ಮೈಸೂರು, ಜೂ.29(ಎಂಕೆ)- ಕೊರೊನಾ ಸೋಂಕು ಹರಡುವುದನ್ನು ತಡೆ ಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಹೊಸ ನಿಯಮಾವಳಿಯಂತೆ ಮೈಸೂರು ನಗರದಲ್ಲಿ ನಿಷೇಧಾಜ್ಞೆಯನ್ನು ಮುಂದುವರೆಸಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. ಅಗತ್ಯ ವಸ್ತುಗಳ ಮಾರಾಟ ಹಾಗೂ ಸಾಗಾಣಿಕೆ ಹೊರತು ಪಡಿಸಿ, ಜುಲೈ 5ರಿಂದ ಆಗಸ್ಟ್ 2ರವರೆಗಿನ ಎಲ್ಲಾ ಭಾನು ವಾರಗಳಂದು ಪೂರ್ಣ ದಿನದ ಲಾಕ್‍ಡೌನ್ ಹಾಗೂ ಮುಂದಿನ ಆದೇಶದವರೆಗೆ ಪ್ರತಿದಿನ ರಾತ್ರಿ 8ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕಫ್ರ್ಯೂ ಜಾರಿಯಲ್ಲಿರಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ರಾತ್ರಿ…
24 ಗಂಟೆಗಳಲ್ಲಿ ದೇಶಾದ್ಯಂತ 19,459 ಮಂದಿಗೆ ಕೊರೊನಾ ಸೋಂಕು
June 30, 2020ನವದೆಹಲಿ: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ದೇಶಾ ದ್ಯಂತ 19,459 ಸೋಂಕು ತಗುಲಿದೆ. ದೇಶದಲ್ಲಿ ಒಟ್ಟಾರೆ ಸೋಂಕಿ ತರ ಸಂಖ್ಯೆ 5,48,318ಕ್ಕೆ ಏರಿಕೆಯಾಗಿದ್ದು, ಈ ಪೈಕಿ 3,21,723 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಪ್ರಸ್ತುತ 2,10,120 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 380 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ದೇಶದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 16,475ಕ್ಕೆ ಏರಿಕೆಯಾಗಿದೆ. ದೆಹಲಿ ಯಲ್ಲಿ…
ಮೈಸೂರಲ್ಲಿ ಭಾರೀ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು
June 30, 2020ಮೈಸೂರು, ಜೂ.29(ಎಂಕೆ)- ಮೈಸೂರು ನಗರ ಮತ್ತು ಜಿಲ್ಲೆಯ ಹಲ ವೆಡೆ ಭಾನುವಾರ ಸುರಿದ ಭಾರೀ ಮಳೆಗೆ ವಿವಿಧೆಡೆ ಆರು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, 4 ಟ್ರಾನ್ಸ್‍ಫಾರ್ಮರ್ ಘಟಕಗಳು ಹಾಳಾಗಿವೆ. ನಗರದ ಎನ್.ಆರ್.ಮೊಹಲ್ಲಾ ಮತ್ತು ವಿವಿ ಮೊಹಲ್ಲಾ ವ್ಯಾಪ್ತಿಯಲ್ಲಿ ತಲಾ ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರೆ, ವಿವಿ ಮೊಹಲ್ಲಾದಲ್ಲಿ 4 ಟ್ರಾನ್ಸ್ ಫಾರ್ಮರ್ ಘಟಕಗಳು ಹಾಳಾಗಿವೆ ಎಂದು ಸೆಸ್ಕ್‍ನ ಮೈಸೂರು ಕಾರ್ಯ ಮತ್ತು ಪಾಲನ ವೃತ್ತ ಅಧೀಕ್ಷಕ ಇಂಜಿ ನಿಯರ್ ಕೆ.ಎಂ.ಮುನಿಗೋಪಾಲರಾಜು ‘ಮೈಸೂರು ಮಿತ್ರ’ನಿಗೆ ತಿಳಿಸಿದರು….
ಕೊರೊನಾ ಶಂಕಿತರ ಮಾಹಿತಿ ದಾಖಲಿಸದ ಖಾಸಗಿ ಆಸ್ಪತ್ರೆಗೆ ಡಿಸಿ ಕಡೇ ಎಚ್ಚರಿಕೆ
June 30, 2020ಮೈಸೂರು, ಜೂ.29(ಎಸ್‍ಪಿಎನ್)-ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ SARI, ILI& COVID-19 ಶಂಕಿತರ ಬಗ್ಗೆ ಆನ್‍ಲೈನ್ ಮೂಲಕ ಮಾಹಿತಿ ದಾಖಲಿಸದ ಖಾಸಗಿ ಆಸ್ಪತ್ರೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸೋಮವಾರ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ಮೈಸೂರು ನಗರದಲ್ಲಿ ಕೊರೊನಾ ಸೋಂಕು ದಿನೇದಿನೆ ಉಲ್ಭಣ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ (ಆಲೋಪತಿ, ಆಯುಷ್, ಲ್ಯಾಬ್‍ಗಳು, ದಂತ ವೈದ್ಯರು, ಹಾಗೂ ಎಲ್ಲಾ ತಜ್ಞ ವೈದ್ಯರು) SARI, ILI& COVID-19 ಶಂಕಿತರ ವರದಿಗಳನ್ನು https://kpme.karnataka.tech/index.php/login ಆನ್‍ಲೈನ್…
ಕೊರೊನಾ ಸೋಂಕಿನ ಹಾವಳಿ: ಸಮುದಾಯ ಸಾರಿಗೆ ಬಳಸಲು ಹಿಂದೇಟು ಹಾಕುತ್ತಿರುವ ಜನ
June 30, 2020ಮೈಸೂರು, ಜೂ.29(ಆರ್‍ಕೆ)- ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡು ತ್ತಿರುವುದರಿಂದ ತೀವ್ರ ಆತಂಕಗೊಂಡಿ ರುವ ಸಾರ್ವಜನಿಕರು ಸಮುದಾಯ ಸಾರಿಗೆ ಬಳಸಲು ಹಿಂಜರಿಯುತ್ತಿದ್ದಾರೆ. ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ಬರುವ ಜನರಿಂದ ಸೋಂಕು ಹರಡುತ್ತಿದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ. ಮಾತ್ರವಲ್ಲದೆ ಆರೋಗ್ಯ ಇಲಾಖೆ ನೀಡುತ್ತಿರುವ ಹೆಲ್ತ್ ಬುಲೆಟಿನ್‍ನಲ್ಲಿ ಕೂಡ ಹೊರ ರಾಜ್ಯದಿಂದ ಬಂದವರಿಗೆ ಹೆಚ್ಚಾಗಿ ಸೋಂಕು ತಗುಲಿರುವುದನ್ನು ಉಲ್ಲೇಖಿಸ ಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಹೊರ ಜಿಲ್ಲೆಯವರನ್ನು ಕಂಡರೆ ದೂರ ಉಳಿಯು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ….
ಮಂಗಳವಾರವೂ ಮೃಗಾಲಯಕ್ಕೆ ಪ್ರವೇಶ
June 30, 2020ಮೈಸೂರು, ಜೂ.29(ಎಂಟಿವೈ)- ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂದಿನ ನಾಲ್ಕು ಭಾನುವಾರ ಸಂಪೂರ್ಣ ಲಾಕ್‍ಡೌನ್ ಮಾಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ನಾಳೆಯಿಂದ (ಜೂ.30) ಪ್ರತಿ ಮಂಗಳವಾರ ಮೃಗಾಲಯಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶವಿರು ತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ. ಕುಲಕರ್ಣಿ ತಿಳಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸಿಗರು, ಸಿಬ್ಬಂದಿ ಹಾಗೂ ಪ್ರಾಣಿ-ಪಕ್ಷಿಗಳ ಹಿತಕಾಯುವ ನಿಟ್ಟಿನಲ್ಲಿ ಮೃಗಾಲಯದಲ್ಲಿ ಹಲವು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಮಂಗಳವಾರ ಮೃಗಾಲಯಕ್ಕೆ ರಜೆ ನೀಡಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಮುಂದಿನ…
ಉದ್ದೇಶಿತ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಖಂಡನೆ
June 30, 2020ರೈತ ಸಂಘದಿಂದ ಆನಂದೂರು, ಗುಂಗ್ರಾಲ್ ಛತ್ರ ಗ್ರಾಪಂ ಎದುರು ಪ್ರತಿಭಟನೆ ಮೈಸೂರು, ಜೂ.29(ಪಿಎಂ)- ಉದ್ದೇ ಶಿತ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಕೈಬಿಡಬೇಕು. ಎಪಿಎಂಸಿ ತಿದ್ದು ಪಡಿ ಕಾಯ್ದೆ ಹಿಂಪಡೆಯಬೇಕು ಹಾಗೂ ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗಿಕರಣ ಪ್ರಸ್ತಾಪದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮೈಸೂರು ತಾಲೂಕಿನ ಆನಂದೂರು ಹಾಗೂ ಗುಂಗ್ರಾಲ್ ಛತ್ರ ಗ್ರಾಮ ಪಂಚಾಯಿತಿ ಕಚೇರಿಗಳ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು. ಸಂಘದ…
ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಕೋವಿಡ್-19 ಪ್ರಯೋಗಾಲಯಕ್ಕೆ ಆನ್‍ಲೈನ್ ಮೂಲಕ ಸಿಎಂ ಚಾಲನೆ
June 30, 2020ಮೈಸೂರು, ಜೂ.29(ಆರ್‍ಕೆಬಿ)- ಮೈಸೂರಿನ ಜೆಎಸ್‍ಎಸ್ ಮೆಡಿಕಲ್ ಕಾಲೇಜಿನಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಕೋವಿಡ್-19 ಪ್ರಯೋಗಾಲಯ ಸ್ಥಾಪಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಆನ್ ಲೈನ್ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಅನ್ನ, ಅರಿವು, ಆರೋಗ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಜೆಎಸ್‍ಎಸ್ ಸಂಸ್ಥೆ ಕೋವಿಡ್ ಪರೀಕ್ಷಾ ಕೇಂದ್ರ ತೆರೆದು ಕೊರೊನಾ ನಿಯಂತ್ರಣಕ್ಕೆ ಸಹಕರಿಸುತ್ತಿರುವುದಕ್ಕೆ ಬಿ.ಎಸ್.ಯಡಿಯೂರಪ್ಪ, ಜೆಎಸ್‍ಎಸ್ ಸಂಸ್ಥೆಯನ್ನು ಅಭಿನಂದಿಸಿದರು. ಇಂದು ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಾಗಬೇಕಿದೆ. ಅದಕ್ಕಾಗಿ ರಾಜ್ಯದಲ್ಲಿ ಎಲ್ಲಾ…
ಕಾರ್ಪೊರೇಟರ್ ಅಳಿಯನ ಹತ್ಯೆ ಯತ್ನ ಪ್ರಕರಣ ತಲೆಮರೆಸಿಕೊಂಡಿದ್ದ ನಾಲ್ವರ ಸೆರೆ
June 30, 2020ಮೈಸೂರು, ಜೂ. 29(ಆರ್‍ಕೆ)- ಮೈಸೂರಿನ ರಾಜೀವ್‍ನಗರದ ಅಲ್ ಬದರ್ ಸರ್ಕಲ್ ಬಳಿ ಕಾರ್ಪೊರೇಟರ್ ಅಯಾಜ್ ಪಾಷಾ (ಪಂಡು) ಅಳಿಯ ಶಹಬಾಜ್ ಕೊಲೆ ಯತ್ನ ನಡೆಸಿ, ತಲೆ ಮರೆಸಿಕೊಂಡಿದ್ದ ನಾಲ್ವರನ್ನು ಉದಯ ಗಿರಿ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ರಾಜೀವ್‍ನಗರ ನಿವಾಸಿ ಗಳಾದ ಸಾಹಿಲ್, ಸುಹೇಲ್, ಲಡ್ಡಾ ಕಲೀಂ ಮತ್ತು ಸುಖ್ಖಾ ಹಬೀಬ್ ಬಂಧಿತ ಆರೋಪಿಗಳು. ಕಳೆದ ಮೇ 10ರಂದು ಮೈಸೂರಿನ ರಾಜೀವ್‍ನಗರದ ಅಲ್ ಬದರ್ ಸರ್ಕಲ್ ಸಮೀಪ ಹಳೇ ವೈಷಮ್ಯ ದಿಂದ ಕಾರ್ಪೊರೇಟರ್ ಅಯಾಜ್ ಪಾಷಾ (ಪಂಡು) ಅವರ…
ರೈತರಿಂದ ಬೈಕ್ ರ್ಯಾಲಿ, ಬಾರುಕೋಲು ಚಳುವಳಿ
June 30, 2020ಮೈಸೂರು, ಜೂ.29(ಪಿಎಂ)- ಕರ್ನಾ ಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಪ್ರಸ್ತಾಪ ಕೈಬಿಡಬೇಕು. ಅಲ್ಲದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಹಾಗೂ ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗೀಕರಣ ಪ್ರಸ್ತಾಪ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ವಿರೋಧಿ ಕಾಯ್ದೆ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಬೈಕ್ ರ್ಯಾಲಿ ನಡೆಸಿ, ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಬಾರುಕೋಲು ಚಳುವಳಿ ನಡೆಸಿದರು. ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯ ರೈತರು ನೂರಕ್ಕೂ ಹೆಚ್ಚು ಬೈಕ್‍ಗಳಲ್ಲಿ ಮೈಸೂರಿನ ಗನ್‍ಹೌಸ್ ಬಳಿ…










