಿನಾದ್, ಎ.ಎಸ್.ಪ್ರಸನ್ನ ಕುಮಾರ್, ಆರತಿ ಮುದ್ದಯ್ಯ, ಕಾಶೀನಾಥ್, ಶಾರದಾಂಬ, ಡಾ.ರಘುವೀರ್, ಅಪೂರ್ವ, ಡಾ.ಬ್ರಹ್ಮೇಂದ್ರ, ಮಂಜುನಾಥ್, ನಾಗವಲ್ಲಿ, ಡಾ.ಸುಭಾಷ್, ಭುವನೇಶ್ವರಿ, ಮಹೇಶ್ ಕುಮಾರ್, ದಿವ್ಯಾಕೇಶವನ್, ಮಹೇಶ್ ಕುಮಾರ್, ಮನ್ ಮೋಹನ್, ಡಾ.ಆನಂದ್, ಅಶ್ವಿನಿ ರಾವ್, ಆಲ್ಪೋನ್ಸ, ಲೋಕೇಶ, ಅಮೂಲ್ಯ, ಗೋಪಾಲಕೃಷ್ಣ, ನಾಗೇಂದ್ರ ಮತ್ತಿತರರ ಸುಮಧುರ ಕಂಠದಿಂದ ಹೊರಹೊಮ್ಮಿದ ಹಾಡುಗಳು ಸಂಗೀತ ಪ್ರಿಯರು ತಲೆದೂಗು ವಂತೆ ಮಾಡಿದವು.
ಮೊದಲಿಗೆ ವೇದಿಕೆ ಹಂಚಿಕೊಂಡ ಗಾಯಕ ನೀತು ನಿನಾದ್ ಅವರು ದೇವರಸ್ತುತಿಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದರು. ನಂತರ ಗಾಯಕ ಎ.ಎಸ್.ಪ್ರಸನ್ನ ಕುಮಾರ್ ಅವರು ಸುಪ್ರಬಾತ ಚಿತ್ರದ `ನನ್ನ ಹಾಡು ನನ್ನದು. ನನ್ನ ರಾಗ ನನ್ನದು’ ಹಾಡಿ ದರೆ, ಗಾಯಕಿ ಆರತಿ ಮುದ್ದಯ್ಯ ಅವರು `ಹೂವಿಂದ ಹೂವಿಗೆ ಹಾರುವ ದುಂಬಿ’ ಹಾಡನ್ನು ಸುಮಧುರವಾಗಿ ಹಾಡಿ ಎಲ್ಲರನ್ನು ರಂಜಿಸಿದರು.
ಗಾಯಕರಾದ ಕಾಶಿನಾಥ್ ಮತ್ತು ಶಾರದಾಂಬ ಅವರು ಬಂಗಾರದ ಜಿಂಕೆ ಚಿತ್ರದ `ಒಲುಮೆ ಸಿರಿಯಾ ಕಂಡು’, ಹಾಡಿದರೆ, ಗಾಯಕರಾದ ಡಾ.ರಘುವೀರ್ ಮತ್ತು ಅಪೂರ್ವ ಅವರು ಜೀವನಚಕ್ರ ಚಿತ್ರದ `ಆನಂದ ಆನಂದ ಆನಂದವೇ’, ಗಾಯಕ ಡಾ. ಬ್ರಹ್ಮೇಂದ್ರ `ನೂರೊಂದು ನೆನಪು’, ಗಾಯಕ ರಾದ ಮಂಜುನಾಥ್ ಮತ್ತು ನಾಗವಲ್ಲಿ ಅವರು `ತಾರೆಯೂ ಬಾನಿಗೆ’, ಡಾ.ಸುಭಾಷ್ ಮತ್ತು ಶಾರದಾಂಬ ಅವರು `ಸುತ್ತಮುತ್ತ ಯಾರು ಇಲ್ಲ’ ಗೀತೆಯನ್ನು ಸುಮಧುರವಾಗಿ ಹಾಡಿ, ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.
ನಂತರ ಗಾಯಕರಾದ ಕಾಶೀನಾಥ್, ಶಾರದಾಂಬ, ಡಾ.ರಘುವೀರ್, ಅಪೂರ್ವ, ಡಾ.ಬ್ರಹ್ಮೇಂದ್ರ, ಮಂಜುನಾಥ್, ನಾಗವಲ್ಲಿ, ಡಾ.ಸುಭಾಷ್, ಭುವನೇಶ್ವರಿ ಅವರು `ಮುದ್ದಿನ ಹುಡುಗಿ ಚೆನ್ನ’, ನಿಮ್ ಕಡೆ ಸಾಂಬಾರ್ ಅಂದ್ರೆ’, `ಘರನೆ ಘರ ಘರನೆ’, `ನೆನ್ನೆ ನೆನ್ನೆಗೆ, ನಾಳೆ ನಾಳೆಗೆ’, `ಬಣ್ಣಾ ನನ್ನ ಒಲವಿನ ಬಣ್ಣ’, `ಮಲ್ನಾಡ್ ಅಡಿಕೆ ಮೈಸೂರ್ ವಿಳ್ಯೆದೆಲೆ’, ಕನ್ನಡವೇ ನಮ್ಮಮ್ಮ, ಅವಳಿಗೆ ಕೈ ಮುಗಿಯಮ್ಮ’ ಹಾಡಿನ ಮೂಲಕ ಎಲ್ಲರನ್ನು ರಂಜಿಸಿದರು.
ಇದಕ್ಕೂ ಮುನ್ನ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಹೆಚ್.ಎ. ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ಅಂಬರೀಶ್ ಮತ್ತು ವಿಷ್ಣು ವರ್ಧನ್ ಆತ್ಮೀಯ ಸ್ನೇಹಿತರಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಅಷ್ಟೊಂದು ಆತ್ಮೀಯತೆ ಇದ್ದವರು ಬೇರ್ಯಾರು ಇಲ್ಲ. ಸ್ನೇಹಕ್ಕೆ ಯಾವುದೇ ಜಾತಿಯ ಅಡ್ಡಿ ಇಲ್ಲ. ಇವ ರೊಬ್ಬ ಕನ್ನಡ ಚಿತ್ರರಂಗದ ಅದ್ವಿತೀಯ ಕಲಾ ವಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಟರಾದ ಡಾ.ರಾಜ್ ಕುಮಾರ್, ಅಂಬ ರೀಶ್, ವಿಷ್ಣುವರ್ಧನ್ ಅವರು ಜನರ ಮನಸ್ಸಿನಲ್ಲಿ ಅಜರಾಮರವಾಗಿ ಕಂಗೊಳಿಸು ತ್ತಿದ್ದಾರೆ. ಹಾಗಾಗಿ ಅವರು ಯಾವತ್ತೂ ದಿವಂಗತರಾಗಲ್ಲ. ಟಿವಿಯನ್ನು ಆನ್ ಮಾಡಿದರೆ ಅವರು ನಮ್ಮ ಕಣ್ಮುಂದೆಯೇ ಬರುತ್ತಾರೆ. ಆದ್ದರಿಂದ ದಿವಂಗತ ಎಂದು ನಮೂದಿಸಬಾರದು ಎಂದು ಮನವಿ ಮಾಡಿದರು.
ಮೈಸೂರು ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ಪಿ.ವಿ.ಆನಂದರೆಡ್ಡಿ ಮಾತನಾಡಿ, ನಟರಾದ ಡಾ.ರಾಜ್‍ಕುಮಾರ್, ವಿಷ್ಣು ವರ್ಧನ್, ಅಂಬರೀಶ್ ಅವರು ಸಿನಿಮಾಗಳ ಮೂಲಕ ಸಮಾಜಕ್ಕೆ ಹಲವು ಒಳ್ಳೆಯ ಸಂದೇಶಗಳನ್ನು ನೀಡಿದ್ದಾರೆ. ಆವುಗಳನ್ನು ಜನರು ಅಳವಡಿಸಿಕೊಳ್ಳಬೇಕು. ಒಮ್ಮೆ ಕೆಲಸದ ಒತ್ತಡ ಹೆಚ್ಚಾದಾಗ ಮನಸ್ಸಿನ ನೆಮ್ಮದಿಗೆ ನಾನೂ ಹಾಡು ಕೇಳುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಹಿನ್ನೆಲೆಗಾಯಕಿ ಆರತಿಮುದ್ದಯ್ಯ, ಪ್ರಸಾದ್ ಸ್ಕೂಲ್ ಆಫ್ ಡ್ರಮ್ಸ್ ಶಿಕ್ಷಕ ಡಾ.ರಾಘವೇಂದ್ರ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ವೈದ್ಯರಾದ ಬ್ರಹ್ಮೇಂದ್ರ, ಸುಭಾಷ್ ಮತ್ತಿತರರು ಉಪಸ್ಥಿತರಿದ್ದರು.