ನಿಮ್ಮ ಮತ ನಿಮ್ಮ ಹಕ್ಕು: ಮೈಸೂರಲ್ಲಿ ವಿಶೇಷ ಜಾಗೃತಿ
ಮೈಸೂರು

ನಿಮ್ಮ ಮತ ನಿಮ್ಮ ಹಕ್ಕು: ಮೈಸೂರಲ್ಲಿ ವಿಶೇಷ ಜಾಗೃತಿ

April 12, 2019

ಮೈಸೂರು: `ನಿಮ್ಮ ಮತ-ನಿಮ್ಮ ಹಕ್ಕು’, ಮತ ಚಲಾಯಿಸುವುದನ್ನು ಮರೆಯದಿರಿ ಎಂದು ಜನರಲ್ಲಿ ಮತ ಜಾಗೃತಿಗಾಗಿ ಸ್ವೀಪ್ ಮೈಸೂರು, ಮಹಾ ನಗರಪಾಲಿಕೆ ವತಿಯಿಂದ ಮೈಸೂರಿನಲ್ಲಿ ಗುರುವಾರ ಆಯೋಜಿಸಿದ್ದ ಸೈಕ್ಲೋಥಾನ್‍ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಅರಮನೆ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಬಳಿ ಖ್ಯಾತ ಕ್ರಿಕೆಟಿಗ ಜಾವ ಗಲ್ ಶ್ರೀನಾಥ್, ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ, ಗಾಯಕ, ಸ್ವೀಪ್ ಸಮಿತಿ ಐಕಾನ್ ಶ್ರೀಹರ್ಷ, ಚಲನಚಿತ್ರ ನಟ ಧನಂಜಯ, ಚುನಾವಣಾ ವೀಕ್ಷಕರಾದ ಸಂದೀಪ್ ಕುಮಾರ್ ಮಿಶ್ರ, ಸೂರಜ್‍ಕುಮಾರ್ ಗುಪ್ತ ಇನ್ನಿತರರು ನಗಾರಿ ಬಾರಿಸುವ ಮೂಲಕ ಸೈಕ್ಲೋಥಾನ್‍ಗೆ ಚಾಲನೆ ನೀಡಿದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಕಡ್ಡಾಯ ಮತದಾನ ಮಾಡುವ ಕುರಿತು ಪ್ರಮಾಣ ವಚನ ಬೋಧಿಸಿದರು. ಬಿಳಿ ಟೀ ಶರ್ಟ್, ಬಿಳಿ ಟೋಪಿ ಧರಿಸಿದ್ದ ಸವಾರರು, ಟ್ರಿಣ್ ಟ್ರಿಣ್ ಸೈಕಲ್‍ನಲ್ಲಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ದಿಂದ ಹೊರಟು ಸಯ್ಯಾಜಿರಾವ್ ರಸ್ತೆ, ಅಯುರ್ವೇದ ವೃತ್ತ, ರೈಲ್ವೆ ನಿಲ್ದಾಣ, ಮೆಟ್ರೊಪೋಲ್ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಮಹಾರಾಜ ಕಾಲೇಜು, ಕೃಷ್ಣರಾಜ ಬುಲೆವಾರ್ಡ್ ರಸ್ತೆ, ಜಿಲ್ಲಾ ಪಂಚಾಯತ್, ಜಿಲ್ಲಾ ನ್ಯಾಯಾಲಯ, ವಾಣಿ ವಿಲಾಸ ರಸ್ತೆ, ಅಗ್ರಹಾರ ವೃತ್ತ, ಎಂ.ಜಿ.ರಸ್ತೆ, ಸಂಸ್ಕøತ ಪಾಠಶಾಲೆ ವೃತ್ತ, ಬಸವೇಶ್ವರ ವೃತ್ತ, ಜಯ ಚಾಮರಾಜ ಒಡೆಯರ್ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ ಮೂಲಕ ಪುರಭವನ ದಲ್ಲಿ ಅಂತ್ಯಗೊಂಡಿತು. ಗೋಪಾಲಗೌಡ ಆಸ್ಪತ್ರೆ ಸಿಬ್ಬಂದಿ, ಪಾಲಿಕೆ ಸಿಬ್ಬಂದಿ, ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. ಮೈಸೂರು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ, ಜಿಪಂ ಸಿಇಓ ಕೆ.ಜ್ಯೋತಿ, ಮೈಸೂರು ಪೊಲೀಸ್ ಅಕಾಡೆಮಿ ಉಪನಿರ್ದೇಶಕಿ ಡಾ.ಧರಣೀದೇವಿ ಮಾಲ ಗತ್ತಿ, ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾ ಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರ್‍ಮಠ, ರೆಡ್ ಎಫ್‍ಎಂನ ಸುನೀಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಇನ್ನಿತರರು ಉಪಸ್ಥಿತರಿದ್ದರು.

Translate »