ಪಾಲಿಬೆಟ್ಟ ಮಸ್ಕಲ್ ಕಾಫಿ ತೋಟದಲ್ಲಿ ಮೂಲ ಸೌಕರ್ಯಕ್ಕಾಗಿ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ
ಕೊಡಗು

ಪಾಲಿಬೆಟ್ಟ ಮಸ್ಕಲ್ ಕಾಫಿ ತೋಟದಲ್ಲಿ ಮೂಲ ಸೌಕರ್ಯಕ್ಕಾಗಿ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ

December 9, 2018

ಸಿದ್ದಾಪುರ: ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇ ರಿಕೆಗಾಗಿ ಒತ್ತಾಯಿಸಿ ತೋಟದಲ್ಲಿ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಪಾಲಿಬೆಟ್ಟದ ಮಸ್ಕಲ್ ಗ್ರೂಪ್ ಸಂಸ್ಥೆಯ ಕಾಫಿ ತೋಟದ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಸಂಸ್ಥೆಯ ತೋಟದ ವ್ಯವಸ್ಥಾಪಕರ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾ ಕಾರರು ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು.

ಕಾರ್ಮಿಕ ಮಹಿಳೆ ಸುನೀತಾ ಮಾತನಾಡಿ ಕಾಫಿ ತೋಟದಲ್ಲಿ ಹಲವು ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದು ಲೈನ್ ಮನೆಗಳಲ್ಲಿ ವಾಸವಾಗಿದ್ದೇವೆ. ತೋಟದಲ್ಲಿ ಕೆಲಸ ಮುಗಿಸಿ ಗ್ರಾಮಕ್ಕೆ ತೆರಳಿ ಅಂಗಡಿಗಳಿಂದ ಸಾಮಗ್ರಿಗಳನ್ನು ಖರೀದಿಸಿ ಮತ್ತೆ ತೋಟಕ್ಕೆ ಬರಲು ಬಿಡುತ್ತಿಲ್ಲ. ಗೇಟ್ ಮುಚ್ಚುತ್ತಾರೆ 6 ಗಂಟೆಯ ನಂತರ ಕಾಡಾನೆ, ಹುಲಿ ಹಾವಳಿಯಿಂದ ಬೇರೆ ಮಾರ್ಗವಾಗಿ ತೋಟದ ಲೈನ್ ಮನೆಗಳಿಗೆ ಹೋಗಲು ಸಾಧ್ಯ ವಾಗುತ್ತಿಲ್ಲ. ತುರ್ತು ಸಂದರ್ಭದಲ್ಲಿ ಮನೆಯಿಂದ ಆಸ್ಪತ್ರೆಗೂ ತೆರಳಲು ತೊಂದರೆಯಾಗುತ್ತಿದೆ. ಕಳೆದ 50 ವರ್ಷಗಳಿಂದಲೂ ಕಾರ್ಮಿಕರು ನಡೆದಾಡುವ ರಸ್ತೆಯ ಗೇಟ್ ಅನ್ನು ತೆರವುಗೊಳಿಸಿ ಮೂಲ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭ ಕಾರ್ಮಿಕ ಮುಖಂಡ ಮಹದೇವ ಮಾತನಾಡಿ, 50 ವರ್ಷಗಳಿಂದಲೂ ತೋಟದ ಕಾರ್ಮಿಕ ಕುಟುಂಬಗಳು ಖಾಯಂ ಆಗಿ ದುಡಿಯುತ್ತಿದ್ದು, ಅವರಿಗೆ ಯಾವುದೇ ರೀತಿಯ ಮೂಲ ಸೌಕರ್ಯವನ್ನು ನೀಡುತ್ತಿಲ್ಲ.

ಹಲವು ವರ್ಷಗಳಿಂದಲೂ ಕಾಫಿ ತೋಟ ಮಾರ್ಗವಾಗಿ ಸಂಚರಿಸುವ ರಸ್ತೆಯನ್ನು ಏಕಾಏಕಿ ಬಂದ್ ಮಾಡಿದ್ದು, ಕಾರ್ಮಿಕರ ಶಾಲೆಗೆ ತೆರಳುವ ಮಕ್ಕಳು ಮತ್ತು ಕಾರ್ಮಿಕರಿಗೆ ಬಹಳ ತೊಂದರೆ ಉಂಟಾಗುತ್ತಿದೆ. 6ಗಂಟೆಯ ನಂತರ ಗೇಟ್ ಬಂದ್ ಮಾಡುವುದರಿಂದ ತುರ್ತು ಸಂದರ್ಭದಲ್ಲೂ ಆಸ್ವತ್ರೆಗೆ ತೆರಳಲು ಸಾದ್ಯವಾಗದ ಸ್ಥಿತಿ ನಿರ್ಮಾ ಣವಾಗಿದೆ. ಮಾಲೀಕರು ಮತ್ತು ವ್ಯವಸ್ಥಾಪಕರು ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಕೂಡಲೇ ಬೇಡಿಕೆಗಳನ್ನು ಈಡೇರಿಸಿದಿದ್ದಲ್ಲಿ ಪ್ರತಿ ದಿನ ಬೆಳಿಗ್ಗೆಯಿಂದ ಸಂಜೆವರೆಗೆ ಪ್ರತಿಭಟನೆ ಮುಂದು ವರೆಸಲಾಗುವುದು ಎಂದರು. ಈ ಸಂದರ್ಭ ಕಾರ್ಮಿಕ ಮುಖಂಡ ರಮೇಶ, ಕಾರ್ಮಿಕ ಸುಬ್ರಮಣಿ, ಸುನಿತ, ಪುಟ್ಟುಸ್ವಾಮಿ, ಶಾಂತು, ಸುಂದರಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »