ಮೈಸೂರು, ಜು.1(ಆರ್‍ಕೆಬಿ)- ಹಸು ವಿನ ಸಗಣಿ, ಗಂಜಲ, ಬೇವಿನಸೊಪ್ಪು, ಅರಿಶಿನ ಮಿಶ್ರಿತ ನೀರನ್ನು ಮನೆ ಸುತ್ತಲಿನ ಪರಿಸರದಲ್ಲಿ ಸಿಂಪಡಿಸುವುದರಿಂದ ಕೊರೊನಾ ಮತ್ತಿತರ ವೈರಸ್ ಹರಡ ದಂತೆ ತಡೆಗಟ್ಟಬಹುದಾಗಿದು ಎಂಬ `ಮನೆ ಮದ್ದು ಜಾಗೃತಿ’ ಕಾರ್ಯಕ್ರಮ ಶಾರದಾದೇವಿ ನಗರದ ನಾಲ್ಕನೇ ಕ್ರಾಸ್ ನಲ್ಲಿ ಬುಧವಾರ ನಡೆಯಿತು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಗಳ ವೇದಿಕೆ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಆಯುರ್ವೇದ ಸಂಶೋಧಕ ಡಾ.ಸೋಮಶೇಖರಗೌಡ ಸಿದ್ಧಪಡಿಸಿದ ಮಿಶ್ರಣವನ್ನು ಮನೆ ಸುತ್ತಮುತ್ತ ಹರಡುವ ಮೂಲಕ ಕೊರೊನಾ ಬಗ್ಗೆ ಭಯ ನಿವಾ ರಿಸಿಕೊಳ್ಳಿ….
ಇ-ಸೇವೆಗೆ ಮೈಸೂರು ವಿವಿ, ಮುಕ್ತ ವಿವಿಗಳಲ್ಲಿ ಸಿದ್ಧತೆ
July 2, 2020ಮೈಸೂರು, ಜು. 1(ಆರ್‍ಕೆ)- ಸರ್ಕಾರದ ತೀರ್ಮಾನದಂತೆ ಜುಲೈ 15ರಿಂದ ಆನ್‍ಲೈನ್ ಮೂಲಕವೇ ವ್ಯವಹರಿಸಲು ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯಗಳಲ್ಲಿ ಇ-ಸೇವೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಈ ಎರಡೂ ವಿವಿಗಳಲ್ಲಿ ಸಾಫ್ಟ್‍ವೇರ್ ಮೂಲಕ ಪೇಪರ್ ರಹಿತ ಆಡಳಿತಕ್ಕೆ ತಯಾರಿ ನಡೆಸಲಾಗಿತ್ತು. ಇದೀಗ ಸರ್ಕಾರದೊಂದಿಗಿನ ಎಲ್ಲಾ ವ್ಯವಹಾರವನ್ನೂ ಆನ್‍ಲೈನ್ ನಲ್ಲೇ ನಡೆಸಿ ಕುಲಪತಿ, ರಿಜಿಸ್ಟ್ರಾರ್ ಆಗಲೀ ಬೆಂಗಳೂರಿಗೆ ಹೋಗದೇ ವಿಶ್ವವಿದ್ಯಾನಿಲಯದ ಕಚೇರಿಯಿಂದಲೇ ಪತ್ರ ವ್ಯವಹಾರ ನಡೆಸಲು ತಯಾರಿ ನಡೆಸುತ್ತಿವೆ. ಈ ಸಂಬಂಧ ‘ಮೈಸೂರು ಮಿತ್ರ’ನಿಗೆ…
ತೈಲ ತೆರಿಗೆ ತಗ್ಗಿಸಿ, ಕೊರೊನಾ ಚಿಕಿತ್ಸೆ ವೆಚ್ಚ ಭರಿಸಿ: ಎಸ್‍ಯುಸಿಐ ಆಗ್ರಹ
July 2, 2020ಮೈಸೂರು, ಜು.1(ಪಿಎಂ)- ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹಾಗೂ ತೆರಿಗೆ ತಗ್ಗಿಸಬೇಕು. ಕೊರೊನಾ ಸೋಂಕಿತರಿಗೆ ಸರ್ಕಾರಿ ವೆಚ್ಚದಲ್ಲೇ ಚಿಕಿತ್ಸೆ ಒದಗಿಸಬೇಕು ಎಂದು ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್-ಎಸ್‍ಯುಸಿಐ) ವತಿಯಿಂದ ಬುಧವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರ ಕಳೆದ 20 ದಿನಗಳಿಂದ ಸತತವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಸುತ್ತಲೇ ಇದೆ. ಮೇ 6ರಿಂದ ಈವರೆಗೆ ಪ್ರತಿ ಲೀಟರ್ ಪೆಟ್ರೋಲ್‍ಗೆ 10 ರೂ., ಡೀಸೆಲ್‍ಗೆ 13…
ಸಮಾಜ ವಿಜ್ಞಾನ ಪರೀಕ್ಷೆ ಸುಸೂತ್ರ 38,402 ಮಂದಿ ಹಾಜರು, 350 ವಿದ್ಯಾರ್ಥಿ ಗೈರು
July 2, 2020ಮೈಸೂರು, ಜು.1(ಆರ್‍ಕೆಬಿ)- ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಗಳೊಂದಿಗೆ ಗುರುವಾರ ನಡೆದ ಎಸ್‍ಎಸ್‍ಎಸ್‍ಸಿ ಸಮಾಜ ವಿಜ್ಞಾನ ಪರೀಕ್ಷೆ ಜಿಲ್ಲೆಯ 139 ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲ ವಿಲ್ಲದೆ ಯಶಸ್ವಿಯಾಗಿ ನಡೆ ಯಿತು. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 38,752 ವಿದ್ಯಾರ್ಥಿಗಳ ಪೈಕಿ 38,402 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. 350 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಹೊರ ಜಿಲ್ಲೆಗಳಿಂದ 339 ಮಂದಿ ಪರೀಕ್ಷೆ ಬರೆದರು. ಉಳಿದಂತೆ ಕಂಟೈನ್‍ಮೆಂಟ್ ಜೋನ್‍ನಿಂದ 63 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ಜ್ವರ ಮತ್ತು ಕೆಮ್ಮು…
ಆನಂದನಗರಕ್ಕೆ ಜಲಗಂಡಾಂತರ…!
July 1, 2020ಮೈಸೂರು, ಜೂ.30- ಮೈಸೂರಿನ ಆನಂದ ನಗರಕ್ಕೆ ಜಲಗಂಡಾಂತರ…! ಮಳೆ ಬಂತೆಂದರೆ ಮನೆ ಒಳ-ಹೊರಗೆ ಎಲ್ಲೆಲ್ಲೂ ನೀರು… ಹೌದು, ನಗರದ ಕಾಂತರಾಜ್ ಅರಸ್ ರಸ್ತೆ ಮಾರ್ಗ ದಲ್ಲಿರುವ ಆನಂದ ನಗರಕ್ಕೆ ಮಳೆಗಾಲ ಬಂತೆಂದರೆ ಜಲಗಂಡಾಂತರವೇ ಎದುರಾದಂತೆ ಕಾಣುತ್ತದೆ. ಜೋರು ಮಳೆ ಬಂದರೆ ಸಾಕು, ಎಲ್ಲಿ ಮನೆಯೊಳಗೆ ನೀರು ನುಗ್ಗುತ್ತದೆಯೋ ಎಂದು ಪರಿತಪಿಸುವ ಆನಂದ ನಗರದ ನಿವಾಸಿಗಳು ಆನಂದವನ್ನೇ ಕಳೆದುಕೊಂಡಿ ದ್ದಾರೆ. ಮೈಸೂರಿನಲ್ಲಿ ಜೂ.28ರ ಭಾನುವಾರ ಸುರಿದ ಮಳೆ ಸೃಷ್ಟಿಸಿದ ಅವಾಂತರವೇ ಇದಕ್ಕೆ ಸಾಕ್ಷಿ. ಹಲವು ವರ್ಷಗಳಿಂದ ಶಾಶ್ವತ ಪರಿಹಾರಕ್ಕಾಗಿ…
ದೇಶಾದ್ಯಂತ ಒಂದೇ ದಿನ 18,522 ಮಂದಿಗೆ ಕೊರೊನಾ
July 1, 2020ಸೋಂಕಿತರ ಸಂಖ್ಯೆ 5.66 ಲಕ್ಷಕ್ಕೆ ಏರಿಕೆ, 16,893 ಮಂದಿ ಸಾವು ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 18,522 ಮಂದಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 5,66,840ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ. ಇನ್ನು ನಿನ್ನೆ ಒಂದೇ ದಿನ 418 ಮಂದಿ ಬಲಿ ಪಡೆದಿದ್ದು, ಈವರೆಗೂ ವೈರಸ್‍ನಿಂದ ಸಾವನ್ನಪ್ಪಿದವರ ಸಂಖ್ಯೆ 16,893ಕ್ಕೆ ತಲುಪಿದೆ. ಇನ್ನು 5,66,840 ಮಂದಿ ಸೋಂಕಿತರ ಪೈಕಿ 3,34,822 ಮಂದಿ…
ಬಹಿರಂಗವಾಗಿ ಕ್ಷಮೆಯಾಚಿಸಿದ ಬಳ್ಳಾರಿ ಜಿಲ್ಲಾಧಿಕಾರಿ
July 1, 2020ಅಮಾನವೀಯ ರೀತಿಯಲ್ಲಿ ಶವ ಸಂಸ್ಕಾರ ಪ್ರಕರಣ ಕೊರೊನಾದಿಂದ ಸಾವನ್ನಪ್ಪಿದವರ ನಿರ್ವಹಣೆಗೆ ಬೇರೆ ತಂಡ ಬಳ್ಳಾರಿ: ಕೊರೊನಾ ಸೋಂಕಿನಿಂದ ಮೃತಪಟ್ಟವರ ದೇಹವನ್ನು ಅಮಾನವೀಯವಾಗಿ ಗುಂಡಿಗೆ ಎಸೆದು ಅಂತ್ಯ ಸಂಸ್ಕಾರ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಕುರಿತು ಇದೀಗ ಬಳ್ಳಾರಿ ಡಿಸಿ ಎಸ್.ಎಸ್.ನಕುಲ್ ಪ್ರತಿಕ್ರಿಯಿಸಿ ಬಹಿರಂಗವಾಗಿ ಕ್ಷಮೆಯಾಚಿಸಿ ದ್ದಾರೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ದ್ದಾರೆ. ಸೋಮವಾರ ಒಂದೇ ದಿನ ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾಗೆ 9 ಜನ ಸಾವನ್ನಪ್ಪಿದ್ದರು….
ಸಿದ್ದಾರ್ಥನಗರ, ಕೆಸಿ, ಜೆಸಿ, ಆಲನಹಳ್ಳಿ ಸೇರಿ ಐದು ಬಡಾವಣೆ ವಿವಾದ ಜೂನ್ ಆಯ್ತು…! `ಬಿ ಖರಾಬು ಮುಕ್ತ’ ಏನಾಯ್ತು!!?
July 1, 2020ಮೈಸೂರು, ಜೂ.30(ಆರ್‍ಕೆಬಿ)- ಮೈಸೂ ರಿನ ಸಿದ್ದಾರ್ಥನಗರ, ಕೆಸಿ, ಜೆಸಿ, ಆಲನ ಹಳ್ಳಿ, ಆದಾಯ ತೆರಿಗೆ ಬಡಾವಣೆ ಜೂನ್ ಅಂತ್ಯಕ್ಕೆ `ಬಿ’ ಖರಾಬು ಮುಕ್ತಗೊಳ್ಳಲಿದೆ ಎಂದು ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ. ರಾಮದಾಸ್ ಅಚಲ ಭರವಸೆ ನೀಡಿದ್ದರು. ಇತ್ತೀಚೆಗೆ ಅವರು ಸುದ್ದಿಗೋಷ್ಠಿಯಲ್ಲಿ, ಈ ಐದು ಬಡಾವಣೆಗಳಿರುವ ಒಟ್ಟು 354.29 1/2 ಎಕರೆ ಪ್ರದೇಶವನ್ನು `ಬಿ’ ಖರಾಬಿನಿಂದ ಕೈಬಿಡಲು ಕ್ರಮ ಕೈಗೊಳ್ಳು ವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪನವರು ಸಂಬಂಧಿಸಿದ ಇಲಾಖೆ ಗಳಿಗೆ ನಿರ್ದೇಶನ ನೀಡಿದ್ದಾರೆ. ಜೂನ್ ತಿಂಗಳ ಕೊನೆಯಲ್ಲಿ ಕಂದಾಯ…
ಅಂತು ಹಾರುವ ಹಾವು ಸಂರಕ್ಷಿಸಿದ ಸ್ನೇಕ್‍ಶ್ಯಾಮ್
July 1, 2020ಮೈಸೂರು, ಜೂ.30(ಎಸ್‍ಬಿಡಿ)- ಮೈಸೂರಿನ ಅಗ್ರಹಾರದಲ್ಲಿ ಕಾಣಿಸಿ ಕೊಂಡಿದ್ದ ಹಾರುವ ಹಾವನ್ನು ಉರಗ ಸಂರಕ್ಷಕರಾದ ಸ್ನೇಕ್‍ಶ್ಯಾಮ್ ಹಾಗೂ ಅವರ ಪುತ್ರ ಸೂರ್ಯಕೀರ್ತಿ ಮಂಗಳವಾರ ರಕ್ಷಿಸಿದರು. ರಾಮಾನುಜ ರಸ್ತೆ, ಜೆಎಸ್‍ಎಸ್ ಫಾರ್ಮಸಿ ಕಾಲೇಜು ಬಳಿ ಮಂಗಳವಾರ ಸಂಜೆ 4 ಗಂಟೆ ವೇಳೆಯಲ್ಲಿ ವಾಹನ ಸಂಚಾರದ ನಡುವೆಯೂ ಸುರಕ್ಷಿತವಾಗಿ ರಸ್ತೆ ದಾಟಿದ ವಿಶಿಷ್ಟ ಹಾವು, ಫುಟ್ ಪಾತ್‍ನಲ್ಲಿ ಬಿಸಾಡಿದ್ದ ಸಣ್ಣ ಪೈಪ್‍ನೊಳಗೆ ಸೇರಿಕೊಂಡಿತ್ತು. ಇದನ್ನು ಗಮನಿಸಿದ ಜನರಿಕ್ ಮೆಡಿಕಲ್ಸ್‍ನ ನವೀನ್, ಕೂಡಲೇ ಸ್ನೇಕ್‍ಶ್ಯಾಮ್‍ಗೆ ವಿಷಯ ತಿಳಿಸಿದರು. ಪುತ್ರ ಸೂರ್ಯಕೀರ್ತಿಯೊಂದಿಗೆ ಸ್ಥಳಕ್ಕೆ ಬಂದ…
ಹಾರೋಹಳ್ಳಿ ಗ್ರಾಪಂ ಎದುರು ಎಐಕೆಎಸ್‍ಸಿಸಿ ಪ್ರತಿಭಟನೆ
July 1, 2020ಮೈಸೂರು, ಜೂ.30(ಎಸ್‍ಪಿಎನ್)- ಗ್ರಾಮ ಪಂಚಾಯ್ತಿಗಳಿಗೆ ಆಡಳಿತಾಧಿಕಾರಿ ನೇಮಕ, ರೈತರಿಗೆ ಸಹಾಯಧನ ಹೆಚ್ಚಳ ಹಾಗೂ ಲಾಕ್‍ಡೌನ್ ಸಂದರ್ಭದಲ್ಲಿ ಅನ ಗತ್ಯವಾಗಿ ಕೃಷಿಕರ ವಿರುದ್ಧ ದಾಖಲಾಗಿ ರುವ ಕೇಸ್‍ಗಳನ್ನು ವಾಪಸ್ ಪಡೆ ಯುವಂತೆ ರಾಜ್ಯ ಸರ್ಕಾರವನ್ನು ಒತ್ತಾ ಯಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ(ಎಐಕೆಎಸ್‍ಸಿಸಿ) ಪದಾಧಿಕಾರಿಗಳು ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮ ಪಂಚಾಯ್ತಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು. ರಾಜ್ಯ ರೈತ ಸಂಘದ ಪಾಪೇಗೌಡ ಹಾಗೂ ಆರ್‍ಕೆಎಸ್ ಸಂಘಟನೆಯ ಹೆಚ್.ಎಂ.ಬಸವರಾಜು ಪ್ರತಿಭಟನೆ ನೇತೃತ್ವ ವಹಿಸಿದ್ದರು. 16 ಪ್ರಮುಖ…










