ಬಾಣೆಗಾಗಿ ಮತ್ತೇ ಜನಾಂದೋಲನ ನಡೆಯಬೇಕಾಗಿದೆ
ಕೊಡಗು

ಬಾಣೆಗಾಗಿ ಮತ್ತೇ ಜನಾಂದೋಲನ ನಡೆಯಬೇಕಾಗಿದೆ

June 15, 2018

ಮಡಿಕೇರಿ: ಕೊಡಗಿನ ಜಮ್ಮಾ ಜಾಗಕ್ಕೆ ಸಂಬಂಧಿಸಿದಂತೆ ಕಂದಾಯ ನಿಗದಿ ಮಾಡಿರುವುದು, ಪರಿ ವರ್ತನೆಗೆ ಅವಕಾಶ ನೀಡಿರುವುದು ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿ ಸಿರುವುದು ಸರಿಯಲ್ಲವೆಂದು ಜಿಲ್ಲಾ ಕಂದಾಯ ಇಲಾಖೆಯ ಲೆಕ್ಕ ತಪಾಸಣೆ ಮಾಡಿರುವ ಅಧಿಕಾರಿಗಳ ತಂಡ ನೀಡಿರುವ ವರದಿಯ ಕುರಿತು ವಿರಾಜ ಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ಪತ್ರಿಕಾ ಭವನದಲ್ಲಿ ನಡೆದ ಜಿಲ್ಲೆಯ ಶಾಸಕದ್ವಯರೊಂದಿಗಿನ ‘ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭೂ ಕಂದಾಯ ಕಾಯ್ದೆಯ ಬಗ್ಗೆ ಅರಿವಿಲ್ಲದ ಅಧಿ ಕಾರಿಗಳು ಕೊಡಗಿನ ಭೂಮಿ ವಿಚಾರ ದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೆ ಕಂದಾಯ ನಿಗದಿಗೆ ರಾಷ್ಟ್ರ ಪತಿಗಳಿಂದ ಕಂದಾಯ ಕಾಯ್ದೆಯ ತಿದ್ದುಪಡಿಗೆ ಅನುಮೋದನೆ ಆಗಿದ್ದರೂ ಇದಕ್ಕೆ ಆಕ್ಷೇಪಣೆ ಸಲ್ಲಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು. ಬಾಣೆ ಜಮೀನಿನ ವಿಚಾರದಲ್ಲಿ ಅಧಿಕಾರಿಗಳು ಕೊಡ ಗಿನ ಜನರ ಅಪೇಕ್ಷೆಗೆ ವಿರುದ್ಧವಾಗಿ ನಿರ್ಣಯಗಳನ್ನು ಕೈಗೊಳ್ಳಲು ಅವಕಾಶ ನೀಡುವುದಿಲ್ಲವೆಂದು ತಿಳಿಸಿದ ಅವರು, ಜನರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈಲು ಮಾರ್ಗಕ್ಕೆ ವಿರೋಧ: ಮೈಸೂ ರಿನಿಂದ ಕುಶಾಲನಗರದವರೆಗಿನ ರೈಲು ಮಾರ್ಗಕ್ಕೆ ಮಾತ್ರ ನಮ್ಮ ಒಪ್ಪಿಗೆ ಇದೆಯೇ ಹೊರತು, ಕೊಡಗಿನ ಇತರೆ ಯಾವುದೇ ಪ್ರದೇಶದಲ್ಲಿ ರೈಲು ಮಾರ್ಗ ನಿರ್ಮಾಣವಾಗುವುದನ್ನು ತೀವ್ರವಾಗಿ ವಿರೋ ಧಿಸುವುದಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸ್ಪಷ್ಟಪಡಿಸಿದರು.

ಕೇಂದ್ರ ರೈಲ್ವೆ ಸಚಿವರು ಈಗಾಗಲೆ ನಮ್ಮ ಮನವಿಗೆ ಒಪ್ಪಿ ರೈಲ್ವೆ ಮಾರ್ಗ ನಿರ್ಮಾಣ ಮಾಡುವುದಿಲ್ಲವೆಂದು ಭರವಸೆ ನೀಡಿದ್ದಾರೆ. ಆದರೆ, ಕೇರಳದ ಕೆಲವು ರೈಲ್ವೆ ಅಧಿಕಾರಿಗಳು ಸಮೀಕ್ಷೆ ನಡೆಸಿರುವುದು ಸರಿಯಾದ ಕ್ರಮವಲ ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯೊಳಗೆ ಈ ರೀತಿಯ ಬೆಳ ವಣಿಗೆ ಕಂಡು ಬಂದಿದ್ದರು ಜಿಲ್ಲಾಧಿಕಾರಿಗಳ ಗಮನಕ್ಕೆ ಬಾರದೆ ಇರು ವುದು ಆಶ್ಚರ್ಯ ತಂದಿದೆ ಮತ್ತು ತಮ್ಮ ರಾಜ್ಯದ ಮೇಲಿನ ಪ್ರೀತಿಯಿಂದ ಜಿಲ್ಲಾ ಧಿಕಾರಿಗಳು ಸುಮ್ಮನಿದ್ದಾರೆಯೆ ಎನ್ನುವ ಸಂಶಯ ವ್ಯಕ್ತವಾಗಿದೆ ಎಂದು ಕೆ.ಜಿ. ಬೋಪಯ್ಯ ಆರೋಪಿಸಿದರು. ಯಾವುದೇ ಕಾರಣಕ್ಕು ಕೊಡಗಿನ ಜನರ ಭಾವನೆಗೆ ವಿರುದ್ಧವಾಗಿ ರೈಲು ಮಾರ್ಗ ನಿರ್ಮಾಣವಾಗುವುದಕ್ಕೆ ಅವಕಾಶ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದರು.

Translate »