ಮೈಸೂರು ಗ್ರಾಮಾಂತರ

ಬೈಕ್‍ಗೆ ಕಾರು ಡಿಕ್ಕಿ: ನಗರಸಭಾ ಮಾಜಿ ಸದಸ್ಯ ದಂಪತಿ ಪುತ್ರ ದುರ್ಮರಣ
ಮೈಸೂರು ಗ್ರಾಮಾಂತರ

ಬೈಕ್‍ಗೆ ಕಾರು ಡಿಕ್ಕಿ: ನಗರಸಭಾ ಮಾಜಿ ಸದಸ್ಯ ದಂಪತಿ ಪುತ್ರ ದುರ್ಮರಣ

May 19, 2020

ನಂಜನಗೂಡು, ಮೇ 18-ಬೈಕ್‍ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಂಜನಗೂಡು-ಊಟಿ ರಾಷ್ಟ್ರೀಯ ಹೆದ್ದಾರಿಯ ಮಲ್ಲನಮೂಲೆ ಮಠದ ತಿರುವಿನಲ್ಲಿ ಸೋಮವಾರ ಸಂಜೆ ನಡೆದಿದೆ. ನಗರದ ಶಿಕ್ಷಕರ ಕಾಲೋನಿ ನಿವಾಸಿ, ಮಾಜಿ ನಗರಸಭಾ ಸದಸ್ಯರಾದ ಕೆ.ಎಸ್.ಮಹೇಶ್ ಮತ್ತು ಸುಧಾ ಮಹೇಶ್ ದಂಪತಿ ಪುತ್ರ ಪ್ರವೀಣ್(29) ಅಪಘಾತದಲ್ಲಿ ಮೃತಪಟ್ಟವರು. ತಾಲೂಕಿನ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಲ್‍ಬರ್ಗ್ ಕಾರ್ಖಾನೆಯಲ್ಲಿ ಸೂಪರ್ ವೈಸರ್ ಆಗಿದ್ದ ಪ್ರವೀಣ್ ಕೆಲಸ ಮುಗಿಸಿ ಸೋಮವಾರ ಸಂಜೆ ತನ್ನ ರಾಯಲ್ ಎನ್‍ಫೀಲ್ಡ್…

ಮೈಸೂರು ನಾಗರಿಕ ವೇದಿಕೆಯಿಂದ ನಂ.ಗೂಡಲ್ಲಿ ದಿನಸಿ ಕಿಟ್ ವಿತರಿಸಿದ ಸುತ್ತೂರು ಶ್ರೀಗಳು
ಮೈಸೂರು ಗ್ರಾಮಾಂತರ

ಮೈಸೂರು ನಾಗರಿಕ ವೇದಿಕೆಯಿಂದ ನಂ.ಗೂಡಲ್ಲಿ ದಿನಸಿ ಕಿಟ್ ವಿತರಿಸಿದ ಸುತ್ತೂರು ಶ್ರೀಗಳು

May 19, 2020

ನಂಜನಗೂಡು, ಮೇ 18 (ರವಿ)-ಮೈಸೂರು ನಾಗರಿಕ ವೇದಿಕೆಯಿಂದ ಶ್ರೀಕ್ಷೇತ್ರ ಸುತ್ತೂರು ಮಠÀದ ಶ್ರೀ ದೇಶಿಕೇಂದ್ರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿರುವ ನಗರದ 500 ಮಂದಿ ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಿಸಲಾಯಿತು. ಇಲ್ಲಿನ ಶ್ರೀಕಂಠೇಶ್ವರ ದೇಗುಲದ ಮುಂಭಾಗ ಕಿಟ್ ವಿತರಣೆ ಚಾಲನೆ ನೀಡಿದ ಆಶೀರ್ವಚನ ನೀಡಿದ ಸುತ್ತೂರು ಶ್ರೀಗಳು, ಮೈಸೂರು ನಾಗರಿಕ ವೇದಿಕೆ ಅತಿವೃಷ್ಟಿ ಸೇರಿದಂತೆ ದೇಶದ ಇನ್ನಿತರ ಸಂಕಷ್ಟದಲ್ಲಿ ಸಹಾಯಹಸ್ತ ಚಾಚುತ್ತಾ ಬಂದಿದೆ. ಮನುಷ್ಯನಿಗೆ ಜೀವ ಮುಖ್ಯ, ನಂತರ ಜೀವನ. ಜೀವವನ್ನು ಕಾಪಾಡಲು ಎಲ್ಲರೂ…

ಹುಣಸೂರು: ಬಿರುಗಾಳಿ-ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ
ಮೈಸೂರು ಗ್ರಾಮಾಂತರ

ಹುಣಸೂರು: ಬಿರುಗಾಳಿ-ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ

May 19, 2020

ಹುಣಸೂರು, ಮೇ 18(ಕೆಕೆ)-ತಾಲೂಕಿನ ಹನಗೋಡು ಹೋಬಳಿಯ ದೊಡ್ಡ ಹೆಜ್ಜೂರಿನಲ್ಲಿ ಭಾನುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ 20ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಹಾರಿಹೋಗಿದ್ದು, ಬಾಳೆ ಬೆಳೆ ನಷ್ಟವಾಗಿದೆ. ಗ್ರಾಮದಲ್ಲಿ ಸಂಜೆ ಆರಂಭವಾದ ಮಳೆ ರಾತ್ರಿ ವೇಳೆ ಜೋರಾಯಿತು. ಅಲ್ಲದೆ ಭಾರೀ ಬಿರುಗಾಳಿಯಿಂದ ಗ್ರಾಮದ ನಿವಾಸಿಗಳಾದ ಸಿದ್ದಪ್ಪಾಜಿ, ಮಂಜುಳಾ, ಚೇತನ್, ಸಣ್ಣಮ್ಮ, ನರಿಯಯ್ಯ, ಮರಲಿಂಗಮ್ಮ, ಪುಟ್ಟಲಕ್ಷ್ಮಮ್ಮ, ಚೆಲುವಮ್ಮ, ರವಿಕುಮಾರ್, ಸುಕನ್ಯಾ, ವೆಂಕಟರಮಣ, ಶೇಖರ್, ಮಹದೇವ್, ಪ್ರಸನ್ನ ಸೇರಿದಂತೆ ಇನ್ನಿತರರ ಮನೆಗಳು ಹಾನಿಗೀಡಾಗಿವೆ. ಕೆಲ ಮನೆಗಳ ಹೆಂಚು ಹಾರಿಹೋಗಿದ್ದರೆ,…

ಬಸವ ವಸತಿ ಯೋಜನೆ   ಫಲಾನುಭವಿ ಕಂಗಾಲು
ಮೈಸೂರು ಗ್ರಾಮಾಂತರ

ಬಸವ ವಸತಿ ಯೋಜನೆ  ಫಲಾನುಭವಿ ಕಂಗಾಲು

May 19, 2020

ತಿ.ನರಸೀಪುರ, ಮೇ 18(ಎಸ್‍ಕೆ)-ತಾಲೂಕಿನ ಕುಪ್ಯ ಗ್ರಾಮದಲ್ಲಿ ವಸತಿ ಯೋಜನೆ ಯಡಿ ಮನೆ ನಿರ್ಮಾಣಕ್ಕೆ ಮಂಜೂ ರಾತಿ ದೊರಕಿದ್ದರೂ ತಾಂತ್ರಿಕ ಸಮಸ್ಯೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದ ರಿಂದ ವೃದ್ಧೆ ಫಲಾನುಭವಿಯೊಬ್ಬರು ಸೂರಿಲ್ಲದೆ, ನೆರೆ ಮನೆಯವರ ಜಗಲಿ ಯಲ್ಲಿ ದಿನದೂಡುವಂತಾಗಿದೆ. ಗ್ರಾಮದ ನಿವಾಸಿ ನಿಂಗಮ್ಮ 2017- 18ರ ಸಾಲಿನಲ್ಲಿ ಬಸವ ವಸತಿ ಯೋಜನೆ ಯಡಿ ಫಲಾನುಭವಿಯಾಗಿ ಆಯ್ಕೆ ಯಾಗಿದ್ದರು. ಅದರಂತೆ ಮೊದಲ ಹಂತದಲ್ಲಿ ನಿವೇಶನ ಜಿಪಿಎಸ್(ಕೋಡ್ ನಂ.71062) ಆಗಿ, ತಳಪಾಯ ಪೂರ್ಣಗೊಂಡಿದೆ. ಗೋಡೆಗಳು ನಿರ್ಮಾಣ…

ಕರ್ನಾಟಕ ಶೀಘ್ರವೇ ಕೊರೊನಾ ಮುಕ್ತವಾಗಲಿದೆ: ಎಸ್.ಟಿ.ಸೋಮಶೇಖರ್ 
ಮೈಸೂರು ಗ್ರಾಮಾಂತರ

ಕರ್ನಾಟಕ ಶೀಘ್ರವೇ ಕೊರೊನಾ ಮುಕ್ತವಾಗಲಿದೆ: ಎಸ್.ಟಿ.ಸೋಮಶೇಖರ್ 

May 18, 2020

ನಂಜನಗೂಡು, ಮೇ 17(ರವಿ)-ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಂಟ್ ಕಾರ್ಖಾನೆಯ  ನೌಕರನೊಬ್ಬನಿಗೆ ತಗುಲಿದ ಕೊರೊನಾ ಸೋಂಕಿನಿಂದ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದ ನಂಜನಗೂಡು ಹಾಗೂ ಮೈಸೂರು ನಂಜುಂಡೇಶ್ವರನ ಆಶೀರ್ವಾದದಿಂದ ಕೊರೊನಾ ಮುಕ್ತವಾಗಿದೆ. ಶೀಘ್ರದಲ್ಲೇ ಕರ್ನಾಟಕ ಸಹ ಕೊರೊನಾ ಮುಕ್ತವಾಗಲಿ ಎಂದು ಶ್ರೀಕಂಠೇಶ್ವರನಲ್ಲಿ ಪ್ರಾರ್ಥಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ನಗರದ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಯಿ ಚಾಮುಂಡೇಶ್ವರಿ, ನಂಜುಂಡೇಶ್ವರನ ಆಶೀರ್ವಾದದಿಂದ ಮೈಸೂರು ಜಿಲ್ಲೆ ಕೊರೊನಾ ಸೋಂಕಿನಿಂದ ಪಾರಾಗಿದೆ. ಜಿಲ್ಲಾಧಿಕಾರಿಗಳು,…

ಅಕ್ರಮವಾಗಿ ಸಂಗ್ರಹಿಸಿದ್ದ 3.5 ಟನ್ ಅಕ್ಕಿ ವಶಕ್ಕೆ, ಆರೋಪಿ ಪರಾರಿ
ಮೈಸೂರು ಗ್ರಾಮಾಂತರ

ಅಕ್ರಮವಾಗಿ ಸಂಗ್ರಹಿಸಿದ್ದ 3.5 ಟನ್ ಅಕ್ಕಿ ವಶಕ್ಕೆ, ಆರೋಪಿ ಪರಾರಿ

May 18, 2020

ನಂಜನಗೂಡು, ಮೇ 17(ರವಿ)-ನಗರದ ಶಂಕರಪುರ ಬಡಾವಣೆಯಲ್ಲಿರುವ ಅಕ್ಕಿ ಗಿರಣಿಯೊಂದರ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 3.5 ಟನ್ ಪ್ರಮಾಣದ ಪಡಿತರ ಅಕ್ಕಿಯನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ನಗರದ ಬಿಸ್ಮಿಲ್ಲಾ ಸಾಮಿಲ್ ಮಾಲೀಕ ಸೋಹಿಲ್ ಆರೋಪಿಯಾಗಿದ್ದು, ಈತ ತನ್ನ ಗೋದಾಮಿನಲ್ಲಿ 75 ಚೀಲಗಳಷ್ಟು ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿದ್ದ. ಖಚಿತ ಮಾಹಿತಿ ಮೇರೆಗೆÀ ನಂಜನಗೂಡು ನಗರ ಠಾಣೆಯ ಎಸ್‍ಐ ರವಿಕುಮಾರ್ ನೇತೃತ್ವದ ಸಿಬ್ಬಂದಿ ದಾಳಿ ನಡೆಸಿದಾಗ 3.5 ಟನ್ ಅಕ್ಕಿ ಸಿಕ್ಕಿದೆ. ಈ ಸಂಬಂಧ…

ಕೇಂದ್ರ, ರಾಜ್ಯ ಸರ್ಕಾರಗಳ ವಿಶೇಷ ಪ್ಯಾಕೇಜ್‍ಗೆ ಶ್ಲಾಘನೆ
ಮೈಸೂರು ಗ್ರಾಮಾಂತರ

ಕೇಂದ್ರ, ರಾಜ್ಯ ಸರ್ಕಾರಗಳ ವಿಶೇಷ ಪ್ಯಾಕೇಜ್‍ಗೆ ಶ್ಲಾಘನೆ

May 18, 2020

ಹುಣಸೂರು, ಮೇ17(ಕೆಕೆ)- ಕೊರೊನಾದಿಂದ ತಲ್ಲಣ ಗೊಂಡಿದ್ದ ದೇಶದ ಅರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ವಿಶೇಷ ಪ್ಯಾಕೇಜ್ ಪ್ರಕಟಿಸಿ ಸರ್ವರಿಗೂ ನೆಮ್ಮದಿ ಮೂಡಿಸಿವೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಯೋಗಾನಂದ್‍ಕುಮಾರ್ ಶ್ಲಾಘಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಅನುದಾನದಲ್ಲಿ ಕಾಯಕ ಸಮುದಾಯ, ಕೃಷಿ ಸೇರಿದಂತೆ ಎಲ್ಲಾ ವರ್ಗದವರಿಗೂ ಅನುಕೂಲ ಕಲ್ಪಿಸಿದೆ. ಇದರಿಂದ ದೇಶದ ಅರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಇದಕ್ಕೆ ಪೂರಕವಾಗಿ ರಾಜ್ಯ…

ಷರತ್ತಿನೊಂದಿಗೆ ಜುಬಿಲಂಟ್ ಕಾರ್ಖಾನೆ ಆರಂಭಕ್ಕೆ ಒಪ್ಪಿಗೆ: ಶಾಸಕ.ಹರ್ಷವರ್ಧನ್
ಮೈಸೂರು ಗ್ರಾಮಾಂತರ

ಷರತ್ತಿನೊಂದಿಗೆ ಜುಬಿಲಂಟ್ ಕಾರ್ಖಾನೆ ಆರಂಭಕ್ಕೆ ಒಪ್ಪಿಗೆ: ಶಾಸಕ.ಹರ್ಷವರ್ಧನ್

May 17, 2020

ನಂಜನಗೂಡು, ಮೇ 16(ರವಿ)-ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 50 ಸಾವಿರ ದಿನಸಿ ಕಿಟ್ ವಿತರಣೆ ಹಾಗೂ ಕಾರ್ಖಾನೆ ಸುತ್ತಲಿನ 10 ಗ್ರಾಮಗಳ ದತ್ತು ಪಡೆಯುವಿಕೆ ಸೇರಿದಂತೆ sಸರ್ಕಾರದ ಇನ್ನಿತರ ಷರತ್ತುಗಳಿಗೆ ಬದ್ಧವಾಗಿ ಜುಬಿಲಂಟ್ ಕಾರ್ಖಾನೆ ಆರಂಭಿಸಲು ಆಡಳಿತ ಮಂಡಳಿಯವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರೆಲ್ಲರೂ ಗುಣಮುಖರಾಗಿರುವುದು ಸಮಾಧಾನಕರ ಸಂಗತಿ. ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕಾಯ್ದುಕೊಂಡು ಪ್ರಸಿದ್ಧ ಧಾರ್ಮಿಕ ಪ್ರವಾಸೀ ತಾಣವಾದ ನಂಜನಗೂಡಿನಲ್ಲಿ ವಾಣಿಜ್ಯ…

ಅಕ್ರಮ ದಾಸ್ತಾನು: 5 ಟನ್ ಪಡಿತರ ಅಕ್ಕಿ, ಆರೋಪಿ ಪೊಲೀಸರ ವಶಕ್ಕೆ
ಮೈಸೂರು ಗ್ರಾಮಾಂತರ

ಅಕ್ರಮ ದಾಸ್ತಾನು: 5 ಟನ್ ಪಡಿತರ ಅಕ್ಕಿ, ಆರೋಪಿ ಪೊಲೀಸರ ವಶಕ್ಕೆ

May 17, 2020

ನಂಜನಗೂಡು, ಮೇ 16(ರವಿ)-ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಮಾರಾಟಕ್ಕೆ ಯತ್ನಿಸಿದ್ದ ನಗರದ ಅಂಗಡಿಯೊಂದರ ಮೇಲೆ ಶನಿವಾರ ದಾಳಿ ನಡೆಸಿದ ಪೊಲೀಸರು, 5 ಟನ್‍ನಷ್ಟು ಅಕ್ಕಿ ಸಮೇತ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ಸಿನಿಮಾರಸ್ತೆಯಲ್ಲಿರುವ ಯಾರಬ್ ಟ್ರೇಡರ್ಸ್ ಮೇಲೆ ದಾಳಿ ನಡೆಸಿದ ಪೊಲೀಸರು ಮಾಲೀಕ ಸಿದ್ಧಿಕ್‍ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮೈಸೂರಿನ ಡಿಸಿಐಬಿ ಪೊಲೀಸರ ತಂಡ ನಂಜನಗೂಡು ಆಹಾರ ಇಲಾಖೆಯ ಸಿಬ್ಬಂದಿಯೊಂದಿಗೆ ಇಂದು ದಿಢೀರ್ ದಾಳಿ ನಡೆಸಿದಾಗ ಗೋದಾಮಿನಲ್ಲಿ ನೂರಾರು…

ಬನ್ನಿಕುಪ್ಪೆ ಗ್ರಾಪಂನಲ್ಲಿ ಗ್ರಾಮ ಸಭೆ
ಮೈಸೂರು ಗ್ರಾಮಾಂತರ

ಬನ್ನಿಕುಪ್ಪೆ ಗ್ರಾಪಂನಲ್ಲಿ ಗ್ರಾಮ ಸಭೆ

May 17, 2020

ಹುಣಸೂರು, ಮೇ16(ಕೆಕೆ)-ತಾಲೂಕಿನ ಬನ್ನಿಕುಪ್ಪೆ ಗ್ರಾಪಂ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ತೋಟಗಾರಿಕೆ, ಕೃಷಿ, ಕಂದಾಯ, ಅರಣ್ಯ ಮತ್ತು ಪಶುಪಾಲನಾ ಇಲಾಖೆಗಳಿಂದ ಮ-ನರೇಗಾ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಯೋಜನೆಯಡಿ ದೊರೆಯವ ಸೌಲಭ್ಯಗಳನ್ನು ಕುರಿತು ಇಲಾಖಾಧಿಕಾರಿಗಳು ಮಾಹಿತಿ ನೀಡಿದರಲ್ಲದೆ ಇದರ ಸದುಪಯೋಗ ಪಡಿಸಿಕೊಳ್ಳಲು ಜನತೆಗೆ ಕರೆ ನೀಡಿದರು. ಪಿಡಿಓ ಎಂ.ಕೆ.ಗಣೇಶ್‍ಮೂರ್ತಿ ಮಾತನಾಡಿ, ಸರ್ಕಾರದ ಮ-ನರೇಗಾ ಯೋಜನೆಯಡಿ ಸೌಲಭ್ಯ ಪಡೆಯಲು ಗ್ರಾಮ ಪಂಚಾಯಿತಿಗೆ ಸೂಕ್ತ ದಾಖಲಾತಿ ಒದಗಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. 14ನೇ ಹಣಕಾಸು ಯೋಜನೆಯಡಿ ರಸ್ತೆ, ಕಟ್ಟಡ,…

1 4 5 6 7 8 18
Translate »