ಕುಶಾಲನಗರದಲ್ಲಿ ಕುಮಾರಪರ್ವ ರ‍್ಯಾಲಿ : ಜೆಡಿಎಸ್ ಅಧಿಕಾರಕ್ಕೆ ಬಂದರೆ ಪೊನ್ನಂಪೇಟೆ, ಕುಶಾಲನಗರ ತಾಲೂಕು ಘೋಷಣೆ
ಕೊಡಗು

ಕುಶಾಲನಗರದಲ್ಲಿ ಕುಮಾರಪರ್ವ ರ‍್ಯಾಲಿ : ಜೆಡಿಎಸ್ ಅಧಿಕಾರಕ್ಕೆ ಬಂದರೆ ಪೊನ್ನಂಪೇಟೆ, ಕುಶಾಲನಗರ ತಾಲೂಕು ಘೋಷಣೆ

April 19, 2018

ಕುಶಾಲನಗರ:  ರಾಜ್ಯದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿ ಪೊನ್ನಂಪೇಟೆ ಮತ್ತು ಕುಶಾಲ ನಗರ ತಾಲೂಕು ಘೋಷಣೆ ಮಾಡಲಾಗು ವುದು ಎಂದು ಮಾಜಿ ಮುಖ್ಯಮಂತ್ರಿಯೂ ಆದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಇಲ್ಲಿನ ತಾವರೆಕೆರೆ ಬಳಿಯ ಎಸ್ಎಲ್ಎನ್ ಮೈದಾನದಲ್ಲಿ ಕುಮಾರಪರ್ವ ರ‍್ಯಾಲಿ ಯ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಜೆಡಿಎಸ್ ಬೃಹತ್ ಸಮಾವೇಶವನ್ನು ಉದ್ಘಾ ಟಿಸಿ ಅವರು ಮಾತನಾಡಿದರು.

ರೈತರು ನೆಮ್ಮದಿಯಿಂದ ಬದುಕುತಿಲ್ಲ, ಯುವಕರಿಗೆ ಉದ್ಯೋಗ ಇಲ್ಲ. ಮಹಿಳೆ ಯರಿಗೆ ರಕ್ಷಣೆ ಇಲ್ಲ. ಆದರೂ ಸರ್ಕಾರ ಗಳು ಸಾಧನೆ ಮಾಡಿದ್ದೇವೆ ಎನ್ನುತ್ತಿವೆ. ಮೂರು ಸಾವಿರಕ್ಕೂ ಅಧಿಕ ರೈತರ ಆತ್ಮ ಹತ್ಯೆ ಪ್ರಕರಣಗಳು ನಡೆದಿವೆ. ಕುಟುಂಬ ಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ವನ್ನು ಸರ್ಕಾರ ಮಾಡಿಲ್ಲ ಎಂದರು.

ಹಿಂದೆ 1983 ಇತಿಹಾಸ ಮರು ಕಳಿಸಬೇಕು. ಇದು ರಾಜ್ಯದ ಭವಿಷ್ಯ ನಿರ್ಮಿಸುವ ಚುನಾವಣೆ ಎಂದರು. ಅಧಿಕಾರಕ್ಕೆ ಬಂದ ನಂತರ ಕೇವಲ ಒಂದು ತಿಂಗಳ ಸಮಯ ನೀಡಿದರೂ ಸಾಕು ರೈತರ ಎಲ್ಲಾ ಬಗೆಯ ಸಾಲ ಮನ್ನಾ ಮಾಡಲಾಗು ವುದು. ಸಿದ್ದರಾಮಯ್ಯ ಸರ್ಕಾರ ಮಾಡಿದ ಸಾಲ ಮನ್ನಾದ ಹಣವನ್ನು ಬ್ಯಾಂಕ್ ಗಳಿಗೆ ಇದುವರೆಗೂ ನೀಡಿಲ್ಲ ಎಂದು ಆರೋಪಿಸಿದರು.

ಕೊಡಗು ಜಿಲ್ಲೆಯಲ್ಲಿಯೂ ಬಾರಿ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರ ಅಭ್ಯರ್ಥಿಗಳಾದ ಜೀವಿಜಯ ಹಾಗೂ ಸಂಕೇತ್ ಪೂವಯ್ಯ ಅವರನ್ನು ಅಧಿಕ ಮತಗಳಿಂದ ಗೆಲ್ಲಿಸುವ ಮೂಲಕ ತಮ್ಮಗೆ ಶಕ್ತಿ ತುಂಬ ಬೇಕು ಎಂದು ಕಾರ್ಯಕರ್ತ ರಿಗೆ ಕುಮಾರಸ್ವಾಮಿ ಮನವಿ ಮಾಡಿದರು.

ಮೈಸೂರು ಚಾಮುಂಡೇಶ್ವರಿ ಕ್ಷೇತ್ರ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಕಾವೇರಿ, ಚಾಮುಂಡೇಶ್ವರಿ ಆಶೀರ್ವಾ ದಿಂದ ಬಾರಿ ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗುವುದು ಖಚಿತ. ಕೊಡಗಿನ ಇತಿಹಾಸದಲ್ಲಿ ಇಷ್ಟು ಜನ ಸೇರಿರುವುದು ಇದೇ ಪ್ರಥಮ.ರಾಜ್ಯದಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂಬುದಕ್ಕೆ ಸಭೆಯೆ ಸಾಕ್ಷಿ ಎಂದರು.

ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಮಾಜಿ ಸಚಿವ ಬಿ..ಜೀವಿಜಯ ಮಾತನಾಡಿ, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷಕ್ಕೆ ಆಶೀರ್ವಾದ ಮಾಡುವ ಮೂಲಕ ಹೊಸ ಮನ್ವಂತರವನ್ನು ಸೃಷ್ಟಿಸಬೇಕು ಎಂದು ಮನವಿ ಮಾಡಿದರು. ಕೊಡಗು ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕೂಡ ಜನಪ್ರತಿನಿಗಳು ಅವುಗಳ ಪರಿ ಹಾರಕ್ಕೆ ಪ್ರಮಾಣಿಕ ಪ್ರಯತ್ನ ಮಾಡಲಿಲ್ಲ. ಜಮಾಬಾಣೆ, ಕಸ್ತೂರಿ ರಂಗನ್ ವರದಿ, ಕಾಡಾನೆ ಹಾವಳಿ, ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರ ಸಮಸ್ಯೆಗಳಿಗೆ ಇದುವರೆಗೂ ಪರಿಹಾರ ಕಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಎಸ್ಪಿ ಮುಖಂಡ ಮೋಹನ್ ಮೌರ್ಯ ಮಾತನಾಡಿದರು. ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಸಂಕೇತ್ ಪೂವಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಪುಟ್ಟರಾಜು, ರಾಜೇಂದ್ರ, ತಾಪಂ ಸದಸ್ಯೆ ಪುಷ್ಪಾ, ಪಟ್ಟಣ ಪಂಚಾ ಯಿತಿ ಉಪಾಧ್ಯಕ್ಷ ಟಿ.ಆರ್.ಶರವಣ ಕುಮಾರ್, ಸದಸ್ಯ ಎಚ್.ಡಿ.ಚಂದ್ರು, ಸುರೇಯಾಬಾನು, ಕವಿತಾ, ಮಡಿಕೇರಿ ನಗರಸಭಾ ಸದಸ್ಯರಾದ ಲೀಲಾಶೇಷಮ್ಮ, ಸಂಗೀತಾಪ್ರಸನ್ನ, ಪಿರಿಯಾಪಟ್ಟಣ ಕ್ಷೇತ್ರ ಅಭ್ಯರ್ಥಿ ಮಹಾದೇವ್, ರಾಜ್ಯ ವಕ್ತಾರ ಬೋಜೇಗೌಡ, ರಾಜ್ಯ ಸಮಿತಿ ಸದಸ್ಯ ಮನೋಜ್ ಬೋಪಯ್ಯ, ಮೈಸೂರು ನಗರಪಾಲಿಕೆ ಮಾಜಿ ಅಧ್ಯಕ್ಷ ರವಿ, ಜಿಲ್ಲಾ ವಕ್ತರ ಕೆ.ಎಂ.ಬಿ.ಗಣೇಶ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿ.ಎಲ್.ವಿಶ್ವ, ಜಿಲ್ಲಾ ಪರಿಶಿಷ್ಟ ಘಟಕದ ಅಧ್ಯಕ್ಷ ಎಸ್.ಎನ್. ರಾಜಾರಾವ್, ಬಿಎಸ್ಪಿ ಜಿಲ್ಲಾಧ್ಯಕ್ಷ ಪ್ರೇಮ್ ಕುಮಾರ್,ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಷಾಖಾನ್, ನಗರಾಧ್ಯಕ್ಷ ವಿ.ಎಸ್.ಆನಂದಕುಮಾರ್ ಮುಖಂಡ ರಾದ  ಎಚ್.ಆರ್.ಸುರೇಶ್, ರಾಜೇಶ್ ಯಲ್ಲಪ್ಪ, ಶಾಂತಕುಮಾರ್, ತಮ್ಮಯ್ಯ, ಎಚ್.ಪಿ.ಶ್ರೇಷಾದ್ರಿ, ಸಂಜಯ್ ಜೀವಿಜಯ, ಎಚ್.ಬಿ.ಜಯಮ್ಮ, ಎಂ.ಕೆ.ಅಪ್ಪಸ್ವಾಮಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಎಸ್.ಎಂ.ಡಿಸಿಲ್ವ ಸ್ವಾಗತಿಸಿದರು. ಶೋಭಾರ ನಾಡಗೀತೆ ಹಾಡಿದರು. ಕಲಾ ವಿದೆ ಸುಮರಾಜ್ ಕುಮಾರ್ ನಿರೂಪಿಸಿದರು. ಇದೇ ಸಂದರ್ಭ ಬಿಜೆಪಿ, ಕಾಂಗ್ರೆಸ್ ಪಕ್ಷ ಗಳನ್ನು ತೊರೆದು ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

ಕುಮಾರಪರ್ವ ರ‍್ಯಾಲಿ: ಪಟ್ಟಣದಲ್ಲಿ ಆಯೋ ಜಿಸಿದ್ದ ಕುಮಾರಪರ್ವ ರ‍್ಯಾಲಿ ಗೆ ಉತ್ತಮ ಜನಬೆಂಬಲ ವ್ಯಕ್ತವಾಯಿತು. ಕೊಪ್ಪ ಗೇಟ್ ಬಳಿ ಸೇರಿದ್ದ ಪಕ್ಷದ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಗೆ ಅದ್ದೂರಿ ಸ್ವಾಗತ ನೀಡಿದರು. ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಅವರ ಮೇಲೆ ಹೂವಿನ ಸುರಿಮಳೆಗೈದರು. ಪುಷ್ಪಾಹಾರ ಹಾಕಲು ತಳ್ಳಾಟ ನಡೆಸಿದರು. ಸಂದರ್ಭ ಭದ್ರತಾ ಸಿಬ್ಬಂದಿಗಳು ಕುಮಾರಸ್ವಾಮಿ ಅವರನ್ನು ಸುತ್ತುವರೆದು ಬಸ್ಸಿಗೆ ಹತ್ತಿಸುವಲ್ಲಿ ಯಶಸ್ವಿಯಾದರು.

 

Translate »