ಮೈಸೂರು, ಜೂ.9- ಮೈಸೂರಿನ ಪ್ರತಿಷ್ಠಿತ `ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ’ಯ (ಕಾವಾ) ಸಂಸ್ಥಾಪಕ ಡೀನ್, ಖ್ಯಾತ ಕಲಾವಿದ ಪ್ರೊ. ವಿಶ್ವ ನಾಥ್ ಎಂ.ಶೋಲಾಪುರ್‍ಕರ್ (90) ವಯೋಸಹಜ ಕಾರಣಗಳಿಂದಾಗಿ ನಗರದ ವಿವಿ ಮೊಹಲ್ಲಾದಲ್ಲಿನ ತಮ್ಮ ನಿವಾಸದಲ್ಲಿ ಮಂಗಳವಾರ ಕೊನೆ ಯುಸಿರೆಳೆದರು. ಅವರು ಪತ್ನಿ ಸುಹಾಸಿನಿ, ಪುತ್ರಿಯ ರಾದ ಸುಚಿತ್ರ, ಸ್ವಾತಿ ಮತ್ತು ಪುತ್ರ ರವೀಂದ್ರ, ಸೊಸೆ ಸುನೇತ್ರ, ಮೊಮ್ಮಕ್ಕ ಳಾದ ಅಥರ್ವ, ಕಜ್ರಿ ಮತ್ತು ಅಪಾರ ಶಿಷ್ಯವೃಂದ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗೋಕುಲಂನಲ್ಲಿನ ಚಿರಶಾಂತಿಧಾಮ ದಲ್ಲಿ…
ಎಬಿವಿಪಿ ಆಕ್ಸಿಜನ್ ಚಾಲೆಂಜ್‍ಗೆ ಚಾಲನೆ
June 10, 2021ಮೈಸೂರು,ಜೂ.9(ಎಸ್‍ಪಿಎನ್)- ವಿಶ್ವ ಪರಿಸರ ದಿನದಂಗವಾಗಿ ಮೈಸೂರು ಗಾಂಧಿ ನಗರದ ಸಿದ್ದಾರ್ಥ ಕಾಲೇಜು ಆವರಣ ದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿ ಷತ್ (ಎಬಿವಿಪಿ) ಮೈಸೂರು ಘಟಕ ಆಯೋ ಜಿಸಿದ್ದ ರಾಜ್ಯಾದ್ಯಂತ 5 ಲಕ್ಷ ಸಸಿ ನೆಟ್ಟು, ಪೋಷಿಸುವ ‘ಆಕ್ಸಿಜನ್ ಚಾಲೆಂಜ್’ ಅಭಿಯಾನಕ್ಕೆ ಕರ್ನಾಟಕ ಸಾಹಿತ್ಯ ಅಕಾ ಡೆಮಿ ಅಧ್ಯಕ್ಷ ಬಿ.ವಿ.ವಸಂತ್‍ಕುಮಾರ್ ಬುಧವಾರ ಚಾಲನೆ ನೀಡಿದರು. ಕೊರೊನಾ ಸಂಕಷ್ಟದಲ್ಲೂ ಯುವ ಜನತೆ ಹಸಿರೀಕರಣಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಗಿಡ ನೆಟ್ಟು ಪೋಷಿಸುವುದು ಜನಕಲ್ಯಾಣಕ್ಕಾಗಿ ಎಂಬುದನ್ನು ತಿಳಿದು ಪ್ರತಿಯೊಬ್ಬರು ಈ…
ರಾಜ್ಯದಲ್ಲಿ ಕೊರೊನಾ ಸೋಂಕಿತರು, ಸಾವಿನ ಸಂಖ್ಯೆ ಇಳಿಮುಖ
June 10, 2021ಮೈಸೂರು, ಜೂ.9(ವೈಡಿಎಸ್)- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯ ಜೊತೆಗೆ ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿದೆ. ರಾಜ್ಯ ದಲ್ಲಿ ಬುಧವಾರ 10,959 ಮಂದಿಗೆ ಸೋಂಕು ತಗುಲಿದ್ದು, 20,246 ಮಂದಿ ಗುಣಮುಖ ರಾಗಿದ್ದಾರೆ. ಮೈಸೂರಿನ 22 ಮಂದಿ ಸೇರಿದಂತೆ ರಾಜ್ಯದಲ್ಲಿ 192 ಮಂದಿ ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಬುಧವಾರ 1,163 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 1,045 ಮಂದಿ ಗುಣ ಕಂಡಿದ್ದು, ಈವರೆಗೆ 1,38,304 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 1,54,235 ಮಂದಿಗೆ ಸೋಂಕು ತಗುಲಿದೆ. ಈವರೆಗೆ 1,776 ಮಂದಿ ಸಾವನ್ನಪ್ಪಿದ್ದು, ಜಿಲ್ಲೆ…
ನೈಋತ್ಯ ರೈಲ್ವೆ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ 18ರಿಂದ 44 ವರ್ಷದೊಳಗಿನ ಸಿಬ್ಬಂದಿಗೆ ಕೋವಿಡ್ ಮೊದಲ ಡೋಸ್ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ
June 10, 2021ಮೈಸೂರು, ಜೂ.9(ಪಿಎಂ)- ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಯ 18ರಿಂದ 44 ವರ್ಷದೊಳಗಿನ ರೈಲ್ವೆ ಸಿಬ್ಬಂದಿಗೆ ಕೆಲಸದ ಸ್ಥಳದಲ್ಲೇ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆಗೆ ಮಂಗಳವಾರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಚಾಲನೆ ನೀಡಿದರು. ಮೈಸೂರಿನ ವಿಭಾಗೀಯ ಕಚೇರಿ ಆವರಣದಲ್ಲಿ ಲಸಿಕಾ ಕೌಂಟರ್ ತೆರೆಯಲಾಗಿದ್ದು, ಇಲ್ಲಿ ಇಂದು ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಅಲ್ಲದೆ, ವಿಭಾಗೀಯ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಲ್ಲೂ ಈ ಪ್ರಕ್ರಿಯೆ ಇಂದಿನಿಂದ ಆರಂಭವಾಯಿತು. ಮೈಸೂರಿನಲ್ಲಿ ಲಸಿಕೆ ಪ್ರಕ್ರಿಯೆಗೆ…
ಖಾಸಗಿ ಕೋವಿಡ್ ಕ್ಲಿನಿಕ್ ಆರಂಭ
June 10, 2021ಮೈಸೂರು,ಜೂ.9(ಪಿಎಂ)- ಲಕ್ಷಣ ರಹಿತ ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ಕಲ್ಪಿಸಲು ಹಿನಕಲ್ ಗ್ರಾಪಂ ವ್ಯಾಪ್ತಿ ಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಜಿಲ್ಲೆಯ ಮೊದಲ ಖಾಸಗಿ ಕೋವಿಡ್ ಕ್ಲಿನಿಕ್ ಆರಂಭಿಸಲಾಗಿದೆ. ಹಿನಕಲ್‍ನ ಹುಣಸೂರು ಮುಖ್ಯ ರಸ್ತೆ ಯಲ್ಲಿ `ಶ್ರೀ ಸಿದ್ದರಾಮಯ್ಯ ಕೋವಿಡ್ ಪ್ರಾಥ ಮಿಕ ಉಚಿತ ಚಿಕಿತ್ಸಾ ಕೇಂದ್ರ’ ಶೀರ್ಷಿಕೆ ಯಡಿ ಜಿಪಂ ಸದಸ್ಯ ರಾಕೇಶ್ ಪಾಪಣ್ಣ ನೇತೃತ್ವದಲ್ಲಿ ಆರಂಭಿಸಿರುವ ಈ ಕ್ಲಿನಿಕ್ ಅನ್ನು ಬುಧವಾರ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,…
ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
June 10, 2021ಮೈಸೂರು, ಜೂ.9(ಎಂಟಿವೈ)- ಕೊರೊನಾ ಹಾವಳಿ ಹಾಗೂ ಲಾಕ್‍ಡೌನ್‍ನಿಂದ ಜನರು ತತ್ತರಿಸಿರುವ ಸಂದರ್ಭದಲ್ಲೇ ಇಂಧನ ಬೆಲೆ ಹೆಚ್ಚಳ ಮಾಡುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ದೂಡಿವೆ ಎಂದು ಆರೋಪಿಸಿ ಕನ್ನಡ ಚಳವಳಿಗಾರ ಮೂಗೂರು ನಂಜುಂಡಸ್ವಾಮಿ ಪ್ರತಿಭಟನೆ ನಡೆಸಿದರು. ಮೈಸೂರಿನ ನ್ಯಾಯಾಲಯ ಮುಂಭಾಗದ ಮಹಾತ್ಮ ಗಾಂಧಿ ಪುತ್ಥಳಿ ಮುಂದೆ ಪೆಟ್ರೋಲ್ ದರ ಹೆಚ್ಚಳ ಸಂಬಂಧ ಭಿತ್ತಿಪಲಕ ಪ್ರದರ್ಶಿಸುವ ಮೂಲಕ ಇಂಧನ ಬೆಲೆ ಹೆಚ್ಚಳವನ್ನು ಖಂಡಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ…
ಮೇಯರ್ ಚುನಾವಣೆ; ಬಿಜೆಪಿ ಪೂರ್ವಭಾವಿ ಸಭೆ
June 10, 2021ಮೈಸೂರು, ಜೂ.9(ಎಸ್‍ಪಿಎನ್)- ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಸಂಬಂಧ ಬಿಜೆಪಿ ಮೈಸೂರು ವಿಭಾಗ ಪ್ರಭಾರಿ ಎಂ.ವಿ.ರವಿ ಶಂಕರ್ ನೇತೃತ್ವದಲ್ಲಿ ಪಾಲಿಕೆ ಸದಸ್ಯರು ಮತ್ತಿತರೆ ಮುಖಂಡರು ಬುಧವಾರ ಪೂರ್ವ ಭಾವಿ ಸಭೆ ಸೇರಿ ಮಾತುಕತೆ ನಡೆಸಿದರು. ಜೂ.11ರಂದು ನಡೆಯಲಿರುವ ಪಾಲಿಕೆ ಮೇಯರ್ ಚುನಾವಣೆ ಸಂಬಂಧ ಚಾಮ ರಾಜಪುರಂನಲ್ಲಿರುವ ಬಿಜೆಪಿ ಕಚೇರಿ ಯಲ್ಲಿ ಸಭೆ ಸೇರಿ ಯಾರನ್ನು ಅಭ್ಯರ್ಥಿ ಯಾಗಿಸಬೇಕು ಎಂಬುದೂ ಸೇರಿದಂತೆ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆ ಯಿತು ಎಂದು ಪಕ್ಷದ ಮುಖಂಡರೊಬ್ಬರು `ಮೈಸೂರು ಮಿತ್ರ’ನಿಗೆ ಮಾಹಿತಿ…
ಇಂದಿರಾ ಕ್ಯಾಂಟೀನ್ ವಂಚನೆ: ಶಾಸಕ ರಾಮದಾಸ್ ಆರೋಪ
June 10, 2021ಮೈಸೂರು,ಜೂ.9(ಎಂಟಿವೈ)- ಇಂದಿರಾ ಕ್ಯಾಂಟೀನ್ ಮೂಲಕ ಕೊರೊನಾ ಸಂತ್ರಸ್ತರಿಗೆ ಆಹಾರ ಸರಬ ರಾಜು ಮಾಡುವುದರಲ್ಲಿ ಸುಳ್ಳು ಲೆಕ್ಕ ನೀಡಿ ವಂಚಿಸ ಲಾಗುತ್ತಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಬುಧವಾರ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನ ವಿವಿಧೆಡೆ ಇರುವ ಇಂದಿರಾ ಕ್ಯಾಂಟೀನ್‍ಗಳು, ಅಡುಗೆ ಮನೆ ಹಾಗೂ ಗೋದಾ ಮಿಗೆ ತೆರಳಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಸಕರು, ಮೈಸೂರಲ್ಲಿರುವ ಇಂದಿರಾ ಕ್ಯಾಂಟೀನ್‍ಗಳ ಕುರಿತು ದೂರು ಕೇಳಿ ಬಂದ ಹಿನ್ನೆಲೆ ಯಲ್ಲಿ ಇಂದು ಎಲ್ಲಾ ಇಂದಿರಾ ಕ್ಯಾಂಟೀನ್, ಅಡುಗೆ ತಯಾರಿಕಾ ಘಟಕ…
ಮನೆ ಮನೆಗೆ ಭೇಟಿ ನೀಡಿ ಕೋವಿಡ್ ಜಾಗೃತಿ ಮೂಡಿಸಿದ ಮಾಜಿ ಶಾಸಕ ಎಂಕೆಎಸ್
June 9, 2021ಮೈಸೂರು,ಜೂ.8(ಪಿಎಂ)- ಮೈಸೂರಿನ ಕೆಆರ್ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಜಿ ಶಾಸಕ ಎಂ.ಕೆ. ಸೋಮ ಶೇಖರ್ ಮಂಗಳವಾರ ಮನೆ ಮನೆಗೆ ಭೇಟಿ ನೀಡಿ, ಕೋವಿಡ್ ಸೋಂಕು ಸಂಬಂಧ ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿ ದರಲ್ಲದೆ, ತಪ್ಪದೇ ಎಲ್ಲರೂ ಕೋವಿಡ್ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಿದರು. ನಗರದ ಕುರುಬಾರಹಳ್ಳಿ, ಜೆಸಿ ನಗರ ಮತ್ತು ಸಿದ್ದಾರ್ಥ ನಗರದಲ್ಲಿ ಮನೆ ಮನೆಗೆ ಇಂದು ಮುಂಜಾನೆಯೇ ಭೇಟಿ ನೀಡಿದ ಅವರು, ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ತಪ್ಪದೇ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆ…
ಹೆಚ್‍ಡಿ ಕೋಟೆ, ಸರಗೂರು ತಾಲೂಕುಗಳ ಕೆಲ ಗ್ರಾಪಂಗೆ ಜಿಪಂ ಸಿಇಓ ಭೇಟಿ ಕೋವಿಡ್ ನಿರ್ವಹಣೆ ಸಂಬಂಧ ಪರಿಶೀಲನೆ
June 9, 2021ಮೈಸೂರು,ಜೂ.8(ಪಿಎಂ)- ಹೆಚ್‍ಡಿ ಕೋಟೆ ಹಾಗೂ ಸರಗೂರು ತಾಲೂಕು ಗಳ ಕೆಲ ಗ್ರಾಪಂಗಳಿಗೆ ಮಂಗಳವಾರ ಭೇಟಿ ನೀಡಿದ ಜಿಪಂ ಸಿಇಓ ಎ.ಎಂ. ಯೋಗೀಶ್, ಕೋವಿಡ್ ನಿರ್ವಹಣೆ ಕುರಿತು ಪರಿ ಶೀಲನೆ ನಡೆಸಿದರು. ಹೆಚ್‍ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮ ಪಂಚಾ ಯಿತಿಯಲ್ಲಿ ಕೋವಿಡ್ ಅಂಕಿ-ಅಂಶ ಬಗ್ಗೆ ಮಾಹಿತಿ ಪಡೆದ ಎ.ಎಂ.ಯೋಗೀಶ್, ನರೇಗಾ ಯೋಜನೆ ಕಾಮಗಾರಿಗಳ ಬಗ್ಗೆಯೂ ಪರಿಶೀಲನೆ ನಡೆಸಿದರು. ಸರಗೂರು ತಾಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಅಲ್ಲಿನ ಕೋವಿಡ್ ಅಂಕಿ-ಅಂಶ ಮಾಹಿತಿ ಪಡೆದರು. ಇದೇ ವೇಳೆ…










