ಮೈಸೂರು

ಮೈಸೂರು ನಗರ ನೂತನ ಡಿಸಿಪಿ ಎಂ.ಎಸ್.ಗೀತಾ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ನಗರ ನೂತನ ಡಿಸಿಪಿ ಎಂ.ಎಸ್.ಗೀತಾ ಅಧಿಕಾರ ಸ್ವೀಕಾರ

June 8, 2020

ಮೈಸೂರು, ಜೂ.7(ಆರ್‍ಕೆ)- ಮೈಸೂರು ನಗರ ಅಪರಾಧ ಮತ್ತು ಸಂಚಾರ ವಿಭಾ ಗದ ಡಿಸಿಪಿಯಾಗಿ ಎಂ.ಎಸ್.ಗೀತಾ ಅಧಿಕಾರ ವಹಿಸಿ ಕೊಂಡರು. ಮೈಸೂರಿನ ನಜರ್‍ಬಾದಿನಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ತಮ್ಮ ಕಚೇರಿಯಲ್ಲಿ ಸಿಟಿಸಿ ದಾಖಲಾತಿಗಳಿಗೆ ಸಹಿ ಮಾಡುವ ಮೂಲಕ ಕಾನೂನು-ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಅವರಿಂದ ಗೀತಾ ಅಧಿಕಾರ ವಹಿಸಿಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ನಗರದಲ್ಲಿ ಸಂಚಾರ ಸುಗಮಗೊಳಿಸಿ ನಿಯಮ ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಾಗರಿಕರಿಗೆ ಜಾಗೃತಿ ಮೂಡಿಸಲು ಆದ್ಯತೆ ನೀಡುವುದಾಗಿ ತಿಳಿಸಿದರು. ಅದೇ ರೀತಿ…

ಮೃಗಾಲಯ ನಾಳೆಯಿಂದ ವೀಕ್ಷಣೆಗೆ ಮುಕ್ತ
ಮೈಸೂರು

ಮೃಗಾಲಯ ನಾಳೆಯಿಂದ ವೀಕ್ಷಣೆಗೆ ಮುಕ್ತ

June 7, 2020

ಮೈಸೂರು, ಜೂ. 6(ಎಂಟಿವೈ)- ಹಕ್ಕಿಜ್ವರ ಹಾಗೂ ಕೊರೊನಾ ಹಿನ್ನೆಲೆಯಲ್ಲಿ 86 ದಿನಗಳಿಂದ ಬಂದ್ ಆಗಿದ್ದ ಮೈಸೂರು ಮೃಗಾಲಯ ಜೂ.8ರಿಂದ ಪುನಾ ರಂಭಗೊಳ್ಳಲಿದೆ. ಕೊರೊನಾದಿಂದ ಪ್ರವಾಸಿಗರು, ಸಿಬ್ಬಂದಿ ಹಾಗೂ ಪ್ರಾಣಿ-ಪಕ್ಷಿ ಸಂಕುಲ ಸಂರಕ್ಷಿಸಲು ಕಟ್ಟೆಚ್ಚರದೊಂದಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನೂ ಕೈಗೊಂಡು ಪ್ರವಾಸಿಗರನ್ನು ಸ್ವಾಗತಿಸಲು ಚಾಮ ರಾಜೇಂದ್ರ ಮೃಗಾಲಯದ ಆಡಳಿತ ಮಂಡಳಿ ಸಜ್ಜಾಗಿದೆ. ಇದರ ಜತೆಗೇ ರಾಜ್ಯದ 9 ಮೃಗಾಲಯಗಳೂ ಸೋಮವಾರದಿಂದ ಮತ್ತೆ ಬಾಗಿಲು ತೆರೆಯಲಿವೆ. 5ನೇ ಅವಧಿಯ ಲಾಕ್‍ಡೌನ್‍ನಲ್ಲಿ ನಿರ್ಬಂಧ ಸಡಿಲಿಸಿದ್ದು, ಕೇಂದ್ರ ಮೃಗಾಲಯ ಪ್ರಾಧಿಕಾರ ಹಾಗೂ ಅರಣ್ಯ,…

ಮೈಸೂರು ತಾಲೂಕಿನ 20 ಗ್ರಾಪಂಗಳಲ್ಲಿ ಶೀಘ್ರ ಸ್ವಚ್ಛತಾ ಅಭಿಯಾನ
ಮೈಸೂರು

ಮೈಸೂರು ತಾಲೂಕಿನ 20 ಗ್ರಾಪಂಗಳಲ್ಲಿ ಶೀಘ್ರ ಸ್ವಚ್ಛತಾ ಅಭಿಯಾನ

June 7, 2020

ಮೈಸೂರು, ಜೂ.6- ಇಲ್ಲಿಯವರೆಗೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಮಾತ್ರ ಸ್ವಚ್ಛತೆಗೆ ಆದ್ಯತೆ ನೀಡ ಲಾಗುತ್ತಿತ್ತು. ಇದೀಗ ಮೈಸೂರು ತಾಲೂ ಕಿನ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲು ತಾಲೂಕು ಆಡಳಿತ ಸಿದ್ಧತೆ ನಡೆಸಿದೆ. ಮೈಸೂರು ತಾಲೂಕಿನ 37 ಗ್ರಾಮ ಪಂಚಾಯ್ತಿಗಳಲ್ಲಿ 20ರಲ್ಲಿ `ಕಸಮುಕ್ತ ಗ್ರಾಮ’ ಶೀರ್ಷಿಕೆಯಡಿ ಸ್ವಚ್ಛತಾ ಅಭಿಯಾನ ನಡೆಯಲಿದ್ದು, ಜುಲೈ ಕೊನೆವಾರ ಅಥವಾ ಆಗಸ್ಟ್ ಮೊದಲ ವಾರ ಯೋಜನೆಗೆ ಜನಪ್ರತಿನಿಧಿಗಳ ಸಮ್ಮುಖ ಚಾಲನೆ ನೀಡ ಲಾಗುವುದು ಎಂದು ಮೈಸೂರು ತಾಪಂ…

ಜ್ವರ, ನೆಗಡಿ ಇದ್ದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ: ಡಿಸಿ ಸೂಚನೆ
ಮೈಸೂರು

ಜ್ವರ, ನೆಗಡಿ ಇದ್ದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ: ಡಿಸಿ ಸೂಚನೆ

June 7, 2020

ಮೈಸೂರು, ಜೂ.6(ಎಂಟಿವೈ)- ಮೈಸೂರು ನಗರ ಅಥವಾ ತಾಲೂಕಲ್ಲಿ ಯಾರಿಗಾದರೂ ಜ್ವರ, ನೆಗಡಿ ಇದ್ದರೆ ತಪ್ಪದೇ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸಲಹೆ ನೀಡಿದ್ದಾರೆ. ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೊರೊನಾ ಲಕ್ಷಣ ಇದ್ದವರ ಸ್ವ್ಯಾಬ್ ಪರೀಕ್ಷೆ ನಡೆಸಲಾಗುತ್ತಿದೆ. ಮೈಸೂರು ನಗರ ಅಥವಾ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಯಾರಿಗಾದರೂ ಜ್ವರ, ನೆಗಡಿ ಇದ್ದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸ ಲಾಗುತ್ತಿದ್ದು, ತಾಲೂಕು ಆಸ್ಪತ್ರೆಗಳಲ್ಲೇ ಸ್ವ್ಯಾಬ್ ಸ್ಯಾಂಪಲ್ ಪಡೆಯುವ ವ್ಯವಸ್ಥೆ ಮಾಡಲಾಗಿದೆ ಎಂದರು. ಮಹಾರಾಷ್ಟ್ರದಿಂದ ಬಂದವರು: ಕೊರೊನಾ…

ಮೈಷುಗರ್ ಖಾಸಗೀಕರಣ ಸಲ್ಲ: ಸಿಎಂಗೆ ಸಿದ್ದರಾಮಯ್ಯ ಪತ್ರ
ಮೈಸೂರು

ಮೈಷುಗರ್ ಖಾಸಗೀಕರಣ ಸಲ್ಲ: ಸಿಎಂಗೆ ಸಿದ್ದರಾಮಯ್ಯ ಪತ್ರ

June 7, 2020

ಮೈಸೂರು,ಜೂ.6(ಎಸ್‍ಪಿಎನ್)- ಮಂಡ್ಯದ `ಮೈಷುಗರ್’ ಸಕ್ಕರೆ ಕಾರ್ಖಾನೆ ಯನ್ನು ಖಾಸಗೀಕರಣಗೊಳಿಸದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಶನಿವಾರ ಪತ್ರ ಬರೆದು ಒತ್ತಾಯಿಸಿದ್ದಾರೆ. ಮೈಷÀುಗರ್ ಕಾರ್ಖಾನೆ ಯಲ್ಲಿ 14,046 ರೈತರು ಷೇರುದಾರರಿದ್ದಾರೆ. ಪ್ರತಿನಿತ್ಯ ಅಂದಾಜು 5 ಸಾವಿರ ಟನ್ ಕಬ್ಬು ಅರೆಯುವ ಸಾಮಥ್ರ್ಯ ಹೊಂದಿದೆ. ಹೀಗಾಗಿ ಮಂಡ್ಯ ಜಿಲ್ಲೆಯೊಂದರಲ್ಲೇ 83,831 ಎಕರೆ ಪ್ರದೇಶದಲ್ಲಿ 35 ಲಕ್ಷ ಮೆಟ್ರಿಕ್ ಟನ್‍ಗಳಿಗೂ ಹೆಚ್ಚು ಕಬ್ಬನ್ನು ರೈತರು ಬೆಳೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೈಷುಗರ್ ಕಾರ್ಖಾನೆಯು ಕೋ-ಜನರೇಷನ್,…

ಜೂ.14ರಂದು `ಪ್ರತಿಜ್ಞೆ’ಗೆ ಪರ್ಮಿಶನ್ ಕೊಡಿ..!’
ಮೈಸೂರು

ಜೂ.14ರಂದು `ಪ್ರತಿಜ್ಞೆ’ಗೆ ಪರ್ಮಿಶನ್ ಕೊಡಿ..!’

June 7, 2020

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕ ರಿಸುವ ‘ಪ್ರತಿಜ್ಞೆ’ ಕಾರ್ಯಕ್ರಮಕ್ಕೆ ಜೂನ್ 14ರಂದು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಮಾಧ್ಯಮಗಳಿಗೆ ಶನಿವಾರ ಪ್ರತಿ ಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುವ `ಪ್ರತಿಜ್ಞೆ’ ಕಾರ್ಯಕ್ರಮವನ್ನು ಜೂನ್ 14ರಂದು ನಡೆಸಲು ಅನುಮತಿ ನೀಡಬೇಕು ಎಂದು ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿ ಹಾಗೂ ಪೆÇಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇನೆ. ಜೂನ್ 8ರ ನಂತರ ಲಾಕ್ ಡೌನ್ ಸಡಿಲ ಮಾಡುವ ನಿರೀಕ್ಷೆ ಇದ್ದು,…

ಅರಮನೆ ವೀಕ್ಷಣೆಗೂ ನಾಳೆಯಿಂದ ಅವಕಾಶ?
ಮೈಸೂರು

ಅರಮನೆ ವೀಕ್ಷಣೆಗೂ ನಾಳೆಯಿಂದ ಅವಕಾಶ?

June 7, 2020

ಮೈಸೂರು, ಜೂ.6(ಎಸ್‍ಬಿಡಿ)- ಮೈಸೂರಿನ ಅಂಬಾವಿಲಾಸ ಅರಮನೆ ವೀಕ್ಷ ಣೆಗೂ ಸೋಮ ವಾರ (ಜೂ.8) ದಿಂದ ಅವಕಾಶ ಸಿಗುವ ಸಾಧ್ಯತೆ ಯಿದೆ. ಆದರೆ ಈ ಬಗ್ಗೆ ಸರ್ಕಾರ ಅಥವಾ ಅರಮನೆ ಮಂಡಳಿಯಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸೋಮವಾರದಿಂದ ವೀಕ್ಷಕರಿಗೆ ಅರಮನೆ ಪ್ರವೇಶಕ್ಕೆ ಅವಕಾಶ ಸಿಗಬಹುದೆಂದು ಬಲ್ಲಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮೃಗಾಲಯ ಮಾದರಿಯಲ್ಲಿ ಅರ ಮನೆಯಲ್ಲೂ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‍ಓಪಿ) ಮಾರ್ಗಸೂಚಿ ಸಿದ್ಧಪಡಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ. ಒಂದು ಗಂಟೆಯಲ್ಲಿ ಎಷ್ಟು ವೀಕ್ಷಕ ರಿಗೆ ಅನುವು ಮಾಡಿಕೊಡಬೇಕು?. ಅರಮನೆ…

ಮೈಸೂರಲ್ಲಿ ಆರಂಭದಲ್ಲೇ ಮಳೆ ಅಬ್ಬರ
ಮೈಸೂರು

ಮೈಸೂರಲ್ಲಿ ಆರಂಭದಲ್ಲೇ ಮಳೆ ಅಬ್ಬರ

June 7, 2020

ಮೈಸೂರು, ಜೂ.6(ಎಂಕೆ)- ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದ ಬೆನ್ನಲ್ಲೇ ಮೈಸೂರು ನಗರದಲ್ಲಿ ಶನಿವಾರ ಧಾರಾಕಾರ ಮಳೆ ಸುರಿಯಿತು. ಮಧ್ನಾಹ್ನ 3 ಗಂಟೆಗೆ ಶುರುವಾದ ಮಳೆ ಒಂದೂವರೆ ಗಂಟೆಗೂ ಹೆಚ್ಚುಕಾಲ ಸುರಿಯಿತು. ಕನಕ ಗಿರಿ, ಚಾಮುಂಡಿಪುರಂ, ಗುಂಡೂರಾವ್ ನಗರ, ಭೈರವೇಶ್ವರ ನಗರ, ಬಂಬೂಬಜಾರ್, ಬನ್ನಿ ಮಂಟಪ ಕೈಗಾರಿಕಾ ಪ್ರದೇಶ ಸೇರಿದಂತೆ ಹಲವೆಡೆ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ನದಿಯಂತಾ ಗಿದ್ದವು. ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು. ಮುರಿದುಬಿದ್ದ…

ದೇಶದಲ್ಲಿ 9,887 ಮಂದಿಗೆ ಕೊರೊನಾ, ಸೋಂಕಿತರ ಸಂಖ್ಯೆ 2.36 ಲಕ್ಷಕ್ಕೆ ಏರಿಕೆ
ಮೈಸೂರು

ದೇಶದಲ್ಲಿ 9,887 ಮಂದಿಗೆ ಕೊರೊನಾ, ಸೋಂಕಿತರ ಸಂಖ್ಯೆ 2.36 ಲಕ್ಷಕ್ಕೆ ಏರಿಕೆ

June 7, 2020

ನವದೆಹಲಿ, ಜೂ.6- ದೇಶದಲ್ಲಿ ಕೇವಲ ಒಂದೇ ದಿನ ಬರೋಬ್ಬರಿ 9,887 ಮಂದಿ ಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2.36 ಲಕ್ಷಕ್ಕೆ ಏರಿಕೆಯಾಗಿದೆ. ಒಂದೇ ದಿನ 9,887 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,36,657ಕ್ಕೆ ಏರಿಕೆಯಾಗಿದೆ. ಅಲ್ಲದೆ, ಕೇವಲ 24 ಗಂಟೆಗಳಲ್ಲಿ 294 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ 6642ಕ್ಕೆ ತಲುಪಿದೆ. ಒಂದೇ ದಿನ ಇಷ್ಟೊಂದು ಸಂಖ್ಯೆಯ ಸೋಂಕು ಹಾಗೂ ಸಾವು ವರದಿ ಯಾಗಿರುವುದು ಇದೇ ಮೊದಲಾಗಿದ್ದು, ಹೀಗಾಗಿ…

ಕೊರೊನಾ ಪಾಸಿಟಿವ್: ಪ್ರಧಾನ ಕಚೇರಿ ಸೀಲ್‍ಡೌನ್
ಮೈಸೂರು

ಕೊರೊನಾ ಪಾಸಿಟಿವ್: ಪ್ರಧಾನ ಕಚೇರಿ ಸೀಲ್‍ಡೌನ್

June 7, 2020

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ದೆಹಲಿಯ ಜಾರಿ ನಿರ್ದೇಶನಾಲಯದ 6 ಮಂದಿ ಅಧಿಕಾರಿ ಗಳಲ್ಲಿ ವೈರಸ್ ದೃಢಪಟ್ಟಿದೆ. ಈ ಹಿನ್ನೆಲೆ ಇದೀಗ ಜಾರಿ ನಿರ್ದೇಶನಾಲಯದ ಪ್ರಧಾನ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ 10 ಮಂದಿ ಅಧಿಕಾರಿಗಳನ್ನು ಇದೀಗ ಕ್ವಾರಂ ಟೈನ್ ಮಾಡಲಾಗಿದ್ದು, ಕಚೇರಿಯನ್ನು ಸೀಲ್‍ಡೌನ್ ಮಾಡಿ, ಸ್ಯಾನಿಟೈಸ್ ಮಾಡ ಲಾಗುತ್ತಿದೆ. ಅತೀ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ಭಾರತ ಇಟಲಿಯನ್ನು ಹಿಂದಿ ಕ್ಕಿದ್ದು, 6ನೇ ಸ್ಥಾನಕ್ಕೆ ಜಿಗಿದಿದೆ. ವಿಶ್ವ ಕೊರೊನಾ…

1 543 544 545 546 547 1,611
Translate »