ಮೈಸೂರು ದಸರಾ

ದಸರಾ ಉತ್ಸಾಹಕ್ಕೆ ತಣ್ಣೀರೆರಚಿದ ಮಳೆರಾಯ
ಮೈಸೂರು, ಮೈಸೂರು ದಸರಾ

ದಸರಾ ಉತ್ಸಾಹಕ್ಕೆ ತಣ್ಣೀರೆರಚಿದ ಮಳೆರಾಯ

October 16, 2018

ಮೈಸೂರು:  ಮಹಿಳಾ ಮತ್ತು ಮಕ್ಕಳ ದಸರಾ ಹಮ್ಮಿಕೊಂಡಿದ್ದ ಮೈಸೂರಿನ ಜೆಕೆ ಮೈದಾನದಲ್ಲಿ ಮಳೆ ನೀರು ಭಾರೀ ಪ್ರಮಾಣದಲ್ಲಿ ನಿಂತಿದ್ದು, ಕೆಸರು ಗದ್ದೆಯಾದ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿಗೆ ಭೇಟಿ ನೀಡಿದ ನೂರಾರು ಮಂದಿ ಈ ಕೆಸರಿನಲ್ಲಿ ಹೆಜ್ಜೆ ಇಡಲಾಗದೇ ಪರಿತಪಿಸಬೇಕಾಯಿತು. ಭಾನುವಾರ ರಾತ್ರಿ ಸುರಿದ ಮಳೆಗೆ ಜೆಕೆ ಮೈದಾನದ ಬಹುಭಾಗದಲ್ಲಿ ನೀರು ನಿಂತಿದ್ದ ಹಿನ್ನೆಲೆಯಲ್ಲಿ ಒಂದಿಷ್ಟು ಸಂಭ್ರಮಿಸಲು ಬಂದಿದ್ದ ಸಾರ್ವಜನಿಕರು, ಪ್ರವಾಸಿಗರು, ಕಾಲೇಜು ವಿದ್ಯಾರ್ಥಿಗಳು ಇಲ್ಲಿನ ಅವ್ಯವಸ್ಥೆ ಕಂಡು, ತೀವ್ರ ಬೇಸರ ವ್ಯಕ್ತಪಡಿಸಿದರು. ಈ ಮೈದಾನದಲ್ಲಿ ಮಹಿಳಾ ಉದ್ಯಮಿಗಳು…

ಚಿತ್ರ ತಾರೆಯರ ಮಸ್ತ್ ಡ್ಯಾನ್ಸ್‍ಗೆ ಕುಣಿದು ಕುಪ್ಪಳಿಸಿದ ಯುವಜನ
ಮೈಸೂರು, ಮೈಸೂರು ದಸರಾ

ಚಿತ್ರ ತಾರೆಯರ ಮಸ್ತ್ ಡ್ಯಾನ್ಸ್‍ಗೆ ಕುಣಿದು ಕುಪ್ಪಳಿಸಿದ ಯುವಜನ

October 16, 2018

ಮೈಸೂರು: ಚಿತ್ರ ತಾರೆಯರ ಮನಮೋಹಕ ನೃತ್ಯ, ಹಿನ್ನೆಲೆ ಗಾಯಕರ ಸಂಗೀತ ನಿನಾದ, ಹಾಸ್ಯ ಕಲಾವಿದರ ಝಲಕ್‍ನಿಂದ ಇಂದಿನ ಯುವ ದಸರಾ ರಂಗೇರಿತ್ತು. ಮೈಸೂರಿನ ಮಹಾ ರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಯುವ ದಸರಾದ 4ನೇ ದಿನವಾದ ಸೋಮವಾರ, ಸ್ಯಾಂಡಲ್‍ವುಡ್ ನೈಟ್ಸ್ ಕಾರ್ಯಕ್ರಮ ನೆರೆದಿದ್ದವರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಆರಂಭದಲ್ಲಿ ಯಕ್ಷಗಾನದ ಪೋಷಾಕು ಧರಿಸಿದ್ದ ಕಲಾವಿದರು, ವಿಶಿಷ್ಟ ನೃತ್ಯ ಪ್ರದರ್ಶನದೊಂದಿಗೆ ವಿಘ್ನ ವಿನಾಯಕನನ್ನು ಸ್ಮರಿಸಿದರು. ಬಳಿಕ ವೇದಿಕೆಗೆ ಬಂದ ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ನಟಿ ರಜಿನಿ, `ಆಡು ಆಟ ಆಡು…

ಗ್ರಾಮೀಣ ಜನರಿಗೆ `ದಸರಾ ದರ್ಶನ’
ಮೈಸೂರು, ಮೈಸೂರು ದಸರಾ

ಗ್ರಾಮೀಣ ಜನರಿಗೆ `ದಸರಾ ದರ್ಶನ’

October 16, 2018

ಮೈಸೂರು: ಗ್ರಾಮೀಣ ಮಹಿಳೆಯರು, ವೃದ್ಧರು ಹಾಗೂ ಆರ್ಥಿಕವಾಗಿ ಹಿಂದುಳಿದ ಜನರಿಗೆ ದಸರಾ ದರ್ಶನಕ್ಕೆ ಅನುವಾಗುವಂತೆ ಕನಿಷ್ಠ ದರದಲ್ಲಿ ಬಸ್ ಸೌಕರ್ಯಕ್ಕೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸೋಮವಾರ ಮೈಸೂರಲ್ಲಿ ಚಾಲನೆ ನೀಡಿದರು. ಇದ ರೊಂದಿಗೆ ಚಾಮುಂಡಿಬೆಟ್ಟ, ಮೃಗಾ ಲಯ, ಅರಮನೆ ತೋರಿಸಿ ಮತ್ತೆ ಊರಿಗೆ ಕರೆದೊಯ್ದು ಬಿಡಲಾಗುವುದು. ಮೈಸೂರಿನ ಅರಮನೆ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಬಳಿ ಮೈಸೂರು ದಸರಾ ದರ್ಶನ ಉಪ ಸಮಿತಿ ಆಯೋಜಿ ಸಿರುವ ಕಾರ್ಯಕ್ರಮದಲ್ಲಿ ಮೈಸೂರು ತಾಲೂಕಿನ ದಸರಾ ದರ್ಶನದ 8 ಕೆಎಸ್ ಆರ್‍ಟಿಸಿ…

ಯಶಸ್ವಿ ದಸರಾ ಸಾಂಸ್ಕೃತಿಕ ಮೆರವಣಿಗೆ
ಮೈಸೂರು, ಮೈಸೂರು ದಸರಾ

ಯಶಸ್ವಿ ದಸರಾ ಸಾಂಸ್ಕೃತಿಕ ಮೆರವಣಿಗೆ

October 15, 2018

ಮೈಸೂರು: ಮೈಸೂರು ಸಾಂಸ್ಕೃತಿಕ ಸಿರಿವಂತಿಕೆಯ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ದಸರಾ ಸಾಂಸ್ಕೃತಿಕ ಮೆರವಣಿಗೆ, ಅರ್ಥಾತ್ `ಮಿನಿ ಜಂಬೂ ಸವಾರಿ’ ಭಾನುವಾರ ಅತ್ಯಂತ ಸಂಭ್ರಮದಿಂದ ನೆರವೇರಿತು. ಕಲಾ ತಂಡಗಳಿಗೆ ಉತ್ತೇಜನ ನೀಡುವುದು ಹಾಗೂ ಮಹತ್ವದ ವಿಜಯದಶಮಿ ಮೆರವಣಿಗೆ ಯಶಸ್ಸಿಗೆ ಪೂರಕವಾಗಿ ಆಯೋಜಿಸಿದ್ದ ಈ ಮಿನಿ ಜಂಬೂಸವಾರಿ ಅದ್ಧೂರಿಯಾಗಿಯೇ ನೆರವೇರಿತು. ಆ ಮೂಲಕ ಮೈಸೂರಿಗರು, ಪ್ರವಾಸಿಗರು ವಿಜಯದಶಮಿಯ ವೈಭವದ ಒಂದು ನೋಟವನ್ನು ಮುಂಗಡವಾಗಿಯೇ ಕಣ್ತುಂಬಿಕೊಂಡರು. 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಅರ್ಜುನ…

ಮಳೆ ಲೆಕ್ಕಿಸದೇ ಬಾಲಿವುಡ್ ಗಾಯಕ ಅರ್ಮಾನ್ ಮಲ್ಲಿಕ್ ಗಾನ ಮಾಧುರ್ಯದಲ್ಲಿ ಮಿಂದೆದ್ದ ಯುವ ಸಮೂಹ
ಮೈಸೂರು, ಮೈಸೂರು ದಸರಾ

ಮಳೆ ಲೆಕ್ಕಿಸದೇ ಬಾಲಿವುಡ್ ಗಾಯಕ ಅರ್ಮಾನ್ ಮಲ್ಲಿಕ್ ಗಾನ ಮಾಧುರ್ಯದಲ್ಲಿ ಮಿಂದೆದ್ದ ಯುವ ಸಮೂಹ

October 15, 2018

ಮೈಸೂರು: ಯುವ ದಸರಾ ವೇದಿಕೆಯಲ್ಲಿ `ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ, ಹೇಗೋ ಜೊತೆ ಯಾಗಿ…’ ಎಂದು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಾಡುತ್ತಿದ್ದರೆ, ನೆರೆದಿದ್ದ ಯುವ ಸಮೂಹ ಮಳೆಯನ್ನೂ ಲೆಕ್ಕಿಸದೆ ಸಂಭ್ರಮಿಸಿದರು. ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾದ 3ನೇ ದಿನ ವಾದ ಭಾನುವಾರ ಸುಮಧುರ ಕಂಠದ ಅರ್ಮಾನ್ ಮಲ್ಲಿಕ್, ಒಂದರ ಹಿಂದೆ ಒಂದ ರಂತೆ ಜನಪ್ರಿಯ ಹಾಡುಗಳನ್ನು ಹರಿಬಿಟ್ಟು, ನೆರೆದಿದ್ದವರ ಮೆಚ್ಚುಗೆ ಗಳಿಸಿದರು. `ಬಾಗಿ’ ಚಿತ್ರದ `ಸಬ್‍ತೆರಾ…’, `ಎಂ.ಎಸ್.ಧೋನಿ ದಿ ಅನ್‍ಟೋಲ್ಡ್…

ಮೈಸೂರು ಅರಮನೆ ಆವರಣದಲ್ಲಿ ದಸರಾ ಯೋಗೋತ್ಸವ
ಮೈಸೂರು, ಮೈಸೂರು ದಸರಾ

ಮೈಸೂರು ಅರಮನೆ ಆವರಣದಲ್ಲಿ ದಸರಾ ಯೋಗೋತ್ಸವ

October 15, 2018

ಮೈಸೂರು:  ಬಾನಂಗಳದಲ್ಲಿ ಭಾಸ್ಕರನ ಆಗಮನದ ಕ್ಷಣಗಳ ಮುಸು ಕಿನ ಮುಂಜಾನೆಯಲ್ಲಿ ಯೋಗದ ಸುಯೋಗದಲ್ಲಿ ನೂರಾರು ಮಂದಿ ಮಿಂದೆದ್ದರು. ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ವತಿಯಿಂದ ಭಾನು ವಾರ ಅರಮನೆಯ ಅಂಗಳದಲ್ಲಿ ಏರ್ಪಡಿಸಿದ್ದ ದಸರಾ ಯೋಗೋತ್ಸವದಲ್ಲಿ ಈ ದೃಶ್ಯಾವಳಿ ಮನಸೂರೆಗೊಂಡಿತು. ನೂರಾರು ಯೋಗಪಟುಗಳನ್ನು ಒಳಗೊಂಡ ಈ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಯೋಗ ಭಂಗಿಯಲ್ಲಿ ತಲ್ಲೀನರಾಗಿ ಗಮನ ಸೆಳೆದರು….

ದಸರಾ ವಿಶೇಷ: ರಾಜ್ಯ  ಮಟ್ಟದ ಯೋಗಾಸನ ಸ್ಪರ್ಧೆ
ಮೈಸೂರು, ಮೈಸೂರು ದಸರಾ

ದಸರಾ ವಿಶೇಷ: ರಾಜ್ಯ  ಮಟ್ಟದ ಯೋಗಾಸನ ಸ್ಪರ್ಧೆ

October 15, 2018

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಯೋಗ ದಸರಾ ಉಪ ಸಮಿತಿ ವತಿಯಿಂದ ಮೈಸೂರಿನ ವಸ್ತುಪ್ರದರ್ಶನ ಪ್ರಾಧಿಕಾರ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿಶೇಷ ಮಕ್ಕಳು ಹಾಗೂ ವಿಶೇಷ ಚೇತನರು ಪಾಲ್ಗೊಂಡು ಗಮನ ಸೆಳೆದರು. 9 ವಿಭಾಗಗಳಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಒಟ್ಟಾರೆಯಾಗಿ ಸುಮಾರು 800 ಯೋಗಪಟುಗಳು ಭಾಗವಹಿಸಿದ್ದರು. ಮೈಸೂರು ರಾಮಕೃಷ್ಣನಗರದ ನಿರೀಕ್ಷೆ ಶಾಲೆಯ ವಿಶೇಷ…

ನೆರೆದವರ ಮೂಕ ವಿಸ್ಮಿತಗೊಳಿಸಿದ ಅಂಧ ಮಕ್ಕಳ ಯೋಗ ಪ್ರದರ್ಶನ
ಮೈಸೂರು, ಮೈಸೂರು ದಸರಾ

ನೆರೆದವರ ಮೂಕ ವಿಸ್ಮಿತಗೊಳಿಸಿದ ಅಂಧ ಮಕ್ಕಳ ಯೋಗ ಪ್ರದರ್ಶನ

October 15, 2018

ಮೈಸೂರು:  ಅಂಧ ತನವಿದ್ದರೇನು, ಅಂತರಂಗದ ಕಣ್ಣುಗಳ ಪ್ರಖರತೆಯ ಶಕ್ತಿಯಿಂದ ಆ ವಿಶೇಷ ಮಕ್ಕಳು ದಸರಾ ಯೋಗೋತ್ಸವದಲ್ಲಿ ಯಾವುದೇ ಆಯಾಸ, ಅಡ್ಡಿ-ಆತಂಕ ವಿಲ್ಲದೆ, ನಿರರ್ಗಳವಾಗಿ ಕಠಿಣ ಯೋಗಾ ಸನದ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ನೆರೆದವರಲ್ಲಿ ಅಚ್ಚರಿ ಮೂಡಿಸಿ ರೋಮಾಂಚನಗೊಳಿಸಿದರು. ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ-ಆಲೂರ ಗ್ರಾಮದ ಜ್ಞಾನಸಿಂಧು ಅಂಧ ಮಕ್ಕಳ ವಸತಿಯುತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇಂತಹ ರೋಚಕ ಕ್ಷಣಗಳನ್ನು ಅನಾವರಣಗೊಳಿಸಿದರು. ಯೋಗೋತ್ಸವದಲ್ಲಿದ್ದ ಎಲ್ಲಾ ಆಸನ ಗಳನ್ನು ಯಾವುದೇ ಅಡ್ಡಿ ಇಲ್ಲದಂತೆ ಪ್ರದರ್ಶಿಸಿ, ಅಚ್ಚರಿ ಮೂಡಿಸಿದರು. ಪತ್ರಿಕೆಯೊಂದಿಗೆ…

ದಸರಾ ಮ್ಯಾರಥಾನ್‍ನಲ್ಲಿ ಸಾವಿರಾರು ಸ್ಪರ್ಧಿಗಳು ಭಾಗಿ
ಮೈಸೂರು, ಮೈಸೂರು ದಸರಾ

ದಸರಾ ಮ್ಯಾರಥಾನ್‍ನಲ್ಲಿ ಸಾವಿರಾರು ಸ್ಪರ್ಧಿಗಳು ಭಾಗಿ

October 15, 2018

ಮೈಸೂರು:  ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲಾಡಳಿತ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ಮ್ಯಾರಥಾನ್ (ದಸರಾ ಓಟ ಸ್ಪರ್ಧೆ)ನಲ್ಲಿ ಸಾವಿರಾರು ಮಂದಿ ಓಡುವ ಮೂಲಕ ಓಟದಿಂದ ಆರೋಗ್ಯ ವೃದ್ಧಿ ಎಂದು ಸಾರಿದರು. ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಕ್ರೀಡಾಂಗಣ ಬಳಿ ಯುವರಾಜ ಕಾಲೇಜು ಬಳಿ ಸಣ್ಣ ಕೈಗಾರಿಕಾ ಸಚಿವ ಎಸ್.ಆರ್. ಶ್ರೀನಿವಾಸ್ ಹಸಿರು ನಿಶಾನೆ ತೋರಿಸಿ ದಸರಾ ಓಟ ಸ್ಪರ್ಧೆಗೆ ಚಾಲನೆ ನೀಡಿ ದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ…

ಮುಗ್ಗರಿಸಿ ಬಿದ್ದ ಸಚಿವ ಜಿಟಿಡಿ
ಮೈಸೂರು, ಮೈಸೂರು ದಸರಾ

ಮುಗ್ಗರಿಸಿ ಬಿದ್ದ ಸಚಿವ ಜಿಟಿಡಿ

October 15, 2018

ಮೈಸೂರು:  ದಸರಾ ಮ್ಯಾರಥಾನ್‍ನಲ್ಲಿ ಅತ್ಯುತ್ಸಾಹದಿಂದ ಸ್ಪರ್ಧಿಗಳಿಗೆ ಉತ್ಸಾಹ ತುಂಬುತ್ತಿದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಹಿರಿಯರ ವಿಭಾಗದಲ್ಲಿ ಓಡಲು ಹೋಗಿ ಮುಗ್ಗರಿಸಿ ಬಿದ್ದ ಘಟನೆಯೂ ನಡೆಯಿತು. ಅದೃಷ್ಟವಶಾತ್ ಯಾವುದೇ ಗಾಯವಾಗಲಿಲ್ಲ. ಸಚಿವರು, ಯುವರಾಜ ಕಾಲೇಜು ಬಳಿ ಒಂದೊಂದೇ ವಿಭಾಗದ ಸ್ಪರ್ಧಿಗಳಿಗೆ ತಮ್ಮದೇ ಭರವಸೆ ಮಾತುಗಳ ಮೂಲಕ ಉತ್ಸಾಹ ತುಂಬಿ ಸ್ಪರ್ಧೆಗೆ ಚಾಲನೆ ನೀಡುತ್ತಿದ್ದರು. ಅವರು ಆಟದಲ್ಲಿ ಎಷ್ಟು ಉತ್ಸಾಹದಿಂದ ಪಾಲ್ಗೊಂಡಿದ್ದರೆಂದರೆ ಅವರ ಪ್ರತಿಯೊಂದು ಮಾತುಗಳು ಸ್ಪರ್ಧಿಗಳಲ್ಲಿ ಇನ್ನಷ್ಟು ಉತ್ಸಾಹ ತುಂಬುವಂತಿತ್ತು. ಸ್ಪರ್ಧೆಯ ಕೊನೆಯ ವಿಭಾಗವಾದ ಹಿರಿಯರ…

1 2 3 4 5 9
Translate »