ಮೈಸೂರು, ಜ.5(ಜಿಎ)- ಪದವಿ ನೀಡುವುದು ಶಿಕ್ಷಣವಲ್ಲ. ಬದಲಿಗೆ ಬದುಕನ್ನು ಕಟ್ಟಿಕೊಡುವುದೇ ನಿಜವಾದ ಶಿಕ್ಷಣ ಎಂದು ಮೈಸೂರು ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಅಭಿಪ್ರಾಯಪಟ್ಟರು. ನಗರದ ಲಕ್ಷ್ಮೀಪುರಂನ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಕಳೆದ 38 ದಿನಗಳ ಕಾಲ ಜ್ಞಾನಬುತ್ತಿ ಸಂಸ್ಥೆ ವತಿಯಿಂದ ನಡೆದ ‘ಕಾಲೇಜು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರ’ದ ಸಮಾರೋಪದಲ್ಲಿ ಮಾತ ನಾಡಿದ ಅವರು, ಪ್ರಸ್ತುತ ಶಿಕ್ಷಣ ವ್ಯವಸ್ಥೆ ಅನೇಕ ಬದಲಾವಣೆಗಳಾಗಿವೆ. ನಾವು ಶಿಕ್ಷಣ ಪಡೆಯುವಾಗ…
ಮೇಲ್ಮನೆ ಅಗತ್ಯತೆಯ ಸಿಂಹಾವಲೋಕನ ಅಗತ್ಯ
January 6, 2022ಬೆಂಗಳೂರು, ಜ.5- ವಿಧಾನಪರಿಷತ್ ಅಗತ್ಯತೆ ಹಾಗೂ ವಿಧಾನಪರಿಷತ್ ಸದಸ್ಯರ ಕಾರ್ಯಗಳ ಬಗ್ಗೆ ಸಿಂಹಾವ ಲೋಕನ ಮಾಡುವ ಆಗತ್ಯ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಅಭಿಪ್ರಾಯಪಟ್ಟಿದ್ದಾರೆ. ಇಂದು ವಿಕಾಸಸೌಧದಲ್ಲಿ ನಡೆದ ನಿವೃತ್ತ ಮೇಲ್ಮನೆ ಸದಸ್ಯರ ಬೀಳ್ಕೊಡುಗೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ವಿಧಾನಪರಿಷತ್ ಡ್ಯೂಯಲ್ ಕ್ಯಾಮೆರಾ ಸಿಸ್ಟಮ್‍ನಂತೆ. ವಿಧಾನ ಪರಿಷತ್‍ಗೆ ದಿವ್ಯ ಪರಂಪರೆ ಇದೆ. ಮಹತ್ವದ ಚರ್ಚೆ ಆಗಿದೆ. ಈ ಬಾರಿ ಸದನದಲ್ಲಿ 7-8 ದಿನಗಳು ವಿಶ್ವವಿದ್ಯಾಲಯದ ಬಿಲ್ ಬಗ್ಗೆ ಚರ್ಚೆ, ಹಲವಾರು ಜ್ವಲಂತ ಸಮಸ್ಯೆಗಳ…
ಭೀಕರ ರಸ್ತೆ ಅಪಘಾತದಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಬಲಿ
January 6, 2022ಮೈಸೂರು, ಜ. 5(ಆರ್‍ಕೆ)- ಸಾರಿಗೆ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾವನ್ನಪ್ಪಿರುವ ದಾರುಣ ಘಟನೆ, ಮೈಸೂರಿನ ಚಾಮರಾಜ ಜೋಡಿ ರಸ್ತೆಯ ತಾತಯ್ಯ ಸರ್ಕಲ್‍ನಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ(ಒಒಅ&ಖI) ವಿದ್ಯಾರ್ಥಿ ರಾಹುಲ್ ಲಕ್ಷ್ಮಣ್ ಹಿಡಿಕಲ್(24) ಸಾವನ್ನಪ್ಪಿದವರು. ಮೂಲತಃ ಬೆಳಗಾವಿ ಜಿಲ್ಲೆ, ಘಟಪ್ರಭ ನಿವಾಸಿ ಲಕ್ಷ್ಮಣ್ ಹಿಡಿಕಲ್ ಮತ್ತು ಶ್ರೀಮತಿ ಹೇಮಾ ಲಕ್ಷ್ಮಣ್ ಹಿಡಿಕಲ್ ಅವರ ಹಿರಿಯ ಮಗನಾದ ರಾಹುಲ್ ಎಂಎಂಸಿಆರ್‍ಐನಲ್ಲಿ ಅಂತಿಮ ವರ್ಷದ…
ಕೋವಿಡ್-19 ನಿರ್ಬಂಧದ ನಡುವೆಯೂ ಮೈಸೂರಲ್ಲಿ ಅಪಘಾತ; ಸಾವಿನ ಸಂಖ್ಯೆ ಹೆಚ್ಚಳ
January 6, 2022ಮೈಸೂರು, ಜ. 5- ಕೋವಿಡ್-19 ಮಹಾಮಾರಿ ಸೋಂಕು ಕಟ್ಟಿ ಹಾಕಲು ಸುದೀರ್ಘ ಕಾಲದವರೆಗೆ ಲಾಕ್‍ಡೌನ್, ಸೆಮಿ ಲಾಕ್‍ಡೌನ್, ನೈಟ್ ಕಫ್ರ್ಯೂ, ವಾರಾಂತ್ಯ ಕಫ್ರ್ಯೂನಂತಹ ನಿರ್ಬಂಧ ವಿಧಿಸಿದ್ದರೂ, ಮೈಸೂರಿನಲ್ಲಿ ರಸ್ತೆ ಅಪಘಾತಗಳು ಮಾತ್ರ ಕಡಿಮೆಯಾಗಿಲ್ಲ. ಅಪಘಾತಗಳಿಂದ ಸಾವು-ನೋವುಗಳ ಸಂಖ್ಯೆಯೂ ಜಾಸ್ತಿಯಾಗುತ್ತಿರುವುದು ಗಮನಾರ್ಹ. ಕೊರೊನಾ ಹರಡುತ್ತದೆ ಎಂಬ ಭಯದಿಂದ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರನ್ನು ಆಲ್ಕೋ ಮೀಟರ್‍ನಿಂದ ತಪಾಸಣೆ ಮಾಡದಿರುವುದು ಮೈಸೂರು ನಗರದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಲು ಪ್ರಮುಖ ಕಾರಣ ಎಂಬುದು ಸ್ಪಷ್ಟವಾಗಿದೆ. 2020ಕ್ಕೆ ಹೋಲಿಸಿದರೆ, 2021ನೇ ಸಾಲಿನಲ್ಲಿ…
ವಿಜಯನಗರ 3ನೇ ಹಂತದ ನಿವಾಸಿಗಳ ಆಸ್ತಿ ಪಾಲಿಕೆ ಪಾಲಿಗೆ
January 5, 2022ಮೈಸೂರು, ಜ.4 (ಆರ್‍ಕೆಬಿ)- ವಿಜಯನಗರ 3ನೇ ಹಂತದ ನಿವಾಸಿಗಳು ತಮ್ಮ ಆಸ್ತಿಗಳ ಖಾತೆ, ನಕ್ಷೆ ಅನುಮೋದನೆ, ಕಟ್ಟಡ ರಹದಾರಿ ಪಡೆಯಲು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ, ಮೈಸೂರು ಮಹಾನಗರಪಾಲಿಕೆ, ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಹೂಟಗಳ್ಳಿ ನಗರಸಭೆ ಹೀಗೆ ಎಲ್ಲಿಗೆ ಹೋಗಬೇಕು ಎಂಬ ಗೊಂದಲಕ್ಕೆ ಇದೀಗ ತೆರೆ ಬಿದ್ದಿದೆ. ಇಂತಹ ಅಲೆದಾಟ ಸಮಸ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು, ಮುಡಾ ಅಧ್ಯಕ್ಷರು, ಪಾಲಿಕೆ ಆಯುಕ್ತರು ಚರ್ಚಿಸಿ, ನಿವಾಸಿಗಳ ಈ ಸಮಸ್ಯೆಗೆ ಕೊನೆಗೂ ಪರಿಹಾರ ಕಲ್ಪಿಸಿಕೊಟ್ಟಿದ್ದಾರೆ. ವಿಜಯನಗರ 3ನೇ…
ಸೆಸ್ಕ್‍ಗೆ ಸರ್ಕಾರಿ ವಿವಿಧ ಇಲಾಖೆಗಳಿಂದ 511.23 ಕೋಟಿ ವಿದ್ಯುತ್ ಬಿಲ್ ಬಾಕಿ
January 5, 2022ಮೈಸೂರು, ಜ. 4(ಆರ್‍ಕೆ)- ಪ್ರತೀ ವರ್ಷ ವಿದ್ಯುತ್ ಶುಲ್ಕ ಹೆಚ್ಚಿಸಿ ಗ್ರಾಹಕರಿಗೆ ಬಿಸಿ ಮುಟ್ಟಿ ಸುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್)ವು ಬಿಲ್ ಪಾವತಿಸದಿರುವವರ ಸಂಪರ್ಕವನ್ನು ನಿರ್ದಾಕ್ಷಿಣ್ಯವಾಗಿ ಕಡಿತಗೊಳಿಸುತ್ತದೆ. ಆದರೆ, ಸರ್ಕಾರಿ ಇಲಾಖೆಗಳೇ ಕೋಟಿಗಟ್ಟಲೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರೂ ವಸೂಲಿ ಮಾಡದೇ ಸೆಸ್ಕ್ ಮೌನ ವಹಿಸಿರುವುದು ಯಕ್ಷ ಪ್ರಶ್ನೆಯಾಗಿದೆ. ಮೈಸೂರು ಪ್ರಾಂತ್ಯದ 5 ಜಿಲ್ಲೆಗಳ ವಿವಿಧ ಇಲಾಖೆಗಳಿಂದ 2021ರ ನವೆಂಬರ್ ಅಂತ್ಯದ ವೇಳೆಗೆ ಬರೋಬ್ಬರಿ 511.23 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿದಿದೆ….
ಮೈಸೂರು ಜಿಲ್ಲೆಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಭಾರೀ ಗೋಲ್‍ಮಾಲ್
January 5, 2022ಮೈಸೂರು,ಜ.4(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಮಹತ್ವದ ಗಂಗಾ ಕಲ್ಯಾಣ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾ ರಸು ಮಾಡಲಾಗಿದೆ ಎಂದು ವಿಧಾನ ಪರಿಷತ್ತಿನ ವಿಶೇಷ ಸದನ ಸಮಿತಿ ಅಧ್ಯಕ್ಷ ಡಾ. ವೈ.ಎ.ನಾರಾಯಣಸ್ವಾಮಿ ತಿಳಿಸಿದರು. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ನಿಗಮಗಳ ಅಧಿ ಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು, ಬಡವರ ಅಭಿವೃದ್ಧಿ ನಿಟ್ಟಿನಲ್ಲಿ ಗಂಗಾ ಕಲ್ಯಾಣ ಹಾಗೂ ಭೂ ಒಡೆತನ ಯೋಜನೆಗಳು…
ಮೈಸೂರು ಪಾಲಿಕೆ ಎಡವಟ್ಟಿಗೆ ಸಾರ್ವಜನಿಕರ ತೆರಿಗೆ ಹಣ ವ್ಯರ್ಥ
January 5, 2022ಮೈಸೂರು, ಜ.4(ಎಂಕೆ)- ಮೈಸೂರು ಮಹಾನಗರಪಾಲಿಕೆ ಹಾಗೂ ಮಳಿಗೆ ದಾರರ ನಡುವಿನ ಜಟಾಪಟಿಗೆ ಖರ್ಚಾ ದದ್ದು ಸಾರ್ವಜನಿಕರ ದುಡ್ಡು….! ನಗರದ ಮಕ್ಕಾಜಿ ಚೌಕದಲ್ಲಿ 8 ವರ್ಷ ಗಳ ಹಿಂದೆ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ‘ಮಕ್ಕಾಜಿ ಚೌಕ ವಾಣಿಜ್ಯ ಸಂಕೀರ್ಣ’ ನಯಾ ಪೈಸೆಯ ಆದಾಯಕ್ಕೂ ಮುನ್ನವೇ ನಿರ್ವಹಣೆ ಇಲ್ಲದೆ ಅಲ್ಲಲ್ಲಿ ಕುಸಿದು ಬೀಳುತ್ತಿದೆ. ಪಾಲಿಕೆಗೆ ಆದಾಯ ನೀಡದ ವಾಣಿಜ್ಯ ಸಂಕೀರ್ಣ ಮಳಿಗೆದಾರರಿಗೆ ಲಾಭವನ್ನೂ ತರದೆ ಬಣಗುಡುತ್ತಿದ್ದು, ಜಟಾಪಟಿಯ ನಡುವೆ ಈ ಘನಕಾರ್ಯಕ್ಕೆ ಖರ್ಚಾಗಿದ್ದು ಮಾತ್ರ ಸಾರ್ವಜನಿಕರು…
ರಾಜ್ಯದ 224 ಕ್ಷೇತ್ರದಲ್ಲೇ `ಕೃಷ್ಣರಾಜ’ ಮಾದರಿ ಕ್ಷೇತ್ರ
January 5, 2022ಮೈಸೂರು,ಜ.4(ಎಂಟಿವೈ)- ಶಾಸಕ ಎಸ್.ಎ. ರಾಮದಾಸ್ ಪ್ರತಿನಿಧಿಸುವ ಮೈಸೂರಿನ ಕೆ.ಆರ್. ವಿಧಾನಸಭಾ ಕ್ಷೇತ್ರ ರಾಜ್ಯದ 224 ಕ್ಷೇತ್ರಗಳಲ್ಲಿಯೇ ಮಾದರಿ ಕ್ಷೇತ್ರ ಎನಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಗನ್‍ಹೌಸ್ ವೃತ್ತದ ಬಳಿಯ ಶಂಕರ ಮಠದ ಆವರಣದಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಸೃಷ್ಟಿ ನೋಂದಣಿ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿರುದ್ಯೋಗಿಗಳಿಗೆ ಉದ್ಯೋಗ ಹಾಗೂ ಸ್ವ-ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮೈಸೂರಲ್ಲಿ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಸೃಷ್ಟಿ…
ಮುಡಾದ 534 ಕೋಟಿ ಮೌಲ್ಯದ ಆಸ್ತಿ ಸಂರಕ್ಷಣೆ
January 5, 2022ಮೈಸೂರು,ಜ.4-ಅತೀ ವೇಗವಾಗಿ ಬೆಳೆಯುತ್ತಿ ರುವ ಮೈಸೂರು ನಗರ ಮತ್ತು ಸುತ್ತಮುತ್ತಲ ಪ್ರದೇಶ ದಲ್ಲಿ ಭೂಮಿ ಬೆಲೆ ಗಗನಕ್ಕೇರುತ್ತಿರುವುದರಿಂದ ಸರ್ಕಾರಿ ಆಸ್ತಿ ಕಬಳಿಸುವ ಹಾಗೂ ಒತ್ತುವರಿ ಮಾಡಿ ಸ್ವಾಧೀನಾನುಭವದಲ್ಲಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವ್ಯಾಪ್ತಿಯಲ್ಲೇ ಅತೀ ಹೆಚ್ಚು ನಿವೇಶನ, ಮನೆ, ಭೂಮಿ ಒತ್ತುವರಿ, ಅತಿಕ್ರಮ ಪ್ರಕರಣಗಳು ಕಂಡುಬರು ತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯ, ಇಚ್ಚಾಸಕ್ತಿಯ ಕೊರತೆ, ಭೂಗಳ್ಳರೊಂದಿಗೆ ಶಾಮೀಲು ಅಕ್ರಮಕ್ಕೆ ಪ್ರಮುಖ ಕಾರಣ ಎಂಬುದನ್ನು ಹೇಳಬೇಕಿಲ್ಲ. ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರ ಕಾಳಜಿ ಹಾಗೂ ಆಯುಕ್ತ…










