ಗಿಡ ನೆಡಿ-ತಪ್ಪದೇ ಮತದಾನ ಮಾಡಿ
ಮೈಸೂರು

ಗಿಡ ನೆಡಿ-ತಪ್ಪದೇ ಮತದಾನ ಮಾಡಿ

April 12, 2019

ಮೈಸೂರು: ಮೈಸೂ ರಿನ ವಿಪ್ರ ಸಹಾಯವಾಣಿ ಕಾರ್ಯಕರ್ತರು ಕೃಷ್ಣಮೂರ್ತಿಪುರಂ ಹಾಗೂ ಸುತ್ತಮುತ್ತ ಲಿನ ಬಡಾವಣೆಗಳಲ್ಲಿ `ಗಿಡ ನೆಡಿ-ಮತ ದಾನ ಮಾಡಿ’ ಶೀರ್ಷಿಕೆಯಡಿ ಮನೆ ಮನೆಗೆ ತೆರಳಿ ಗಿಡ ಕೊಟ್ಟು ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದರು.

ಇಂದು ಬೆಳಿಗ್ಗೆ ಕೃಷ್ಣಮೂರ್ತಿಪುರಂ ರಾಮಮಂದಿರದಿಂದ ಜಾಗೃತಿ ಅಭಿಯಾನ ಆರಂಭಿಸಿದ ವಿಪ್ರ ಸಹಾಯವಾಣಿ ಕಾರ್ಯ ಕರ್ತರು ಮನೆ ಹಾಗೂ ಅಂಗಡಿಗಳಿಗೆ ತೆರಳಿ ಅಲ್ಲಿದ್ದವರಿಗೆ ಗಿಡವೊಂದನ್ನು ನೀಡಿ ಏ.18 ರಂದು ನಡೆಯುವ ಮತದಾನ ಪ್ರಕ್ರಿಯೆ ಯಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಅರ್ಹ ಅಭ್ಯರ್ಥಿಗೆ ಮತದಾನ ಮಾಡುವಂತೆ ಮನವರಿಕೆ ಮಾಡಿದರು. ಸಂವಿಧಾನ ದಲ್ಲಿ ನೀಡಲಾಗಿರುವ ಹಕ್ಕನ್ನು ಚಲಾಯಿಸಿ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ರವಿಶಾಸ್ತ್ರಿ ಮಾತನಾಡಿ, ಮನೆ ಯಲ್ಲಿ ಗಿಡಗಳನ್ನು ಪೆÇೀಷಿಸುವಂತೆ ದೇಶದ ರಕ್ಷಣೆಗಾಗಿ ಕಡ್ಡಾಯವಾಗಿ ಮತದಾನ ಮಾಡಬೇಕು. ರಜೆ ಇದೆ ಎಂದು ಪ್ರವಾ ಸಕ್ಕೆ ತೆರಳದೇ ಮತ ಚಲಾಯಿಸಿ ಎಂದು ಮನವಿ ಮಾಡಿದರು.
ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆ ಯಲ್ಲಿ ಮತದಾನ ನಾಗರಿಕರಿಗೆ ದೊರೆತಿ ರುವ ಪ್ರಮುಖ ಹಕ್ಕಾಗಿದೆ. ಸಮಾಜದಲ್ಲಿ ಬದಲಾವಣೆ ತರಲು ದೊಡ್ಡ ಅಸ್ತ್ರವಾಗಿದೆ. ಸಮಾಜಕ್ಕೆ ಒಳಿತು ಮಾಡುವ ಯೋಜನೆ ಗಳನ್ನು ಜಾರಿಗೆ ತರುವ ಜನಪ್ರತಿನಿಧಿ ಯನ್ನು ಚುನಾಯಿಸಿ ಎಂದರು.

ಅಭಿಯಾನದಲ್ಲಿ ಅಡುಗೆ ಕೆಲಸಗಾರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ವಿ. ಶ್ರೀನಿವಾಸರಾವ್, ವಿಪ್ರ ಯುವ ಮುಖಂಡ ರಾದ ವಿಕ್ರಂ ಅಯ್ಯಂಗಾರ್, ವಿಪ್ರ ಸಹಾಯ ವಾಣಿ ಸಂಚಾಲಕ ಜಯಸಿಂಹ ಶ್ರೀಧರ್, ಅಜಯ್ ಶಾಸ್ತ್ರಿ, ಅಪೂರ್ವ ಸುರೇಶ್, ಕಡಕೊಳ ಜಗದೀಶ್, ಶ್ರೀಕಾಂತ್ ಕಶ್ಯಪ್, ಚಕ್ರಪಾಣಿ, ಪ್ರಶಾಂತ್, ಲತಾ ಮೋಹನ್, ಜ್ಯೋತಿ, ಲತಾ ಬಾಲಕೃಷ್ಣ, ನಿಶಾಂತ್, ವೆಂಕಟೇಶ್ ಮೂರ್ತಿ, ಮಾಧುರಾವ್, ಸಿ.ವಿ. ಪಾರ್ಥಸಾರಥಿ ಇನ್ನಿತರರು ಉಪಸ್ಥಿತರಿದ್ದರು.

Translate »