ಮೈಸೂರು, ಮಾ.21(ಆರ್‍ಕೆ)-ದೈಹಿಕ ಹಲ್ಲೆ ನಡೆಸಿ, ನಂತರ ಉಸಿರುಗಟ್ಟಿಸಿ 7 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪತಿ, ಮೃತದೇಹವನ್ನು ರಾತ್ರೋ-ರಾತ್ರಿ ಬೆಳವಾಡಿ ಕೆರೆಗೆಸೆದು ಬಂದಿದ್ದ ಅಮಾನ ವೀಯ ಘಟನೆ ಮೈಸೂರಿನ ಹೊರ ವಲಯದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮೈಸೂರಿನ ಹಿನಕಲ್ ಗ್ರಾಮದ ನನ್ನೇ ಶ್ವರ ಬಡಾವಣೆ ನಿವಾಸಿ ಪ್ರಮೋದ್ ಪತ್ನಿ ಅಶ್ವಿನಿ(23) ಹತ್ಯೆಗೀಡಾದ ಗರ್ಭಿಣಿ ಮಹಿಳೆ. ಮೈಸೂರು ತಾಲೂಕಿನ ಉದ್ಬೂರು ಗ್ರಾಮದ ಸ್ವಾಮಿ ಮತ್ತು ಲಕ್ಷ್ಮಿ ದಂಪತಿ ಪುತ್ರಿಯಾದ ಅಶ್ವಿನಿ ಮೈದನಹಳ್ಳಿ ಗ್ರಾಮದ ನಂದೀಶನ ಮಗ ಪ್ರಮೋದ್ ನನ್ನು…
`ತಾಯಿ’ ವಾತ್ಸಲ್ಯದ ಫಲ: ಜನರೇ ಹೇಳುತ್ತಾರೆ ಈ ಬಾರಿಯ ಬಹುರೂಪಿ ರಾಷ್ಟ್ರೀಯ ರಂಗೋತ್ಸವ `ದಿ ಬೆಸ್ಟ್’
March 22, 2022ಮೈಸೂರು,ಮಾ.21(ಪಿಎಂ)- `ತಾಯಿ’ ಶೀರ್ಷಿಕೆಯ `ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ ಯಶಸ್ವಿಯಾಗಿ ಸಮಾಪ್ತಿ ಕಂಡಿದ್ದು, ಇಷ್ಟು ವರ್ಷಗಳ ಬಹುರೂಪಿಗಿಂತ ಈ ಬಾರಿಯದ್ದು `ದಿ ಬೆಸ್ಟ್’ ಎಂದು ಜನರೇ ಹೇಳು ತ್ತಿದ್ದಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹರ್ಷ ವ್ಯಕ್ತಪಡಿಸಿದರು. ಮೈಸೂರು ರಂಗಾಯಣದ ಆವರಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಣ್ಣಪುಟ್ಟ ತಪ್ಪುಗಳೂ ಆಗದಂತೆ ಎಚ್ಚರ ವಹಿಸಿದ್ದ ಕಾರಣಕ್ಕೆ ಬಹು ರೂಪಿ ಯಶಸ್ವಿಯಾಗಿ ಸಂಪನ್ನಗೊಂಡಿದೆ. ರಂಗೋ ತ್ಸವದ ಯಶಸ್ಸಿಗೆ ರಂಗಾಯಣದ ಕಲಾವಿದರು, ಸಿಬ್ಬಂದಿ ಕಟಿಬದ್ಧವಾಗಿ ದುಡಿದಿದ್ದಾರೆ. ಹಿರಿಯ ಕಲಾವಿದರೂ ಸೇರಿದಂತೆ…
ಮೈಸೂರು ಪಾಲಿಕೆ ವ್ಯಾಪ್ತಿಯ ನೀರಿನ ಬಡ್ಡಿ ಮನ್ನಾಕ್ಕೆಶಾಸಕ ನಾಗೇಂದ್ರ ಆಗ್ರಹ
March 22, 2022ಮೈಸೂರು,ಮಾ.21(ಪಿಎಂ)- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಶುಲ್ಕದ ಬಾಕಿ ಮೊತ್ತಕ್ಕೆ ವಿಧಿಸಿರುವ ಬಡ್ಡಿಯನ್ನು ಒಂದು ಬಾರಿಗೆ ಮನ್ನಾ ಮಾಡುವಂತೆ ಶಾಸಕ ಎಲ್.ನಾಗೇಂದ್ರ ಸದನದಲ್ಲಿ ಆಗ್ರಹಿಸಿದರು. ಪ್ರಸ್ತುತ 220 ಕೋಟಿ ಬಾಕಿ ಇದ್ದು, ಈ ಸಂಬಂಧ 74 ಕೋಟಿ ರೂ. ಬಡ್ಡಿ ವಿಧಿಸಲಾಗಿದೆ. ಬಡ ಜನರ ಹಿತದೃಷ್ಟಿಯಿಂದ ಸರ್ಕಾರ ಬಡ್ಡಿ ಮನ್ನಾ ಮಾಡಬೇಕು. ಈ ಸಂಬಂಧ ನಗರಾಭಿವೃದ್ಧಿ ಸಚಿವ ಭೈರತಿ ಬಸವ ರಾಜು ಅವರು ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೈಸೂರು ಪಾಲಿಕೆಯಿಂದ ಮನವಿ ಸಲ್ಲಿಸಲಾಗಿದೆ. ಅಲ್ಲದೆ,…
ಮಾಜಿ ಶಾಸಕ ವಾಸು ಸೇರಿ 60 ಹಿರಿಯ ಸಹಕಾರಿಗಳಿಗೆ `ಸಹಕಾರ ರತ್ನ’ ಪ್ರಶಸ್ತಿ ಪ್ರದಾನ
March 21, 2022`ಕ್ಷೀರ ಸಮೃದ್ಧಿ ಬ್ಯಾಂಕ್’ ಸ್ಥಾಪನೆ: ಸಿಎಂ ಬೆAಗಳೂರು, ಮಾ.೨೦-ರಾಜ್ಯದಲ್ಲಿ ಹಾಲು ಉತ್ಪಾದನೆ ಒಂದು ದೊಡ್ಡ ಚಟುವಟಿಕೆಯಾಗಿದ್ದು, ಅದರಿಂದ ಬರುವ ಲಾಭವು ಹಾಲು ಉತ್ಪಾದಕರಿಗೆ ಸೇರಬೇಕೆಂಬ ಉದ್ದೇಶದಿಂದ ಬಜೆಟ್‌ನಲ್ಲಿ ೩೦೦ ಕೋಟಿ ರೂ. ವೆಚ್ಚದಲ್ಲಿ `ಕ್ಷೀರ ಸಮೃದ್ಧಿ ಬ್ಯಾಂಕ್’ ಸ್ಥಾಪಿಸುವುದಾಗಿ ಘೋಷಣೆ ಮಾಡಲಾಗಿದ್ದು, ಶೀಘ್ರದಲ್ಲೇ ಅದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನ ಕೆಂಗೇರಿ ಉಪ ನಗರದಲ್ಲಿರುವ ಗಣೇಶ ಮೈದಾನದಲ್ಲಿ ಭಾನುವಾರ ಸಹಕಾರ ಇಲಾಖೆ ಹಾಗೂ ರಾಜ್ಯ ಸಹಕಾರ ಮಹಾ ಮಂಡಳದ ಸಂಯುಕ್ತ ಆಶ್ರಯ ದಲ್ಲಿ…
ಪುನೀತ್ ಮನೆಗೆ ತೆರಳಿ `ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಸಹಕಾರ ಮಹಾ ಮಂಡಳದ ಅಧ್ಯಕ್ಷರೂ ಆದ ಶಾಸಕ ಜಿ.ಟಿ.ದೇವೇಗೌಡ
March 21, 2022ಬೆಂಗಳೂರು,ಮಾ.೨೦-ಪವರ್‌ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿಯನ್ನು ಅವರ ಮನೆಗೆ ತೆರಳಿ ಪತ್ನಿಗೆ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದರು. ಕೆಂಗೇರಿಯಲ್ಲಿರುವ ಗಣೇಶ ಮೈದಾನದಲ್ಲಿ ಏರ್ಪಡಿ ಸಲಾಗಿದ್ದ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಅವರು, ಪುನೀತ್ ರಾಜ್‌ಕುಮಾರ್ ಅವರಿಗೆ ಘೋಷಿಸಲ್ಪಟ್ಟಿರುವ ಮರಣೋತ್ತರ `ಸಹಕಾರ ರತ್ನ’ ಪ್ರಶಸ್ತಿ ಸ್ವೀಕರಿಸಲು ಕಾರಣಾಂತರಗಳಿAದ ಅವರ ಪತ್ನಿ ಅಶ್ವಿನಿ…
ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಅದ್ಧೂರಿ ತೆರೆ
March 21, 2022ಮೈಸೂರು, ಮಾ.೨೦(ಎಂಕೆ)- ಮೈಸೂರಿನ ರಂಗಾಯಣದಲ್ಲಿ ಕಳೆದ ಹತ್ತು ದಿನಗಳಿಂದ ಸಾವಿರಾರು ಮಂದಿ ರಂಗಾಸಕ್ತರನ್ನು ಸೂಜಿಗಲ್ಲಿನಂತೆ ಸೆಳೆದ ‘ಬಹುರೂಪಿ ರಾಷ್ಟಿçÃಯ ರಂಗೋತ್ಸವ’ಕ್ಕೆ ಭಾನುವಾರ ಅದ್ಧೂರಿ ತೆರೆಬಿದ್ದಿತು. ‘ತಾಯಿ’ ಶೀರ್ಷಿಕೆಯಡಿ ಜಾನಪದ ಉತ್ಸವದೊಂದಿಗೆ ಮಾ.೧೧ರಿಂದ ಆರಂಭಗೊAಡ ‘ಬಹುರೂಪಿ ರಾಷ್ಟಿçÃಯ ರಂಗೋತ್ಸವ’ ಅಪರೂಪದ ನಾಟಕಗಳು, ಚಲನಚಿತ್ರಗಳು, ಜನಪದ ಕಾರ್ಯಕ್ರಮಗಳು ಹಾಗೂ ವಿಚಾರ ಸಂಕಿರಣ ಸೇರಿದಂತೆ ಹತ್ತು-ಹಲವು ವೈಶಿಷ್ಟ÷್ಯಗಳಿಂದ ಅಪಾರ ಮೆಚ್ಚುಗೆಯೊಂದಿಗೆ ತೆರೆ ಕಂಡಿತು. ಕಡೆಯ ದಿನವಾದ ಭಾನುವಾರ ರಾಜ್ಯದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣ ಕ ಅಭಿವೃದ್ಧಿಗಾಗಿ ಸರ್ಕಾರದ ಜವಾಬ್ದಾರಿ ಹೊತ್ತ…
ಶೀಘ್ರದಲ್ಲೇ ಹಾಲಿನ ದರ ಏರಿಕೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸುಳಿವು
March 21, 2022ಬೆಳಗಾವಿ, ಮಾ.೨೦- ಇಂಧನ ದರ ಏರಿಕೆ, ಖಾದ್ಯ ತೈಲ ದರ ಏರಿಕೆಯಿಂದಾಗಿ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಕಾದಿದ್ದು, ಶೀಘ್ರದಲ್ಲೇ ನಂದಿನಿ ಹಾಲಿನ ದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸ್ವತಃ ಕರ್ನಾಟಕ ಹಾಲು ಒಕ್ಕೂಟ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದು, ನಂದಿನಿ ಹಾಲಿನ ದರ ಹೆಚ್ಚಳಕ್ಕೆ ೧೪ ಜಿಲ್ಲೆಗಳ ಹಾಲಿನ ಒಕ್ಕೂಟದವರು ಒತ್ತಡ ಹೇರುತ್ತಿದ್ದಾರೆ. ಹಾಲಿನ ದರ ಹೆಚ್ಚಳ ಮಾಡಬೇಕು. ಆ ಹಣವನ್ನು ರೈತರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ. ಅದನ್ನೇ ನಾವು…
ಪಾಲಿಕೆಗೆ 12 ಕೋಟಿ ನೀಡಲು ಮುಡಾ ಸಮ್ಮತಿ
March 21, 2022ಮೈಸೂರು, ಮಾ.೨೦(ಆರ್‌ಕೆ)- ಹಲವು ತಿಂಗಳುಗಳಿAದ ಕತ್ತಲೆಯಿಂದ ಕೂಡಿರುವ ಮೈಸೂರಿನ ರಿಂಗ್ ರಸ್ತೆಗೆ ಕೊನೆಗೂ ಬೀದಿ ದೀಪದ ಸಮಸ್ಯೆಗೆ ಮುಕ್ತಿ ದೊರೆಯಲಿದೆ. ಇಲಿ, ಹೆಗ್ಗಣಗಳು ಕೇಬಲ್ ತಿಂದಿರುವುದರಿAದ ಹೊರವರ್ತುಲ ರಸ್ತೆಯ ಬೀದಿದೀಪಗಳು ಕಾರ್ಯ ನಿರ್ವಹಿಸದಿದ್ದರಿಂದ ರಾತ್ರಿಯಾಗುತ್ತಿದ್ದಂತೆಯೇ ೪೨ ಕಿಮೀ ಉದ್ದದ ರಸ್ತೆ ಸಂಪೂರ್ಣ ಕಗ್ಗತ್ತಲೆ ಯಿಂದ ಕೂಡಿರುತ್ತಿತ್ತು. ಇದರಿಂದ ಅಪಘಾತಗಳು ಸಂಭವಿಸಿ ಸಾವು-ನೋವುಗಳಾಗುವುದಲ್ಲದೇ, ಮದ್ಯಪಾನ ಮಾಡುವವರು, ಕ್ರಿಮಿನಲ್‌ಗಳಿಗೆ ರಿಂಗ್‌ರಸ್ತೆ ತಾಣವಾಗಿದೆ. ಏಕಾಂಗಿಯಾಗಿ ಅಥವಾ ಕುಟುಂಬದವರೊAದಿಗೆ ವಾಹನದಲ್ಲಿ ಓಡಾಡಲು ಕಷ್ಟವಾಗುತ್ತಿದೆ ಎಂದು ಸಾರ್ವ ಜನಿಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದರು. ದಿನದಿಂದ…
ಮೈಸೂರಲ್ಲಿ ಭಾರೀ ಮಳೆ ಗಾಳಿ
March 20, 2022ಕೆಲವೆಡೆ ಧರೆಗುರುಳಿದ ಮರ, ವಿದ್ಯುತ್ ಕಂಬಗಳು ಹಲವೆಡೆ ವಿದ್ಯುತ್ ವ್ಯತ್ಯಯ:ರಸ್ತೆಗಳಲ್ಲಿ ನೀರು ಮರ ಬಿದ್ದು ಕಾರು ಜಖಂ: ಮೂವರು ಪಾರು, ವಾಹನ ಸಂಚಾರ ಅಸ್ತವ್ಯಸ್ತ ಮೈಸೂರು, ಮಾ.೧೯ (ಎಂಕೆ)- ಸಾಂಸ್ಕೃತಿಕ ನಗರಿ ಮೈಸೂ ರಿನ ಕೆಲವೆಡೆ ಶನಿವಾರ ಸಂಜೆ ಧಾರಾಕಾರವಾಗಿ ಸುರಿದ ಅಕಾಲಿಕ ಮಳೆ-ಗಾಳಿಗೆ ೩ ಮರಗಳು ಹಾಗೂ ೧೦ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಶನಿವಾರ ಸಂಜೆ ೫.೩೦ರ ವೇಳೆಗೆ ಆರಂಭಗೊAಡ ಭಾರೀ ಗಾಳಿ-ಮಳೆಯಿಂದ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಅಶೋಕಪುರಂ ಪೊಲೀಸ್ ಠಾಣೆ ಎದುರಿನ ಬೃಹತ್…
ಶ್ರೀರಂಗಪಟ್ಟಣ ಬಳಿ ಭಾರೀ ಬಿರುಗಾಳಿ ಬೈಕ್, ಕಾರಿನ ಮೇಲೆ ತೆಂಗಿನಮರ ಉರುಳಿ ಬಾಲಕಿ ಸಾವು
March 20, 2022ಮೂವರಿಗೆ ಗಾಯ, ಬಾಲಕಿ ತಂದೆ ಗಂಭೀರ ಬೈಕ್, ಕಾರು ಜಖಂ; ಕಾರಿನಲ್ಲಿದ್ದವರೆಲ್ಲ ಪಾರು ಶ್ರೀರಂಗಪಟ್ಟಣ,ಮಾ.೧೯-ಶನಿವಾರ ಸಂಜೆ ಭಾರೀ ಗಾಳಿಯಿಂದ ಬೈಕ್ ಹಾಗೂ ಕಾರಿನ ಮೇಲೆ ತೆಂಗಿನಮರ ಉರುಳಿ ಬಿದ್ದು, ಬೈಕ್ ನಲ್ಲಿದ್ದ ಬಾಲಕಿ ಸಾವನ್ನಪ್ಪಿ, ದಂಪತಿ, ಗಾಯ ಗೊಂಡಿದ್ದು, ಘಟನೆಯಲ್ಲಿ ಬೈಕು ಮತ್ತು ಕಾರು ಜಖಂಗೊAಡಿವೆ. ಈ ಘಟನೆ ಬನ್ನೂರು-ಶ್ರೀರಂಗಪಟ್ಟಣ ರಸ್ತೆಯ ಮರಳಗಾಲ-ದೊಡ್ಡ ಪಾಳ್ಯ ಮಧ್ಯೆ ಸಂಭವಿಸಿದೆ. ಕೆಆರ್‌ಎಸ್ ನಿವಾಸಿ ನಾಗರಾಜು ಪುತ್ರಿ ಪ್ರಿಯಾಂಕ (೧೨) ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿರುವ ನಾಗರಾಜು ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು,…










