ಕಾಡುಹಂದಿ ದಾಳಿ ಬಾಲಕಿಗೆ ಗಾಯ
ಕೊಡಗು

ಕಾಡುಹಂದಿ ದಾಳಿ ಬಾಲಕಿಗೆ ಗಾಯ

February 12, 2019

ಗೋಣಿಕೊಪ್ಪಲು: ಬಾಲಕಿ ಮೇಲೆ ಕಾಡು ಹಂದಿ ದಾಳಿ ನಡೆಸಿ ಗಾಯ ಗೊಳಿಸಿರುವ ಘಟನೆ ಸಮೀಪದ ಹೊನ್ನಿ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೂಲಿ ಕಾರ್ಮಿಕ ಸುರೇಶ್ ಎಂಬುವವರ ಪುತ್ರಿ ಲಕ್ಷ್ಮಿ (6) ಗಾಯಗೊಂಡವರು. ಬಾಲಕಿಗೆ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು.

ಸೋಮವಾರ ಮುಂಜಾನೆ ಮಾಯ ಮುಡಿ ಗ್ರಾಮದಲ್ಲಿನ ಬಂಧುಗಳ ಮನೆಯಿಂದ ಮನೆಗೆ ಆಗಮಿಸುವಾಗ ದಾಳಿ ನಡೆದಿದೆ. ಮನೆಯ ಸಮೀಪ ಆಟೋದಿಂದ ಇಳಿದು ತೆರಳುತ್ತಿದ್ದಾಗ ತೋಟದಿಂದ ಬಂದ ಹಂದಿ ಲಕ್ಷ್ಮಿಯ ಮೇಲೆರಗಿದೆ. ಲಕ್ಷ್ಮಿಯ ಎಡಗಾಲಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

Translate »