ಬಸೆಲ್, ಮಾ.೨೭(ಸ್ವಿಜರ್ಲೆಂಡ್)- ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಬಿಡಬ್ಲು÷್ಯಎಫ್ ಸ್ವಿಸ್ ಓಪನ್ ೩೦೦ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯ ದಲ್ಲಿ ಅಧಿಕಾರಯುತ ಆಟವಾಡಿದ ಸಿಂಧೂ, ಎದುರಾಳಿ ಥಾಯ್ಲೆಂಡ್‌ನ ಅನುಭವಿ ಆಟಗಾರ್ತಿ ಬುಸಾನನ್ ಆಂಗ್‌ಬಮ್ರುAಗ್ಫನ್ ಅವರನ್ನು ೨೧-೧೬, ೨೧-೮ ಅಂತರದ ನೇರ ಗೇಮ್‌ಗಳ ಅಂತರದಲ್ಲಿ ಬಗ್ಗು ಬಡಿದರು. ಪ್ರಸಕ್ತ ಸಾಲಿ ನಲ್ಲಿ ಸತತ ೨ನೇ ಟೂರ್ನಿಯಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿದ…
ಮೈಸೂರು ರೇಷ್ಮೆ ಕಾರ್ಖಾನೆ ಉನ್ನತೀಕರಣ
March 28, 2022 ರೇಷ್ಮೆ ಸಚಿವ ಡಾ. ಕೆ.ಸಿ.ನಾರಾಯಣಗೌಡ ಮಾಹಿತಿ ಕಾರ್ಖಾನೆಯಲ್ಲಿ ಹೆಚ್ಚುವರಿಯಾಗಿ ೧೫೦ ಮಗ್ಗಗಳ ಅಳವಡಿಕೆ ಉದ್ದೇಶ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆವಾಹನ ವ್ಯವಸ್ಥೆ ಬೆಂಗಳೂರು ಏರ್‌ಪೋರ್ಟ್ನಲ್ಲಿ ಮೈಸೂರು ಸಿಲ್ಕ್ ದೊಡ್ಡ ಮಾರಾಟ ಮಳಿಗೆ ತೆರೆಯಲು ಸಿದ್ಧತೆ ದೆಹಲಿ, ಮುಂಬೈನಲ್ಲೂ ಮಳಿಗೆ ತೆರೆಯುವ ಚಿಂತನೆ ಮೈಸೂರು, ಮಾ.೨೭(ಆರ್‌ಕೆಬಿ)- ಮೈಸೂರು ರೇಷ್ಮೆ ಕಾರ್ಖಾನೆಯನ್ನು ಉನ್ನತೀಕರಣಗೊಳಿಸಲಾಗುವುದು ಎಂದು ರೇಷ್ಮೆ ಇಲಾಖೆ ಸಚಿವ ಡಾ. ಕೆ.ಸಿ. ನಾರಾಯಣಗೌಡ ಇಂದಿಲ್ಲಿ ಹೇಳಿದರು. ಮೈಸೂರಿನ ಕಾಳಿದಾಸ ರಸ್ತೆಯ ಸಿಎಫ್‌ಟಿಆರ್‌ಐ…
ನಾಟಕಗಳಿಂದ ಮಾತ್ರ ಕತ್ತಲಿನಿಂದ ಬೆಳಕಿನೆಡೆಗೆ ಹೋಗಲು ಸಾಧ್ಯ
March 28, 2022ಮೈಸೂರು,ಮಾ.೨೭(ಎಂಟಿವೈ)- ನಾಟಕಗಳು ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಕೆಲಸ ಮಾಡಬೇಕು ಎಂದು ನಾಟಕಕಾರ ಪ್ರೊ. ಎಂ.ಎಸ್.ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರ ದಲ್ಲಿ ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ಭಾನುವಾರ ವಿಶ್ವ ರಂಗಭೂಮಿ ದಿನದ ಅಂಗವಾಗಿ ಆಯೋಜಿಸಿದ್ದ `ನಾಟಕ, ವಿಚಾರ ಸಂಕಿರಣ, ಸಂವಾದ’ ಕಾರ್ಯ ಕ್ರಮವನ್ನು ಕಂಸಾಳೆ ಬಾರಿಸುವ ಉದ್ಘಾಟಿಸಿ ಮಾತ ನಾಡಿದ ಅವರು, ಯಾವುದೇ ಒಂದು ವಿಚಾರ ಅಥವಾ ಆದರ್ಶವನ್ನು ಜನಕ್ಕೆ ಕೊಟ್ಟಾಗ ಮಾತ್ರ ಅನಾಗರಿ ಕರನ್ನು ನಾಗರಿಕರನ್ನಾಗಿ ಪರಿವರ್ತಿಸಲು ಸಾಧ್ಯ ಎಂದರು. ನಾಟಕ ಹಾಗೂ…
ಹಾಸ್ಟೆಲ್ ವಿದ್ಯಾರ್ಥಿಗಳನ್ನು ಪರಿಪೂರ್ಣರನ್ನಾಗಿ ಮಾಡಿ
March 28, 2022ಮೈಸೂರು,ಮಾ.೨೭(ಎಂಟಿವೈ)- ನಿಲಯ ಪಾಲಕರು ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕಲೆ, ಸಾಹಿತ್ಯ, ಸಂಗೀತವನ್ನು ಹೇಳಿಕೊಟ್ಟು ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವುದರೊಂದಿಗೆ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಜಿ.ಪಂ ಉಪ ಕಾರ್ಯದರ್ಶಿ ಡಾ. ಪ್ರೇಮ್‌ಕುಮಾರ್ ಸಲಹೆ ನೀಡಿದರು. ಮೈಸೂರು ತಾಲೂಕಿನ ಎಸ್.ಕಲ್ಲಹಳ್ಳಿಯಲ್ಲಿರುವ ಸಮಾಜಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ ಸ್ಮರಣೆ ಹಾಗೂ ನಿಲಯದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಒಳಿತಿಗೆ ಹಾಗೂ ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡಿದÀವರನ್ನು…
ಮೇಗಳಪುರದಲ್ಲಿ `ಶ್ರೀ ಅಪ್ರಮೇಯ ರೆಸಾರ್ಟ್’ ಉದ್ಘಾಟನೆ
March 28, 2022ಮೈಸೂರು, ಮಾ.೨೭-ಮೈಸೂರು ತಾಲೂಕು, ವರುಣಾ ಹೋಬಳಿ, ಕೀಳನಪುರ ಗ್ರಾಪಂ ವ್ಯಾಪ್ತಿಯ ಮೇಗಳಪುರದಲ್ಲಿ ನೂತನವಾಗಿ ನಿರ್ಮಿಸಿರುವ `ಶ್ರೀ ಅಪ್ರಮೇಯ ರೆಸಾರ್ಟ್’ ಅನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿದರು. ಭಾನುವಾರ ಬೆಳಗ್ಗೆ ರೆಸಾರ್ಟ್ ಮುಖ್ಯ ದ್ವಾರದ ಟೇಪು ಕತ್ತರಿಸುವ ಮೂಲಕ ಒಳಗೆ ಪ್ರವೇಶಿಸಿದ ಸಿದ್ದರಾಮಯ್ಯನವರು ದೀಪ ಬೆಳಗಿ, ದೇವರ ಫೋಟೋಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಇದೇ ವೇಳೆ ಜೆ.ಪಿ.ಪ್ಯಾಲೇಸ್ ಹೋಟೆಲ್ ಮಾಲೀಕರಾದ ಸಂಜಯ್ ರಾಜ್ ಮತ್ತು ಅವರ ಪತ್ನಿ ದೇವಿಕಾ ಸಂಜಯ್ ರಾಜ್ ಅವರುಗಳು ರೆಸ್ಟೋರೆಂಟ್…
ಕಾಳಜಿ ವಹಿಸಿದರೆ ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ
March 28, 2022ಮೈಸೂರು,ಮಾ.೨೭(ಎಂಟಿವೈ)- ಆಸ್ಪತ್ರೆಗಳಲ್ಲಿ ದಾಖಲಾಗುವÀ ರೋಗಿಗಳ ಮೇಲೆ ಆಸ್ಪತ್ರೆ ಸಿಬ್ಬಂದಿಗಳು ಕಾಳಜಿ ವಹಿಸಿದಾಗ(ಕೇರ್ ಕಂಪ್ಯಾನಿಯನ್) ಮಾತ್ರ, ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರೊಂದಿಗೆ ಸದೃಢ ರನ್ನಾಗಿ ಮಾಡುತ್ತದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ನೂರಾಹೆಲ್ತ್ ಸ್ವಯಂಸೇವಾ ಸಂಸ್ಥೆಯ ಸಹಯೋಗದಲ್ಲಿ ೩ ದಿನಗಳ ಕಾಲ ನಡೆದ ಶುಶ್ರೂಷÀಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರೋಗಿಗಳಿಗೆ ಖಾಯಿಲೆಗಳು ಮಾತ್ರ ಇರುವುದಿಲ್ಲ. ಅವರಿಗೆ ಭಾವನೆಗಳು ಇರುತ್ತವೆ. ಎಷ್ಟೋ…
ನಾನು ಸಚಿವನಾಗಿರೋದೇ ಶಾಸಕ ಸುರೇಶ್‌ಗೌಡಗೆ ಹೊಟ್ಟೆ ಉರಿ ಸಚಿವ ಡಾ.ಕೆ.ಸಿ.ನಾರಾಯಣ್ ಗೌಡ ಕಿಡಿ
March 28, 2022ಮೈಸೂರು, ಮಾ.೨೭(ಆರ್‌ಕೆಬಿ)- ಮಂಡ್ಯದಲ್ಲಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಏನೂ ಕೆಲಸ ಮಾಡುತ್ತಿಲ್ಲ ಎಂಬ ಹೇಳಿಕೆ ನೀಡಿದ ಶಾಸಕ ಸುರೇಶ್‌ಗೌಡ ವಿರುದ್ಧ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣ ಗೌಡ ಕಿಡಿ ಕಾರಿದರು. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸಚಿವನಾಗಿರುವುದನ್ನು ಸಹಿಸದ ಸುರೇಶ್‌ಗೌಡ ಅವರಿಗೆ ನನ್ನನ್ನು ಕಂಡರೆ ಹೊಟ್ಟೆ ಉರಿ. ದೇವೇಗೌಡರಿಗೆ ಹತ್ತಿರ ಆಗೋದಕ್ಕೆಂದೇ ನನ್ನನ್ನ ಬೈಯ್ಯು ತ್ತಿದ್ದಾರೆ. ದೇವೇಗೌಡರು ಏನಾದರೂ ಕೊಡಬಹುದು ಎಂದೆನಿಸುತ್ತದೆ. ಹಾಗಾಗಿ ನನ್ನ ಮೇಲೆ ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿ…
ರೋಪ್ ವೇ ಚಾಮುಂಡಿಬೆಟ್ಟಕ್ಕೆ ಅಪಾಯಕಾರಿ
March 27, 2022ಮೈಸೂರು,ಮಾ.26-ಮೈಸೂರಿನ ಚಾಮುಂಡಿಬೆಟ್ಟಕ್ಕೆ ರೋಪ್ ವೇ ಕಾಮಗಾರಿ ಕೈಗೊಂಡರೆ ಭೂಮಿ ಸಡಿಲ ಗೊಂಡು ಪರಿಸರಕ್ಕೆ ಅಪಾರವಾದ ಹಾನಿ ಸಂಭವಿಸುವ ಅಪಾಯವಿರುವುದರಿಂದ ಈ ಯೋಜನೆ ಕೈಗೊಳ್ಳು ವುದು ಸೂಕ್ತವಲ್ಲ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು, ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರ ಗಮನ ಸೆಳೆದಿದ್ದಾರೆ. ಈ ಸಂಬಂಧ ವಾರ್ತಾ ಇಲಾಖೆ ಮೂಲಕ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, 2022-23ರ ಆಯ-ವ್ಯಯದಲ್ಲಿ ಹಣಕಾಸು ಸಚಿವರೂ ಆಗಿ ರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಮುಂಡಿಬೆಟ್ಟಕ್ಕೆ ರೋಪ್ ವೇ ನಿರ್ಮಿಸುವುದರ…
ಹೆಬ್ಬಾಳಲ್ಲಿ ‘ಡಾ.ಸುಧಾಮೂರ್ತಿ ರಸ್ತೆ’ ಅನಾವರಣ
March 27, 2022ಮೈಸೂರು,ಮಾ.26(ಎಂಕೆ)-ನಗರದ ಹೆಬ್ಬಾಳಿನಲ್ಲಿ ನಿರ್ಮಿ ಸಿರುವ ‘ಹೆಬ್ಬಾಳಿನ ಹೆಬ್ಬಾಗಿಲು’ ಹಾಗೂ ‘ಡಾ.ಸುಧಾ ಮೂರ್ತಿ ರಸ್ತೆ’ಯನ್ನು ಶನಿವಾರ ಉದ್ಘಾಟಿಸಲಾಯಿತು. ಹೆಬ್ಬಾಳಿನ ಮುಖ್ಯದ್ವಾರದಲ್ಲಿ ಹಮ್ಮಿಕೊಂಡಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರು ತಮ್ಮದೇ ಹೆಸರಿನ ರಸ್ತೆ ಹಾಗೂ ‘ಹೆಬ್ಬಾಳಿನ ಹೆಬ್ಬಾಗಿಲ’ನ್ನು ಉದ್ಘಾಟಿಸಿದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ರಾಜ್ಯದ ಹಲವೆಡೆ ಸಮಾಜ ಸೇವೆ ಮಾಡು ತ್ತಿದ್ದೇನೆ. ಆದರೆ ನನ್ನ ಸೇವೆಯನ್ನು ಗುರುತಿಸಿದ್ದು ಮೈಸೂರೇ ಮೊದಲು ಅನ್ನಿಸುತ್ತದೆ. ಹೆಬ್ಬಾಳಿನ ಮುಖ್ಯ ರಸ್ತೆಗೆ…
ಕತ್ತಲಾವರಿಸಿದರೆ ಸಾಕು ಮೈಸೂರಿನ ಪಾರ್ಕ್‍ಗಳು ಬಯಲು ಬಾರ್‍ಗಳು!
March 26, 2022ಮೈಸೂರು,ಮಾ.25(ಆರ್‍ಕೆ)-ಹಗಲಿನಲ್ಲಿ ವಾಯುವಿಹಾರ ತಾಣವಾಗಿ ರುವ ಮೈಸೂರಿನ ಉದ್ಯಾನವನಗಳು ಕತ್ತಲಾವರಿಸುತ್ತಿದ್ದಂತೆ ಕುಡುಕರ, ಡ್ರಗ್ಸ್ ವ್ಯಸನಿಗಳು ಹಾಗೂ ಸಮಾಜಘಾತುಕರ ತಾಣವಾಗಿ ಪರಿವರ್ತನೆಯಾಗುತ್ತಿವೆ. ಪುಂಡ-ಪೋಕರಿಗಳು ತಮ್ಮ ತೆವಲು ತೀರಿಸಿಕೊಂಡ ನಂತರ ಮದ್ಯದ, ನೀರಿನ ಬಾಟಲಿಗಳು, ಪಾರ್ಸಲ್ ತರುವ ಪ್ಲಾಸ್ಟಿಕ್ ಇನ್ನಿತರೆ ಪರಿಸರ ಹಾನಿ ಕಾರಕ ಪೊಟ್ಟಣಗಳನ್ನು ಅಲ್ಲೇ ಬಿಸಾಡುತ್ತಿರುವುದು ಮೈಸೂರಿನ ಬಹುತೇಕ ಉದ್ಯಾನಗಳಲ್ಲಿ ಕಣ್ಣಿಗೆ ರಾಚುತ್ತಿದೆ. ರಾತ್ರಿ ಸುಮಾರು 7.30 ಗಂಟೆಯವ ರೆಗೂ ಪಾರ್ಕುಗಳಲ್ಲಿ ವಾಯುವಿಹಾರ ಮಾಡುವ ಹಿರಿಯ ನಾಗರಿಕರೂ ಮದ್ಯದ ಬಾಟಲಿಗಳು ಕಣ್ಣಿಗೆ ಬಿದ್ದರೂ, ಅಥವಾ ಪುಂಡ ಪೋಕರಿಗಳು ಮದ್ಯಪಾನ…










