ಮೈಸೂರು,ಆ.12(ಎಂಟಿವೈ)-ವಿಶ್ವ ಆನೆಗಳ ದಿನದ ಹಿನ್ನೆಲೆಯಲ್ಲಿ ಸೋಮ ವಾರ ಮೈಸೂರಿನ ಮೃಗಾಲಯದಲ್ಲಿ ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳಿಗೆ ಆನೆಗಳ ಜೀವನ ಹಾಗೂ ಸಂರಕ್ಷಣೆಯ ಮಹತ್ವದ ಬಗ್ಗೆ ಮಾಹಿತಿ ನೀಡುವ ಮೂಲಕ ಆನೆಗಳ ಸಂತತಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಮೃಗಾಲಯದಲ್ಲಿ ಆನೆಗಳಿರುವ ಆವರಣದ ಮುಂದೆ ವಿಶ್ವ ಆನೆಗಳ ದಿನಾಚರಣೆಗೆ ಶುಭ ಕೋರುವ ಬ್ಯಾನರ್ ಹಾಕಿ, ಆನೆಗಳ ಜೀವನ ಶೈಲಿ, ಜೀವಿತಾವಧಿ ಸೇರಿದಂತೆ ಇನ್ನಿತರ ಮಾಹಿತಿಯುಳ್ಳ ಬಿತ್ತಿ ಫಲಕಗಳನ್ನು ಪ್ರದರ್ಶಿಸಿ ಮೃಗಾಲಯಕ್ಕೆ ಬಂದ ಪ್ರವಾಸಿಗರ ಗಮನ ಸೆಳೆಯಲಾಯಿತು.
ಆನೆ ದಿನಾಚರಣೆಗೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಇತ್ತೀ ಚಿನ ದಿನಗಳಲ್ಲಿ ವಿವಿಧ ಕಾರಣಗ ಳಿಂದಾಗಿ ಆನೆಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಆಹಾರ ಅರಸಿ ಬರುವ ಆನೆಗಳು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪುತ್ತಿವೆ. ಅಲ್ಲದೆ, ಕೃಷಿ ಭೂಮಿಗೆ ಹಾಕಿರುವ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡುವ ಮೂಲಕವೂ ಆನೆ ಗಳ ಸಾವಿಗೆ ಕಾರಣರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆನೆಗಳ ಸಂತಿತಿ ಸಂರಕ್ಷಿ ಸುವುದಕ್ಕಾಗಿ ಪ್ರತಿ ವರ್ಷ ಆ.12ರಂದು ವಿಶ್ವ ಆನೆಗಳ ದಿನವನ್ನು ಆಚರಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಅರಣ್ಯ ಪ್ರದೇಶದ ನಾಶದಿಂದ ಅವುಗಳ ವಾಸ ಸ್ಥಾನಕ್ಕೆ ಕುತ್ತು ಬರುತ್ತಿರುವುದರಿಂದ ಹಾಗೂ ಆನೆ ಮಾನವ ಸಂಘರ್ಷದಿಂದ ಅವುಗಳಿಗೆ ಉಂಟಾಗಿರುವ ಆಪತ್ತಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಆನೆಗಳಲ್ಲಿ ಆಫ್ರಿಕ ಮತ್ತು ಏಷಿಯಾ ಆನೆಗಳೆಂಬ ಪ್ರಭೇದಗಳಿವೆ. ವಿಶ್ವದಲ್ಲಿ ಸುಮಾರು 4.50 ಲಕ್ಷದಿಂದ 7 ಲಕ್ಷ ಆಫ್ರಿಕ ಆನೆಗಳಿದ್ದರೆ, 35 ಸಾವಿರದಿಂದ 40 ಸಾವಿರ ಏಷಿಯಾ ಆನೆಗಳಿವೆ. ಭಾರತದಲ್ಲಿ ಸುಮಾರು 27,312 ಆನೆಗಳಿದ್ದು, ಕರ್ನಾಟಕ, ಕೇರಳ, ಒಡಿಸ್ಸಾ ಮತ್ತು ಜಾರ್ಖಂಡ್ ರಾಜ್ಯದಲ್ಲಿ ಆನೆಗಳ ಸಂತತಿ ಯನ್ನು ಕಾಣಬಹುದು. ಅದರಲ್ಲೂ 6,049 ಆನೆಗಳು ಕರ್ನಾಟಕದಲ್ಲಿಯೇ ಇರುವುದು ವಿಶೇಷ. ಬೇಟೆಯಾಡು ವುದು, ದಂತ ಮತ್ತು ಮಾಂಸಕ್ಕಾಗಿ ಹತ್ಯೆ ಮಾಡುವುದು, ಜನಸಂಖ್ಯೆ ವೃದ್ಧಿಯಿಂದ ಸಂಪನ್ಮೂಲಗಳ ಕೊರತೆ, ಆವಾಸ ಸ್ಥಾನ ನಾಶ ಹಾಗೂ ಮಾನವ ಪ್ರಾಣಿಗಳ ಸಂಘರ್ಷ ಮುಂತಾದವುಗಳಿಂದಾಗಿ ಆನೆಗಳ ಸಂತತಿ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಆನೆಗಳ ಉಳಿವಿಗೆ ಹಾಗೂ ಅವುಗಳ ಸಂತತಿ ಪೆÇೀಷಣೆಗೆ ಅರಣ್ಯ ಇಲಾಖೆ ಯೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಆನೆ ಪಥದಲ್ಲಿ ಮನುಷ್ಯನ ಪ್ರವೇಶ ಹೆಚ್ಚಾಗುತ್ತಿರುವ ಕಾರಣ ಆನೆಗಳು ತಮ್ಮ ಆವಾಸಸ್ಥಾನ ಕಳೆದುಕೊಂಡು ಜನ ವಸತಿ ಪ್ರದೇಶಕ್ಕೆ ಮೇವು ಅರಸಿ ಬರು ತ್ತಿವೆ. ಅವುಗಳ ಸಂರಕ್ಷಣೆಗಾಗಿಯೇ ಪ್ರಾಜೆಕ್ಟ್ ಎಲಿಫ್ಯಾಂಟ್ ಆರಂಭವಾಗಿದ್ದರೂ ಆನೆಗಳನ್ನು ಉಳಿಸಿಕೊಳ್ಳವಲ್ಲಿ ಮನುಷ್ಯನ ಹಸ್ತಕ್ಷೇಪ ಕಡಿಮೆಯಾಗಬೇಕು ಎಂದರು.
ಇದೇ ವೇಳೆ ಮೃಗಾಲಯದ ಶಿಕ್ಷಣಾ ಧಿಕಾರಿ ಗುರುಪ್ರಸಾದ್ ಪ್ರವಾಸಿಗರಿಗೆ ಆನೆಗಳ ಜೀವನ ಶೈಲಿಯ ಬಗ್ಗೆ ಮಾಹಿತಿ ನೀಡಿದರು. ಆನೆಗಳು ದಿನಕ್ಕೆ ಎಷ್ಟು ಪ್ರಮಾಣ ದಲ್ಲಿ ಆಹಾರ ಸೇವಿಸುತ್ತವೆ. ಎಷ್ಟು ಕಿಮಿ ದೂರ ನಡೆಯುತ್ತಿದೆ. ಗರ್ಭ ಧರಿಸುವ ಅವಧಿ, ಆನೆಗಳು ಗುಂಪಿನಲ್ಲಿದ್ದಾಗ ಹಾಗೂ ಏಕಾಂಗಿಯಾಗಿದ್ದಾಗ ವರ್ತಿ ಸುವಿಕೆ ಹಾಗೂ ಇನ್ನಿತರ ವಿಷಯ ಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯ ಕ್ರಮದಲ್ಲಿ ಮಹಾರಾಜ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಮೃಗಾಲಯದ ಯೂತ್ ಕ್ಲಬ್ ಸದಸ್ಯರು, ಪ್ರವಾಸಿಗರು ಆನೆಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದ ರ್ಭದಲ್ಲಿ ಛಾಯಾಗ್ರಾಹಕ ಉಮೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.