ಮೈಸೂರು, ಜ.4(ಆರ್‍ಕೆಬಿ)- ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿಜಯನಗರ 3ನೇ ಹಂತದ ಸಿ. ಬ್ಲಾಕ್‍ನ 80 ಅಡಿ ರಸ್ತೆಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರು ಘಟಕ ಹಾಗೂ 2.35 ಕೋಟಿ ರೂ. ಅಂದಾಜಿನ ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಶಾಸಕ ಜಿ.ಟಿ.ದೇವೇಗೌಡ ಅವರು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಮ್ಮುಖದಲ್ಲಿ ಉದ್ಘಾಟನೆ ನೆರವೇರಿಸಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 3ನೇ ವಲಯ ಕಚೇರಿ ವತಿಯಿಂದ ವಿಜಯನಗರ 3ನೇ…
ಕಾಂಗ್ರೆಸ್‍ನಿಂದ ಜನಾಂದೋಲನ ಸಮಾವೇಶ
January 4, 2022ಮೈಸೂರು,ಜ.3(ಪಿಎಂ)- ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ನೇತೃತ್ವದಲ್ಲಿ ಜ.9ರಿಂದ 19ರವರೆಗೆ ಹಮ್ಮಿ ಕೊಂಡಿರುವ ಕಾಂಗ್ರೆಸ್ ಪಾದಯಾತ್ರೆ ಪ್ರಯುಕ್ತ ಮೈಸೂರಿನಲ್ಲಿ ಜನಾಂದೋಲನ ಸಮಾವೇಶದೊಂದಿಗೆ ಪಾದಯಾತ್ರೆಯನ್ನೂ ನಡೆಸಲಾಯಿತು. ಮೇಕೆದಾಟು ಬಳಿಯಿಂದ ಬೆಂಗಳೂರಿನ ಬಸವನ ಗುಡಿಯ ನ್ಯಾಷನಲ್ ಕಾಲೇಜು ಮೈದಾನದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಅದರ ಪೂರ್ವ ಭಾವಿಯಾಗಿ ಮೈಸೂರಿನಲ್ಲಿ ಇಂದು ಜನಾಂದೋಲನ ಸಮಾವೇಶ ನಡೆಸಲಾಯಿತು. ಸಮಾವೇಶಕ್ಕೂ ಮುನ್ನ ಮೈಸೂರಿನ ಗನ್‍ಹೌಸ್ ವೃತ್ತ ಸಮೀಪದ ಬಸವೇಶ್ವರರ ಪ್ರತಿಮೆ ಬಳಿಯಿಂದ ಕಾಂಗ್ರೆಸ್ ಭವನದವರೆಗೆ ಬೃಹತ್ ಪಾದಯಾತ್ರೆ ನಡೆಸಲಾಯಿತು. ಪಕ್ಷದ…
ಮೈಸೂರಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭ
January 4, 2022ಮೈಸೂರು, ಜ. 3(ಆರ್‍ಕೆ)-ಕೊರೊನಾ ರೂಪಾಂತರಿ ಒಮಿಕ್ರಾನ್ ಮಾರಣಾಂತಿಕ ಸೋಂಕು ಹರಡದಂತೆ ತಡೆಯಲು ಮುಂದಾಗಿರುವ ಮೈಸೂರು ಜಿಲ್ಲಾಡಳಿ ತವು ಇಂದಿನಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ ಆರಂಭಿಸಿದೆ. ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಲಸಿಕಾ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯ್ತಿ ಮತ್ತು ಮೈಸೂರು ಮಹಾನಗರ ಪಾಲಿಕೆ ಸಂಯು ಕ್ತಾಶ್ರಯದಲ್ಲಿ ಆಯೋಜಿಸಿರುವ ಅಭಿಯಾನದಲ್ಲಿ ಸಿಬ್ಬಂದಿಗಳು ಮೈಸೂರು…
ನಂದಿನಿ ಹಾಲಿನ ಪ್ಯಾಕೆಟ್ ನಕಲಿ ಮಾಹಿತಿ ಲಭ್ಯ
January 4, 2022ಮೈಸೂರು, ಜ.3(ಎಂಕೆ)- ರಾಜ್ಯದ 14 ಹಾಲು ಸಹಕಾರ ಒಕ್ಕೂಟಗಳಲ್ಲಿಯೂ ನಂದಿನಿ ಉತ್ಪನ್ನಗಳ ಪರಿಶೀಲನೆ ನಡೆ ಸಲು ಕೆಎಂಎಫ್ ನಿರ್ದೇಶಕರ ನೇತೃತ್ವ ದಲ್ಲಿ ಏಳು ಮಂದಿ ಸದಸ್ಯರ ‘ಜಾಗೃತ ದಳ’ ರಚಿಸಿ, ಮೊದಲ ಬಾರಿಗೆ ಪೂರ್ಣ ಪ್ರಮಾಣದ ಪರಿಶೀಲನೆ ಅಧಿಕಾರ ನೀಡ ಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ಮೈಮುಲ್ ಕಚೇರಿಯಲ್ಲಿ ಸೋಮವಾರ ಕೆಎಂಎಫ್‍ನ ಅಧಿಕಾರಿಗಳು ಮತ್ತು ನಿರ್ದೇ ಶಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾಗೃತ…
ಐಸಿಎಸ್ ಸಂಪರ್ಕ: ಎನ್‍ಐಎಯಿಂದ ಮಾಜಿ ಶಾಸಕ ಇದಿನಬ್ಬ ಮೊಮ್ಮಗನ ಪತ್ನಿ ಬಂಧನ
January 4, 2022ಉಳ್ಳಾಲ, ಜ.3- ಐಸಿಎಸ್ ಸಂಘಟನೆಯ ನಂಟು ಹೊಂದಿರುವ ಆರೋಪದ ಮೇರೆಗೆ ಕಾಂಗ್ರೆಸ್‍ನ ಮಾಜಿ ಶಾಸಕ ಬಿ.ಎಂ.ಇದಿನಬ್ಬ ಅವರ ಮೊಮ್ಮಗನ ಪತ್ನಿಯನ್ನು ದೆಹಲಿಯ ರಾಷ್ಟ್ರೀಯ ತನಿಖಾ ತಂಡದ (ಎನ್‍ಐಎ) ಅಧಿಕಾರಿಗಳು ಬಂಧಿಸಿದ್ದಾರೆ. ಮೂಲತಃ ಕೊಡಗು ಜಿಲ್ಲೆಯವಳಾದ ದೀಪ್ತಿ ಮರಿಯಂ ಎಂಬಾಕೆಯೇ ಎನ್‍ಐಎಯಿಂದ ಬಂಧನಕ್ಕೊಳಗಾದವಳಾಗಿದ್ದು, ಈಕೆ ಇದಿನಬ್ಬ ಅವರ ಮೊಮ್ಮಗ ಅನಾಸ್ ಅಬ್ದುಲ್ ರೆಹಮಾನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಳು. ಅಲ್ಲದೇ ಮತಾಂತರವೂ ಆಗಿದ್ದಳು ಎಂದು ಹೇಳಲಾಗಿದೆ. ಈಕೆ ಐಸಿಎಸ್ ಸಂಘಟನೆಗೆ ಯುವಕರನ್ನು ಸೇರಿಸುತ್ತಿದ್ದಾಳೆ ಎಂಬ ಸಂಶಯದ ಮೇರೆಗೆ ಐಎನ್‍ಎ ಅಧಿಕಾರಿಗಳು…
ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡನ್ನು ಎತ್ತಿ ಕಟ್ಟುತ್ತಿರುವ ನಮ್ಮದೇ ರಾಜ್ಯದ ಬಿಜೆಪಿ ನಾಯಕರು
January 4, 2022ಮೈಸೂರು,ಜ.3(ಎಂಟಿವೈ)-ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸು ವುದಕ್ಕಾಗಿಯೇ ಸೀಮಿತಗೊಂಡಿರುವ ಮೇಕೆದಾಟು ಯೋಜನೆ ವಿರೋಧಿಸಲು ರಾಜ್ಯದ ಬಿಜೆಪಿ ನಾಯಕರು ತಮಿಳುನಾಡಿನ ಬಿಜೆಪಿ ನಾಯಕರನ್ನು ಎತ್ತಿಕಟ್ಟುವ ಕುತಂತ್ರ ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಅನುಷ್ಠಾನ ಗೊಂಡರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಬವಣೆ ನೀಗಲಿದೆ. ಅದರಲ್ಲೂ ವೇಗವಾಗಿ ಬೆಳೆಯುತ್ತಿರುವ ನಗರವಾಗಿರುವ ಬೆಂಗಳೂರಿನಲ್ಲಿ ಇಂದಿಗೂ ಶೇ.40ರಷ್ಟು…
ಶಿಕ್ಷಿತರ ಸಂಖ್ಯೆ ಹೆಚ್ಚಿದರೂ ಮಾನವೀಯ ಮೌಲ್ಯಗಳ ಕೊರತೆ ಇದೆ
January 4, 2022ಮೈಸೂರು, ಜ.3(ಎಸ್‍ಬಿಡಿ)- ಶಿಕ್ಷಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ವೈಚಾರಿಕತೆ ಏಕೆ ಬೆಳೆಯಲಿಲ್ಲವೆಂದು ಎಲ್ಲರೂ ಆತ್ಮಾವ ಲೋಕನ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಸೋಮವಾರ ಸುತ್ತೂರು ಶ್ರೀಗಳ ಸಾನಿಧ್ಯದಲ್ಲಿ ನಡೆದ ಗುಲ್ಬರ್ಗಾ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಆರ್. ನಿರಂಜನ ಅವರ ಅಭಿನಂದನಾ ಸಮಾರಂಭ ದಲ್ಲಿ ಮಾತನಾಡಿ, ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಶೇ.18ರಷ್ಟಿದ್ದ ಅಕ್ಷರಸ್ಥರ ಪ್ರಮಾಣ ಪ್ರಸ್ತುತ ಶೇ.78ಕ್ಕೆ ಹೆಚ್ಚಿದೆ. ಹೀಗೆ ಶಿಕ್ಷಿತರ ಸಂಖ್ಯೆ ಹೆಚ್ಚುತ್ತಿದ್ದರೂ ವೈಚಾರಿಕತೆ ಹಾಗೂ ಮಾನವೀಯ…
ವಲ್ರ್ಡ್ ಹೆರಿಟೇಜ್‍ಗೆ ಮೈಸೂರು ದಸರಾ ಸೇರಿಸಲು ಚಿಂತನೆ
January 4, 2022ಮೈಸೂರು,ಜ.3(ಆರ್‍ಕೆ)-ವಲ್ರ್ಡ್ ಹೆರಿಟೇಜ್‍ಗೆ ಐತಿಹಾಸಿಕ ಮೈಸೂರು ದಸರಾವನ್ನು ಸೇರಿಸಲು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಚಿಂತನೆ ನಡೆಸಿದೆ. ಈ ಕುರಿತು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಪಾರಂಪರಿಕ ಇಲಾಖೆ ಆಯುಕ್ತರಾದ ಬಿ.ಆರ್.ಪೂರ್ಣಿಮಾ, ಯುನೆಸ್ಕೋ ದವರು ಪಶ್ಚಿಮಬಂಗಾಳದಲ್ಲಿ ನಡೆಯುವ ದುರ್ಗಾ ಪೂಜೆ ನಾಡಹಬ್ಬವನ್ನು ವಿಶ್ವ ಪಾರಂಪರಿಕ ತಾಣ (Woಡಿಟಜ ಊeಡಿiಣಚಿge Siಣe) ಎಂದು ಗುರ್ತಿಸಿರುವು ದರಿಂದ ಮೈಸೂರಿನ ದಸರಾ ಹಬ್ಬವನ್ನೂ ಆ ಸಾಲಿಗೆ ಸೇರಿಸಲು ಚಿಂತಿಸಲಾಗಿದೆ ಎಂದರು. ಕರ್ನಾಟಕದ ಹಂಪಿ, ಪಟ್ಟದ ಕಲ್ಲು ಇತಿಹಾಸ ಪ್ರಸಿದ್ಧ ಸ್ಥಳ ವನ್ನು…
ಇಂದಿನಿಂದ ಮಕ್ಕಳಿಗೆ ಲಸಿಕೆ
January 3, 2022ಮೈಸೂರು,ಜ.2(ಎಂಟಿವೈ)-ಕೊರೊನಾ ಮತ್ತು ಒಮಿ ಕ್ರಾನ್ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ನಾಳೆ(ಜ.3)ಯಿಂದ ಮೈಸೂರು ಜಿಲ್ಲೆಯಲ್ಲಿ 15ರಿಂದ 18 ವರ್ಷದೊಳಗಿನ 1,48,1 84 ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ದೊರೆ ಯಲಿದೆ. ಇದುವರೆವಿಗೂ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿತ್ತು. ಆದರೆ ಸೋಮವಾರದಿಂದ ಮಕ್ಕಳಿಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿರುವುದರಿಂದ ಮಕ್ಕಳಿಗೆ ಲಸಿಕೆ ಬಂದಿಲ್ಲ ಎಂಬ ಆತಂಕ ದೂರವಾದಂತಾಗಿದೆ. ರೂಪಾಂತರಿ ಒಮಿಕ್ರಾನ್ ಹಾಗೂ ಕೊರೊನಾ ಸೋಂಕು ರಾಜ್ಯ ಸೇರಿದಂತೆ ದೇಶ-ವಿದೇಶಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ 15ರಿಂದ 18ವರ್ಷದೊಳಗಿನ ಮಕ್ಕಳಿಗೆ…
ಅರಮನೆ ಆವರಣದ ಫಲಪುಷ್ಪ ಪ್ರದರ್ಶನಕ್ಕೆ ಆಕರ್ಷಕ ತೆರೆ
January 3, 2022ಮೈಸೂರು, ಜ.2(ಎಂಕೆ)- ಮೈಸೂರು ಅರಮನೆ ಆವರಣ ದಲ್ಲಿ ಪ್ರವಾಸಿಗರ ಕಣ್ಮನ ಸೆಳೆದ ‘ಅರಮನೆ ಫಲಪುಷ್ಟ ಪ್ರದರ್ಶನ-2021’ಕ್ಕೆ ಭಾನುವಾರ ತೆರೆಬಿದ್ದಿತು. ಕಳೆದ 9 ದಿನಗಳಿಂದ ಮೈಸೂ ರಿಗರನಷ್ಟೇ ಅಲ್ಲದೆ ನೆರೆ ರಾಜ್ಯಗಳು, ವಿದೇಶಿ ಪ್ರವಾಸಿಗರನ್ನು ಸೆಳೆದ ಅರಮನೆ ಫಲಪುಷ್ಪ ಪ್ರದರ್ಶನ ಮುಕ್ತಾಯಗೊಂಡಿದ್ದು, ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸುಮಾರು 15 ಸಾವಿರ ವಿಭಿನ್ನ ಬಗೆಯ ಪುಷ್ಪರಾಶಿಯೊಂದಿಗೆ ಅಲಂಕಾರಗೊಂಡಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಎಲ್ಲರ ನೆಚ್ಚಿನ ಅತ್ಯಾಕರ್ಷಣೆಯಾಗಿದ್ದ ‘ಶ್ರೀ ರಾಮ ಮಂದಿರ’, ಚಾಮುಂಡಿ ದೇವತೆ, ನಂದಿ ಮತ್ತು ಮಹಿಷಾಸುರ, ಜಯಚಾಮರಾಜ ಒಡೆಯರ್,…










