ಮೈಸೂರು, ಜೂ.19(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಶನಿವಾರ 594 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 898 ಸೋಂಕಿ ತರು ಗುಣ ಮುಖರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕು ಬಾಧಿತರ ಸಂಖ್ಯೆ 1,61,538ಕ್ಕೆ ಏರಿಕೆಯಾಗಿದ್ದು, ಈವರೆಗೆ 1,51,517 ಸೋಂಕಿತರು ಗುಣಮುಖರಾಗಿದ್ದಾರೆ. ಸಾಲಿಗ್ರಾಮದ 37 ವರ್ಷದ ವ್ಯಕ್ತಿ ಸೇರಿ 12 ಮಂದಿ ಪುರುಷರು, ಐವರು ಮಹಿಳೆಯರು ಸೇರಿ 17 ಮಂದಿ ಸೋಂಕಿ ತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 2 ಸಾವಿರ ಗಡಿ(1,996) ತಲು ಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8,025ಕ್ಕೆ…
ರಾಜ್ಯ ಬಿಜೆಪಿ ಆಡಳಿತದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ
June 20, 2021ಮೈಸೂರು,ಜೂ.19(ಪಿಎಂ)- ಬಿಜೆಪಿ ಯವರಿಗೆ ಅಧಿಕಾರ ಮುಖ್ಯವೇ ಹೊರತು, ಜನತೆ ಸಂಕಷ್ಟಕ್ಕೆ ಸ್ಪಂದಿಸುವುದು ಬೇಕಿಲ್ಲ. ರಾಜ್ಯ ಬಿಜೆಪಿ ಆಡಳಿತದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಷಾರ ನಡೆಯುತ್ತಿದ್ದು, ಮುಖ್ಯಮಂತ್ರಿ ಗಳ ವಿರುದ್ಧವೇ ಅವರ ಪಕ್ಷದವರೇ ನೇರ ಆರೋಪ ಮಾಡಿದರೂ ಕ್ರಮ ಕೈಗೊಳ್ಳುವ ಶಕ್ತಿ ಬಿಜೆಪಿ ವರಿಷ್ಠರಿಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಮಾಜಿ ಸಂಸದ ಆರ್.ಧ್ರುವನಾರಾಯಣ್ ವಾಗ್ದಾಳಿ ನಡೆಸಿದರು. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಯವರ ಜನ್ಮದಿನದ ಅಂಗವಾಗಿ ಮಹಿಳಾ ಕಾಂಗ್ರೆಸ್ ವತಿಯಿಂದ ಶನಿವಾರ ಹಮ್ಮಿ…
ಕೇರ್ಗಳ್ಳಿ ಸರ್ವೆ ನಂ.115ರಲ್ಲಿ ಇಲ್ಲದ 7 ಎಕರೆ ಭೂಮಿಗೆ ಪರಿಹಾರ ನೀಡಿರುವ ಮುಡಾ!
June 18, 2021ಮೈಸೂರು, ಜೂ.17(ಆರ್‍ಕೆ)- ಆರ್.ಟಿ.ನಗರ ವಸತಿ ಬಡಾವಣೆಗಾಗಿ ಈ ಹಿಂದೆ ಸ್ವಾಧೀನ ಪಡಿಸಿಕೊಂಡಿರುವ ಮೈಸೂರು ತಾಲೂಕು, ಕೇರ್ಗಳ್ಳಿ ಸರ್ವೆ ನಂಬರ್ 115ರಲ್ಲಿ ಭೌತಿಕವಾಗಿ ಲಭ್ಯವಿಲ್ಲದ 7 ಎಕರೆ ಭೂಮಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪರಿಹಾರ ನೀಡಲಾಗಿದೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ. ಪ್ರಾಧಿಕಾರದ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಅವರು, ಮೂಲ ಸರ್ವೆ ನಂ.115ರಲ್ಲಿ 166.20 ಎಕರೆ ಮತ್ತು ದುರಸ್ತಿಯಾಗಿರುವ ಹೊಸ ಸರ್ವೆ ನಂಬರ್‍ಗಳಲ್ಲಿ 63.25 ಎಕರೆ ಸೇರಿ ಒಟ್ಟು 230.05 ಎಕರೆಗೆ…
ಲಸಿಕೆ ಹಾಕುವುದರಲ್ಲಿ, ಕೋವಿಡ್ ಪರೀಕ್ಷೆಯಲ್ಲಿ ಶಾಸಕ ರಾಮದಾಸರಿಂದ `ಪಕ್ಷ’ಪಾತ: ಆರೋಪ
June 18, 2021ಮೈಸೂರು,ಜೂ.17(ಎಂಟಿವೈ)- ಮೈಸೂರಿನ ಕೆ.ಆರ್. ಕ್ಷೇತ್ರದಲ್ಲಿ ಶಾಸಕ ಎಸ್.ಎ.ರಾಮದಾಸ್ ಕೋವಿಡ್ ಪರೀಕ್ಷೆ ಹಾಗೂ ಲಸಿಕೆ ನೋಂದಣಿಗೆ ಸರ್ಕಾರಿ ಸವಲತ್ತು ಬಳಸಿ ಕೊಂಡು ಮತಗಟ್ಟೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಬಳಸಿ ಕೊಂಡು ಅಧಿಕಾರ ದುರ್ಬಳಕೆಯೊಂದಿಗೆ, ಕ್ಷೇತ್ರದ ಜನರ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆರೋಪಿಸಿದ್ದಾರೆ. ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಆರ್.ಕ್ಷೇತ್ರದಲ್ಲಿ ಎಲ್ಲರಿಗೂ ಲಸಿಕೆ ಕೊಡಿಸುವುದಾಗಿ, ರಾಜ್ಯದ 224 ಶಾಸಕರಲ್ಲಿ ಯಾರೂ ಹೇಳದ ಸುಳ್ಳನ್ನು ಕೆ.ಆರ್.ಕ್ಷೇತ್ರದ ಶಾಸಕರು ಹೇಳಿದ್ದಾರೆ. ಲಸಿಕೆ ದಾಸ್ತಾನು ಇಲ್ಲದೆ ಪರದಾಡುತ್ತಿದ್ದರೂ ಶಾಸಕ…
ಇಂದು `ಐಎಂಎ ರಾಷ್ಟ್ರೀಯ ಪ್ರತಿಭಟನಾ ದಿನ’ ಆಚರಣೆ
June 18, 2021ಮೈಸೂರು,ಜೂ.17(ಆರ್‍ಕೆಬಿ)- ಕೋವಿಡ್ -19 ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ವೈದ್ಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೈಹಿಕ ಮತ್ತು ಮಾನಸಿಕ ಹಲ್ಲೆ ತಡೆಗಟ್ಟಬೇಕು. ಆಧುನಿಕ ಔಷಧ ಮತ್ತು ಲಸಿಕೆಯ ವಿರುದ್ಧ ಉದ್ದೇಶಪೂರ್ವಕ ವಾಗಿ ತಪ್ಪು ಮಾಹಿತಿಗಳನ್ನು ಹರಡುತ್ತಿರು ವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವೃತ್ತಿ ಮತ್ತು ವೃತ್ತಿಪರರ ಮೇಲಿನ ಹಲ್ಲೆ ಯನ್ನು ನಿಲ್ಲಿಸಲು ವೈಯಕ್ತಿಕವಾಗಿ ಮಧ್ಯ ಪ್ರವೇಶಿಸಬೇಕು ಎಂದು ಭಾರತೀಯ ವೈದ್ಯರ ಸಂಘ (ಐಎಂಎ) ಪ್ರಧಾನಮಂತ್ರಿ ಗಳ ಮೊರೆ ಹೋಗಿದ್ದಾರೆ. ಸಾವಿರಾರು ಜನರ ಸೇವಾನಿರತ ಅನೇಕ ಯುವ…
ಲಾಕ್‍ಡೌನ್ ಬಳಿಕ `ವಿಧಾನಸೌಧ ಬಿಟ್ಟು ತೊಲಗಿ’ ಹೋರಾಟದ ಎಚ್ಚರಿಕೆ
June 18, 2021ಮೈಸೂರು, ಜೂ.17(ಆರ್‍ಕೆಬಿ)- ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು. 1 ವರ್ಷ ಸಾಲದ ಅವಧಿಯನ್ನು ವಿಸ್ತರಿಸಬೇಕು. ಕಬ್ಬಿನ ಬಾಕಿ ಕೊಡಬೇಕು. ಕಬ್ಬಿನ ಬೆಲೆ ನಿಗದಿಪಡಿಸಬೇಕು. ಚಾಮರಾಜನಗರ ದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಕುಟುಂ ಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು. ದುರಂತಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳ ಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಗುರುವಾರ ಮೈಸೂರು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ…
ಕೋವಿಡ್‍ನಿಂದ ನಷ್ಟ: ಹೋಟೆಲ್ ಉದ್ಯಮಕ್ಕೆ ನೆರವಾಗಲು ಉದ್ಯಮಿ ಎನ್.ಸಂದೇಶ್ ಸಿಎಂಗೆ ಮನವಿ
June 18, 2021ಮೈಸೂರು,ಜೂ.17(ಆರ್‍ಕೆಬಿ)-ಕೋವಿಡ್-19 ಸಂಕಷ್ಟಕ್ಕೆ ಒಳಗಾಗಿರುವ ಹೋಟೆಲ್ ಉದ್ಯಮಕ್ಕೆ, ಇಲ್ಲಿನ ಕೆಲಸಗಾರರು, ಪ್ರವಾಸಿ ಮಾರ್ಗದರ್ಶಕರಿಗೆ ಸರ್ಕಾರ ನೆರವು ಘೋಷಿಸುವಂತೆ ಹೋಟೆಲ್ ಉದ್ಯಮಿ ಎನ್.ಸಂದೇಶ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಹೋಟೆಲ್ ಉದ್ದಿಮೆ ಇಂದು ಒಂದು ಕೈಗಾ ರಿಕೋದ್ಯಮದಂತೆ ಬೆಳೆದು ನಿಂತಿದೆ. ಪ್ರವಾಸೋ ದ್ಯಮದ ಜೊತೆ ಜೊತೆಯಾಗಿ ರಾಜ್ಯದ ಖಜಾನೆಗೆ ಗಣನೀಯ ಪ್ರಮಾಣದಲ್ಲಿ ತನ್ನ ಪಾಲಿನ ಆರ್ಥಿಕ ಕೊಡುಗೆ ನೀಡುತ್ತಿದೆ. ಆದರೆ ಕೋವಿಡ್ ಪರಿಸ್ಥಿತಿ ಯಿಂದಾಗಿ ಕಳೆದ ಒಂದೂವರೆ ವರ್ಷದಿಂದ ಹೆಚ್ಚು ಕಡಿಮೆ ಮುಚ್ಚಿದಂತಿರುವ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಸರ್ಕಾರದ ಆದೇಶದ…
ಮೈಸೂರು ಜಿಲ್ಲೆ: ಕೊರೊನಾ ಹರಡುವಿಕೆ ನಿಯಂತ್ರಣ-ಟೆಸ್ಟ್ ಸಂಖ್ಯೆ ಇಳಿಕೆ
June 18, 2021ಮೈಸೂರು, ಜೂ.17(ಎಂಟಿವೈ)- ಮೈಸೂರು ಜಿಲ್ಲೆಯಲ್ಲಿ ಕೆಲ ದಿನಗಳಿಂದ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುತ್ತಿದ್ದು, ಇದೀಗ ಕೋವಿಡ್ ಟೆಸ್ಟ್‍ಗೆ ಬರುವವರ ಸಂಖ್ಯೆ ಯಲ್ಲೂ ಇಳಿಕೆಯಾಗಿದೆ. 1 ವಾರದಿಂದ ಕೋವಿಡ್ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಿದ್ದರೂ, ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ನಗರ, ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಜಿಲ್ಲಾಡಳಿತ 3-4 ದಿನದಿಂದ ಮತ್ತಷ್ಟು ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ತೆರೆದು ಪರೀಕ್ಷೆಯ ಪ್ರಮಾಣವನ್ನೂ ಹೆಚ್ಚಿಸಿದೆ. ಇದರಿಂದ ಈ ಹಿಂದೆ ಪರೀಕ್ಷಾ ಕೇಂದ್ರದ ಮುಂದೆ ಸಾಲುಗಟ್ಟಿರುತ್ತಿದ್ದ…
ಮೈಸೂರಲ್ಲಿ 10 ವರ್ಷದವರೆಗಿನ 4520 ಮಕ್ಕಳಿಗೆ ಕೊರೊನಾ
June 17, 2021ಮೈಸೂರು, ಜೂ.16-ಕೊರೊನಾ ಮೂರನೇ ಅಲೆ ಮಕ್ಕಳನ್ನು ಕಾಡುತ್ತದೆ ಎಂದು ತಜ್ಞರು ನೀಡಿರುವ ಎಚ್ಚರಿಕೆ ಬೆನ್ನಲ್ಲೇ ಕೊರೊನಾ ಒಂದು ಮತ್ತು ಎರಡನೇ ಅಲೆಯಲ್ಲಿ ಮೈಸೂರು ಜಿಲ್ಲೆ ಯಲ್ಲಿ 10 ವರ್ಷದೊಳಗಿನ 4520 ಮಕ್ಕಳು ಸೋಂಕಿಗೆ ಒಳಗಾಗಿದ್ದು, ಚೆಲು ವಾಂಬ ಆಸ್ಪತ್ರೆಯಲ್ಲಿ ದಾಖಲಾಗಿದ್ದ 13 ಮಕ್ಕಳು ಸಾವನ್ನಪ್ಪಿರುವುದು ಅಂಕಿ-ಅಂಶಗಳಿಂದ ದೃಢಪಟ್ಟಿದೆಯಾದರೂ, ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಮಕ್ಕಳು ಸೋಂಕಿಗೆ ಬಲಿಯಾಗಿದ್ದಾರೆ ಎಂಬು ದರ ವಿವರ ಮಾತ್ರ ಲಭ್ಯವಾಗಿಲ್ಲ. 2020ರ ಮಾರ್ಚ್ ತಿಂಗಳಿನಲ್ಲಿ ಕೊರೊನಾ ಒಂದನೇ ಅಲೆ ಪ್ರಾರಂಭ ವಾದರೆ, 2021ರ ಮಾರ್ಚ್‍ನಲ್ಲಿ…
ಕೊರೊನಾ ಹಾವಳಿ: ಕಾರುಗಳ ಮಾರಾಟಕ್ಕೂ ಕುತ್ತು
June 17, 2021ಮೈಸೂರು,ಜೂ. 16(ಆರ್‍ಕೆ)-ಮಹಾ ಮಾರಿ ಕೊರೊನಾ ವೈರಸ್ ಸೋಂಕಿ ನಿಂದ ದೇಶದ ಆರ್ಥಿಕ ಸ್ಥಿತಿ ಕುಸಿದಿದೆÀ. ಎಲ್ಲಾ ವಲಯಗಳಂತೆ ವಾಹನ ತಯಾರಿಕೆ ಮತ್ತು ಮಾರಾಟ ಕ್ಷೇತ್ರವೂ ನೆಲಕಚ್ಚಿದೆ. ಕಳೆದ ವರ್ಷದ ಕೊರೊನಾ ಮೊದಲ ಅಲೆಯ ಲಾಕ್‍ಡೌನ್ ನಿರ್ಬಂಧದಿಂದ ನಲುಗಿದ್ದ ಕಾರು ಉತ್ಪಾದನಾ ಕಂಪನಿಗಳು, ಆರ್ಥಿಕವಾಗಿ ಸ್ವಲ್ಪ ಚೇತರಿಸಿಕೊಳ್ಳುತ್ತಿರು ವಾಗಲೇ 2ನೇ ಅಲೆ ಅಪ್ಪಳಿಸಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೋವಿಡ್-19 ಲಾಕ್‍ಡೌನ್ ನಿರ್ಬಂಧÀ ದಿಂದಾಗಿ ಮೈಸೂರಿನ ಎಲ್ಲಾ ಕಾರ್ ಶೋರೂಂ ಮತ್ತು ಸರ್ವಿಸ್ ವಿಭಾಗಗಳು ಬಂದ್ ಆಗಿರುವುದರಿಂದ ಹೊಸ…










