ಮೈಸೂರು

ಮೈಸೂರು ರೈಲ್ವೆ ಮ್ಯೂಸಿಯಂ `ವರ್ಚುವಲ್ ಟೂರ್’
ಮೈಸೂರು

ಮೈಸೂರು ರೈಲ್ವೆ ಮ್ಯೂಸಿಯಂ `ವರ್ಚುವಲ್ ಟೂರ್’

September 3, 2020

ಮೈಸೂರು, ಸೆ.2(ಆರ್‍ಕೆಬಿ)- ಮೈಸೂರು ವಿಭಾ ಗೀಯ ರೈಲ್ವೆ ಅಭಿವೃದ್ಧಿಪಡಿಸಿದ ವೆಬ್‍ಸೈಟ್ ಮೂಲಕ ವಿಶ್ವದೆಲ್ಲೆಡೆಯಿಂದ ರೈಲ್ವೆ ಮ್ಯೂಸಿಯಂ ವೀಕ್ಷಿಸಬಹು ದಾದ `ವರ್ಚುವಲ್ ಟೂರ್’ ಬುಧವಾರ ಆರಂಭ ವಾಗಿದೆ. 4 ದಶಕಗಳ ಇತಿಹಾಸವಿರುವ ರೈಲ್ವೆ ಮ್ಯೂಸಿಯಂ ಪ್ರವಾಸಿಗರನ್ನು ಆಕರ್ಷಿಸಲು ನವೀಕೃತ ಮ್ಯೂಸಿಯಂ ವೆಬ್‍ಸೈಟ್ ರೂಪಿಸಿದೆ. ಬ್ರಿಟಿಷರ ಕಾಲದ ಉಗಿಬಂಡಿ, ಡೀಸೆಲ್-ವಿದ್ಯುತ್ ಲೋಕೋಮೋಟಿವ್, ಸ್ಟೀಮ್ ಪಂಪ್, ರಾಯಲ್ ಸಲೂನ್, ಸಿಗ್ನಲ್ ದೀಪ, ಮೈಸೂರ್ ಸ್ಟೇಟ್ ರೈಲ್ವೆ ಮೀಟರ್ ಗೇಜ್ ಜಿ ಟೈಪ್ ಡೈನಿಂಗ್ ಸಲೂನ್, ಟ್ಯಾಂಕ್ ಇಂಜಿನ್, ಮೈಸೂರ್ ಮಹಾರಾಣೀಸ್ ಸಲೂನ್…

ದಸರಾ ಉನ್ನತ ಮಟ್ಟದ ಸಮಿತಿ ನಿರ್ಧಾರಕ್ಕೆ: ಪ್ರತಾಪ್ ಸಿಂಹ
ಮೈಸೂರು

ದಸರಾ ಉನ್ನತ ಮಟ್ಟದ ಸಮಿತಿ ನಿರ್ಧಾರಕ್ಕೆ: ಪ್ರತಾಪ್ ಸಿಂಹ

September 3, 2020

ಮೈಸೂರು, ಸೆ.2(ಆರ್‍ಕೆಬಿ)- ಕೊರೊನಾ ಸಂಕಷ್ಟ ಸ್ಥಿತಿಯಲ್ಲಿ ಈ ಬಾರಿಯ ದಸರೆಯನ್ನು ಸರಳವಾಗಿ ಆಚರಿಸಬೇಕೇ? ಅಥವಾ ಕಳೆದ ವರ್ಷದಂತೆ ವಿಜೃಂಭಣೆಯಿಂದ ಆಚರಿಸಬೇಕೇ? ಎಂಬುದನ್ನು ದಸರಾ ಉನ್ನತ ಮಟ್ಟದ ಸಮಿತಿ ತೀರ್ಮಾನಿಸಲಿದೆ. ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲಿ ದಸರಾ ಆಚರಣೆ ತೀರ್ಮಾನ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದರು. ರೈಲ್ವೆ ಮ್ಯೂಸಿಯಂಗೆ ಬುಧವಾರ ಭೇಟಿ ನೀಡಿದ್ದ ಅವರು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ, ಕಳೆದ ಬಾರಿ ವಿ.ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದು ಕೇವಲ ಒಂದು ತಿಂಗಳಲ್ಲಿ ಮೈಸೂರು ಹಿಂದೆಂದೂ ಕಂಡರಿಯದಂತಹ ದಸರಾವನ್ನು…

ಜಿಎಸ್‍ಟಿ ವಿಚಾರ: 18289 ಕೋಟಿ ರೂ. ಪರಿಹಾರ ಪಡೆಯಲು ರಾಜ್ಯ ಸರ್ಕಾರ ನಿರ್ಧಾರ
ಮೈಸೂರು

ಜಿಎಸ್‍ಟಿ ವಿಚಾರ: 18289 ಕೋಟಿ ರೂ. ಪರಿಹಾರ ಪಡೆಯಲು ರಾಜ್ಯ ಸರ್ಕಾರ ನಿರ್ಧಾರ

September 3, 2020

ಬೆಂಗಳೂರು, ಸೆ.2(ಕೆಎಂಶಿ)- ಜಿಎಸ್‍ಟಿ ಪರಿಹಾರದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡಿದ ಎರಡು ಆಯ್ಕೆಗಳ ಮೌಲ್ಯಮಾಪನದ ನಂತರ ರಾಜ್ಯ ಸರ್ಕಾರವು ಆಯ್ಕೆ ಒಂದರ ಅಡಿಯಲ್ಲಿ ಒಟ್ಟು 18289 ಕೋಟಿ ರೂ ಪರಿಹಾರ ಪಡೆಯುವುದನ್ನು ತನ್ನ ಆದ್ಯತೆಯನ್ನಾಗಿ ತೀರ್ಮಾನಿಸಿದೆ ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ ಜಿಎಸ್ಟಿ ಸಂಬಂಧ ಪ್ರತಿಪಕ್ಷದ ನಾಯಕರು ನೀಡಿದ ಹೇಳಿಕೆ ಬೆನ್ನಲ್ಲೇ ಮುಖ್ಯಮಂತ್ರಿ ಅವರು ಪತ್ರಿಕಾ ಹೇಳಿಕೆ ನೀಡಿ ಪ್ರಸ್ತುತ ಹಣಕಾಸು ವರ್ಷದಲ್ಲಿ ಇದು ಸಹಕಾರಿಯಾಗಲಿದೆ ಎಂದಿದ್ದಾರೆ. ಜಿಎಸ್ಟಿಯಲ್ಲಿ ಪಾವತಿಸಬೇಕಾದ ಸಂಪೂರ್ಣ ಪರಿಹಾರದ ಅರ್ಹತೆಗೆ ಸಂಬಂಧಿಸಿದಂತೆ…

ಬೆಂಗಳೂರು ಗಲಭೆ ಪ್ರಕರಣ ಬಂಧಿತ ಅಮಾಯಕರ ಬಿಡುಗಡೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ
ಮೈಸೂರು

ಬೆಂಗಳೂರು ಗಲಭೆ ಪ್ರಕರಣ ಬಂಧಿತ ಅಮಾಯಕರ ಬಿಡುಗಡೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

September 3, 2020

ಬೆಂಗಳೂರು,ಸೆ.2(ಕೆಎಂಶಿ)- ನಗ ರದ ಡಿಜೆಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಘಟನೆ ಯಲ್ಲಿ ಪೆÇಲೀಸರು ಬಂಧಿ ಸಿರುವವರಲ್ಲಿ ಅಮಾಯ ಕರನ್ನು ಬಿಡುಗಡೆಗೊಳಿಸು ವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಅಮಾ ಯಕರನ್ನು ಬಂಧಿಸಲಾಗಿದೆ ಎಂದು ನನಗೆ ಮಾಹಿತಿ ದೊರೆತಿದೆ. ಅಂಥವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲದಿದ್ದರೆ ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದಾರೆ. ಘಟನೆಗೆ ಕಾರಣಕರ್ತರಾಗಿದ್ದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ಇದುವರೆಗೂ 380 ಮಂದಿಯನ್ನು ಬಂಧಿಸಿದ್ದು, ಅವ…

ಎಂಟು ವರ್ಷದ ಹಿಂದೆ ಟಿಬೆಟಿಯನ್ ಯುವಕನ ಕೊಲೆ ಯತ್ನ: ಕೊನೆಗೂ ಮೂವರು ಆರೋಪಿಗಳ ಸೆರೆ
ಮೈಸೂರು

ಎಂಟು ವರ್ಷದ ಹಿಂದೆ ಟಿಬೆಟಿಯನ್ ಯುವಕನ ಕೊಲೆ ಯತ್ನ: ಕೊನೆಗೂ ಮೂವರು ಆರೋಪಿಗಳ ಸೆರೆ

September 3, 2020

ಮೈಸೂರು, ಸೆ.2(ಆರ್‍ಕೆ)- ಡ್ರ್ಯಾಗರ್‍ನಿಂದ ಟಿಬೆಟಿಯನ್ ಯುವಕನ ಬೆನ್ನಿಗೆ ಇರಿದು, ಆತನ ಹತ್ಯೆಗೆ ಯತ್ನಿಸಿ, ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೂವರು ಆರೋಪಿ ಗಳನ್ನು ಮೈಸೂರಿನ ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಗಾಂಧಿನಗರ 2ನೇ ಕ್ರಾಸ್ ನಿವಾಸಿ ರಫೀಕ್ ಅಹಮದ್ ಮಗ ಸಲೀಮ ಪಾಷ(28), ಎನ್.ಆರ್. ಮೊಹಲ್ಲಾ, ಸೆಂಟ್ ಮೆರೀಸ್ ರಸ್ತೆ 12ನೇ ಕ್ರಾಸ್ ನಿವಾಸಿ ಲೇಟ್ ಮುಕ್ತಾರ್‍ಪಾಷನ ಮಗ ಸಲ್ಮಾನ್ ಪಾಷ(29) ಹಾಗೂ ಲಷ್ಕರ್ ಮೊಹಲ್ಲಾದ ಮೊಹಮದ್ ಸೇಠ್ ಬ್ಲಾಕ್, ಹೈದರ್ ಅಲಿ ಮುಖ್ಯ ರಸ್ತೆ…

2 ಕೆಜಿ ಚಿನ್ನಾಭರಣ ಕಳವು, ವೃದ್ಧ ದಂಪತಿ ದೋಚಿದ ಪ್ರಕರಣ ಶೀಘ್ರ ಬಯಲು
ಮೈಸೂರು

2 ಕೆಜಿ ಚಿನ್ನಾಭರಣ ಕಳವು, ವೃದ್ಧ ದಂಪತಿ ದೋಚಿದ ಪ್ರಕರಣ ಶೀಘ್ರ ಬಯಲು

September 3, 2020

ಮೈಸೂರು,ಸೆ.2(ಆರ್‍ಕೆ)- ಮೈಸೂರು ಸರಸ್ವತಿಪುರಂನ ಮನೆಯೊಂದರಲ್ಲಿ 2 ಕೆಜಿ ಚಿನ್ನಾಭರಣ ಕಳವು ಮತ್ತು ವಿವೇಕಾ ನಂದನಗರದಲ್ಲಿ ಬೆಳ್ಳಂಬೆಳಗ್ಗೆ ವೃದ್ಧ ದಂಪತಿ ಕಟ್ಟಿಹಾಕಿ ಆಭರಣ ದೋಚಿದ್ದ ಪ್ರಕರಣಗಳ ತನಿಖೆ ತೀವ್ರಗೊಂಡಿದ್ದು, ಅತೀ ಶೀಘ್ರ ಆರೋಪಿಗಳ ಬಂಧಿಸು ವುದಾಗಿ ಡಿಸಿಪಿ ಡಾ.ಎ.ಎನ್. ಪ್ರಕಾಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನ ದೇವರಾಜ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಪ್ರಕರಣಗಳ ಸಂಬಂಧ ಸಿಸಿ ಕ್ಯಾಮರಾಗಳಲ್ಲಿ ಲಭ್ಯವಾದ ಫುಟೇ ಜಸ್‍ಗಳನ್ನು ಕಲೆ ಹಾಕಿ ಸುಳಿವಿನ ಜಾಡು ಹಿಡಿದು ಖದೀಮರ ಪತ್ತೆಗೆ ಜಾಲ ಬೀಸ ಲಾಗಿದೆ….

ತನ್ನ ರಕ್ಷಣೆಗಿದ್ದ ಡ್ರ್ಯಾಗರ್‍ನಿಂದ ತಾನೇ ಬಲಿಯಾದ!
ಮೈಸೂರು

ತನ್ನ ರಕ್ಷಣೆಗಿದ್ದ ಡ್ರ್ಯಾಗರ್‍ನಿಂದ ತಾನೇ ಬಲಿಯಾದ!

September 3, 2020

ಮೈಸೂರು, ಸೆ. 2(ಆರ್‍ಕೆ)- ಮಂಗಳವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಇರಿದು ಹತ್ಯೆಗೈದಿದ್ದ ಆರೋಪಿಯನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ವಿಜಯನಗರ ಠಾಣೆ ಪೊಲೀ ಸರು ಬಂಧಿಸಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪರಾರಿಯಾಗಿದ್ದ ಕೊಲೆ ಆರೋಪಿಯನ್ನು ಮಂಗಳವಾರ ರಾತ್ರಿಯೇ ಬಂಧಿಸಿದ್ದಾರೆ. ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಒಂದು ವಾರದ ಹಿಂದೆ ಕೊಲೆಯಾದ ಚಿರಂತ್ ಹಾಗೂ ಕೊಲೆ ಮಾಡಿದ ಮನೋಜ್ ನಡುವೆ ಜಗಳ ನಡೆದಿತ್ತು. ಆ ಹಿನ್ನೆಲೆಯಲ್ಲಿ ಸಮಯ ಕಾಯುತ್ತಿದ್ದ ಮನೋಜ್ ಮಂಗಳವಾರ ರಾತ್ರಿ ವಿಜಯನಗರ…

ನೇರ ವೇತನ ಪಾವತಿಗೆ ಆಗ್ರಹಿಸಿ ನಗರ ಸ್ಥಳೀಯ ಸಂಸ್ಥೆಗಳ ತ್ಯಾಜ್ಯ ವಾಹನ ಚಾಲಕರ ಪ್ರತಿಭಟನೆ
ಮೈಸೂರು

ನೇರ ವೇತನ ಪಾವತಿಗೆ ಆಗ್ರಹಿಸಿ ನಗರ ಸ್ಥಳೀಯ ಸಂಸ್ಥೆಗಳ ತ್ಯಾಜ್ಯ ವಾಹನ ಚಾಲಕರ ಪ್ರತಿಭಟನೆ

September 3, 2020

ಮೈಸೂರು, ಸೆ.2(ಪಿಎಂ)- ನೇರ ವೇತನ ಪಾವತಿಗೆ ಆಗ್ರಹಿಸಿ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾ ಯಿತಿಯ ಹೊರಗುತ್ತಿಗೆ ವಾಹನ ಚಾಲಕರ ಸಂಘದ ಮೈಸೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ವಾಹನ ಚಾಲಕರು ಬುಧ ವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ, ಮೈಸೂರು ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಮಂದಿ ಹೊರ ಗುತ್ತಿಗೆ ಆಧಾರದ ವಾಹನ ಚಾಲಕರಿದ್ದೇವೆ. ತ್ಯಾಜ್ಯದ ವಾಹನಗಳನ್ನು…

ಡ್ರಗ್ಸ್ ದಂಧೆ ಕೂಡ ಭಯೋತ್ಪಾದನೆಯ ಒಂದು ಭಾಗ: ಸಂಸದ ಪ್ರತಾಪ್ ಸಿಂಹ
ಮೈಸೂರು

ಡ್ರಗ್ಸ್ ದಂಧೆ ಕೂಡ ಭಯೋತ್ಪಾದನೆಯ ಒಂದು ಭಾಗ: ಸಂಸದ ಪ್ರತಾಪ್ ಸಿಂಹ

September 3, 2020

ಮೈಸೂರು, ಸೆ.2(ಆರ್‍ಕೆಬಿ)- ಡ್ರಗ್ಸ್(ಮಾದಕ ದ್ರವ್ಯ) ದಂಧೆ ಭಯೋತ್ಪಾದನೆಯ ಒಂದು ಭಾಗ. ಈ ದಂಧೆಯನ್ನು ನಿರ್ನಾಮ ಮಾಡದಿದ್ದರೆ ದೇಶಕ್ಕೆ ಅಪಾಯ ಎಂದು ಮೈಸೂರು-ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು. ಒಂದು ದೇಶವನ್ನು ಹಾಳು ಮಾಡಲು ಬಾಂಬ್ ಹಾಕಬೇಕೆಂದೇನಿಲ್ಲ, ಕ್ಷಿಪಣಿ ಹಾರಿಸುವಂತೇನಿಲ್ಲ. ಆ ದೇಶದ ಯುವಕರನ್ನು ಮಾದಕ ವ್ಯಸನಿಗಳಾಗಿ ಮಾಡಿ ದರೆ ಅವರ ಕುಟುಂಬ, ತಲೆಮಾರು ನಾಶವಾಗುತ್ತದೆ. ಅಂತಹ ಕೆಟ್ಟ ಬೆಳವಣಿಗೆ ಇದು. ವಿವಿಧ ವಿರೋಧಿ ರಾಷ್ಟ್ರಗಳ ಮೂಲಕ ಭಾರತಕ್ಕೆ ಡ್ರಗ್ಸ್ ತಂದು ಹಂಚಲಾಗುತ್ತಿದೆ ಎಂದರು….

ಸೆ.5ರಂದು ರಾಜ್ಯ ಮಟ್ಟದ ವಿಚಾರ ಸಂಕಿರಣ
ಮೈಸೂರು

ಸೆ.5ರಂದು ರಾಜ್ಯ ಮಟ್ಟದ ವಿಚಾರ ಸಂಕಿರಣ

September 3, 2020

ಮೈಸೂರು, ಸೆ.2(ಎಂಟಿವೈ)- ಭೂ ಸುಧಾರಣಾ ಕಾಯಿದೆ ತಿದ್ದುಪಡಿ: ಖಾಸಗೀ ಕರಣ ನೀತಿ ಪರಿಣಾಮ ಮತ್ತು ಸವಾಲು ಗಳು ಕುರಿತು ಸೆ.5ರಂದು ಮೈಸೂರಿನಲ್ಲಿ ರಾಜ್ಯ ಮಟ್ಟದ ವಿಚಾರಗೋಷ್ಠಿ-ಸಂವಾದ ನಡೆಯಲಿದ್ದು, ಸಿದ್ದಾರ್ಥ ನಗರದ ಕನಕ ಸಮುದಾಯ ಭವನದಲ್ಲಿ ಸೆ.5ರ ಬೆಳಗ್ಗೆ 10.30ಕ್ಕೆ ಉದ್ಘಾಟನೆ ನಡೆಯಲಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ಬುಧ ವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯ ರೈತ ಸಂಘ-ಹಸಿರುಸೇನೆ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಸ್ವರಾಜ್ ಇಂಡಿಯಾ, ಜನಾಂದೋಲನ ಮಹಾ ಮೈತ್ರಿ,…

1 445 446 447 448 449 1,611
Translate »