ಮೈಸೂರು, ಜ.23(ಎಂಟಿವೈ)- ಸರ್ಕಾರಿ ಶಾಲೆ ಹಾಗೂ ಕಾಲೇಜುಗಳ ಸಮಗ್ರ ಅಭಿವೃದ್ಧಿಗೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಮೀಸಲಿಡವಂತೆ ಆಗ್ರಹಿಸಿ ಯುವಕನೊಬ್ಬ ಸೈಕಲ್ ನಲ್ಲಿಯೇ ದೇಶ ಸುತ್ತುತ್ತಿದ್ದು, ಭಾನುವಾರ ಮೈಸೂರಿಗೆ ಆಗಮಿಸಿ ಜನರಲ್ಲಿ ಸರ್ಕಾರಿ ಶಾಲೆ-ಕಾಲೇಜು ರಕ್ಷಿಸುವ ಅಗತ್ಯತೆ ಬಗ್ಗೆ ಅರಿವು ಮೂಡಿಸಿದರು. ಚಿತ್ರದುರ್ಗ ಜಿಲ್ಲೆಯಲ್ಲಿ ಹನುಮನಹಳ್ಳಿ ನಿವಾಸಿ ಸುದರ್ಶನ್ ಎಂಬ ಯುವಕನೇ ಸರ್ಕಾರಿ ಶಾಲೆ ಮತ್ತು ಕಾಲೇಜುಗಳ ಸಂರಕ್ಷಣೆಗೆ ಸೈಕಲ್‍ನಲ್ಲಿ ಪರ್ಯಟನೆ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕಳೆದ 158 ದಿನಗಳ ಹಿಂದೆ ಸೈಕಲ್‍ನಲ್ಲಿ ದೇಶ ಸುತ್ತಲು ಯಾತ್ರೆ…
ಕೊರೊನಾ ವಿರುದ್ಧದ ಹೋರಾಡುವ ಆರೋಗ್ಯ, ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ವಿಶೇಷ ಅಭಿಯಾನ
January 23, 2022ಮೈಸೂರು,ಜ.22(ಎಂಟಿವೈ)-ಕೊರೊನಾ ಮೂರನೇ ಅಲೆ ಆರಂಭದಲ್ಲೇ ಹಲವು ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಹಾಗಾಗಿ ಸರ್ಕಾರದ ನಿರ್ಧಾರದಂತೆ ಆರೋಗ್ಯ ಕಾರ್ಯ ಕರ್ತರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಹಾಕುವ ವಿಶೇಷ ಅಭಿಯಾನಕ್ಕೆ ಮೈಸೂರಲ್ಲಿ ಇಂದು ಚಾಲನೆ ನೀಡಲಾಗಿದೆ. ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದು 9 ತಿಂಗಳಾಗಿರುವ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸಿಬ್ಬಂದಿ ಹಾಗೂ 60 ವರ್ಷ ಮೇಲ್ಪಟ್ಟ ವರಿಗೆ ಜ.10ರಿಂದ ಬೂಸ್ಟರ್ ಡೋಸ್ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಮೈಸೂರು ಜಿಲ್ಲೆಯಲ್ಲಿ 18…
ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಕಲ್ಪಿಸಿ; ಎಸ್‍ಡಿಪಿಐ ಆಗ್ರಹ
January 23, 2022ಮೈಸೂರು,ಜ.22(ಪಿಎಂ)- ಮೂಲಭೂತ ಸೌಕರ್ಯ, ಗುಣ ಮಟ್ಟದ ಶಿಕ್ಷಣವಿಲ್ಲದೆ, ರಾಜ್ಯದ ಸರ್ಕಾರಿ ಶಾಲೆಗಳು ದುಸ್ಥಿತಿ ಯಲ್ಲಿದ್ದು, ಇವುಗಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಮುಂದಿನ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಕಲ್ಪಿಸಿ, ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ಬೆಳೆಸಬೇಕು. ಅಗತ್ಯವಾದರೆ ದೆಹಲಿ ಸರ್ಕಾ ರದ ಮಾದರಿ ಅನುಸರಿಸಬೇಕು ಎಂದು ಸೋಷಿಯಲ್ ಡೆಮಾ ಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಆಗ್ರಹಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ರಫತ್‍ಖಾನ್, ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿರುವ ಕಾರಣ…
ಡಿಸಿ, ಎಡಿಸಿ ಸೇರಿ ಕಚೇರಿಯ ಶೇ.80ರಷ್ಟು ಸಿಬ್ಬಂದಿಗೆ ಕೊರೊನಾ
January 23, 2022ಮೈಸೂರು, ಜ.229ಆರ್‍ಕೆ)-ಮೈಸೂರಿನ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಎಡಿಸಿ ಮಂಜುನಾಥಸ್ವಾಮಿ, ಇತರ ಅಧೀನಾಧಿಕಾರಿ ಗಳು ಸೇರಿದಂತೆ ಕಚೇರಿಯ ಶೇ.80ರಷ್ಟು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕು ದಿನಗಳಿಂದ ಕಚೇರಿ ಸಿಬ್ಬಂ ದಿಗೆ ಸೋಂಕು ತಗುಲಿದ್ದರಿಂದ ಡಿಸಿ, ಎಡಿಸಿ ಸೇರಿದಂತೆ ಸೋಂಕಿತರೆಲ್ಲಾ ಮನೆಗಳಲ್ಲಿ ಪ್ರತ್ಯೇಕ ವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರಿಗೆ ಶೀತ, ನೆಗಡಿ, ಕೆಮ್ಮು, ಜ್ವರದಂತಹ ರೋಗ ಲಕ್ಷಣಗಳೂ ಇರುವುದರಿಂದ ಶುಕ್ರವಾರ (ಜ.21) ಡಿಸಿ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ಡಾ. ಬಗಾದಿ ಗೌತಮ್ ತಿಳಿಸಿದರು. ಶನಿವಾರ…
ದೇವಸ್ಥಾನ, ಪ್ರವಾಸಿ ತಾಣಗಳಿಗೆ ಪ್ರವೇಶಾವಕಾಶ
January 23, 2022ಮೈಸೂರು, ಜ.22(ಆರ್‍ಕೆ)-ಸರ್ಕಾರ ವಾರಾಂತ್ಯ ಕಫ್ರ್ಯೂ ನಿರ್ಬಂಧ ರದ್ದುಗೊಳಿಸಿರುವುದರಿಂದ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲಾ ದೇವಾಲಯ ಹಾಗೂ ಪ್ರವಾಸಿ ತಾಣಗಳಲ್ಲಿ ಇಂದಿನಿಂದ ಪ್ರವಾಸಿಗರು ಸೇರಿದಂತೆ ಸಾರ್ವ ಜನಿಕರಿಗೆ ಅವಕಾಶ ನೀಡಲಾಗಿದೆ. ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂ ಡೇಶ್ವರಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆಯಿಂದಲೇ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಆದರೆ ಎಲ್ಲಾ ಧಾರ್ಮಿಕ ಸೇವಾ ಕೈಂಕರ್ಯಗಳಿಲ್ಲ. ತೀರ್ಥ -ಪ್ರಸಾದ ವಿತರಣೆ ಮಾಡುವುದಿಲ್ಲ ಎಂದು ದೇವ ಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಸ್. ಯತಿರಾಜ್ ಸಂಪತ್‍ಕುಮಾರನ್ ತಿಳಿಸಿದ್ದಾರೆ. ಎಂದಿನಂತೆ ಬೆಳಗ್ಗೆ 7.30ರಿಂದ…
ಮೈಸೂರಲ್ಲಿ ವೈದ್ಯಕೀಯ ಸಿಬ್ಬಂದಿ, ಪೊಲೀಸರಿಗೆ ಬೆಂಬಿಡದೆ ಕಾಡುತ್ತಿರುವ ಕೊರೊನಾ ಸೋಂಕು
January 23, 2022ಮೈಸೂರು, ಜ.22(ಎಂಕೆ)- ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಲಸಿಕೆ ಪಡೆದಿರುವ ಫ್ರಂಟ್ ಲೈನ್ ವಾರಿಯರ್ಸ್‍ಗಳಾದ ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರನ್ನು ಬೆಂಬಿಡದೆ ಕಾಡುತ್ತಿದೆ. ಕೊರೊನಾ 2ನೇ ಅಲೆಯಂತೆಯೇ 3ನೇ ಅಲೆಯಲ್ಲೂ ಕೊರೊನಾ ವಾರಿ ಯರ್ಸ್‍ಗಳಾದ ಪೊಲೀಸರಿಗೆ ಹಾಗೂ ವೈದ್ಯರಿಗೆ ಕೊರೊನಾ ಸೋಂಕು ಕಾಡು ತ್ತಿದ್ದು, ಮೈಸೂರು ಜಿಲ್ಲೆಯಲ್ಲಿ 117 ಹಾಗೂ ನಗರದಲ್ಲಿ 290 ಸೇರಿ ಒಟ್ಟು 407 ಮಂದಿ ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗೆಯೇ ಜಿಲ್ಲಾ ಆರೋಗ್ಯ ಇಲಾಖೆಯಡಿ ವಿವಿಧ ಸರ್ಕಾರಿ…
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಂದ ಶಿಷ್ಟಾಚಾರ ಉಲ್ಲಂಘನೆ
January 23, 2022ಮೈಸೂರು,ಜ.22(ಎಂಟಿವೈ)-ಮೈಸೂರಿನ ಸರಸ್ವತಿಪುರಂನಲ್ಲಿ ಜಲಭವನ ಉದ್ಘಾಟನೆ ಸೇರಿದಂತೆ ಸರ್ಕಾರದ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು, ಪ್ರಮಾದ ಎಸಗುತ್ತಿ ರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸ್ಪೀಕರ್‍ಗೆ ಮನವಿ ಸಲ್ಲಿಸುತ್ತೇವೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ತೋರಿಸು ತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಕಾಂಗ್ರೆಸ್ ಶಾಸಕರು ಎಚ್ಚರಿಕೆ ನೀಡಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಜಂಟಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಶಾಸಕರಾದ ಹೆಚ್.ಪಿ.ಮಂಜುನಾಥ್ (ಹುಣಸೂರು), ಡಾ. ಯತೀಂದ್ರ ಸಿದ್ದರಾಮಯ್ಯ (ವರುಣ) ಮತ್ತು ಅನಿಲ್…
ಕೊರೊನಾದಿಂದ ಸತ್ತ ಮಗುವಿನ ದೇಹ ಪಡೆಯಲು ಪೋಷಕರ ಪರದಾಟ
January 23, 2022ಮೈಸೂರು, ಜ.22- ಕೊರೊನಾದಿಂದ ತಮ್ಮ ಎರಡು ವರ್ಷದ ಮಗುವನ್ನು ಕಳೆದುಕೊಂಡ ಪೆÇೀಷಕರು ಮಗುವಿನ ದೇಹವನ್ನು ಪಡೆಯಲು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೂ ಹೆಣಗಾಡಿದ ಘಟನೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮಗು ಮೈಸೂರಿನ ಅಜ್ಜಿ ಮನೆಗೆ ಬಂದಿತ್ತು. ಉಸಿರಾಟದ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಮಗು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಪೋಷಕರು ಮಗುವಿನ ದೇಹವನ್ನು ನಮಗೆ ಕೊಡಿ,…
ವಾರಾಂತ್ಯ ಹಗಲು ಕರ್ಫ್ಯೂ ರದ್ದು
January 22, 2022ಸರ್ಕಾರದ ಮಹತ್ವದ ನಿರ್ಧಾರ ರಾತ್ರಿ ಕರ್ಫ್ಯೂ ಜೊತೆಗೆ ಕಠಿಣ ನಿಯಮಾವಳಿ ಮುಂದುವರಿಕೆ ಇನ್ನು ಶನಿವಾರ, ಭಾನುವಾರವೂ ಮದ್ಯ ಮಾರಾಟಕ್ಕೆ ಅವಕಾಶ ಹೋಟೆಲ್, ಪಬ್, ಕ್ಲಬ್, ಬಾರ್, ರೆಸ್ಟೋರೆಂಟ್‌ನಲ್ಲಿ ಮೋಜು ಮಸ್ತಿಗೆ ಬ್ರೇಕ್ ಹಾಕಲು ರಾತ್ರಿ ಕರ್ಫ್ಯೂ ಮುಂದುವರಿಕೆ ಮದುವೆ, ಸಮಾರಂಭ, ಚಿತ್ರಮಂದಿರಗಳಿಗೆ ಶೇ.೫೦ರ ಮಿತಿ ಸಾರ್ವಜನಿಕ ಸಭೆ-ಸಮಾರಂಭ, ಜಾತ್ರೆ, ರ‍್ಯಾಲಿ, ಪ್ರತಿಭಟನೆಗೆ ಅವಕಾಶವಿಲ್ಲ ರಾತ್ರಿ ಕರ್ಫ್ಯೂ ಅವಧಿ ವಾರದ ಏಳೂ ದಿನಗಳಲ್ಲಿ ರಾತ್ರಿ ೧೦ ರಿಂದ ಬೆಳಗ್ಗೆ ೫ರವರೆಗೆ ಜಾರಿಯಲ್ಲಿರಲಿದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಹಾಗೂ ತಜ್ಞರೊಂದಿಗೆ…
ಬೆಂಗಳೂರು ಹೊರತು ರಾಜ್ಯದ ಇತರೆಡೆ ಶಾಲೆಗಳು ಆರಂಭ
January 22, 2022ಬೆAಗಳೂರು, ಜ.೨೧-ಬೆಂಗಳೂರು ಹೊರತುಪಡಿಸಿ, ಉಳಿದೆಡೆ ಶಾಲೆಗಳು ಮತ್ತೆ ಕಾರ್ಯಾ ರಂಭ ಮಾಡಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು. ಕೋವಿಡ್ ಕಾರಣಗಳಿಗೆ ಎಲ್ಲಿ ಶಾಲೆಗಳು ಮುಚ್ಚಿದ್ದವೋ ಅಂತಹವುಗಳನ್ನು ತೆರೆಯಲಾಗುವುದು. ಬೆಂಗಳೂರಿನಲ್ಲಿ ಮಾತ್ರ ಜ.೨೯ರವರೆಗೂ ಯಥಾಸ್ಥಿತಿ ಮುಂದು ವರೆಯಲಿದ್ದು, ಆನಂತರ ಸಭೆ ನಡೆಸಿ, ಶಾಲೆ ಗಳನ್ನು ಪುನ ರಾರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಇನ್ನು ರಾಜ್ಯದ ಯಾವುದೇ ಭಾಗದಲ್ಲಿ ಶಾಲೆಯಲ್ಲಿ ಕೋವಿಡ್ ಕಾಣ ಸಿಕೊಂಡರೆ, ಅದನ್ನು ಯೂನಿಟ್ ಎಂದು ಪರಿಗಣ ಸಿ, ಮೂರು…










