ಮೈಸೂರು, ಜು.6 (ಆರ್‍ಕೆಬಿ)- ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯ ರಾಮಕೃಷ್ಣ ಆಶ್ರಮದ ಉದ್ದೇಶಿತ `ಸ್ವಾಮಿ ವಿವೇಕಾನಂದ ಸಾಂಸ್ಕøತಿಕ ಯುವ ಕೇಂದ್ರ – ವಿವೇಕ ಸ್ಮಾರಕ’ದ ನಿರ್ಮಾಣಕ್ಕೆ ಇಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರ ಸಮ್ಮುಖದಲ್ಲಿ ಭೂಮಿ ಪೂಜೆ ನೆರ ವೇರಿಸಲಾಯಿತು. ರಾಮಕೃಷ್ಣ ಆಶ್ರಮದ ಯತಿಗಳು ನಡೆಸಿದ ಹೋಮದೊಂದಿಗೆ ಶಂಕು ಸ್ಥಾಪನೆ ಕಾರ್ಯ ಆರಂಭವಾಯಿತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಶಂಕುಸ್ಥಾಪನೆ ನೆರವೇರಿಸಿದರು….
ಮೈಸೂರಿಗೆ ವಿವೇಕ ಸ್ಮಾರಕ ಕಳಶಪ್ರಾಯ
July 7, 2022ಮೈಸೂರು, ಜು.6 (ಆರ್‍ಕೆಬಿ)- ನೂರಾರು ಜನರ ಹೋರಾಟದ ಫಲವಾಗಿ ಇಂದು ಶಂಕುಸ್ಥಾಪನೆಗೊಂಡಿರುವ `ವಿವೇಕ ಸ್ಮಾರಕ’ ಮೈಸೂರಿಗೆ ಕಳಶಪ್ರಾಯವಾಗಲಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ ಆಶಯ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ವಿವೇಕ ಸ್ಮಾರಕದ ಶಂಕು ಸ್ಥಾಪನೆ ಸಮಾರಂಭದಲ್ಲಿ ಯೋಜನೆಯ ಮೂಲ ಮಾದರಿ ಅನಾವರಣಗೊಳಿಸಿ ಅವರು ಮಾತನಾಡಿದರು. 1913ರಲ್ಲಿ ರವೀಂದ್ರನಾಥ ಠಾಗೋರ್ ಅವರಿಗೆ ಸಾಹಿತ್ಯಕ್ಕಾಗಿ ನೊಬೆಲ್ ಪಾರಿತೋಷಕ ದೊರೆಯಿತು. ಹಾಗೆಯೇ 1915ರಲ್ಲಿ ಫ್ರೆಂಚ್‍ನ ರೊಮೈನ್ ರೊಲಾಂಡ್ ಅವರಿಗೂ ನೊಬೆಲ್ ಪಾರಿತೋಷಕ ಬರು ತ್ತದೆ. ಇದನ್ನು ಪಡೆದುಕೊಳ್ಳುವ ಸಂದರ್ಭ ದಲ್ಲಿ ಠಾಗೋರ್ ಹಾಗೂ…
ಜು.10ರ ನಂತರ ದಸರಾ ಉನ್ನತ ಸಮಿತಿ ಸಭೆ
July 6, 2022ಮೈಸೂರು, ಜು. 5(ಆರ್‍ಕೆ)-ಜುಲೈ 10ರ ನಂತರ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಮೈಸೂರಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜುಲೈ 10ರ ನಂತರ ಬೆಂಗಳೂ ರಲ್ಲಿ ದಸರಾ ಉನ್ನತ ಸಮಿತಿ (ಹೈಪವರ್ ಕಮಿಟಿ) ಸಭೆ ನಡೆಸಿ, ರೂಪು-ರೇಷೆಗಳ ಬಗ್ಗೆ ಚರ್ಚಿಸಿದ ನಂತರ ಮೈಸೂರಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಾಗುವುದು ಎಂದರು. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಅಗತ್ಯ ಎಚ್ಚರಿಕಾ ಕ್ರಮಗಳನ್ನು ಕೈಗೊಂಡು, ಯಾವುದೇ…
ಮೈಸೂರಿಂದ ತುಮಕೂರಿಗೆ ಕಾರು ಬಾಡಿಗೆಗೆ ಕರೆದೊಯ್ದು ಕೆಸ್ತೂರು ಬಳಿ ಚಾಲಕನಿಗೆ ಇರಿದು ಕಾರಿನೊಂದಿಗೆ ಪರಾರಿ
July 6, 2022ಮೈಸೂರು, ಜು.5(ಆರ್‍ಕೆ)- ತುರ್ತು ಕಾರಣ ಹೇಳಿ ಮಧ್ಯರಾತ್ರಿ ಮೈಸೂರಿನಿಂದ ತುಮ ಕೂರಿಗೆ ಬಾಡಿಗೆ ಕಾರಿನಲ್ಲಿ ತೆರಳು ತ್ತಿದ್ದ ಇಬ್ಬರು ದುಷ್ಕರ್ಮಿಗಳು, ಮಾರ್ಗ ಮಧ್ಯೆ ಚಾಲಕನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿ, ಕೊನೆಗೆ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೈಸೂರಿನ ಗಾಂಧಿನಗರ 5ನೇ ಕ್ರಾಸ್ ನಿವಾಸಿ ರುದ್ರಸ್ವಾಮಿ(46), ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿದ್ದು, ಅವರನ್ನು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರ ಟೊಯೊಟಾ ಇಟಿಯಾಸ್ (ಕೆಎ-09, ಸಿ-2358) ಕಾರಿನೊಂದಿಗೆ ಆರೋಪಿಗಳು ಪರಾರಿಯಾಗಿದ್ದಾರೆ. ಸೋಮವಾರ ಸರಿರಾತ್ರಿ 1.30ರ ವೇಳೆಯಲ್ಲಿ ಮೈಸೂರಿನ ಎಫ್‍ಟಿಎಸ್…
ನೇರ ಪಾವತಿ, ಗುತ್ತಿಗೆ ರದ್ದು ಭರವಸೆ ಪೌರಕಾರ್ಮಿಕರ ಮುಷ್ಕರ ಅಂತ್ಯ
July 5, 2022ಮೈಸೂರು,ಜು.4(ಪಿಎಂ)- ಸಮಿತಿ ರಚಿಸಿ ಅದರ ವರದಿ ಅನುಸಾರ ನೇರ ಪಾವತಿ ಪೌರಕಾರ್ಮಿಕರನ್ನು 3 ತಿಂಗ ಳೊಳಗೆ ಖಾಯಂ ಪ್ರಕ್ರಿಯೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ನೇರಪಾವತಿ ಪೌರಕಾರ್ಮಿಕರು ಸೇರಿ ದಂತೆ ಸ್ವಚ್ಛತಾ ಕಾರ್ಮಿಕರು ರಾಜ್ಯಾದ್ಯಂತ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರ ಸೋಮವಾರ ಅಂತ್ಯಗೊಂಡಿದೆ. ವರದಿ ನೀಡಲು ಸದರಿ ಸಮಿತಿಗೆ ಮೂರು ತಿಂಗಳ ಕಾಲಾವಕಾಶ ನೀಡಲು ನಿರ್ಣಯಿಸಿದ್ದು, ಸಮಿತಿ ವರದಿ ನೀಡಿದ ಬಳಿಕ ಅದರ ಅನುಸಾರ ನೇರ ಪಾವತಿ ಪೌರಕಾರ್ಮಿಕರ ಖಾಯಂ…
ಇಬ್ಬರ ಮೇಲೆ ದಾಳಿ ನಡೆಸಿದ್ದ ಹೆಣ್ಣು ಹುಲಿ ಸುರಕ್ಷಿತ ಸೆರೆ
July 4, 2022ಮೈಸೂರು,ಜು.3(ಎಂಟಿವೈ)-ಇಬ್ಬರ ಮೇಲೆ ದಾಳಿ ನಡೆಸಿ ಆತಂಕಉಂಟು ಮಾಡಿದ್ದ ಹುಲಿಯನ್ನುಅರಣ್ಯ ಇಲಾಖಾ ಸಿಬ್ಬಂದಿ ನಡೆಸಿದ ವ್ಯವಸ್ಥಿತ ಕಾರ್ಯಾಚರಣೆಯಿಂದಾಗಿ ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದ್ದು, ಪುನರ್ವಸತಿಗಾಗಿ ಮೈಸೂರಿನ ಕೂರ್ಗಳ್ಳಿಯಲ್ಲಿರುವ ಮೃಗಾಲಯದ ಪುನರ್ವ ಸತಿಕೇಂದ್ರಕ್ಕೆ ರವಾನಿಸಿ ಚಿಕಿತ್ಸೆಕೊಡಿಸಲಾಗುತ್ತಿದೆ. ಸೆರೆ ಹಿಡಿಯಲಾದ ಹುಲಿ ಹೆಣ್ಣು ಹುಲಿಯಾಗಿದ್ದು, ಸುಮಾರು 10 ವರ್ಷ ವಯಸ್ಸಿನದ್ದಾಗಿದೆ. ಆರಂಭದಲ್ಲಿ ಹೆಡಿಯಾಲ ಅರಣ್ಯ ವಲಯದಲ್ಲಿದ್ದ ಈ ಹುಲಿ 2014ರಿಂದ 2022ರವರೆಗೆ ಗೋಪಾಲಸ್ವಾಮಿಬೆಟ್ಟ ವಲಯದಲ್ಲಿ ಆವಾಸ ಸ್ಥಾನವಾಗಿ ಗುರುತಿಸಿಕೊಂಡಿತ್ತು. ವಯಸ್ಸಿನ ಕಾರಣ ಹಾಗೂ ಗಾಯಗೊಂಡಿದ್ದರಿಂದ ಭೇಟೆಯಾಡುವ ಶಕ್ತಿ ಕಳೆದುಕೊಂಡ ಕಾರಣಕಾಡಂಚಿನಗ್ರಾಮದತ್ತ ಬಂದುಜಾನುವಾರು ಬೇಟೆಯಾಡಲು…
ಮೊದಲ ಆಷಾಢ ಶುಕ್ರವಾರ ಚಾಮುಂಡೇಶ್ವರಿ ದರ್ಶನ ಪಡೆದ ಸಾವಿರಾರು ಭಕ್ತರು
July 2, 2022ಮೈಸೂರು,ಜು.1(ಎಂಟಿವೈ)- ಎರಡು ವರ್ಷಗಳ ನಂತರ ಚಾಮುಂಡಿಬೆಟ್ಟದಲ್ಲಿ ಆಷಾಢ ಪೂಜಾ ವೈಭವ. ಮೊದಲ ಶುಕ್ರವಾರವಾದ ಇಂದು ಜರುಗಿದ ವಿಶೇಷ ಪೂಜಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು. ಕೊರೊನಾ ಸೋಂಕಿನ ಆತಂಕದಿಂದಾಗಿ ಕಳೆದ ಎರಡು ವರ್ಷಗಳಿಂದ ಆಷಾಢ ಮಾಸದ ವಿಶೇಷ ಪೂಜಾ ಮಹೋತ್ಸವ ಕೇವಲ ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತಗೊಂಡಿತ್ತು. ಈಗ ಸೋಂಕು ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಸಾಲಿನ ಆಷಾಢ ಮಾಸದ ಪೂಜಾ ಮಹೋತ್ಸವವನ್ನು ವಿಜೃಂಭಣೆಯಿಂದ ನೆರ ವೇರಿಸುವುದರೊಂದಿಗೆ ಭಕ್ತರು ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ…
ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮೊದಲ ಆಷಾಢ ಪೂಜೆ
July 1, 2022ಮೈಸೂರು,ಜೂ.30(ಎಂಟಿವೈ)-ನಾಡದೇವತೆ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಮಾಸದ ಮೊದಲ ಶುಕ್ರವಾರದ ವಿಶೇಷ ಪೂಜಾ ಕೈಂಕರ್ಯಕ್ಕೆ ಸರ್ವ ಸಿದ್ಧತೆಯಾಗಿದ್ದು, 2 ವರ್ಷಗಳ ನಂತರ ತಾಯಿ ದರ್ಶನಕ್ಕೆ ಭಕ್ತ ಸಮೂಹ ಕಾತುರವಾಗಿದೆ. ಶುಕ್ರವಾರ ಮುಂಜಾನೆ 3.30ಕ್ಕೆ ಆಷಾಢಮಾಸದ ವಿಶೇಷ ಪೂಜೆ ಆರಂಭವಾಗಲಿದ್ದು, ವಿಶೇಷ ಲಕ್ಷ್ಮೀ ಅಲಂಕಾರದ ಚಾಮುಂಡೇಶ್ವರಿ ದೇವಿಯನ್ನು ಮಹಾನ್ಯಾಸಕ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಇತ್ಯಾದಿ ಕೈಂಕರ್ಯ ಗಳೊಂದಿಗೆ ಪೂಜಿಸಲಾಗುತ್ತದೆ. ಪೂಜೆಯ ಬಳಿಕ ಬೆಳಗ್ಗೆ 5.30ರಿಂದ ರಾತ್ರಿ 9.30ರವರೆಗೂ ಭಕ್ತರು ದೇವಿಯ ದರ್ಶನ ಪಡೆಯಬಹುದು. ಕೊರೊನಾ ಕಾರಣದಿಂದ ಕಳೆದ…
ಜಲಶಕ್ತಿ ಅಭಿಯಾನದ ಕಾಮಗಾರಿ ಪರಿಶೀಲನೆ
July 1, 2022ಮೈಸೂರು, ಜೂ.30(ಆರ್‍ಕೆಬಿ)- ಕೇಂದ್ರ ಸರ್ಕಾರದ ಜಲ ಸಚಿವಾಲಯದ ಅಡಿಯಲ್ಲಿ ಜಲಶಕ್ತಿ ಅಭಿಯಾನ ಸಂಸ ದೀಯ ಸಲಹಾ ಸಮಿತಿ ನಿಯೋಗ ಗುರುವಾರ ಮೈಸೂರು ಜಿಲ್ಲೆಯ ಮೂರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಲ್ಲಿ ನಡೆದಿರುವ ಜಲಶಕ್ತಿ ಅಭಿಯಾನ ಕಾಮಗಾರಿಗಳನ್ನು ಪರಿಶೀಲಿಸಿತು. ಕೇಂದ್ರ ಜಲಶಕ್ತಿ ಮತ್ತು ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ಬಿಶ್ವೇಶ್ವರ ಟುಡು ನೇತೃತ್ವದಲ್ಲಿ 10 ಮಂದಿ ಸಂಸದರು, ಕಾರ್ಯದರ್ಶಿಗಳು ಮತ್ತು ಸಚಿವಾಲ ಯದ ಹಿರಿಯ ಅಧಿಕಾರಿಗಳನ್ನು ಒಳ ಗೊಂಡಿದ್ದ ನಿಯೋಗ ಮೈಸೂರು ತಾಲೂ ಕಿನ ನಾಗವಾಲ ಗ್ರಾಮ…
ಮೈಸೂರ್ ಸೈನ್ಸ್ ಫೌಂಡೇಷನ್‍ನ ದಶಮಾನೋತ್ಸವ ಪ್ರಯುಕ್ತಜು.9ರಂದು ಮೈಸೂರಲ್ಲಿಸೈನ್ಸ್ ಎಕ್ಸ್‍ಪೋ
July 1, 2022ಮೈಸೂರು,ಜೂ.30(ಪಿಎಂ)- ಮೈಸೂರ್ ಸೈನ್ಸ್ ಫೌಂಡೇಷನ್‍ನ ದಶಮಾ ನೋತ್ಸವದ ಅಂಗವಾಗಿ ಜು.9ರಂದು ಸೈನ್ಸ್ ಎಕ್ಸ್‍ಪೋ (ವಿಜ್ಞಾನ ವಸ್ತು ಪ್ರದರ್ಶನ) ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಷನ್‍ನ ಪ್ರಧಾನ ಕಾರ್ಯದರ್ಶಿ ಜಿ.ಬಿ.ಸಂತೋಷ್ ಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳ ಹಿಂದೆ 2012ರ ಜುಲೈನಲ್ಲಿ ಸಮಾನಮನಸ್ಕ ಸರ್ಕಾರಿ ಶಾಲಾ-ಕಾಲೇಜು ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾ ಪಕರಿಂದ ನಮ್ಮ ಫೌಂಡೇಷನ್ ಪ್ರಾರಂಭ ವಾಯಿತು. ವಿದ್ಯಾರ್ಥಿಗಳು ಮತ್ತು ಜನ ಸಾಮಾನ್ಯರಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ…










