ಮೈಸೂರು

ಹತ್ತೇ ದಿನದಲ್ಲಿ6,329 ಪ್ರಕರಣದಲ್ಲಿ 28.67 ಲಕ್ಷ ರೂ. ದಂಡ ಸಂಗ್ರಹ
ಮೈಸೂರು

ಹತ್ತೇ ದಿನದಲ್ಲಿ6,329 ಪ್ರಕರಣದಲ್ಲಿ 28.67 ಲಕ್ಷ ರೂ. ದಂಡ ಸಂಗ್ರಹ

June 5, 2022

ಸಂಚಾರ ನಿಯಮ ಉಲ್ಲಂಘನೆ ವಿಶೇಷ ಕಾರ್ಯಾಚರಣೆ ಮೈಸೂರು, ಜೂ.೪(ಆರ್‌ಕೆ)- ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿರುವ ಮೈಸೂರಿನ ಸಂಚಾರ ಠಾಣೆಗಳ ಪೊಲೀಸರು ಕೇವಲ ೧೦ ದಿನದಲ್ಲಿ ೬,೩೨೯ ಪ್ರಕರಣ ದಾಖಲಿಸಿ ಒಟ್ಟು ೨೮,೬೭, ೪೦೦ ರೂ. ದಂಡ ಸಂಗ್ರಹಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಮೂವರು ಸವಾರಿ ಮಾಡುವುದು, ಹೆಲ್ಮೆಟ್ ಧರಿಸದೇ ಚಾಲನೆ, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ, ಸೀಟ್ ಬೆಲ್ಟ್ ಧರಿಸದಿರು ವುದು, ಸಿಗ್ನಲ್ ಜಂಪ್, ಅತೀ ವೇಗ ಮತ್ತು ಅಜಾಗರೂಕ…

ನಾಳೆ ಕೆಲವೆಡೆ ವಿದ್ಯುತ್ ವ್ಯತ್ಯಯ
ಮೈಸೂರು

ನಾಳೆ ಕೆಲವೆಡೆ ವಿದ್ಯುತ್ ವ್ಯತ್ಯಯ

June 5, 2022

ಮೈಸೂರು, ಜೂ.೪- ಮೈಸೂರಿನ ವಿವಿ ಮೊಹಲ್ಲಾ ವ್ಯಾಪ್ತಿಯ ಕಲಾ ಮಂದಿರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ನಿಮಿತ್ತ ಜೂ.೬ರಂದು ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಸರಸ್ವತಿಪುರಂ ೧ರಿಂದ ೫ನೇ ಮೇನ್, ನ್ಯೂ ಕಾಂತರಾಜ ಅರಸ್ ರಸ್ತೆ, ಕೆ.ಜಿ.ಕೊಪ್ಪಲು ಮುಖ್ಯ ರಸ್ತೆ, ಯೂನಿವರ್ಸಿಟಿ ಕ್ವಾರ್ಟರ್ಸ್, ಮುಸ್ಲಿಂ ಹಾಸ್ಟೆಲ್, ವಿಶ್ವ ಮಾನವ ಜೋಡಿ ರಸ್ತೆ ಮುರುಗನ್ ಮೆಡಿಕಲ್ಸ್ನಿಂದ ಕುಕ್ಕರಳ್ಳಿ ಕೆರೆ ರಸ್ತೆಯವರೆÀಗೆ, ಸರಸ್ವತಿಪುರಂ ೫ರಿಂದ ೧೦ನೇ ಮೇನ್, ಪಡುವಾರಳ್ಳಿ ಡಿಸಿ ರೆಸಿಡೆನ್ಸಿ, ರೀಜನಲ್ ಕಮಿಷನರ್ ಆಫೀಸ್, ಸಿಎಫ್‌ಟಿಆರ್‌ಐ ಕ್ಯಾಂಪಸ್,…

ಪ್ರಧಾನಿ ಮೋದಿ ಸ್ವಾಗತಕ್ಕೆಅಂದಗೊಳ್ಳುತ್ತಿದೆ ಅರಮನೆ ಆವರಣ
ಮೈಸೂರು

ಪ್ರಧಾನಿ ಮೋದಿ ಸ್ವಾಗತಕ್ಕೆಅಂದಗೊಳ್ಳುತ್ತಿದೆ ಅರಮನೆ ಆವರಣ

June 4, 2022

ಮೈಸೂರು, ಜೂ. 3 – ಅಂತರ ರಾಷ್ಟ್ರೀಯ ಯೋಗ ದಿನಾಚರಣೆಗೆ ಮೈಸೂರು ಅರಮನೆ ಆವರಣ ಶೃಂಗಾರ ಗೊಳ್ಳುತ್ತಿದೆ. ಇಲ್ಲಿ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳ ಲಿದ್ದು, ಈ ಹಿನ್ನೆಲೆಯಲ್ಲಿ ಅರಮನೆ ಅಂದ ಇಮ್ಮಡಿಗೊಳಿ ಸುವ ಕಾರ್ಯ ಆರಂಭವಾಗಿದೆ. ನಾಡಹಬ್ಬ ದಸರಾ ಮಹೋತ್ಸವ, ಹೊಸ ವರ್ಷದ ಸಂಭ್ರಮಾಚರಣೆಗೆ ಅರಮನೆಯ ಆವರಣದ ಪಾರ್ಕ್‍ಗಳು ನಳನಳಿಸುತ್ತಿ ದ್ದವು. ಉಳಿದ ದಿನಗಳಲ್ಲಿ ಪಾರ್ಕ್ ನಿರ್ವಹಣೆಗೆ ಹೆಚ್ಚಿನ ಗಮನ ನೀಡುತ್ತಿ ರಲಿಲ್ಲ. ಕಳೆದ ನಾಲ್ಕು ತಿಂಗಳಿಂದ ಇಲ್ಲಿ ಯಾವುದೇ ಚಟುವಟಿಕೆಗಳಿಲ್ಲ….

ಎಟಿಎಂಗಳಲ್ಲಿ ಅಮಾಯಕರಿಗೆ ವಂಚಿಸುತ್ತಿದ್ದ ಚಾಲಾಕಿ ಖದೀಮನ ಬಂಧನ
ಮೈಸೂರು

ಎಟಿಎಂಗಳಲ್ಲಿ ಅಮಾಯಕರಿಗೆ ವಂಚಿಸುತ್ತಿದ್ದ ಚಾಲಾಕಿ ಖದೀಮನ ಬಂಧನ

June 3, 2022

ಮೈಸೂರು, ಜೂ.2(ಎಸ್‍ಬಿಡಿ)- ಎಟಿಎಂನಿಂದ ಹಣ ಡ್ರಾ ಮಾಡಲು ಸಹಾಯ ಮಾಡುವ ನೆಪದಲ್ಲಿ ಅಮಾಯಕರನ್ನು ವಂಚಿಸುತ್ತಿದ್ದ ಚಾಲಾಕಿ ಖದೀಮನನ್ನು ಕೆ.ಆರ್.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ವಿವಿಧೆಡೆ ಈ ರೀತಿ ವಂಚಿಸಿ ಹಣ ದೋಚುತ್ತಿದ್ದ ಸುಮಾರು 25-30 ವರ್ಷದ ಖದೀಮ ಈ ಜಿಲ್ಲೆಯವನೇ ಆಗಿದ್ದಾನೆ. ಈತ ವಿವಾ ಹಿತನಾಗಿದ್ದು, ಜೀವನೋಪಾಯಕ್ಕೆ ಗಾರೆ ಕೆಲಸ ಮಾಡಿಕೊಂಡಿದ್ದೇನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ. ಆತನ ಬಳಿಯಿದ್ದ 12 ಸಾವಿರ ರೂ. ಹಣ, ವಂಚನೆ ಹಣದಿಂದ ಖರೀದಿಸಿದ್ದ 3.8 ಗ್ರಾಂ ಚಿನ್ನಾಭರಣ,…

ಶಿಕ್ಷಣದಲ್ಲಿ ಸತ್ಯ ಇರಬೇಕೇ ಹೊರತು ಯಾವುದೇ ಸಿದ್ಧಾಂತಗಳಲ್ಲ
ಮೈಸೂರು

ಶಿಕ್ಷಣದಲ್ಲಿ ಸತ್ಯ ಇರಬೇಕೇ ಹೊರತು ಯಾವುದೇ ಸಿದ್ಧಾಂತಗಳಲ್ಲ

June 3, 2022

ಮೈಸೂರು,ಜೂ.2(ಪಿಎಂ)-ಶಿಕ್ಷಣದಲ್ಲಿ ಸತ್ಯ ಇರಬೇಕೇ ಹೊರತು ಯಾವುದೇ ಸಿದ್ಧಾಂತಗಳಲ್ಲ ಎಂದು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕøತ ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಕುರಿತಂತೆ ಮೈಸೂರಿನ ಕುವೆಂಪುನಗರ ದಲ್ಲಿರುವ ಅವರ ನಿವಾಸದ ಆವರಣದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದ್ಯಾ ಭ್ಯಾಸದಲ್ಲಿ ಇರಬೇಕಿರುವುದು ಸತ್ಯ. ಇದರ ಹೊರತಾಗಿ ಯಾವುದೇ ಒಬ್ಬರು, ಮತ್ತೊಬ್ಬರ ಸಿದ್ಧಾಂತಗಳಲ್ಲ ಎಂದರು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ ಅವರೂ ಪಠ್ಯಪುಸ್ತಕ ಪರಿಷ್ಕರಣೆಗೆ ಪ್ರಯತ್ನಿಸಿದರು. ಆದರೆ…

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿ ಮೈಸೂರು ಅರಮನೆ ಆವರಣದಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಕೇಂದ್ರ ತಂಡದಿಂದ ಪೂರ್ವಭಾವಿ ಸಭೆ
ಮೈಸೂರು

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿ ಮೈಸೂರು ಅರಮನೆ ಆವರಣದಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಕೇಂದ್ರ ತಂಡದಿಂದ ಪೂರ್ವಭಾವಿ ಸಭೆ

June 3, 2022

ಮೈಸೂರು,ಜೂ. 2(ಎಂಟಿವೈ)- ಮೈಸೂರು ಅರಮನೆ ಆವರಣದಲ್ಲಿ ಜೂ.21ರಂದು ನಡೆಯಲಿ ರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಗುರುವಾರ ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯ ಹಾಗೂ ರಾಷ್ಟ್ರೀಯ ಯೋಗ ಸಂಸ್ಥೆಯ ಹಿರಿಯ ಅಧಿಕಾರಿಗಳು ಪೂರ್ವಭಾವಿ ಸಭೆ ನಡೆಸಿ, ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ ನಡೆದ ಅಂತರರಾಷ್ಟ್ರೀಯ ಯೋಗ ದಿನ ಪೂರ್ವಭಾವಿ ಸಭೆಯಲ್ಲಿ ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯದ ನಿರ್ದೇಶಕ ವಿಕ್ರಂ…

ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್‍ಗೆ ಗುಡ್ ಬೈ
ಮೈಸೂರು

ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್‍ಗೆ ಗುಡ್ ಬೈ

June 2, 2022

ಮೈಸೂರು, ಜೂ.1-ಸುಪ್ರೀಂಕೋರ್ಟ್ ಹಿರಿಯ ವಕೀಲ ರಾದ ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಗುರುತಿಸಿ ಕೊಂಡು ಪಕ್ಷ ತೊರೆಯುತ್ತಿರುವ ಪ್ರಮು ಖರ ಸಾಲಿಗೆ ಇವರೂ ಸೇರಿದ್ದು, ಇದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಎನ್ನಲಾಗುತ್ತಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದಿ ರುವ ರಾಜೀನಾಮೆ ಪತ್ರವನ್ನು ಬ್ರಿಜೇಶ್ ಕಾಳಪ್ಪ ಯಥಾವ ತ್ತಾಗಿ ಬುಧವಾರ ಬೆಳಗ್ಗೆ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. `ಪಕ್ಷದಲ್ಲಿ ನೀವು ನನಗೆ…

ಅಧಿಕಾರಿಗಳ ನೇತೃತ್ವದಲ್ಲಿ 11 ಸಮಿತಿ ರಚನೆಗೆ ನಿರ್ಧಾರ
ಮೈಸೂರು

ಅಧಿಕಾರಿಗಳ ನೇತೃತ್ವದಲ್ಲಿ 11 ಸಮಿತಿ ರಚನೆಗೆ ನಿರ್ಧಾರ

June 2, 2022

ಮೈಸೂರು, ಜೂ. 1(ಎಂಟಿವೈ)- ಮೈಸೂರಲ್ಲಿ ಜೂ.21 ರಂದು ನಡೆಯಲಿರುವ ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳು ತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮದ ಕುರಿತು ಮೈಸೂರಿನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಬುಧವಾರ ಬೆಳಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಯೋಗ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದರು. ಜಿಲ್ಲಾಧಿಕಾರಿ ತಮ್ಮ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 11ರಿಂದ 12.30ರವರೆಗೆ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಜಿಲ್ಲಾಧಿಕಾರಿಗಳು, ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವು…

ಪದವಿ, ಸ್ನಾತಕೋತ್ತರ ಪದವಿ ಪ್ರವೇಶ, ಪರೀಕ್ಷಾ ಶುಲ್ಕ ರದ್ದುಪಡಿಸಲು ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಮೈಸೂರು

ಪದವಿ, ಸ್ನಾತಕೋತ್ತರ ಪದವಿ ಪ್ರವೇಶ, ಪರೀಕ್ಷಾ ಶುಲ್ಕ ರದ್ದುಪಡಿಸಲು ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

June 2, 2022

ಮೈಸೂರು,ಜೂ.1(ಆರ್‍ಕೆಬಿ)-ಪದವಿ ಮತ್ತು ಸ್ನಾತ ಕೋತ್ತರ ಪದವಿ ಪ್ರವೇಶಾತಿ ಶುಲ್ಕ ಹಾಗೂ ಪರೀಕ್ಷಾ ಶುಲ್ಕವನ್ನು ರದ್ದುಪಡಿಸಬೇಕೇಂದು ಒತ್ತಾಯಿಸಿ ಮಾನಸ ಗಂಗೋತ್ರಿಯ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇದ್ದಕ್ಕಿದ್ದ ಹಾಗೆ ಪ್ರವೇಶ ಶುಲ್ಕ ಮತ್ತು ಪರೀಕ್ಷಾ ಶುಲ್ಕ ವನ್ನು ಕೂಡಲೇ ಕಟ್ಟಬೇಕೆಂದು ಆದೇಶ ಹೊರಡಿಸಿರುವ ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ ವ್ಯವಸ್ಥೆಯ ಧೋರಣೆಯನ್ನು ಖಂಡಿಸಿ, ರಾಜ್ಯ ಸಂಶೋಧಕ ಸಂಘದ ಅಧ್ಯಕ್ಷÀ ಎಸ್.ಮರಿದೇವಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. 2021-22ನೇ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾನಿಲ ಯದ ಪದವಿ ಮತ್ತು ಸ್ನಾತಕೋತ್ತರ…

ಬಂಜೆತನ ನಿವಾರಣಾ ಶಿಬಿರದಲ್ಲಿ 50 ದಂಪತಿಗೆ ಉಚಿತ ಚಿಕಿತ್ಸೆ
ಮೈಸೂರು

ಬಂಜೆತನ ನಿವಾರಣಾ ಶಿಬಿರದಲ್ಲಿ 50 ದಂಪತಿಗೆ ಉಚಿತ ಚಿಕಿತ್ಸೆ

June 2, 2022

ಮೈಸೂರು, ಜೂ. 1(ಎಂಟಿವೈ)- ಸಂತಾನ ಭಾಗ್ಯವಿಲ್ಲದೇ ಕೊರಗುತ್ತಿರುವ ದಂಪತಿಗಳಿಗಾಗಿ ಮೈಸೂರಿನ ಲಕ್ಷ್ಮೀಪುರಂ ನಲ್ಲಿರುವ ಸಂತಸ ಐವಿಎಫ್ ಅಂಡ್ ಎಂಡೋ ಸರ್ಜರಿ ಇನ್ಸ್‍ಸ್ಟಿಟೂಟ್‍ನಲ್ಲಿ ನಡೆದ ಬಂಜೆತನ ನಿವಾರಣಾ ಉಚಿತ ತಪಾಸಣಾ ಶಿಬಿರದಲ್ಲಿ 50ಕ್ಕೂ ಹೆಚ್ಚು ದಂಪತಿಗಳು ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆದರು. ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಸಂತಸ ಐವಿಎಫ್ ಅಂಡ್ ಎಂಡೋ ಸರ್ಜರಿ ಇನ್ಸ್‍ಸ್ಟಿಟೂಟ್ ಆವರಣದಲ್ಲಿ ನಡೆದ ಉಚಿತ ತಪಾಸಣಾ ಶಿಬಿರವನ್ನು `ಮೈಸೂರು ಮಿತ್ರ’ ಪತ್ರಿಕೆಯ ಸಂಸ್ಥಾಪಕ ಸಂಪಾದಕ ರಾದ ಕೆ.ಬಿ.ಗಣಪತಿ ಹಾಗೂ ಶ್ರೀಮತಿ ರ್ಯಾಲಿ ಗಣಪತಿ ದಂಪತಿ ದೀಪ ಬೆಳಗುವ…

1 56 57 58 59 60 1,611
Translate »