ನವದೆಹಲಿ, ಫೆ.೧- ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳ ವಾರ ಲೋಕಸಭೆ ಯಲ್ಲಿ ಮಂಡಿಸಿದ ೨೦೨೨-೨೩ನೇ ಸಾಲಿನ ಕೇಂದ್ರ ಬಜೆಟ್ ಎಲ್ಲ ವರ್ಗಕ್ಕೂ ವಿಶೇಷ ವಾಗಿ ಬಡವರು ಮತ್ತು ಸಮಾಜದ ಹಿಂದುಳಿದ ವರ್ಗದವರಿಗೆ ಪ್ರಯೋ ಜನಕಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ದುಡಿಯುವ, ಮಧ್ಯಮ ವರ್ಗ ದವರಿಗೆ ಈ ಬಜೆಟ್‌ನಲ್ಲಿ ಯಾವ ಪ್ರಯೋಜನವೂ ದೊರೆತಿಲ್ಲ ಎಂದು ಪ್ರತಿಪಕ್ಷಗಳು ಪ್ರತಿಪಾದಿಸುತ್ತವೆ. ಆದರೆ ಇದು ಜನ ಸ್ನೇಹಿ ಮತ್ತು ಪ್ರಗತಿಪರ, ಬಡ ಜನರ ಕಲ್ಯಾಣವನ್ನು ಕೇಂದ್ರೀ…
ಮೈಸೂರಲ್ಲಿ ಫಾರ್ಮಾ ಎಪಿಐ ಪಾರ್ಕ್, NIPER ಕೇಂದ್ರ ಸ್ಥಾಪನೆ
February 2, 2022ಮೈಸೂರು,ಫೆ.೧(ಆರ್‌ಕೆಬಿ)- ಮೈಸೂರಿನಲ್ಲಿ ಫಾರ್ಮಾ ಎಪಿಐ ಪಾರ್ಕ್ (active pharmaceutical ingre dients – API) ಹಾಗೂ ಎನ್‌ಐಪಿಇಆರ್ (national institute of pharmaceutical education and research – NIPER) ಸಂಸ್ಥೆ ಸ್ಥಾಪಿಸುವಂತೆ ಮೈಸೂರು -ಕೊಡಗು ಸಂಸದ ಪ್ರತಾಪ್‌ಸಿಂಹ ಮಂಗಳವಾರ ದೆಹಲಿ ಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳು, ಹೊಸ ಮತ್ತು ನವೀಕರಿಸಬಹುದಾದ ಶಕ್ತಿಯ ರಾಜ್ಯ ಸಚಿವ ಭಗ ವಂತ್ ಖೂಬಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಎಪಿಐ ಪಾರ್ಕ್ ಹಾಗೂ ಎನ್‌ಐಪಿಇಅರ್ ಮೈಸೂರಿ ನಲ್ಲಿ ಸ್ಥಾಪಿಸುವುದರಿಂದ…
ಬೆಮೆಲ್ ಖಾಸಗೀಕರಣ ವಿರೋಧಿಸಿ ಕಾರ್ಮಿಕರ ಪ್ರತಿಭಟನೆ ಆರಂಭ
February 2, 2022ಮೈಸೂರು,ಫೆ.೧(ಪಿಎಂ)- ಸಾರ್ವ ಜನಿಕ ಉದ್ದಿಮೆಯಾದ ಬೆಮೆಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ಅನ್ನು ಖಾಸಗೀಕರಣಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ ಬೆಮೆಲ್‌ನ ಮೈಸೂರು ಉತ್ಪಾದನಾ ಘಟಕದ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು. ಹೂಟಗಳ್ಳಿ-ಕೆಆರ್‌ಎಸ್ ರಸ್ತೆಯ ಕಾರ್ಖಾನೆ ಮುಖ್ಯ ದ್ವಾರದಲ್ಲಿ ನೂರಾರು ಕಾರ್ಮಿಕರು ಜಮಾಯಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅರ್ಧ ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ ಬಳಿಕ ಕಾರ್ಮಿಕರು ಕರ್ತವ್ಯಕ್ಕೆ ತೆರಳಿ ದರು. ಇದೇ ರೀತಿ ಫೆ.೫ರವರೆಗೆ ಪ್ರತಿಭಟನೆ…
ಮನೆ ಮನೆಗೆ ಪೈಪ್‍ಲೈನ್ ಮೂಲಕ ಗ್ಯಾಸ್ ಸಂಪರ್ಕ ಯೋಜನೆ ಶೀಘ್ರ ಅನುಷ್ಠಾನಕ್ಕೆ ವಿಶ್ವನಾಥ್ ಆಗ್ರಹ
February 1, 2022ಮೈಸೂರು,ಜ.31(ಎಂಟಿವೈ)- ಮನೆ ಮನೆಗೆ ಪೈಪ್‍ಲೈನ್ ಮೂಲಕ ಅಡುಗೆ ಅನಿಲ ಸರಬರಾಜು ಮಾಡುವ ಯೋಜನೆ ಸಂಸದ ಪ್ರತಾಪಸಿಂಹರ ಯೋಜನೆಯಲ್ಲ. ಅದು ಕೇಂದ್ರ ಸರ್ಕಾರದ ಜನೋಪ ಯೋಗಿ ಯೋಜನೆ. ಅದನ್ನು ತ್ವರಿತಗತಿ ಯಲ್ಲಿ ಪೂರ್ಣಗೊಳಿಸಲು ಜನ ಪ್ರತಿನಿಧಿ ಗಳು ಸಹಕರಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡರೂ ಆದ ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವ ನಾಥ್ ಸಲಹೆ ನೀಡಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹ ದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮನೆ ಮನೆಗೆ ಪೈಪ್‍ಲೈನ್ ಮೂಲಕ ಅಡುಗೆ ಅನಿಲ ಸರಬರಾಜು…
ಗೌಡ ಲಿಂಗಾಯತ ಸಮುದಾಯದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಗಳ ಮಾಹಿತಿ ಸಂಗ್ರಹ
February 1, 2022ಮೈಸೂರು, ಜ.31(ಆರ್‍ಕೆಬಿ)- ರಾಜ್ಯ ಹಿಂದುಳಿದ ವರ್ಗ ಗಳ ಆಯೋಗದ ಸದಸ್ಯ ರಾಜಶೇಖರ್ ಅವರು ಸೋಮ ವಾರ ಮೈಸೂರು ತಾಲೂಕಿನ ಪುಟ್ಟೇಗೌಡನಹುಂಡಿ ಮತ್ತು ಪಾಳ್ಯ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ, ಗೌಡ ಲಿಂಗಾಯತ ಸಮುದಾಯದ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಗೌಡ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮತ್ತು ಸದಸ್ಯರನ್ನು ಭೇಟಿ…
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಯುವಕ ಸಾವು
February 1, 2022ಮೈಸೂರು,ಜ.31(ಆರ್‍ಕೆ)-ವಿದ್ಯುತ್ ಕಂಬಕ್ಕೆ ಬೈಕೊಂದು ಡಿಕ್ಕಿ ಹೊಡೆದ ಪರಿ ಣಾಮ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಮೀಪ ಉನ್ನತಿನಗರ ಬಳಿ ರಿಂಗ್ ರಸ್ತೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಮೈಸೂರಿನ ಕೂರ್ಗಳ್ಳಿ ನಿವಾಸಿ ಲೇಟ್ ನರಸಿಂಹ ಅವರ ಮಗ ಪಾಂಡುರಂಗ(26) ದುರಂತ ಸಾವಿಗೀಡಾದವರು. ಮೂಲತಃ ಕೆ.ಆರ್.ನಗರ ತಾಲೂಕು, ತಿಪ್ಟೂರು ಗ್ರಾಮದವರಾದ ಆತ, ಕೊಲಂಬಿಯಾ ಏಷಿಯಾ ಆಸ್ಪತ್ರೆ ಕಡೆಯಿಂದ ಹೀರೋ ಹೋಂಡಾ ಪ್ಯಾಷನ್ ಪ್ರೋ(ಕೆಎ45, ವಿ.9941) ಬೈಕಿನಲ್ಲಿ ಬೆಲವತ್ತ ಕಡೆಗೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಉನ್ನತಿ ನಗರ…
ಯುವ ರೆಡ್ ಕ್ರಾಸ್ ಘಟಕದ ಕಾರ್ಯ ಚಟುವಟಿಕೆ ಉದ್ಘಾಟನೆ
February 1, 2022ಮೈಸೂರು, ಜ. 31- ಮೈಸೂರಿನ ಎಂ.ಎಂ.ಕೆ.ಮತ್ತು ಎಸ್.ಡಿ.ಎಂ ಮಹಿಳಾ ಮಹಾವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕದ 2021-22ನೇ ಶೈಕ್ಷಣಿಕ ವರ್ಷದ ಕಾರ್ಯ ಚಟು ವಟಿಕೆಗಳ ಉದ್ಘಾಟನೆಯನ್ನು ಬೆಂಗಳೂರು ಯುವ ರೆಡ್ ಕ್ರಾಸ್ ಸೊಸೈಟಿ ರಾಜ್ಯ ಸಂಯೋಜಕ ದಿಲೀಪ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಇಂದಿನ ಯುವಜನರು ಶಿಕ್ಷಣದ ಜೊತೆಗೆ ಸಾಮುದಾಯಿಕ ಸೇವೆ ಯನ್ನು ನೀಡಿದಾಗ ಅವರ ಬದುಕು ಮಾದರಿಯಾಗುತ್ತದೆ. ಸಮಾಜದ ಋಣದಾರರಾದ ನಾವು ಸ್ವಲ್ಪವಾ ದರೂ ಇತರರ ಬದುಕಿಗೆ ಸಹಾಯ ಸಹಕಾರ ನೀಡಲು ಯುವ ರೆಡ್ ಕ್ರಾಸ್…
ಸೇವಾ ಕಾರ್ಯಗಳ ಮೂಲಕ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್‍ಗೌಡರ ಜನ್ಮದಿನ ಆಚರಣೆ
February 1, 2022ಮೈಸೂರು,ಜ.31(ಪಿಎಂ)- ಸಹಕಾರ ಕ್ಷೇತ್ರದ ಧುರೀಣರಾದ ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡರ ಭರ ವಸೆಯ ಸುಪುತ್ರ ಜಿ.ಡಿ.ಹರೀಶ್‍ಗೌಡ ತಂದೆ ಯವರಂತೆಯೇ ಸಹಕಾರ ವಲಯದಲ್ಲಿ ದಶಕದ ಅವಧಿಯಲ್ಲಿ ಭರವಸೆಯ ಸಾಧನೆಯ ಹಾದಿ ಕ್ರಮಿಸಿದ್ದಾರೆ. ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರಾದ ಈ ಯುವ ಉತ್ಸಾಹಿಗೆ ಇಂದು 35ನೇ ವರ್ಷದ ಜನ್ಮದಿನದ ಹರ್ಷ. ಆದರೆ ಜನ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಕಾರಣ ಅವರು ಸಂಭ್ರಮದ ಹುಟ್ಟು ಹಬ್ಬದ ಆಚರಣೆಯಿಂದ ದೂರ ಉಳಿದು, ತಮ್ಮ ಸಾಮಾಜಿಕ ಮೌಲ್ಯ…
ತಂಬಾಕು ಬೆಳೆಗಾರರ ಪರವಾನಗಿ ನವೀಕರಣ ನಿಯಮ ಸಡಿಲಿಕೆಗೆ ಸಂಸದ ಪ್ರತಾಪ್‍ಸಿಂಹ ಮನವಿ
February 1, 2022ಮೈಸೂರು, ಜ.31(ಎಸ್‍ಬಿಡಿ)- ತಂಬಾಕು ಬೆಳೆಗಾರರ ಪರ ವಾನಗಿ (ಲೈಸೆನ್ಸ್) ನವೀಕರಣದ ನಿಯಮ ಸಡಿಲಗೊಳಿಸು ವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ತಂಬಾಕು ಮಂಡಳಿ ಅಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ. ತಂಬಾಕು ಮಂಡಳಿ ಅಧ್ಯಕ್ಷ ರಘುನಾಥ ಬಾಬು ಅವರನ್ನು ಸೋಮವಾರ ನವದೆಹಲಿಯಲ್ಲಿ ಭೇಟಿ ಮಾಡಿದ ಪ್ರತಾಪ್ ಸಿಂಹ, ಲೈಸೆನ್ಸ್ ವರ್ಗಾವಣೆ, ನವೀಕರಣ, ಬೆಳೆ ಪ್ರಮಾಣದ ಕೋಟಾ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ತಂಬಾಕು ಬೆಳೆಗಾರರು ಪ್ರತಿ ವರ್ಷ ಲೈಸೆನ್ಸ್ ನವೀಕರಣ ಮಾಡಿಸಬೇಕು. ಕಾರಣಾಂತರದಿಂದ ವಿಳಂಬವಾದರೂ ದಂಡ ಪಾವತಿಯೊಂದಿಗೆ…
ಸರ್ಕಾರಿ ಆಸ್ಪತ್ರೆಯಲ್ಲಿ ಪಾಸಿಟಿವ್, ಖಾಸಗಿ ಆಸ್ಪತ್ರೆಯಲ್ಲಿ ನೆಗೆಟಿವ್ ವರದಿ!
February 1, 2022ಮೈಸೂರು,ಜ.31(ಎಂಟಿವೈ)-ಮೈಸೂರಿನಲ್ಲಿ ನಡೆಯುತ್ತಿರುವ ಕೊರೊನಾ ಪರೀಕ್ಷೆಯ ನೈಜತೆಯ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಮೂಡಲಾರಂಭಿಸಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮೈಸೂರಿನ ಹೆಬ್ಬಾಳು ಬಡಾವಣೆಯ ಹಿರಿಯ ನಾಗರಿಕರೊಬ್ಬರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದು, ಒಂದರಲ್ಲಿ ಪಾಸಿಟಿವ್, ಮತ್ತೊಂದ ರಲ್ಲಿ ನೆಗೆಟಿವ್ ವರದಿ ಬಂದಿದ್ದು ಸರ್ಕಾರಿ ಆಸ್ಪತ್ರೆ ಯಲ್ಲಿ ನಡೆಸುವ ಪರೀಕ್ಷಾ ವರದಿ ಸಂಶಯ ಸೃಷ್ಟಿಸಿದೆ. ಹೆಬ್ಬಾಳು ಬಡಾವಣೆಯ ನಿವಾಸಿ ಲೀಲಾ ನಾಗ ರಾಜು (65) ಎಂಬುವವರ ಕೋವಿಡ್ ಪರೀಕ್ಷಾ ವರದಿ ಭಾರೀ ಗೊಂದಲ ಸೃಷ್ಟಿಸಿದೆ ಮಾತ್ರವಲ್ಲ ವರದಿ…










